ಖಾಯಂ ಓದುಗರು..(ನೀವೂ ಸೇರಬಹುದು)

21 June 2009

ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3

ನನಗೆ ಏನ್ ಹೇಳಬೇಕು ಅಂತಾ ಗೊತ್ತಾಗ್ತ ಇಲ್ಲ..
ಈ ಹಿಂದೆ ನಾನು ಪೋಸ್ಟ್ ಮಾಡಿದ ಕನ್ನಡ ಎಸ್ಸೆಮ್ಮೆಸ್ಸು/ಶಾಯರಿ/ಜೋಕ್ಸು ಭಾಗ-1 ಮತ್ತು ಭಾಗ-2 ನ್ನು ಮೆಚ್ಚಿ ಬರೆದ ಪ್ರತಿಕ್ರಿಯೆಗಳನ್ನು ನೋಡಿ ದಂಗಾಗಿ ಹೋದೆ.. ನಾನು ಬರೆಯೋ ಬ್ಲಾಗನ್ನು ಯಾರ್ ನೋಡ್ತಾರೆ ಬಿಡು ಅಂತಾ ನೆಗ್ಲೆಕ್ಟ್ ಮಾಡ್ತಾ ಇರ್ತಿದ್ದೆ..

ಆದರೆ, ಏನಾದರೂ ಬರೆದಾಗ ಪ್ರತಿ ಸಲ ಓದಿ ಪ್ರತಿಕ್ರಿಯೆ ನೀಡೋ ಶಿವಪ್ರಕಾಶ್, ಶೋಭಾ, ಮಂಜು ಮೇಡಮ್, ಪ್ರಕಾಶ್ ಹೆಗ್ಡೆ, ಸೋಮಾರಿ ಕಟ್ಟೆ ಶಂಕ್ರಣ್ಣ ಇನ್ನು ಹಲವರ (ಕೆಲವರ)ಕಾಮೆಂಟ್ ಗಳನ್ನು ನೋಡಿ ನನಗೆ ತುಂಬಾ ಖುಶಿ ಆಗ್ತಾ ಇದೆ.. ಮೊನ್ನೆ ಲೈನಿನಲ್ಲಿ ಇದ್ದಾಗ, ಯು.ಎಸ್.ಎ. ದಿಂದ ಪ್ರತಿಭಾ ಪಾಟೀಲ್ ಮೇಡಮ್ ಅವರು ನಿಮ್ಮ ಬ್ಲಾಗನ್ನು ಪ್ರತಿ ದಿನ ಚೆಕ್ ಮಾಡ್ತೀನಿ ಅಂದಾಗ ಇನ್ನಷ್ಟು ಉಬ್ಬಿ ಹೋದೆ.. ಇದು ಒಳ್ಳೆದಲ್ಲಾ ಅಂತಾ ಗೊತ್ತು.. ಆದರೆ, ಓದೋರು ಇದಾರೆ ಅಂದ್ರೆ, ಬರೆಯೋರಿಗೆ ಒಂದು ಸ್ಪೂರ್ತಿ ಅಲ್ವಾ..??

(ನಂಗೆ ಫೇಮಸ್ ಆಗಬೇಕು, ದುಡ್ಡು ಮಾಡಬೇಕು.. ವಿದೇಶಕ್ಕೆ ಹೋಗಿ ಬರಬೇಕು,, ಅವಳ ಮುಂದೆ ಕಾರಿನಲ್ಲಿ ತಿರುಗಾಡಬೇಕು.. ಇನ್ನೂ ಏನೇನೋ ಆಸೆಗಳು ಬೇರೆ ಇದಾವೆ.. ಇದು ಮೊದಲನೆಯದರ ಸಣ್ಣ ಪ್ರಯತ್ನ ಅಷ್ಟೇ..)

ನನ್ನ ಬ್ಲಾಗಿನ ಎಸ್ಸೆಮ್ಮಸ್ಸು/ಶಾಯರಿಗಳು ಈ-ಮೇಲ್ ಮುಖಾಂತರ ಓಡಾಡುತ್ತಿವೆ ಅಂತಾ ಶಿವಪ್ರಕಾಶ್ ಮೆಸೇಜ್ ಮಾಡಿದಾಗಲಂತೂ ನಂಬಕ್ಕೇ ಆಗಿರಲಿಲ್ಲಾ..
ಆಮೇಲೆ ಆ ಈ-ಮೇಲ್ ನೋಡಿದಾಗಲೇ ದೃಢಪಟ್ಟಿದ್ದು,, ಬರೆಯೋಕ್ಕೆ ನನ್ನ ಬಳಿ ಸಾಕಷ್ಟು ಐಟಂಗಳು ಇವೆ..
1)ಇವ್ನ ಲವ್ವು ಸ್ಟೋರಿಯೂ ಹಣೆಬರಹವೂ
2)ಎಸ್ಸೆಮ್ಮಸ್ಸು/ಶಾಯರಿ ಜೋಕ್ಸು
3)ನನಗೂ ಹೆಂಡ್ತಿ ಬೇಕು
4)ಶಿವಗಂಗೆಯ ಪ್ರೇಮ ಕಥೆ.. ಇನ್ನು ಮತ್ತುಷ್ಟು..

ನಿಮ್ಮ ಮುಂದೆ ಈ ಬಾರಿ ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3 ನ್ನು ಇಡ್ತಾ ಇದೀನಿ.. ಒಪ್ಪಿಸ್ಕೊಳ್ಳಿ..


1) ಇದನ್ನು ಕಳಿಸಿದ್ದು:- ಮಂಜುನಾಥ (ಬೆಂಗಳೂರು/ಚಿಕ್ಕನಾಯಕನಹಳ್ಳಿ)

LOVE ಮಾಡಿ
ಮದ್ವೆ ಆದ್ರೆ "ರೊಮ್ಯಾನ್ಸು" /ವಾ..ವಾ//

LOVE ಮಾಡಿ
ಮದ್ವೆ ಆದ್ರೆ "ರೊಮ್ಯಾನ್ಸು"

LOVE ಮಾಡಿ
ಕೈ ಕೊಟ್ರೆ..... "ನಿಮ್ಹಾನ್ಸು" /ವಾ..ವಾ//


2)BREAKING NEWS...!!!

ಸೌತ್ ಆಫ್ರಿಕಾದಲ್ಲಿ ವಿಶ್ವಕಪ್ ನಿಂದ ಸರಿದ ನಂತರ ಭಾರ(ದ)ತೀಯ ಕ್ರಿ-ಕೆಟ್ಟಿಗರು ಅಲ್ಲಿನ ತೆಂಗಿನ ಮರವನ್ನು ಹತ್ತಿದರಂತೆ..
ಯಾಕೆ ಎಂದು ಕೇಳಿದಾಗ ಭಾರ(ತ)ದ ನಾ(ವಿ)ಯಕ ಧೋ(ಣಿ)ನಿ ಸ್ಥಳೀಯ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನೀಡಿದ ಉತ್ತರ
" ಸೌತ್ ಆಫ್ರಿಕಾದಿಂದ ಕಪ್ ನಂತೂ ತರಕೆ ಆಗಲಿಲ್ಲಾ.. ಕನಿಷ್ಟಪಕ್ಕ್ಷ ಚಿಪ್ಪನ್ನಾದ್ರೂ ತಗೊಂಡು ಹೋಗನಾ ಅಂತಾ ಅಷ್ಟೇ.." ಅಂದನಂತೆ ಶಿವಾ...


3) ಮೊನ್ನೆ ಭಾರತಕ್ಕೆ ಮರಳಿದ ನಂತರ, ಕ್ರಿಕೆಟಿಗ ಯುವರಾಜನ ಅಮ್ಮ ಮನೆಗೆ ರೇಷನ್ ತಗೊಂಡು ಬರಲು ಯುವರಾಜನಿಗೆ ಹೇಳಿದರು..
ಕ್ರಿಕೆಟ್ ಅಭಿಮಾನಿಗಳಿಗೆ ಮುಖ ಹೇಗೆ ತೋರಿಸೋದು ಹೇಗೆ ಅಂತಾ ಯಾರಿಗೂ ಗೊತ್ತಾಗದ ಹಾಗೆ ಸೀರೆ ಉಟ್ಟುಕೊಂಡು ಪೇಟೆಗೆ ಹೋಗಿ ಎಲ್ಲಾ ಸಾಮಾನು ತಗೊಂಡ..ಆದರೆ ಅವನನ್ನು ಯಾರೂ ಗುರ್ತು ಹಿಡೀಲಿಲ್ಲ ಅಂತಾ ತುಂಬಾ ಖುಶಿಯಿಂದ ಮನೆಗೆ ಬರಬೇಕಾದ್ರೆ...

ಒಬ್ಬಳು ಹೆಂಗಸು ಬಂದು ನೀನು ಕ್ರಿಕೆಟಿಗ ಯುವರಾಜ್ ಸಿಂಗ್ ಅಲ್ವಾ ಅಂತಾ ಗುರುತು ಹಿಡಿದು ಕೇಳಿದಳು..
ಅವನಿಗೆ ಆಶ್ಚರ್ಯವಾಯಿತು.. ಅಷ್ಟೊಂದು ಜನರು ಗುರ್ತು ಹಿಡೀಲಿಲ್ಲ,. ನೀವು ಹೇಗೆ ಗುರುತು ಹಿಡಿದಿರಿ ಅಕ್ಕಾ ಎಂದು ಕೇಳಿದ..
ಆ ಹೆಂಗಸು ಹೇಳಿದಳು.. "ಲೋ ನಾನ್ ಕಣೋ.. ಧೋನಿ"


4)ಇದನ್ನು ಕಳಿಸಿದ್ದು:- ಯದು (ಢಾಭಾ.. ಚಿಕ್ಕನಾಯಕನಹಳ್ಳಿ)
ಮಗ:- ಅಮ್ಮ ಆ ರೆಡ್ ಕಲರ್ ಪಟಾಕಿ ಸುಟ್ರೆ, ಚನ್ನಾಗಿ ಸೌಂಡ್ ಬರುತ್ತಾ...??

ಅಮ್ಮ:- ಅಯ್ಯೋ ದರಿದ್ರ.. ಅದು Gas cylinder ಕಣೋ..


5)ರೋಗಿ:- ಸಾರ್ ನೆನ್ನೆಯಿಂದ ತುಂಬಾ ಹೊಟ್ಟೆ ನೂವು ಸಾರ್..
ವೈದ್ಯ:- ಗ್ಯಾಸ್ ಇದೆಯಾ...??
ರೋಗಿ:- ಇಲ್ಲಾ ಸಾರ್.. ಬುಕ್ ಮಾಡಿ ಹದಿನೈದು ದಿನ ಆಯ್ತು.. ಇನ್ನೂ ಬಂದಿಲ್ಲಾ.


6)ಇದನ್ನು ಕಳಿಸಿದವರು:- ಸಕ್ಕೂ ಅಕ್ಕ

ತುಟಿಯಿಂದ ಸ್ಪರ್ಶಿಸಿದ ಆ ಅನುಭವ ಇನ್ನೂ ಇದೆ.
ಕಣ್ಣುಗಳಲ್ಲಿ ಬಂದ ನೀರು ಇನ್ನೂ ಇದೆ,
ಉಸಿರಿನಲ್ಲಿ ಬಂದ ಬೆಂಕಿ ಇನ್ನೂ ಇದೆ...
ಯಾಕೆ ಹೇಳಿ..????
ತಿಂದಿದ್ದು ಹಸಿ ಹಸಿ ಮೆಣಸಿನಕಾಯಿ..!!!


7) ಇದನ್ನು ಕಳಿಸಿದವರು:- ರಘು (ಶಿರಾ)

ಮೊನ್ನೆ ಪಂಜಾಬ್ ಪ್ರಾಂತದ ಹಳ್ಳಿಯ ಸ್ಮಶಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದ ವಿಮಾನ ನೆಲಕ್ಕಪ್ಪಳಿಸಿದೆ..
ಇತ್ತೀಚಿಗೆ ಬಂದ ವರದಿಯ ಪ್ರಕಾರ.. ಅಲ್ಲಿನ ಸರ್ದಾರ್ ಗಳು ಇಲ್ಲಿಯವರೆಗೆ 280 ಹೆಣಗಳನ್ನು ಹುಡುಕಿ ತೆಗೆದಿದ್ದಾರೆ...!!!!!


8)ಇದನ್ನು ಕಳಿಸಿದವರು:- ಪ್ರಕಾಶ್ ಕಂಗೂರಿ (ದಾವಣಗೆರೆ)
ಒಂದು ದೊಡ್ಡ ಗಂಡು ಹುಲಿ...
ಒಂದು ದೊಡ್ಡ ಹೆಣ್ಣು ಇಲಿ..
ಅವು
ಅವು..
ನಮ್ಮ
ಪಕ್ಕದ್ಮನೆ ಫ್ಯಾಮಿಲಿ.!!


9)ಇದನ್ನು ಕಳಿಸಿದವರು:- ಸುದರ್ಶನ್ (ಶಿರಾ)

ಕಪ್ಪು ಮೋಡ ಕವಿದಾಗ, ನಿನ್ನ ನೆನಪು ಬರುತ್ತೆ
ಜೋರು ಮಳೆ ಬಂದಾಗ, ನಿನ್ನ ನೆನಪು ಬರುತ್ತೆ
ಗುಡುಗು ಬಂದಾಗ, ನಿನ್ನ ನೆನಪು ಬರುತ್ತೆ..

ಬೇಗ ನನ್ನ ಛತ್ರಿ ವಾಪಸ್ ಕೊಡು...

10) ಇದನ್ನು ಕಳಿಸಿದವರು:- ಸಿ.ಪಿ. ನಾಗು (ಚಿಕ್ಕನಾಯಕನಹಳ್ಳಿ)
ಟೀಚರ್:- ನಿಮ್ಮ ಅಪ್ಪನ ಬಳಿ ಇದ್ದ ಹತ್ತು ಚಾಕಲೇಟಿನಲ್ಲಿ ಒಂದನ್ನು ನಿನಗೆ ಕೊಟ್ಟು,
ಉಳಿದ 09 ಚಾಕಲೇಟನ್ನು ಪಕ್ಕದ್ಮನೆ ಮಗುಗೆ ಕೊಟ್ರೆ ನಿನಗೆ ಏನ್ ಬರುತ್ತೆ..??
ಸ್ಟೂಡೆಂಟ್:- ನನ್ನ ಅಪ್ಪನ ಮೇಲೆ ಡೌಟ್ ಬರುತ್ತೆ...!!11) ಧರಣಿ ಕುಮಾರ (ಚಿಕ್ಕನಾಯಕನಹಳ್ಳಿ)
ಒಮ್ಮೆ ಸರ್ದಾರ್ ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದ.. "ಮನೇಲಿ ಇವತ್ತು ಯಾರೂ ಇರಲ್ಲಾ.. ಸರಿಯಾಗಿ ಹತ್ತು ಗಂಟೆಗೆ ಮನೆಗೆ ಬಾ"
ಅವಳು ತನ್ನ ತಂದೆ ತಾಯಿಯ ಕಣ್ಣು ತಪ್ಪಿಸಿ ಕಷ್ಟಪಟ್ಟು ಅವನ ಮನೆಗೆ ಬಂದು ನೋಡಿದಳು.. ಅವನು ಹೇಳಿದ್ದು ನಿಜವಾಗಿತ್ತು..
ಅವರ ಮನೆಯಲ್ಲಿ ಯಾರೂ ಇರಲಿಲ್ಲಾ.. ಮನೆಗೆ ಬೀಗ ಹಾಕಿತ್ತು.


12)ಇದನ್ನು ಕಳಿಸಿದವರು:- ಸಿ.ಪಿ. ನಾಗು (ಚಿಕ್ಕನಾಯಕನಹಳ್ಳಿ)

ಇಂದು ಒಂದು ಹುಡುಗಿಗೆ
ಹೇಳಿದೆ "ಗುಡ್ ಮಾರ್ನಿಂಗ್" /ವಾ..ವಾ//

ಅಂದು ಒಂದು ಹುಡುಗಿಗೆ
ಹೇಳಿದೆ "ಗುಡ್ ಮಾರ್ನಿಂಗ್" /ವಾ..ವಾ//

ಆದರೆ, ಅವಳಪ್ಪ ಹೇಳಿದ
ಇದೇ ನಿಂಗೆ "ಲಾಸ್ಟ್ ವಾರ್ನಿಂಗ್"

13) ಇದನ್ನು ಕಳಿಸಿದವರು:- ಶ್ರೀನಾಥ್ ಶಿವಮೊಗ್ಗ

ತ್ರಿಕಾಲ ಸತ್ಯ:-
ಒಬ್ಬಳು ಹುಡುಗಿ ರಸ್ತೆ ದಾಟುವಾಗ, ಎಲ್ಲರೂ ಗಾಡಿ ನಿಲ್ಲಿಸಿ ಹೇಳುವರು "ಹುಶಾರಾಗಿ ಹೋಗಿ"
ಆದರೆ, ಒಬ್ಬ ಹುಡುಗ ರಸ್ತೆ ದಾಟುವಾಗ ಎಲ್ಲರೂ ಗಾಡಿ ನಿಲ್ಲಿಸಿ ಹೇಳುವರು "ಯಾಕೋ ಲೋಫರ್..!! ಸಾಯೋಕೆ ನನ್ನ ಗಾಡೀನೇ ಬೇಕಾ ನಿಂಗೆ..??


14)ಇದನ್ನು ಕಳಿಸಿದವರು:- ಜಗದೀಶ (ಚಿಕ್ಕನಾಯಕನಹಳ್ಳಿ)

ನೋಡ್ ಮಗಾ.. ನಿಂಗೆ ಪ್ರತಿ ದಿನ ಎಸ್ಸೆಮ್ಮೆಸ್ಸು ಕಳೀಸೋಕೆ ನಂಗೆ ಆಗಲ್ಲಾ..ನಮ್ಗೆ ನಮ್ಮದೇ ಆದ ಡೀಲಿಂಗ್ಸ್ ಇರ್ತವೆ..ಅದಕ್ಕೆ ಒಂದೇ ಸಾರಿ ಕಳಿಸ್ತಿದೀನಿ, "ನೀನ್ ಸಾಯೋವರೆಗೂ ಗುಡ್ ಮಾರ್ನಿಂಗು, ಗುಡ್ ಮಧ್ಯಾನ್ಹ, ಗುಡ್ ಇವನಿಂಗು.. ಗುಡ್ ನೈಟು..."
ಸರೀನಾ..?? ಆಮೇಲೆ ಮೆಸೇಜ್ ಕಳಿಸಿಲ್ಲಾ ಅಂತಾ ಬೈಬೇಡ..

15) ಇದನ್ನು ಕಳಿಸಿದವರು:- ಶ್ರೀನಾಥ್ ಶಿವಮೊಗ್ಗ

ಅವಳು ನನ್ನ ತಿರುಗಿ ನೋಡಿದಳು
ನಾನೂ ಅವಳ ತಿರುಗಿ ನೋಡಿದೆ,
ಅವಳು ಮತ್ತೆ ತಿರುಗಿ ನೋಡಿದಳು
ನಾನೂ ಮತ್ತೆ ತಿರುಗಿ ನೋಡಿದೆ..
ಯಾಕೆಂದರೆ,
ಇಬ್ಬರಿಗೂ INTERNAL EXAM ನಲ್ಲಿ
ಉತ್ತರ ಗೊತ್ತಿರಲಿಲ್ಲಾ...

16) ಇದನ್ನು ಕಳಿಸಿದವರು:- ಅಂಬರೀಶ್ ನಾಡಗೌಡ

ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ,
ರಾತ್ರೀನೇ ಕಳೆದೋಯ್ತು.. /ವಾ..ವಾ//

ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ,
ರಾತ್ರೀನೇ ಕಳೆದೋಯ್ತು.. /ವಾ..ವಾ//

ಬೆಳಿಗ್ಗೆ ಎದ್ದು ಬ್ಯಾಲೆನ್ಸ್ ನೋಡಿದೆ..
ಹೊಟ್ಟೆ ಎಲ್ಲಾ ಉರುದೋಯ್ತು... /ವಾ..ವಾ//


17)ಇದನ್ನು ಕಳಿಸಿದವರು:- ಮಮ್ಮಿ (ಮಂಜುಳಾ ದೊಡ್ಡನಲ್ಲೂರಹಳ್ಳಿ/ಹೊಸಕೋಟೆ)
ಇವತ್ತು ನೀನು ನಂಗೆ ಮೆಸೇಜ್ ಮಾಡುದ್ರೆ ಮಾತ್ರ ನಾನು ಊಟ ಮಾಡೋದು.. ಇಲ್ಲಾ ಅಂದ್ರೆ,,,..

ಕೋಪದಲ್ಲಿ

ಪಾನಿಪೂರಿ, ಗೋಬಿ ಮಂಚೂರಿ, ಮಸಾಲದೋಸೆ ತಿಂದು ಮಲಗ್ತೀನಿ ಅಷ್ಟೇ,,,,..
(ಅವತ್ತು ನಾನು ಮೆಸೇಜ್ ಕಳಿಸಿದ ಮೇಲೂ, ತಿನ್ನೋಕೆ ಮಸಾಲದೋಸೆಯೇ ಗತಿಯಾಯ್ತು)

18)ಇದನ್ನು ಕಳಿಸಿದವರು :- ಜ್ಞಾನಮೂರ್ತಿ (ಭಕ್ತ)(ಬೆಂಗಳೂರು)

ಆಂಗ್ಲ ಭಾಷೆಯಲ್ಲಿ:- GOOD NIGHT
ಹಿಂದಿ ಭಾಷೆಯಲ್ಲಿ:- SHUBHA RAATHRI
ಉರ್ದು ಭಾಷೆಯಲ್ಲಿ:- SHABBA KHAIR
ಜರ್ಮನ್ ಭಾಷೆಯಲ್ಲಿ:- GUTEN NIGHT
ಸ್ಪ್ಯಾನಿಶ್ ಭಾಷೆಯಲ್ಲಿ:- VILLA VE DURE


ನನ್ನ ಸ್ಟೈಲ್:- " ಬಿದ್ಕ ಹೋಗಲೇ...."


ಇಂತಿ ನಿಮ್ಮ ಪ್ರೀತಿಯ
ಶಿವಶಂಕರ ವಿಷ್ಣು ಯಳವತ್ತಿ

ಹೇಗಿದೆ ಅಂತಾ ಕಾಮೆಂಟ್ ನಲ್ಲಿ ತಿಳಿಸಿ..

15 comments:

shivaprashanth said...

sardarji joke sakkat aagide

Jagadeesha said...

Breaking news sakkath agide maga...nam cnhalli inda e tara blog madi continue madtironu neenu obbane..keep it up and continue... :)

Gnanamurthy said...

ಕಪ್ಪು ಮೋಡ ಕವಿದಾಗ, ನಿನ್ನ ನೆನಪು ಬರುತ್ತೆ
ಜೋರು ಮಳೆ ಬಂದಾಗ, ನಿನ್ನ ನೆನಪು ಬರುತ್ತೆ
ಗುಡುಗು ಬಂದಾಗ, ನಿನ್ನ ನೆನಪು ಬರುತ್ತೆ..

ಬೇಗ ನನ್ನ ಛತ್ರಿ ವಾಪಸ್ ಕೊಡು...

ಈ ಸಂದೇಶ ತುಂಬಾ ಸೂಪರ್....

Guest said...

ಪ್ರಿಯ ಶಿವಶಂಕರ ನಿಮ್ಮ ಭಾಗ-3 ಚನ್ನಾಗಿದೆ. ನೀವು ಪ್ರೀತಿಯನ್ನು ಕಳೆದುಕೊಂಡು ಹುಡುಕುವ ದಾರಿಯಲ್ಲಿ ಇದ್ದೀರಿ ಅಂತಾ ಗೊತ್ತಾಯಿತು. ನಿಮ್ಮ ಕನಸುಗಳಿಗೆ ರೆಕ್ಕೆ ಬಂದು ನಿಮ್ಮ ಎರಡು ಕಾಲುಗಳೆ ರೆಕ್ಕೆಗಳಾಗಿ ಹಾರುವಂತಾಗಿ ನಿಮಗೆ ಕೈಕೊಟ್ಟ ಹುಡುಗಿ `ಅವಾಗ ಅವನ ಕೈ ಹಿಡಿದೀದ್ದರೆ ಇವತ್ತು ವಿಮಾನದಲ್ಲಿ, ಕಾರಿನಲ್ಲಿ ಅಡ್ಡಾಡುತ್ತಿದ್ದೇನಲ್ಲ ಅಂತ ತನ್ನಷ್ಟಕ್ಕೆ ತನಗೆ ಬೇಸರದ ಜೀವನ ಮೂಡುವಂತಾಗಲಿ. ನಿಮ್ಮ ಯಶಸ್ವಿನ ಹಿಂದೆ ನಾವಿದ್ದೇವೆ, ನಮ್ಮ ಸಹಾಯ-ಸಹಕಾರವಿದೆ ಏನಂತೀರಾ? ಶಿವಶಂಕರ. ಮತ್ತೆ ಮಾತಾಡೋಣ.
*ಎಂ.ಮಂಜುನಾಥ ಬಮ್ಮನಕಟ್ಟಿ
-----
ನಿಮ್ಮ ಭಾಗ 3ನ್ನು ಓದಿ ತುಂಬಾ ಸಂತೋಷವಾಯಿತು.
*ಚಂದ್ರಶೇಖರ ಕಾಳಣ್ಣವರ, ಗದಗ

Sunaath said...

ಯಳವತ್ತಿಯವರ,
ನಿಮ್ಮ ಬ್ಲಾ‍^ಗು ಇಷ್ಟ ದಿವಸ ನನಗ ಗೊತ್ತಿದ್ದಿದ್ದಿಲ್ಲ ಅಂತ ಬ್ಯಾಸರಾತು.
ಏನ ಛಂದ SMSಗಳನ್ನ, ಶಾಯರೀಗಳನ್ನ ಕೊಟ್ಟೀರಲ್ರಿ.
ಇನ್ನ ಮ್ಯಾಲೆ ನಾ ನಿಮ್ಮ ardent follower!

shivagadag.blogspot.com said...

ಶಿವಪ್ರಶಾಂತ್,
ಎಂ. ಮಂಜುನಾಥ್ ಬಮ್ಮನಕಟ್ಟಿ ಸರ್,
ಚಂದ್ರಶೇಖರ ಕಾಳಣ್ಣವರ ಸರ್,
ಜಗದೀಶ, ಗುರುಮೂರ್ತಿ,
ಮತ್ತು ಸುನಾಥ್ ಸರ್ ಗೆ ನನ್ನ ವಂದನೆಗಳು..

ಶಿವು.. ನಮ್ಮ ದೇಶದಲ್ಲಿ ಸರ್ದಾರ್ ಗಳ ಮೇಲೆ ಇರುವಷ್ಟು ಜೋಕುಗಳು ಯಾರ ಮೇಲೂ ಇಲ್ಲಾ... ಇನ್ನೂ ಹಲವಾರು ತರುವೆ..

ಬಮ್ಮನಕಟ್ಟಿ ಸರ್.. ನಿಮ್ಮ ಸಹಕಾರ ಹೀಗೇ ಇರಲಿ..
ನನ್ನ ಕನಸುಗಳು ಯಾವಾಗ ನನಸಾಗುವುದೋ ಆ ಮಂಜನಿಗೆ ಗೊತ್ತು..

ಕಾಳಣ್ಣವರ ಸರ್.. ಬ್ಲಾಗಿಂಗ್ ಗೆ ಸ್ವಾಗತ...

ಜಗ್ಗ.. ಮಗಾ ನೀನು ಕಳಿಸಿದ ಎಸ್ಸೆಮ್ಮೆಸ್ಸು ಹಾಕಿದೀನಿ ನೋಡೋ...

ಜ್ಞಾನಮೂರ್ತಿ.. ನಿನ್ನ ಪ್ರೋತ್ಸಾಹ ಹೀಗೆಯೇ ಇರಲಿ..

ಸುನಾಥ್ ಸರ್.. ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು...

ಹೀಗೇ ಓದುತ್ತಾ ಇರಿ..

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

hey said...

hi friend... its very nice

Ashwini Prasann said...

Shivu.. good job.. bhala sogasaagi ide..nimma blog.. bere raashtragalalli iruvavirge antu... :)..

ಸಿಮೆಂಟು ಮರಳಿನ ಮಧ್ಯೆ said...

ಶಿವಶಂಕರ್....

ಕಮಾಲ್ ಮಾಡಿ ಬಿಟ್ಟಿದ್ದೀರಿ....!
ನನಗೆ ನಿಮ್ಮ ಎಸ್ಸೆಮ್ಮೆಸ್ಸಗಳ ಮಹಾಪೂರವೇ ಬಂದಿದೆ....

ಮಸ್ತಾಗಿ ಇರ್ತವೆ ನಿಮ್ಮ ಈ ಸಂಗ್ರಹಗಳು...

ನಕ್ಕು , ನಕ್ಕೂ ಸುಸ್ತಾಗಿದ್ದೀನಿ....

ನಿಮ್ಮ ಬ್ಲಾಗಿಗೆ ಬಂದು ಎರಡು ಎಸ್ಸೆಮ್ಮೆಸ್ಸು ಓದಿ...
ನಕ್ಕೊಂಡು ಹೋಗ್ತಿನಿ... ದಿನಾಲೂ...

ನಿಮ್ಮ ಬ್ಲಾಗಿಗೆ ಪ್ರತಿಕ್ರಿಯೆ ಕೊಡೋದಕ್ಕೆ ಸುಲಭ ಮಾರ್ಗ ಮಾಡಿ ಕೊಡ್ರಿ...

ನಮ್ಮನ್ನೆಲ್ಲಾ ನಗಿಸಿದ್ದಕ್ಕೆ ಧನ್ಯವಾದಗಳು

shivaprakash said...

ha ha ha...
sakat agi idave...

ramya said...

really fantastic

Subhash said...

Tumba channagi de nimma Shayari ga lu

Unknown said...

ಚೆಂದದ ಶಾಹಿರಿಗಳು...

Unknown said...

"ಸ್ವೀಕರಿಸುವ ಮನಸ್ಸಿದ್ದರೆ ಸದ್ಗುಣಗಳನ್ನು ಸ್ವೀಕರಿಸು
ಈಜುವ ಮನಸ್ಸಿದ್ದರೆ ಜ್ಞಾನ ಸಾಗರದಲ್ಲಿ ಈಜು
ನಡೆಯುವ ಮನಸ್ಸಿದರೆ ಸನ್ಮಾರ್ಗದಲ್ಲಿ ನಡೆ
ಮಾತನಾಡುವುದಿದ್ದರೆ ಸತ್ಯವನ್ನೇ ಮಾತನಾಡು
ಆಡುವುದಿದ್ದರೆ ಅನುಭವದ ಮಾತುಗಳನ್ನೇ ಆಡು
ಕೇಳುವುದಿದ್ದರೆ ಸದುಪುದೇಶಗಳನ್ನೇ ಕೇಳು
ದೊರಕಿಸುವುದಿದ್ದರೆ ಜಯವನ್ನೇ ದೊರಕಿಸು"

Unknown said...


ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ