ಖಾಯಂ ಓದುಗರು..(ನೀವೂ ಸೇರಬಹುದು)

01 February 2012

ಕೆಲವು ಕವನಗಳು ಮತ್ತು ಒಂದೆರಡು ಟ್ವೀಟುಗಳು

1) ಮೌನ.....

ಗೆಳತೀ.
ಗುಡುಗು ಸಿಡಿಲುಗಳು
ನನ್ನನ್ನು ಅಲುಗಾಡಿಸಲಿಲ್ಲ..

ನಾ ಪಾತಾಳಕ್ಕೆ ಕುಸಿಯಲು
ನಿನ್ನೀ ಮೌನವೇ ಸಾಕಾಯಿತಲ್ಲ..

( ಗೆಳತಿ ಚಂದ್ರಕಲಾ ಆಚಾರ್ಯ ರವರ ಕವನದಿಂದ ಸ್ಪೂರ್ತಿ ಪಡೆದಿದ್ದು )

-ಯಳವತ್ತಿ.

2) ಯಳವತ್ತಿ ಟ್ವೀಟ್:- ಪ್ರಪಂಚದ ಅತೀ ಕಷ್ಟದ ಕೆಲಸ, ಒಳ್ಳೆಯ ಕೆಲಸ ಮತ್ತು ನಂತರ ಸಮಾಧಾನ ನೀಡುವ ಒಂದೇ ಒಂದು ಕೆಲಸ ಎಂದರೆ...

ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳುವುದು.. ಒಮ್ಮೆ ಕೇಳಿ ನೋಡಿ.. ಅನುಭವಕ್ಕೆ ಬರುತ್ತೆ..


3) ಯಳವತ್ತಿ ಟ್ವೀಟ್:- Reasonಗೂ (ಕಾರಣಕ್ಕೂ) Reasoningಗೂ (ತರ್ಕಕ್ಕೂ) ಒಂದಕ್ಕೊಂದು ಸಂಬಂಧ ಇದೆ..

ಕಾರಣ ಇಲ್ಲದೇ ಪ್ರೀತಿಸಬಹುದು..ಆದರೆ, ಕಾರಣ ಇಲ್ಲದೇ ಬದುಕೋಕೆ ಸಾಧ್ಯವಿಲ್ಲ (ಇದು ಕಾರಣ)

ಪ್ರೀತಿಸದೇ ಇದ್ದವನು ಬದುಕೋಕೆ ಲಾಯಕ್ಕಾದವನಲ್ಲ.. (ಇದು ತರ್ಕ)


4) ಕವನ
ಶೀರ್ಷಿಕೆ:- ನ್ಯಾಯಸಮ್ಮತವಲ್ಲ..

ಚಿಕ್ಕ ತಪ್ಪಿಗೆ ದೊಡ್ಡ ಶಿಕ್ಷೆ ಎಂದು
ಯಾವ ನ್ಯಾಯಾಲವೂ ಹೇಳಿಲ್ಲವಲ್ಲ..

ಗೆಳತೀ..
ಚಿಕ್ಕ ತಪ್ಪಿಗೆ ದೊಡ್ಡ ಶಿಕ್ಷೆ ಎಂದು
ಯಾವ ನ್ಯಾಯಾಲವೂ ಹೇಳಿಲ್ಲವಲ್ಲ..

ನಾ ನಿನಗೆ ಐ ಲವ್ ಯೂ ಎಂದ ಮಾತ್ರಕ್ಕೆ,
ನಿಮ್ಮಪ್ಪ ನಮಗೆ ಮದುವೆ ಮಾಡಿ,
ನನಗೆ ಜೀವಾವಧಿ ಶಿಕ್ಷೆ ಕೊಟ್ಟುಬಿಟ್ಟನಲ್ಲ...

ನ್ಯಾಯಸಮ್ಮತವಲ್ಲ ಗೆಳತಿ..
ಇದು ನ್ಯಾಯಸಮ್ಮತವಲ್ಲ..........

5) ಒಂದೆರಡು ಸಾಲಿನ ಕಥೆ..
ದೀಪಾವಳಿಗೆ ಹೊಸ ಅಳಿಯ ಬರುವವನಿದ್ದ.. ಮನೆಯ Ration ಖಾಲಿಯಾಗಿತ್ತೆಂದು ರಾಮರಾಯರು ಚಡಪಡಿಸುತ್ತಿದ್ದರು..ನಾಲ್ಕೈದು ಚೀಲಗಳಲ್ಲಿ Ration ತುಂಬಿಕೊಂಡು ಬಂದ ಅಳಿಯನನ್ನು ನೋಡಿ ರಾಯರಿಗೆ ತಮ್ಮ ಸತ್ತು ಹೋದ ಮಗನ ನೆನಪಾಗಿ ಕಣ್ಣಂಚಿನಲ್ಲಿ ನೀರು ಜಿನುಗಿತು..

6) ಯಳವತ್ತಿ ಟ್ವೀಟ್:-

ಗೆಳೆಯರನು ನಾ ಹುಡುಕುತ ಹೊರಟೆ.. ನೂರಾರು ಗೆಳೆಯರು ಸಿಕ್ಕರಲ್ಲ.. ಒಮ್ಮೆ ಅವರನ್ನು ಪರೀಕ್ಷಿಸಿ ನೋಡೇ, ಅವರ್ಯಾರು ಗೆಳೆಯರಲ್ಲ...

30 January 2012

ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು

1) ಯಳವತ್ತಿ ಟ್ವೀಟ್:- (ಪ್ರಥಮ ಬಾರಿಗೆ ಹಿಂದಿಯಲ್ಲಿ)

PYaar ka mathlab jaanthe nahin hum..
sirf, aapka intejaar karna hi pYaar maanthe hain..

Hum aapka intezaar karenge thab thak,
jab aap milne thak, yaa hum marne thak...

2) ಯಳವತ್ತಿ ಟ್ವೀಟ್:- ನಿನ್ನನ್ನು ಕೊನೆಯ ಬಾರಿ ನೋಡಿ ಸತ್ತು ಹೋಗುತ್ತೇನೆಂದು ಫೋನ್ ಮಾಡಿದಳು.. ಅವನು ಯಾಕೆ ಹೋಗಲಿಲ್ಲ ಅಂತಾ ಅವನ ಕಣ್ಣೀರಿಗೆ ಬಿಟ್ಟು ಮತ್ಯಾರಿಗೂ ಅರ್ಥ ಆಗಲಿಲ್ಲ.

3) ಯಳವತ್ತಿ ಟ್ವೀಟ್:- ನಾ ಕಳುಹಿಸಿದ ಕೈಬರಹದ ಲೇಖನವನ್ನು ಬೆರಳಚ್ಚಿಸಿ, ಐದು ಪ್ರತಿಗಳಲ್ಲಿ ಮುದ್ರಿಸಿ ಕೊಡಿರೆಂದು ಟಿಪ್ಪಣಿ ಕಳುಹಿಸಿದೆ. ಮುದ್ರಣಾಲಯದವರು ನಾನು ಕಳುಹಿಸಿದ್ದನ್ನೇ ನೆರಳಚ್ಚು ಮಾಡಿಸಿ ಕಳುಹಿಸಿದ್ದಾರೆ. ಕೊನೆಗೆ, ಯಾಕ್ರೀ ಟೈಪ್ ಮಾಡಿ ಕಳಿಸಿಲ್ಲ ಅಂತಾ ಕೇಳಿದ್ರೆ, ಟೈಪ್ ಮಾಡಿ ಕಳುಹಿಸಿ ಅಂತಾ ಕನ್ನಡದಲ್ಲಿ ಮೊದಲೇ ಹೇಳೋದಲ್ವಾ ಅಂದ್ರು..

4) ಯಳವತ್ತಿ ಟ್ವೀಟ್:- ಶತ್ರುಗಳನ್ನು ಸೋಲಿಸಬೇಕೇ ಅಥವಾ ಗೆಲ್ಲಬೇಕೇ.....?

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಅವರಿಗೆ ಸಹಾಯ ಮಾಡಿ..

5) ನ್ಯಾನೋ ಕಥೆ..

ಒಂದು ಸುಂದರವಾದ ಹುಡುಗಿಯ ಬಳಿ ಒಬ್ಬಳು ಚಿಕ್ಕ ಹುಡುಗಿ ಬಂದು,

ಹಾಯ್ ಆಂಟಿ.. ಎಂದು ಕರೆದಳು..

ಆ ಮುದ್ದು ಮುಖವನ್ನು ನೋಡಿ, ಎತ್ತಿಕೊಂಡು ಮುತ್ತು ಕೊಟ್ಟು ಮಾತನಾಡಿಸಿದಳು..

"ನಾನು ನಿಮಗೆ ಇಷ್ಟವಾದ್ನ ಎಂದು ಕೇಳಿತು ಪುಟ್ಟ ಹುಡುಗಿ..?

ನಿನ್ನ ಮುದ್ದು ಮುಖ ನೋಡಿದ ಕೂಡಲೇ ಇಷ್ಟವಾದೆ.. ಎಂದಳು..

ಅಲ್ಲೇ ಇವರನ್ನು ನೋಡುತ್ತಾ ನಿಂತಿದ್ದ ಸುರದ್ರೂಪಿ ಯುವನಕ ಬಳಿಗೆ ಕರೆದೊಯ್ದ ಹುಡುಗಿ,

ಆಂಟಿ.. ಇವರು ನಮ್ಮ ಅಂಕಲ್.. ಎಂದು ಪರಿಚಯಿಸುತ್ತಾ..

ಈ ಮುದ್ದು ಮುಖದ ನನ್ನ ಆಂಕಲ್ ಕೂಡಾ ಇಷ್ಟವಾದ್ರಾ? ಅಂತಾ ಕೇಳಿದಳು... ಆ ದೊಡ್ಡ ಹುಡುಗಿ ಮತ್ತು ದೊಡ್ಡ ಹುಡುಗ ಇಬ್ಬರೂ ನಾಚಿಕೊಂಡರು...


6) ಯಳವತ್ತಿ ಟ್ವೀಟ್:- ದೇವರು ನಮಗೆ ಎರಡನ್ನು ಕೊಡಲು ಸಾಧ್ಯವಿಲ್ಲ.

1) ಕಷ್ಟ 2) ಇತರರ ಕಣ್ಣೀರು ಒರೆಸುವ ತಾಖತ್ತು..

ಮೊದಲನೆಯದು ನಮ್ಮ ಪಾಪ ಕರ್ಮಗಳಿಂದ ಬರುವಂಥದ್ದು.. ಎರಡನೇಯದು ನಮ್ಮ ಪಾಪ ಕರ್ಮಗಳನ್ನು ಹೋಗಲಾಡಿಸುವಂಥದ್ದು..

7) ಒಂದೆರಡು ಸಾಲಿನ ಕಥೆ:-
"ಅಂಥಹ ದಿಲ್ಲಿಯ ಚಳಿಯೂ ಸೋತುಹೋಯಿತು.. ವಿರಹಿ ಪ್ರೇಮಿಗಳ ಬಿಸಿ ಅಪ್ಪುಗೆಯ ಮುಂದೆ..

8) ಯಳವತ್ತಿ ಟ್ವೀಟ್:- ನಕ್ಕರೆ ಮುತ್ತು ಉದುರುತ್ತವೆ ಅನ್ನೋ ಮಾತು 100% ನಿಜ.. ನನ್ನವಳನ್ನು ನಗಿಸಿದಾಗಲೆಲ್ಲಾ, ನನ್ನ ಕೆನ್ನೆ ಮೇಲೆ ಮುತ್ತು ಉದುರಿಸುತ್ತಾಳೆ.

9) ಯಳವತ್ತಿ ಟ್ವೀಟ್:- ನೀನು ಬಿಟ್ಟು ಹೋದಾಗಿನಿಂದ ನಿನ್ನ ಪ್ರತಿ ಕ್ಷಣ ನೆನಪಾಗುತ್ತೆ. ನೀನಂದು ನನ್ನ ಹೃದಯಕ್ಕೆ ಮಾಡಿದ ಗಾಯ ಇನ್ನೂ ನೋಯ್ತಾನೇ ಇದೆ..

10) ಒಂದೆರಡು ಸಾಲಿನ ಕಥೆ:- ಟಿಕೆಟ್ ಹಿಂದೆ ಚಿಲ್ಲರೆ ಬರೆದುಕೊಟ್ಟ ಕಂಡಕ್ಟರ್ ನೊಂದಿಗೆ ಜಗಳವಾಡಿ, ತನ್ನ ಮೂರು ರೂ. ಚಿಲ್ಲರೆ ಪಡೆದುಕೊಂಡ.. ಗದ್ದಲದಲ್ಲಿ ಅವನು ಲಂಚವಾಗಿ ತೆಗೆದುಕೊಂಡ ಹತ್ತು ಸಾವಿರ ರೂ.ಗಳನ್ನು ಯಾರೋ ಎಗರಿಸಿದ್ದರು.

14 December 2011

ಇವತ್ತಿನ ಟ್ವೀಟ್

ಯಳವತ್ತಿ ಟ್ವೀಟ್:-

ನಾ ನಿನ್ನನ್ನು ತುಂಬಾನೇ ಮಿಸ್ ಮಾಡ್ಕೊಂಡೆ...

ನಿನ್ನ ನೋಡದೇ ಇರೋಕ್ಕಾಗದೇ, ದೂರು ಕೊಡೋಕೆ ಹೋದರೆ, ಇಲ್ಲಿ Missing Compliant ಮಾತ್ರ ತಗೋಳ್ತೀವಿ ಅಂತಾ ಪೋಲೀಸ್ನೋರು ವಾಪಸ್ಸು ಕಳ್ಸಿದಾರೆ ಕಣೇ...

02 December 2011

ಟ್ವೀಟುಗಳು...

1) ಯಳವತ್ತಿ ಟ್ವೀಟ್:-

ನೀ ನನ್ ಮಗು ಕಣೇ ಅಂತಾ ಹೇಳಿದ್ದೇ ತಪ್ಪಾಯ್ತು..

ಇವತ್ತು (ಮಕ್ಕಳ ದಿನಾಚರಣೆ) ಗಿಫ್ಟ್ ಕೊಡಿಸಿ ಅಂತಾ ಗಂಟು ಬಿದ್ದಿದಾಳೆ..

(ಮಕ್ಕಳ ದಿನಾಚರಣೆಯ ಶುಭಾಷಯಗಳು)


2) ಯಳವತ್ತಿ ಟ್ವೀಟ್:- ಹೃದಯದುರಿಯ ಶಾಖ ತಾಳಲಾರದೆ ಮನಸ್ಸು, ಕಣ್ಣೀರ ಹೊರ ಹಾಕಿತ್ತು.. ಅದಕ್ಕೆ ಅದು ಬಿಸಿಯಾಗಿತ್ತು.


3) ಯಳವತ್ತಿ ಟ್ವೀಟ್-

ಕೆಟ್ಟ
ಜನರೊಡನೆ
ಹೋರಾಡಿ,
ಸೋತು ಸುಣ್ಣವಾಗಿ
ನನ್ನವಳ
ಮಡಿಲು ಸೇರಿದೆ..

ಪ್ರಪಂಚವನ್ನೇ ಗೆದ್ದ ಹಾಗಾಯ್ತು..


4) ಯಳವತ್ತಿ ಟ್ವೀಟ್:-

ಗೆಳತಿ..

ನೀನಿಲ್ಲದೇ
ನಾ
ಬದುಕಬಲ್ಲೆ..

ಒಂದರೆಕ್ಷಣದವರೆಗೆ
ಮಾತ್ರ..


5) ಯಳವತ್ತಿ ಟ್ವೀಟ್:-

ಡಿಸೆಂಬರ್ 21ಕ್ಕೇನೇ ಪ್ರಳಯ ಆಗ್ಲೇಬೇಕು ಅಂತೇನಿಲ್ಲಾ..

ಪ್ರತಿಯೊಬ್ಬರ ಲೈಫ್ ನಲ್ಲೂ ಒಂದಲ್ಲಾ ಒಂದು ದಿನ ಪ್ರಳಯ ಆಗೇ ಆಗುತ್ತೆ..

ಅದನ್ನು ಈ ನಮ್ ಜನ "ಮದುವೆ" ಅಂತಾರೆ...



13 November 2011

ಟ್ವೀಟುಗಳು


1)ಯಳವತ್ತಿ ಟ್ವೀಟ್:-
ಪ್ರೀತಿ ಪ್ರೇಮದ ಕಥೆ ಕವನಗಳು ಯಾರಿಗೂ Like ಆಗಲಿಲ್ಲ.. ಭಗ್ನ ಪ್ರೇಮಿಯ ನೋವುಗಳನ್ನೆಲ್ಲಾ ಸೇರಿಸಿ ಚಂದವಲ್ಲದ ಕಥೆ ಬರೆದೆ. ಎಲ್ಲರಿಗೂ ಇಷ್ಟವಾದರೂ ನನಗೆ ಮಾತ್ರ ನೋವಾಯಿತು.. ಕಥೆಯೊಳಗೆ ನಾನಿದ್ದೆ.


2) ಯಳವತ್ತಿ ಟ್ವೀಟ್:- ಪ್ರೀತಿಲಿ ಬೀಳದೇ ಇದ್ರೆ, ಏನೋ ಕಳಕೊಂಡ ಹಾಗೆ... ಪ್ರೀತಿಲಿ ಬಿದ್ದರೆ, ಎಲ್ಲವನ್ನೂ ಕಳಕೊಂಡ ಹಾಗೆ..


3) ಯಳವತ್ತಿ ಟ್ವೀಟ್:-
ಈ ದೇವರ ಸೃಷ್ಟಿನೇ ಒಂಥರಾ ವಿಚಿತ್ರ ಕಣ್ರೀ.. ಶತ್ರುಗಳಿಗೆ ನೋವು ಕೊಟ್ಟರೆ, ಅವರಿಗೆ ಮಾತ್ರ ನೋವಾಗುತ್ತೆ.. ಪ್ರೀತಿಸುವವರಿಗೆ ನೋವು ಕೊಟ್ಟರೆ, ಅವರಿಗಿಂತ ನಮಗೇ ಜಾಸ್ತಿ ನೋವಾಗುತ್ತೆ..



4) ಯಳವತ್ತಿ ಟ್ವೀಟ್:-
ಪರೀಕ್ಷೆಯಲ್ಲಿ Distinction ಬಂದಿದ್ದಕ್ಕೆ ನನ್ನವಳಿಗೆ ಸ್ವೀಟ್ ಕೇಳಿದೆ.. ಸ್ವೀಟ್ ಅಂದ್ರೆ ಜಿಲೇಬಿ, ಜಾಮೂನು, ಲಾಡು, ಪೇಡಾ ಅಂತೆಲ್ಲಾ ಇರುತ್ತೆ ಅಂತಾ ನಂಗೆ ಇವತ್ತೇ ಗೊತ್ತಾಗಿದ್ದು.

5) ಯಳವತ್ತಿ ಟ್ವೀಟ್:- ನೀನು ನನ್ನ ಬಿಟ್ಟು ಹೋದ ಮೇಲೆ ನಾನು ತುಂಬಾ ಸಂತೋಷವಾಗಿದ್ದೇನೆ.. ಯಾವತ್ತೂ ನಿನ್ನನ್ನು ನೆನಪಿಸಿಕೊಳ್ಳಲಾಗಲಿಲ್ಲ. ನಿನ್ನ ಮೊಬೈಲ್ ನಂಬರ್ ಕೂಡಾ ಮರೆತು, ನೀ ಕೊಟ್ಟ ಮುತ್ತುಗಳ ಸಂಖ್ಯೆಗಳನ್ನು ಕಳೆದುಕೊಂಡಿದ್ದೇನೆ.. ನಾನಿವತ್ತಿನವರೆಗೂ ಬದಲಾಗಿಲ್ಲ... ಒಂದೇ ಬದಲಾವಣೆ ಎಂದರೆ, ಈಗ ನಾನು ಸುಳ್ಳು ಹೇಳೋದು ಕಲಿತುಕೊಂಡಿದ್ದೇನೆ ಅಷ್ಟೇ..


6) ಯಳವತ್ತಿ ಟ್ವೀಟ್:-
ನೀ ನನ್ನ ಬಿಟ್ಟು ಹೋದಾಗಿನಿಂದ, ಫೇಸ್ ಬುಕ್ ನಲ್ಲಿ ಪ್ರಕಟವಾಗುತ್ತಿರುವ ವಿರಹ ಗೀತೆಗಳನ್ನು Like ಮಾಡೋಕ್ಕೆ ತುಂಬಾನೇ ನೋವಾಗ್ತಿದೆ..


7) ಯಳವತ್ತಿ ಟ್ವೀಟ್:-
ಅವಳ ನೆನಪುಗಳಲ್ಲಿ ಬರೆದ ಕವನಗಳನ್ನೆಲ್ಲಾ ಸೇರಿಸಿ, ಸುಟ್ಟು ಹಾಕಬೇಕೆಂದು ಬೆಂಕಿ ಹಚ್ಚಿದೆ.. ಏನು ಮಾಡಿದರೂ ಬೆಂಕಿ ಹತ್ತಲೇ ಇಲ್ಲ.. ಎಲ್ಲವೂ ಕಣ್ಣೀರಿನಲ್ಲಿ ತೊಯ್ದು ತೊಪ್ಪೆಯಾಗಿತ್ತು..

8) ಯಳವತ್ತಿ ಟ್ವೀಟ್:-
ನೀ ನನ್ನ ಹೃದಯವನ್ನು ಒಡೆದುಹಾಕುವ ಮುನ್ನ ಕೊಂಚವಾದರೂ ಯೋಚಿಸಬೇಕಿತ್ತು.... ಮತ್ತೆ ಅದನ್ನು ಯಾರಿಂದಲೂ ಜೋಡಿಸಲು ಸಾಧ್ಯವಿಲ್ಲವೆಂದು...


9) ಯಳವತ್ತಿ ಟ್ವೀಟ್:-
ಈ ಅಪಘಾತಗಳೇ ಹೀಗೆ, ಹುಡುಗಿಯರ ಪ್ರೀತಿಯ ಥರಾ.. ಇದ್ದಕ್ಕಿದ್ದಂತೆ ಆಗಿಬಿಡುತ್ತೆ, ಆಮೇಲೆ ನೋವು ಕೊಡುತ್ತೆ.. ಕೊನೆಗೆ ಎಲ್ಲವನ್ನೂ ಮರೆತಾಗ, ಹಳೆ ನೋವುಗಳ ನೆಪದಲ್ಲಿ ಕಾಡಿಸುತ್ತೆ.


10) ಯಳವತ್ತಿ ಟ್ವೀಟ್:-
ನಾನು ತಗೋಳ್ಳೋದು ಅರ್ಧ ಬಾಟಲ್ ಮಾತ್ರ... ಐದಾರು ಅರ್ಧ ಬಾಟಲ್ ಆಗಬಹುದು ಅಷ್ಟೇ..


11)
ಪ್ರೇಮರಾಹಿತ್ಯದ
ಗಾಢ ಮೌನದ ಹಿಂದೆ ಸಿಗೋದು ಬರೀ ನೋವು..


12) ಹತ್ತಿರವಿದ್ದಾಗ ಬಿಟ್ಟುಹೋಗಲೊಲ್ಲದ ಮನಸ್ಯಾಕೆ?
ದೂರವಿದ್ದಾಗ ಸದಾ ನೀ ತರುವ ಕನಸ್ಯಾಕೆ..? ಮನಸಿಲ್ಲದಿದ್ದರೂ ತರಿಸುವ ಮುನಿಸ್ಯಾಕೆ? ನೂವು ಕೊಟ್ಟವರಿಗೂ ನೂವಾಗಲು ಕಾರಣ ನೀನು ಆದರೂ ಏ ಪ್ರೀತಿ ನಾ ನಿನ್ನ ನಂಬೋದ್ಯಾಕೆ? -ಯಳವತ್ತಿ


13)

ಕಾಡುವ
ಕನಸುಗಳಿಗೆ ಕೈ ಕಾಲುಗಳಿಲ್ಲ. ಮನಸ್ಸೇ ಇಲ್ಲದ ಮೇಲೆ ಖಾಲಿ ಉಳಿದಿದ್ದೆಲ್ಲಾ....


14)

05 October 2011

ಯಳವತ್ತಿ ಟ್ವೀಟ್ 106:-


"ಹುಡುಗಿಯರ ವಯಸ್ಸು ಕೇಳಬಾರದು ಅಂತಾರೆ.."

ಅದಕ್ಕೇ ನಾವು ಅವರ Date of Birth ಕೇಳ್ತೀವಿ...

ಆದರೂ ಈ ಹಿರಿಯರೇ ಹೀಗೇ.. ಹೇಳಿದ್ ಮಾತ್ ಕೇಳೋಲ್ಲ ಅಂತಾ ನಮ್ಮನ್ನು ಮೂದಲಿಸ್ತಾರೆ..

Something is Wrong...

ಯಳವತ್ತಿ ಟ್ವೀಟ್ 105:-

ದಿನ ರಾತ್ರಿ ಮಲಗಿ ಬೆಳಿಗ್ಗೆ ಎದ್ದಾಗ, ಅದು ಮನುಷ್ಯನ ಹೊಸ ಹುಟ್ಟು ಅಂತಾರೆ.
ಇಂತಹ ಹೊಸ ಹುಟ್ಟುಗಳ ವರ್ಷಾಂತ್ಯದ ನೆನಪಿಗೆ ಹುಟ್ಟು ಹಬ್ಬ ಎನ್ನಬಹುದು.

-ಯಳವತ್ತಿ

30 September 2011

ಯಳವತ್ತಿ ಟ್ವೀಟ್ 104:-


ವಸ್ತು ಕಳೆದು ಹೋದಮೇಲೇನೇ ಅದರ ಬೆಲೆ ಗೊತ್ತಾಗೋದು..

ಹಾಗೇನೇ,

ಹುಡುಗಿ ಕೈ ಕೊಟ್ಟ ಮೇಲೇನೇ ಎಣ್ಲೆಯ ರುಚಿ ಹತ್ತೋದು..

ಯಳವತ್ತಿ ಟ್ವೀಟ್ 103:-

ಹೊಸದಾಗಿ ಮದುವೆಯಾದ ಸ್ನೇಹಿತನ ಹೆಂಡತಿಯನ್ನು "ಅಕ್ಕಾ" ಎಂದು ಬಾಯಿ ತುಂಬಾ ಕರೆದು ಮಾತನಾಡಿಸಬೇಕೆಂದಕೊಂಡೆ.. ಆದರೆ,

ಅವಳ ಸುಂದರವಾದ ತಂಗಿಯನ್ನು ನೋಡಿ, "ಅತ್ತಿಗೆ" ಎಂದು ಕರೆದೆ..

ಯಳವತ್ತಿ ಟ್ವೀಟ್ 102:-


ನನ್ನವಳು ಕೂಡಾ ಒಬ್ಬಳು ಭಯೋತ್ಪಾದಕಳು...!!!


"ಬೇರೇ ಹುಡುಗಿಯರನ್ನು ನೋಡಿದ್ರೆ,
ನಿನ್ ಕಣ್ಣು ಕಿತ್ತಾಕಿ ಬಿಡ್ತೀನಿ.."ಅಂತಾ ಆಗಾಗ ನನ್ನಲ್ಲಿ ಭಯವನ್ನು ಉತ್ಪಾದನೆ ಮಾಡ್ತಾ ಇರ್ತಾಳೆ..!!