ಖಾಯಂ ಓದುಗರು..(ನೀವೂ ಸೇರಬಹುದು)

07 April 2009

ಗೆಳತೀ.. ನೀ ಹೀಗೇಕೆ ಮಾಡಿದೆ...???


ಪ್ರೀತಿಯ ಗೆಳತಿಗೆ..

(ಇದನ್ನು ನಾನು ನನ್ನ ತೃಪ್ತಿಗೋಸ್ಕರ ಬರೆದಿದ್ದು.. ತುಂಬಾ ಉದ್ದವಾಗಿದೆ.. ಓದಲು ಕಷ್ಟವಾಗುತ್ತೆ.. ತೊಂದರೆ ತೆಗೆದುಕೊಳ್ಳುವುದಾದರೆ ಮಾತ್ರ ಓದಿ)

ಗೆಳತೀ.. ಕಳೆದ ವರ್ಷ ಶ್ರೀರಾಮನವಮಿಯ ದಿನ ಎಷ್ಟೊಂದು ಚನ್ನಾಗಿತ್ತು, ನಾನು, ಚೇತ, ಮಮ್ಮಿ-ನಾಗಣ್ಣ, ಭಾಗ್ಯ, ಅರುಣ, ಎಲ್ಲರೂ ಮುಗಬಾಳದಲ್ಲಿರೋ ಭಾಗ್ಯಳ ತೋಟದಲ್ಲಿ ದೇವರಿಗೆ ಪೂಜೆ ಮಾಡಿ ಮಜ್ಜಿಗೆ, ಪಾನಕ, ಕೋಸಂಬರಿಯನ್ನು ಹಂಚಿ ತಿಂದಿದ್ವಿ.. ರಸ್ತೆಯಲ್ಲಿ ಹೋಗುವ ಸೈಕಲ್-ಮೋಟಾರು ಬೈಕು ಸವಾರರನ್ನು ಸಹ ಅಡ್ಡಗಟ್ಟಿ ಪಾನಕ ಕುಡಿಸಿದ್ವಿ.. ಅವತ್ತು ಎಷ್ಟು ಖುಶಿಯಾಗಿತ್ತು ಗೊತ್ತಾ...?

ಆಗ ನಾವೆಲ್ಲರೂ ಮಿಸ್ ಮಾಡಿಕೊಂಡಿದ್ದು ನಿನ್ನನ್ನೇ ಕಣೋ.. ನಾವು ನಿನ್ನ ಎಷ್ಟೊಂದು ಬಾರಿ ನೆನೆಸಿದ್ವಿ ಗೊತ್ತೇನೋ? ಮಮ್ಮಿ ಅಂತೂ 'ನೀನು ಇದ್ದಿದ್ರೆ, ಪಾನಕ ಕುಡಿಯೋಕೆ ಕಿತ್ತಾಡಬಹುದಾಗಿತ್ತು, ಯಾಕಾದರೂ ಮದುವೆ ಮಾಡಿಕೊಂಡಳೋ.. ಇನ್ನು ಎರಡು ತಿಂಗಳು ಲೇಟಾಗಿ ಆಗಿದ್ರೆ, ಇವಾಗ ನಮ್ ಜೊತೆ ಇರ್ತಿದ್ಲು ಅಂತಾ ನೆನಸಿಕೊಂಡ್ರು. ಆಗ ನಿನ್ನ ಮದುವೆ ಆಗಿ ಸುಮಾರು 16 ದಿನ ಆಗಿತ್ತು ಅಷ್ಟೆ. ನನಗಂತೂ ರೇಗಿಸಲು ನೀನು ಇಲ್ಲದೇ ಒದ್ದಾಡಿ ಹೋದೆ.

ಪೂಜೆ ಮಾಡುವಾಗ ಭಾಗ್ಯ ಹೇಳಿದ ದೇವರ ನಾಮವನ್ನೇ ನೆಪವಾಗಿಟ್ಟುಕೊಂಡು, ಟೀಸ್ ಮಾಡಿದ್ರೂ ಅವಳು ತುಟಿ ಬಿಚ್ಚಲೇ ಇಲ್ಲಾ.
Mostly, ನಿನ್ನ ಹಾಗೆ ತಿರುಗಿ ಉತ್ತರ ಹೇಳೋಕೆ ಯಾರಿಗೂ ಬರಲ್ಲಾ.. ನೀನು ಮಾತಾಡೋ ಶೈಲೀನೇ ಬೇರೆ. ನಿನ್ನ ಮನಸ್ಸಿನಲ್ಲಿ ಇದ್ದಿದ್ದನ್ನು ಇದ್ದ ಹಾಗೆ ಹೇಳಿಬಿಡ್ತಿದ್ದೆ. ನನ್ನ ವಯಸ್ಸಿನವಳೇ ಆದ ನೀನು ನಿನ್ನ ಸುಂದರವಾದ ಕಣ್ಣುಗಳಿಂದಲೇ ಎಲ್ಲರನ್ನೂ ಮೋಡಿ ಮಾಡಿಬಿಡ್ತಿದ್ದೆ. ನೀನೇ Different ಕಣೋ..

ಹುಡುಗರೇ ಹತ್ತಲಾಗದ ಆ ಮಧುಗಿರಿ ಬೆಟ್ಟವನ್ನು ಚಾಲೆಂಜಾಗಿ ತೆಗೆದುಕೊಂಡು ನಮ್ಮ ಜೊತೆಗೆ ಪೂತ್ರಿ ಬೆಟ್ಟಾನ ಹತ್ತಿಬಿಟ್ಟಿದ್ಯಲ್ಲಾ.. ನಿನ್ನದು ಗಂಡು ಗುಂಡಿಗೆ. ಅದನ್ನೆಲ್ಲಾ ಎಲ್ಲಿ ಮರೆಯೋಕಾಗುತ್ತೆ ಹೇಳು? ಅದಕ್ಕೇ ನಿನ್ನನ್ನು ನಾವೆಲ್ಲಾ ತುಂಬಾ ಮಿಸ್ ಮಾಡ್ಕೊಂಡಿದ್ದು..

ಇಂಥಾ ಬಂಗಾರದಂತಹ ಗೆಳತಿ ನೀನು. ನಿನ್ನ ಗೆಳೆತನಾಗಿದ್ದು ನನ್ನ Luck ಕಣೋ, ಮಮ್ಮಿ (ಮಂಜುಳಾ) ಯಿಂದ ಪರಿಚಯವಾದ ಮೇಲೆ ನಾವೆಲ್ಲಾ ಎಷ್ಟೊಂದು ಕ್ಲೋಸ್ ಆಗಿದ್ವಿ ಅಲ್ವಾ.. ಪರಿಚಯವಾಗಿ 5 ವರ್ಷ ಆದರೂ, ಚಿಕ್ಕವರಾಗಿದ್ದಾಗಿನಿಂದಲೇ Friends ಆಗಿದ್ವೇನೋ ಅಂತಾ ಅನ್ನಿಸಿದ್ದು ಸುಳ್ಳಲ್ಲಾ..


ಇಂತಹ ಪ್ರೀತಿಯ ಗೆಳತಿಯನ್ನು ಬಿಟ್ಟು, ರಾಮನವಮಿ ಹಬ್ಬ ಮಾಡ್ತಿರೋದು ಸ್ವಲ್ಪ ಬೇಜಾರು ಅನ್ನಿಸಿತ್ತು. ಪಾನಕ ಕುಡಿದು, ಭಾಗ್ಯರ ಅಮ್ಮ ಮಾಡಿದ ಚಿತ್ರನ್ನಾ ತಿಂದು ಕೂತಿದ್ದಾಗ, ಹೇಳಿ ಮಾಡಿಸಿದ ಹಾಗೆ ನಿನ್ನ ಫೋನು ಬಂದಿತ್ತು. ನೀನು ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದು ಕೇಳಿ ತುಂಬಾ ಖುಶಿಯಾಯ್ತು. ನಿಮ್ಮನ್ನೆಲ್ಲಾ ನೋಡೋ ಹಾಗೆ ಆಗಿದೆ ಅಂತಾ ನೀನು ಹೇಳಿದಾಗ, ನಿನ್ನ ನೋಡಲು ನಮಗೆ ಬರದೇ ಇರೋಕೆ ಆಗಲಿಲ್ಲ.

ಹೊಸಕೋಟೆಯ ಲಲ್ಲಿ (ಲೀಲಾಂಬಿಕ) ಅವರ ಮನೆಯಲ್ಲೇ ಊಟ ಮಾಡಬೇಕು ಅಂತಾ ಫರ್ಮಾನು ಹೊರಡಿಸಿದ್ದಳು. "ಯಳು, ನೀನು ಹೇಳಿದ ಹಾಗೆ ಶ್ಯಾವಿಗೆ ಪಾಯಸ ಮಾಡ್ತೀನಿ, ಏನೂ ತಿನ್ನದೇ ಉಪವಾಸ ಬಾ" ಅಂತಾ ಹೇಳಿದ್ದಳು. ಲಲ್ಲೀನೂ ಒಂದು ಚೂರು ನಿಂತರಾನೇ.. ಅವಳ ಪ್ರೀತಿಗೆ ಸ್ನೇಹಕ್ಕೆ ಮರುಳಾದೇ ಇರುವರಿಲ್ಲಾ.

ನಿನ್ನ ನೋಡಬೇಕು ಅಂತಾ ನಾನು, ಚೇತ, ಮಮ್ಮಿ-ನಾಗಣ್ಣ, ಭಾಗ್ಯ, ಅರುಣ, ರಾಜೇಶ, ಲಲ್ಲಿ ಎಲ್ಲರೂ ನಿನ್ನ ಮನೆಗೆ ಬಂದಾಗ, ಮಧ್ಯಾಹ್ನ 2.00 ಗಂಟೆ ಆಗಿತ್ತು. ಆಗ ನಿನ್ನ ನೋಡಿ ಎಲ್ಲಾರೂ ಖುಶಿ ಪಟ್ವಿ. ಆಗಲೇ ನಿನ್ನ ಮದುವೆ ಆದ ಮೇಲೆ ಮೊದಲನೇ ಬಾರಿಗೆ ನೋಡಿದ್ದು. ನನಗಂತೂ ತುಂಬಾ ಸಂತೋಷ ಆಗಿತ್ತು. ಮತ್ತೆ ನಾನು 400 ಕಿ.ಮೀ. ನಿಂದ ಯಾವಾಗ ಬರ್ತೀನೋ, ನಿನ್ನನ್ನು ನೋಡೋಕೆ ಆಗುತ್ತೋ ಇಲ್ವೋ ಅಂತಾ ಅನ್ನಿಸಿತ್ತು.

ಆದರೆ, ನಿನ್ನ ನೋಡಿದ ಮೇಲೆ ನಿನ್ನ ಮುಖದಲ್ಲಿ ಮೊದಲಿನ ಹಾಗೆ ನೀನು ಸಂತೋಷದಿಂದ ಇಲ್ಲಾ ಅಂತಾ ಮಮ್ಮಿ-ನಾಗಣ್ಣನಿಗೆ ಹಾಗೂ ನನಗೆ ಕೂಡಲೇ ಗೊತ್ತಾಗಿತ್ತು. ಹೇಗಿದ್ದೀಯಾ ಆಶಾ? ಅಂತಾ ಕೇಳಿದಾಗ, ನಾನು ಚನ್ನಾಗಿಲ್ಲಾ ಅಂತಾ ನೀನು ಕಡ್ಡಿ ಮುರಿದಂತೆ ಉತ್ತರ ಕೊಟ್ಟಿದ್ದೆ. ಟೀ ಮಾಡಿಕೊಂಡು ಬರಲು ಹೋದ ನಿನ್ನನ್ನು ಬಿಡಿಸಿ, ನೀನು ಕೊಡೋ ಒಂದು ಲೋಟ ನೀರು ಸಾಕು ಅಂತಾ ಕುಡಿದ್ವಿ. ಅಂದು ನಿನ್ನ ಮುಖದಲ್ಲಿ ಮನದ ನೂವು ಕಾಡುತ್ತಾ ಇದೆ ಅಂತಾ ಎಲ್ಲಾರಿಗೂ ಗೊತ್ತಾಗಿ ಹೋಯಿತು. ನಿನ್ನನ್ನು ಆ ಸ್ಥಿತಿಯಲ್ಲಿ ನೋಡಲಾಗದೇ, ಎಲ್ಲರೂ ಹೊರಟು ಬಿಟ್ವಿ. ನಿನ್ನ ಕೈಯಾರೆ ಪಲಾವು ಮಾಡಿಕೋಂಡು ಬಂದಿದೀನಿ, ಸ್ವಲ್ಪವಾದ್ರೂ ತಿನ್ನಿ ಅಂತಾ ಬಲವಂತ ಮಾಡಿದ್ರೂ, ತಿನ್ನದೇ ಹಾಗೇ ಬಂದುಬಿಟ್ವಿ. ಅದೇ ಕಣೋ ನಾನು ಮಾಡಿದ ತಪ್ಪು.. (ನಿನ್ನ ಮನೆಗೆ ಬಂದಾಗ, ನನಗೆ ಏನು ಬೇಕೋ ಕೇಳಿ ತಿನ್ನುತ್ತಿದ್ದ ನಾನು, ಹೊಟ್ಟೆ ಹಸಿದಿದ್ದರೂ ಸಹ ಹಾಗೆಯೇ ಬಂದುಬಿಟ್ಟೆ)

ನಂತರ ಎಲ್ಲರೂ ಲಲ್ಲಿ ಮನೆಗೆ ಹೋಗಿ ಊಟ ಮಾಡಿದ್ವಿ. ನಾನು ಚೇತ, ಚಿಕ್ಕನಾಯಕನಹಳ್ಳಿಗೆ ವಾಪಸ್ಸು ಹೊರಟಾಗ, ರಾತ್ರಿ 8.00 ಗಂಟೆ. ಆಗ ನಿನಗೆ ನಾನು ಫೋನು ಮಾಡಿ, ಮಾತಾಡಿಸಿ ಸಮಾಧಾನ ಹೇಳಿದ್ದೆ.

ಅಂದು ಚಿಕ್ಕನಾಯಕನಹಳ್ಳಿಗೆ ಬಂದು, ಮಾರನೇ ದಿನ ರಾತ್ರಿ, ಗದಗ ಕ್ಕೆ ಹೋಗಲು ಹೊರಟು ನಿಂತಾಗ, ಮಮ್ಮಿ ಮೊಬೈಲಿನಿಂದ ಫೋನು ಬಂತು. ಯಾವಾಗಲೂ ಸಂತೋಷವೇ ಇರುತ್ತಿದ್ದ ಅವರ ಕರೆ ನಿನ್ನ ಸಾವಿನ ಸಮಾಚಾರವನ್ನು ಹೊತ್ತು ತಂದಿತ್ತು. ಈ ವಿಷಯ ಹೇಳಿದ ನಾಗಣ್ಣ ಜೋರಾಗಿ ಅತ್ತುಬಿಟ್ಟರು. ಆವಾಗ, ನೀನಿಲ್ಲದೇ ಗೆಳೆತನವನ್ನು ಕಲ್ಪಿಸಿಕೊಳ್ಳೋದು ಆಗಲೇ ಇಲ್ಲಾ. ಬೇಡ ಬೇಡ ಅಂದ್ರೂ ನನ್ನ ಕಣ್ಣುಗಳು ಕಣ್ಣೀರು ಚೆಲ್ಲಿದವು.

ನಾನು & ಚೇತ ಭಾಗ್ಯರ ಮನೆಗೆ ಬಂದಾಗ, ಬೆಳಿಗ್ಗೆ 4.00 ಗಂಟೆ ಆಗಿತ್ತು. ಎಲ್ಲರೂ ಅಲ್ಲಿ ಸೇರಿದ್ದರು. ಆಗ ಕೇಳಿದ್ದು ಭಯಂಕರವಾದ ಸುದ್ದಿ, ನೀನು ಹಿಂದಿನ ದಿನದ ಬೆಳಿಗ್ಗೆ 9.30 ಕ್ಕೆ ನಂದಿ ಬೆಟ್ಟದಿಂದ ಬಿದ್ದು ಆತ್ಮಹತ್ಯೆ ಮಾಡಿಕೋಡೆ ಅಂತಾ. ಎಲ್ಲರಿಗೂ ಹೇಳಲಾಗದ ಸಂಕಟ. ಯಾರ ಮನಸ್ಸೂ ನೀನು ಈ ಪ್ರಪಂಚದಿಂದ ದೂರವಾಗಿದ್ದು ನಿಜ ಅಂತಾ ನಂಬೋಕೆ ಆಗ್ತಾ ಇಲ್ಲಾ. ಇದೆಲ್ಲಾ ಸುಳ್ಳಾಗಬಾರದಾ ಅಂತಾ ಒಂದು ಕ್ಷಣ ಅನ್ನಿಸಿತ್ತು.

ನೀನು ಇಲ್ಲವಾದ ವಿಷಯಾನ ನಿಮ್ಮ ಮನೆಯವರು ಯಾರಿಗೂ ತಿಳಿಸಿರಲಿಲ್ಲ ಕಣೋ. ಮೂರನೇಯವರಿಂದ ನಾಗಣ್ಣನಿಗೆ ಅಂದು ರಾತ್ರಿ 9.00 ಕ್ಕೆ ತಿಳೀತಂತೆ. ನೀನು ಆತ್ಮಹತ್ಯೆ ಮಾಡಿಕೊಳ್ಳಲು ನಾವೆಲ್ಲಾ ಕಾರಣರು ಅಂತಾ ನಿಮ್ಮ ಮನೆಯವರು ನಮಗೆ ಹೇಳಿರಲಿಲ್ಲವಂತೆ.

ಬೆಳಿಗ್ಗೆ 9.00 ಕ್ಕೆ ಎಲ್ಲರೂ ಸೇರಿ ನಿಮ್ಮ ಮನೆಗೆ ಹೋದಾಗ, ನಿನ್ನನ್ನು ದಾಸರಹಳ್ಳಿಯ ಗುಲಾಬಿ ತೋಟಗಳ ನಡುವೆ ಒಯ್ದಿದ್ದಾರೆಂದು ತಿಳಿಯಿತು. ಒಂದು ಕ್ಷಣವೂ ತಡ ಮಾಡದೇ, ಎಲ್ಲೂ ಅಲ್ಲಿಗೆ ಓಡೋಡಿ ಬಂದ್ವಿ..

ಅಷ್ಟರಲ್ಲಾಗಲೇ, ನಿನ್ನನ್ನು ಭೂಮಿಯ ಗರ್ಭದಲ್ಲೊಂದು ಜಾಗ ಮಾಡಿ, ಬಾಳೆ ಎಲೆಯೊಳಗಿಂದ ಮುಚ್ಚಿಬಿಟ್ಟಿದ್ದರು. ನಿನ್ನ ಮುಖವನ್ನೊಮ್ಮೆ ಕೊನೆಯ ಬಾರಿಗೆ ನೋಡಲು ಅವಕಾಶ ಕೊಡಿ ಅಂತಾ ಎಷ್ಟು ಕೇಳಿದರೂ ನಿಮ್ಮವರು ಬಿಡಲಿಲ್ಲ ಕಣೋ. ಮೋಹನಣ್ಣ ಜೋರು ಮಾಡಿದ ಮೇಲೆ, ಮುಖದ ಮೇಲಿನ ಬಾಳೆ ಎಲೆಯನ್ನು ಸ್ವಲ್ಪ ಸರಿಸಿ ನಿನ್ನ ಮುಖವನ್ನು ತೋರಿಸಿದರು. ನಿನ್ನ ಮುಖದಲ್ಲಿ ಎಲ್ಲರನ್ನು ಆಕರ್ಷಿಸುತ್ತಿದ್ದ ಆ ನಿನ್ನ ಕಣ್ಣುಗಳು ಊದಿಕೊಂಡು ದಪ್ಪಗಾಗಿ, ಅವು ನಿನ್ನವಲ್ಲವೇನೋ ಅನ್ನಿಸಿದ್ದವು.

ನಮ್ಮೆಲ್ಲರ ಕಣ್ಣಲ್ಲೂ ತುಂಬಿದ್ದ ನೀರು, ನಿನ್ನ ಮೇಲೆ ಬಿದ್ದಿತು. ಐದೇ ನಿಮಿಷದಲ್ಲಿ ನಿನ್ನನ್ನು ಎಲ್ಲರೂ ಸೇರಿ ಮಣ್ಣಲ್ಲಿ ಮಣ್ಣಾಗಿಸಿದ್ದರು. ಲಲ್ಲಿಯಂತೂ ಅತ್ತೂ-ಅತ್ತೂ ತಲೆ ತಿರುಗಿ ಬಿದ್ದಳು. ಅಷ್ಟರಲ್ಲಿ ನಿಮ್ಮ ಚಿಕ್ಕಮ್ಮ ನಮ್ಮ ಮೇಲೆ ಜಗಳವನ್ನು ಶುರು ಮಾಡಿದರು. ನಿನಗೆ ಆತ್ಮಹತ್ಯೆ ಮಾಡಿಕೊಳ್ಳಲು ನಾವು ಹೇಳಿದೆವಂತೆ.. ನಿನ್ನ ಸಾವಿನ ದುಃಖದಲ್ಲಿದ್ದ ನಾವು ಏನೂ ತಪ್ಪಿಲ್ಲದಿದ್ದರೂ ಮೂಕರಂತೆ ವಾಪಸ್ಸು ಬಂದೆವು.

ನಿನಗೆ ಆ ಮದುವೆ ಇಷ್ಟ ಇಲ್ಲಾ ಅಂತಾ ನಮಗೆ-ನಿಮ್ಮ ಮನೆಯವರಿಗೆ ಮೊದಲೇ ಗೊತ್ತಿತ್ತು ತಾನೇ? ಮದುವೆ ಬೇಡವೆಂದು ನೀನು ನಿಮ್ಮ ಮನೆಯವರೊಂದಿಗೆ ಜಗಳವಾಡಿದ ದಿನಗಳೆಷ್ಟೋ? ಉಪವಾಸ ಮಾಡಿದ ದಿನಗಳೆಷ್ಟೋ? ನಿನಗೆ ಸ್ನೇಹಿತರೆಂದರೆ ಪಂಚಪ್ರಾಣ. ಮಮ್ಮಿ-ನಾಗಣ್ಣ ನಿಂದ ನಿನಗೆ ಒಪ್ಪಲು ಹೇಳಿಸಿದರು. ನಾನು ಸಹ ಒಪ್ಪಿಕೊಳ್ಳಲು ಫೋನು ಮಾಡಿ ಹೇಳಿದೆ. ನೀನು ಮದುವೆಯಾಗಲು ಒಪ್ಪದಿದ್ದರೆ ನಿನ್ನ Friends ಗಳನ್ನು ಭೇಟಿ ಮಾಡಲು, ಅವರಿಗೆ ಫೋನು ಮಾಡಲು ಬಿಡಲ್ಲಾ ಅಂತಾ ನಿನ್ನ ಮನೆಯವರು ಹೆದರಿಸಿದಾಗ ತಾನೇ ನೀನು ಒಪ್ಪಿಕೋಂಡಿದ್ದು..?? ಮಮ್ಮಿಗೆ ಮದುವೆ ಕಾರ್ಡು ಕೊಡಲು ಬಂದಾಗ, "ನಿಮಗೋಸ್ಕರ ನಾನು ಮದುವೆ ಆಗ್ತಿರೋದು.. ನನಗೆ ಒಂಚೂರು ಇಷ್ಟ ಇಲ್ಲಾ" ಅಂತಾ ತಾನೆ ನೀನು ಹೇಳಿ ಹೋಗಿದ್ದು..


ಆದರೆ, ಕೊನೆಗೆ ನೀನು ಮಾಡಿದ್ದೇನು? ಎಲ್ಲರಿಗೂ ಮೋಸ ಮಾಡಿದೆ.. ನೀನು ಮೋಸ ಮಾಡಿದ್ದು, ನಿನ್ನ ಗಂಡನಿಗಲ್ಲ, ನಿನ್ನ ಮನೆಯವರಿಗಲ್ಲ, ನಿನ್ನ ಸ್ನೇಹಿತರಾದ ನಮಗೆ..

ಗೆಳತಿ, ನೀನು ಹೀಗೇಕೆ ಮಾಡಿದೆ???

ನೀನು ನಂದಿ ಬೆಟ್ಟದಿಂದ ಬೆಳಿಗ್ಗೆ 9.30 ಕ್ಕೆ ಬಿದ್ದಿದ್ದು, ಆದರೆ, ನೀನಿಲ್ಲದ ನಿನ್ನ ದೇಹ ಸಿಕ್ಕಾಗ, ಸಂಜೆ 4.00 ಗಂಟೆ ಆಯ್ತಂತೆ.. ನಿನ್ನ ದೇಹದಲ್ಲಿ ಒಂದು ಕೈ ಇರಲಿಲ್ಲವಂತೆ..??? ಅದನ್ನು ಕೇಳಿದರೆ ಭಯವಾಗುತ್ತೆ..

ಸಣ್ಣ ಇರುವೆ ಕಚ್ಚಿದಾಗ, ಕುಣಿದಾಡುತ್ತಿದ್ದ ನೀನು, ಅಷ್ಟೊಂದು ನೂವನ್ನು ಹೇಗೆ ಸಹಿಸಿಕೊಂಡೆ? ಇಂತಹ ಭೀಕರವಾದ ಸಾವು ನಿನಗೆ ಬೇಕಾಗಿತ್ತಾ ಗೆಳತೀ....???

ನಿನ್ನನ್ನು ಕಳೆದುಕೊಂಡಿದ್ದನ್ನು ಮರೆಯಲಾಗದೇ, ಕುಡಿಯಲು ಹೋದರೆ, ಕುಡಿತವೂ ಸಹ ನಿನ್ನನ್ನು ನೆನಪಿಸುತ್ತೆ. ಅಂದು ನೀನು ಕೈಯಾರೆ ಮಾಡಿದ ಪಲಾವನ್ನು ತಿನ್ನದೇ ಹಾಗೆ ಬಂದ ತಪ್ಪಿಗೆ ಇವತ್ತಿನವರೆಗೂ ಪಲಾವನ್ನು ತಿನ್ನಲು ಆಗಿಲ್ಲಾ.. ಮಮ್ಮಿಗಂತೂ ನೀನು ಕಣ್ಣ ಮುಂದೆ ಓಡಾಡಿದ ಹಾಗೆ ಆಗ್ತಿತ್ತಂತೆ.. ಮಮ್ಮಿಯ ಕನಸಿನಲ್ಲಿ ನೀನು ಬಂದಿದ್ದಂತೆ? (ನಿನ್ನನ್ನು ಕೊನೆ ಬಾರಿ ನೋಡಲು ಮಮ್ಮಿ ಬರಲಿಲ್ಲಾ ಅಂತಾ ಕೋಪಾನಾ? ಮಮ್ಮಿಗಂತೂ ನೀನು ಇನ್ನೂ ಇದ್ದೀಯಾ ಅಂತಾ ಅನ್ನಿಸಿದೆ)

ಇದೇ (ಏಪ್ರಿಲ್) ತಿಂಗಳ 15 ಕ್ಕೆ ನೀನಿಲ್ಲವಾಗಿ 1 ವರ್ಷ ತುಂಬುತ್ತೆ.. ಭಾಗ್ಯ, ಮಮ್ಮಿ ಫೊನು ಮಾಡಿದ್ದರು.. ನಿನ್ನ ಬಗ್ಗೇನೆ ಮಾತಾಡಿದರು.. ನಾವು ಇನ್ನೂ ನಿನ್ನನ್ನು ಮರೆತಿಲ್ಲ.. ಮರೆಯೋದು ಇಲ್ಲಾ.. ನಿನ್ನ ಜಾಗವನ್ನು ತುಂಬಲು ಬೇರೆ ಯಾರಿಂದಲೂ ಸಾಧ್ಯವಿಲ್ಲಾ... ನಮಗೆ ನಿನ್ನನ್ನು ನೋಡೋ ಹಾಗೆ ಆಗಿದೆ.. ಕನಸಿನಲ್ಲಾದರೂ ಬಂದು ಒಮ್ಮೆ ಜಗಳ ಮಾಡು ಗೆಳತೀ..


ಇತಿ ನಿನ್ನ ಪ್ರೀತಿಯ,


ಶಿವಶಂಕರ ವಿಷ್ಣು ಯಳವತ್ತಿ
shivagadag@gmail.com

21 comments:

bhavana lookha said...

nanage nimma Friend Story odi bejaru atu, adare nivu nimma friend na maranakke enu kaaarana enddu helilla.

So nivu nimma friend madida Palav annu tinddu barabekittu.
tappu madidri nivu.

Suguna Sagar said...

yalavathhi ninna lekhana shyli thumba chennagide .... heege baritha iru....

Ittigecement said...

ಶಿವಶಂಕರ್...

ಮನಸ್ಸಿಗೆ ಆಪ್ತರಾದವರು ದೂರವಾದಾಗ

ಒಂದು ಥರಹದ ಶೂನ್ಯ ಆವರಿಸಿ ಬಿಡುತ್ತದೆ...
ಅವರ ನೆನಪು..
ಕಳೆದ ಕ್ಷಣಗಳು ಸದಾ ಹಸಿರಾಗಿರುತ್ತದೆ...
ಇದೇ ಬದುಕು...

ಭಾವನೆಗಳನ್ನು ಸಮರ್ಥವಾಗಿ ವ್ಯಕ್ತ ಪಡಿಸಿದ್ದೀರಿ...

ಮನಸ್ಸಿಗೆ ಬೇಸರವಾಯಿತು...

ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ..

Shivashankara Vishnu Yalavathi said...

ನನ್ನ ಗೆಳತಿಯ ಆತ್ಮಕ್ಕೆ ಶಾಂತಿ ಕೋರಿದ್ದಕ್ಕೆ ಧನ್ಯವಾದಗಳು..

ಇಷ್ಟು ದೊಡ್ಡ ಪೋಸ್ಟನ್ನು ಸಮಾಧಾನದಿಂದ ಓದಿದವರಿಗೆಲ್ಲಾ ಧನ್ಯವಾದಗಳು..

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

http://shivagadag.blogspot.com

ಜ್ಞಾನಮೂರ್ತಿ said...

ನಿಮ್ಮ ಗೆಳತಿಯ ಕತೆ ಕೇಳಿ ತುಂಬಾ ಬೇಜಾರು ಆಯಿತು ..
ನಿಮ್ಮ ಗೆಳತಿಯ ಆತ್ಮಕ್ಕೆ ದೇವರು ಶಾಂತಿ ನೀಡಲಿ..

ಚಿತ್ರಾಕರ್ಕೇರಾ, ದೋಳ್ಪಾಡಿ said...
This comment has been removed by the author.
ಧರಿತ್ರಿ said...

ತುಂಬಾ ಚೆನ್ನಾಗಿ ಬರೆದಿದ್ದೀರಿ.
-ಧರಿತ್ರಿ

Shankar Prasad ಶಂಕರ ಪ್ರಸಾದ said...

ಶಿವೂ,
ನಿಜಕ್ಕೂ ಏನ್ ಹೇಳೋದು ಅಂತಾ ಗೊತ್ತಾಗ್ತಾ ಇಲ್ಲ.
ಆಪ್ತ ಮಿತ್ರರ ಮರಣ ಏನು ಅಂತ ತಿಳಿದಿದೆ.
ದುಖ ಅನ್ನುವುದರ ಮದ್ದು ಕಾಲ.
ಕಾಲವೇ ಏಳಕ್ಕೂ ಉತ್ತರ ಕೊಡುತ್ತದೆ.
ನಿಮ್ಮ ಸ್ನೇಹಿತೆಯ ಆತ್ಮಕ್ಕೆ ಶಾಂತಿ ಸಿಗಲಿ.

ಕಟ್ಟೆ ಶಂಕ್ರ

ಮನಸು said...

ee kathe kelidare nijakku manasu bharavagutte... olleya snehite illavadalu..
devaru avara athmakke shanti needali...nimmelarige antha snehite mattomme sigali

Prashanth said...

Heart touching
nijavaglu kannanchali ondu havi moodittu

shivagadag said...

Houdu prashanth...

nanagu kannira hanigalu moodidavu;///

Dr Manjunath P M said...

ಈ ಕಥೆಯನ್ನು ಓದಿ ನಮ್ಮ ಮನಸಿನಲ್ಲಿ ಬೇಸರ ಮೂಡಿತು.........
ಅದನ್ನು ಇದರಿ೦ದ ನೀವು ಎಸ್ತು ನೊ೦ದಿದ್ದಿರ ಎ೦ದು ತಿಳಿಯುತ್ತದೆ...
ಆ ಅಕ್ಕನ ಆತ್ಮಕ್ಕೆ ಶಾ೦ತಿ ದೊರೆಯಲಿ.....

Anonymous said...

ಶಿವೂ.
ಕತೆ ಓದಿ ಮನಸ್ಸಿಗೆ ವೇದನೆ ಹಾಗು ದುಃಖ ಒಂದಿಗೆ ಆಯ್ತು .ನೀನೆಂಥಹ ಸ್ನೇಹಿತನೋ 'ಸ್ನೇಹಿತೆಯ ಮನದ ನೋವನ್ನು 'ವಿಚಾರಿಸದೆ ಹಾಗೇ ಬಂದದ್ದು ನನಗೆ ಕೋಪ ಬಂತು.ನೀನು ಮಾಡಿದ ತಪ್ಪು ನೋಡಿ ನಿನ್ನ ಮೇಲೆ ಸಿಟ್ಟು ಬಂತು.ಅವಳ ಕಷ್ಟ ಏನು ಅಂತ ತಿಳಿದು ಬುದ್ದಿ ಹೇಳಿದ್ದರೆ ಆಕೆ ಸಾಯುವ ಮನಸ್ಸು ಮಾಡುತ್ತಿರಲಿಲ್ಲವೇನೋ ?ಹೋಗ್ಲಿ ಬಿಡು "ಮಿಂಚಿಸಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ".ಆಶಾ ಳ ಬಳಿ ಜಗಳ ಆಡಲು ನಿಂಗೆ ಸಾದ್ಯವಿಲ್ಲ ,ಆದರೆ ನಿನ್ನ ಹತ್ತಿರ ನಂಗೆ ಜಗಳ ಆಡುವ ಅನಿಸುತ್ತಿದೆ. ಮುಂದೆ ಆ ತಪ್ಪು ಆಗದ ಹಾಗೇ ನೋಡಿಕೋ ಆಯ್ತಾ?ಆಶಾ ಳ ಆತ್ಮಕ್ಕೆ ಶಾಂತಿ ಸಿಗಲಿ ಅಂತ .ನಿನ್ನನ್ನು ಬೈದದಕ್ಕೆ ಬೇಸರಿಸಬೇಡ .ಗುಂಡಿಗೆಯಂತ ಗಂಡದೆ ಹುಡುಗಿ ಹಾಗೇಕೆ ಮಾಡಿದಳು ಅನ್ನುವ ಯೋಚನೆ ನನ್ನ ತಲೆಯಲ್ಲಿ "ಗಿರಕಿ" (round) ಹೊಡೆಯುತ್ತಿದೆ.ಇದು ನಿನ್ನ ಕಾಲ್ಪನಿಕ ಕಥೆ ಆಗಿದ್ದರೆ ಚೆನ್ನಾಗಿರುತ್ತಿತ್ತು.
ನಿನ್ನ ಶಶಿ ಅಕ್ಕ

sahana said...

shivu avre idanna keli tumba bejar agtide kandri papa nimma snehite gotta avarige yake e maduve ishta illa anta tilkolo prayatnana yake neevyaru madlilla astu olle snehitaragi yake neev avrige tilisi buddi helalilla

Sitaram said...

Really touching...

ravi said...

TUMBA DUKKAVAYATHU SNEHITHA..........................

Anonymous said...

nijakku besara vaayitu..idi dina manassu ninna snehiteya suttave suttutittu..kaaranavenu..tiliyalilla avala saavige..

manjunath said...

E kathe odida nantara akka pakkadalli officer galu iddudarinda hege alabekendu gottagalilla. nanna mugu kannugalu maatra tadeyalaarade atte bittavu.

Aa duradrushta hennannu kaapaadalaagadiddakke vyathe paduttiddene. avala saavu, avala kashta guttaagiye uliyitu. atmakke shanti siguva vichaara bandaaga, .............. atmavu satta nantara mundina janmada palegaagi bhagavantana anatigaagi kayuttadembudu nanna anisiki, naanu odida, tilidukonda adhyatmika vishayada prakaara. Ene aagali palavu tindu ninna kashta enendu keli samaadhaana heli baruvudu nimma karthavyavagittu, neevu ashtaagi hachchikondiddarinda.

*ಚುಕ್ಕಿ* said...
This comment has been removed by the author.
*ಚುಕ್ಕಿ* said...

ಕಥೆ ಓದಿದೆ. ಉದ್ದವಾದರೂ ಮನಸ್ಸಿಗೆ ಹತ್ತಿರವಾದ ವ್ಯಥೆ ಅದು. ಗೆಳೆತನ ಅಂದರೆ ಮದುವೆ ಆಗುವವರೆಗೆ ಮಾತ್ರವಲ್ಲ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮದುವೆ ಆದ ಮೇಲೆ ಗೆಳೆತನದಲ್ಲಿ ಸ್ವಲ್ಪ ಮಟ್ಟಿಗೆ ಸಡಿಲ ವಾಗುತ್ತಾರೆ.

೦೧. ತನ್ನ ಭಾವನೆಗಳನ್ನು ಹತ್ತಿಕ್ಕಿ ಗೆಳೆಯರಿಗೊಸ್ಕರವೇ ಮದುವೆ ಆದ ನಿಮ್ಮ ಸ್ನೇಹಿತೆಯ ತೀರ್ಮಾನ ದುಡಿಕಿನದ್ದು.
೦೨. ಒತ್ತಾಯಪೂರ್ವಕವಾಗಿ ಮದುವೆ ಮಾಡಿದ ಅವರ ಮನೆಯವರ ಪ್ರಯತ್ನ ನಿಜಕ್ಕೂ ಖಂಡನೀಯ.
೦೩. ಗೆಳೆತನವನ್ನು ಗೌರವಿಸುವ ನಿಮ್ಮ ಆ ಗೆಳತಿ ಬದುಕಿಗೆ ವಿರುದ್ದ ಮುಖ ಮಾಡಿ ಸಾವಿಗೆ ಶರಣಾದದ್ದು ಒಳ್ಳೆಯ ತೀರ್ಮಾನವಲ್ಲ.
೦೪. ಗೆಳತಿ ಸಿಕ್ಕಾಗ ಮನ ಬಿಚ್ಚಿ ಮಾತನಾಡಿ , ಅವರ ಬದುಕನ್ನು ಸರಿ ಮಾಡುವ ಪ್ರಯತ್ನವನ್ನಾದರೂ ನೀವು ಮಾಡಬಹುದಿತ್ತು.

ಘಟನೆ ಆಗಿ ಹೋಗಿದೆ. ನೆನಪುಗಳೇ ಈಗ ವಾಸ್ತವೆ. ಆಗಿ ಹೋದ ಘಟನೆಗಳಿಗೆ ಹಲುಬಿ ಪ್ರಯೋಜನವಿಲ್ಲ. ನಿಮ್ಮ ಗೆಳತಿಯ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಲೇಖನ ಓದಿ ಮನಸ್ಸು ತೇವವಾಗಿದೆ.
ಗಟ್ಟಿಯಾಗಿರಿ. ಶುಭ ವಾಗಲಿ.

Badarinath Palavalli said...

ಮನಸ್ಸು ವಿಹ್ವಲವಾಯಿತು... ಈ ಸಾವು ನ್ಯಾಯವೇ?

ಅದೇಕೆ ಹಠಕ್ಕೆ ಬಿದ್ದು ಹೆತ್ತವರು ಬೇಡದ ಮದುವೆ ಮಾಡುತ್ಯಾರೋ? ಇಲ್ಲಿ ಕಥಾ ನಾಯಕಿ ಆತ್ಮಹತ್ಯೆ ಮಾಡಿಕೊಂಡರೂ ಹಲವು ಜನ ಈಗಲೂ ಜೀವಂತ ಶವಗಳಾಗಿ ದಿನ ದೂಡುತ್ತಿದ್ದಾರೆ!

ಕಡೆಗೆ ಮುಖ ದರ್ಶನವಾದರೂ ಸಿಕ್ಕಿತಲ್ಲ ಅದೇ ಸಾಕು...

ಮಧುಗಿರಿ ನನ್ನ ಅತ್ತಿಗೆ ಊರು, ಬೆಟ್ಟವನ್ನೂ ಹತ್ತಿದ್ದೇನೆ.