ನಾವು ಇನ್ನೂ ರಮ್ಮಿ ಆಡ್ತಾ ಇದ್ವಿ, ಸ್ವಲ್ಪ ಹೊತ್ತಿನಲ್ಲಿ ರಮೇಶ ಎಲ್ಲರಿಗೂ ಅವರು ಹೇಳಿದ್ದನ್ನು ಪಾರ್ಸಲ್ ತಂದಿದ್ದ. ಅಶ್ವಿನ್, ಶಿವಕುಮಾರ್, ಗುಂಡ ಮತ್ತು ನಾನು ಎಗ್ ರೈಸ್ ಗೆ ಕಾಸುಕೊಟ್ಟಿದ್ದೆವು , ರಂಗನಾಥ ಚಿತ್ರನ್ನ ತರಿಸಿದ್ದ. ಆದರೆ, ಚಿತ್ರನ್ನ ತಣ್ಣಗಾಗಿತ್ತು. ನಾವು ತರಿಸಿದ ಎಗ್ ರೈಸ್ ಇನ್ನೂ ಬಿಸಿ ಇತ್ತು.
ಆಗ ರಂಗನಾಥ ನನಗೆ ಎಗ್ ರೈಸ್ ಕೊಡು ಅಂತಾ ನನ್ನನ್ನು ಕೇಳ್ದ. ನಾನು ಕೊಡಲಿಲ್ಲ.. ಹೋಗಲೇ.. ಇಂತಾ ಥಳೀಲಿ ಯಾರು ಚಿತ್ರನ್ನ ತಿಂತಾರೆ ಅಂತಾ ಅವನ ಕೋರಿಕೆಯನ್ನು ಖಾರವಾಗಿ ತಿರಸ್ಕರಿಸಿದೆ..
ನಾನು ಕೈ ತೊಳ್ಕೊಳ್ಳೋಕೆ ಹೋದಾಗ ಎಲ್ಲಿ ಎಗ್ ರೈಸ್ ತಿಂದ್ ಬಿಡ್ತಾನೋ ಅಂತಾ ಅದರ ಮೇಲೆ ಥೂ..ಥೂ..ಥೂ.... ಅಂತಾ ಮೂರು ಸರ್ತಿ ಉಗಿದೆ.. ಸಪ್ಪೆ ಮುಖದ ರಂಗನಾಥ, "ಯಳವತ್ತಿ, ನಂಗೆ ಸಿಗದೇ ಇದ್ದುದು ನಿಂಗೂ ಸಿಗಬಾರ್ದು" ಅಂತಾ ಅಂದವನೇ, ಅದೇ ಎಗ್ ರೈಸ್ ಗೆ ಅವನೂ ಸಹ ಥೂ ಥೂ ಥೂ ಅಂತಾ ಉಗಿದ.
ನಂಗೆ ಒಮ್ಮೆಲೆ ಸಿಟ್ಟು ನೆತ್ತಿಗೆ ಏರಿತು. ರಂಗನಾಥ ನನಗಿಂತಲೂ ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವನು ಅನ್ನೋದನ್ನೂ ಸಹ ನೋಡದೇ..
ರಪ್ಪನೆ ಕಪಾಳಕ್ಕೆ ಬಿಗಿದೆ...!!! ನಮ್ಮ ರೂಂ ನಲ್ಲಿ ಪಿನ್ ಡ್ರಾಪ್ ಸೈಲೆನ್ಸ್.. ರೂಂ ನಲ್ಲಿದ್ದ ಯಾರೂ ಸಹ ಏನೂ ಮಾತನಾಡಲಿಲ್ಲ..
ಮತ್ತೆ ನಾವಿಬ್ರೂ ಯಾರು ಯಾರನ್ನೂ ಸಾರಿ ಕೇಳಲಿಲ್ಲ.. ಅದಾದ ಎರಡು ದಿನಗಳ ನಂತರದಿಂದ ನಾವಿಬ್ರೂ ಸಕತ್ ಕ್ಲೋಸ್ ಫ್ರೆಂಡ್ಸ್ ಆದ್ವಿ.. ಐದು ವರ್ಷಗಳಿಂದಲೂ ಹೀಗೇ ಆತ್ಮೀಯತೆಯಿಂದ ಇದ್ದೀವಿ...
ಆದರೆ, ತಪ್ಪು ಯಾರು ಮಾಡಿದ್ದು ಅಂತಾ ನಮಗೆ ಇನ್ನೂ ಗೊತ್ತಾಗಿಲ್ಲ..
ಇಂತಿ,
ಯಳವತ್ತಿ..
(ನಾನು ಏನು ಬರೆದರೂ ಓದಿ ಸಹಿಸಿಕೊಳ್ಳೋರಿಗೆ ಧನ್ಯವಾದಗಳು)