ಖಾಯಂ ಓದುಗರು..(ನೀವೂ ಸೇರಬಹುದು)

16 May 2012

ದಿನಾಂಕ: 15-05-2012 ರಂದು ಬ್ಲಾಗ್ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ದಿನಾಂಕ: 15-05-2012 ರಂದು ಸಂಯುಕ್ತ ಕರ್ನಾಟಕ ಪೇಪರ್ ನಲ್ಲಿ "ಯಳವತ್ತಿ ಬ್ಲಾಗ್" ನ್ನು ಪರಿಚಯಿಸಿ ಒಂದು ವರದಿ ಪ್ರಕಟಿಸಿದ್ದಾರೆ. ಸಂತೋಷದ ವಿಚಾರ. ಆದರೆ, ಪತ್ರಿಕೆಯವರು ಪರಿಚಯಿಸುವ ಭರದಲ್ಲಿ ಹಳೆಯ ಬರಹಗಳನ್ನು ನೋಡದೇ, ಬ್ಲಾಗಿನ ಒಂದು ಪುಟವನ್ನು ನೋಡಿ ಪ್ರಕಟಿಸಿದ್ದಾರೆ ಅನ್ನುವುದು ನನ್ನ ಅನಿಸಿಕೆ. ಅಲ್ಲದೇ, ಅದರಲ್ಲಿ ಹೇಳಿರುವಂತೆ "ಅನುವಾದವನ್ನು ಮತ್ತಷ್ಟು ಸೊಗಸಾಗಿಸಿಕೊಂಡರೆ, ಉತ್ತಮ ಹಾಸ್ಯ ಕವಿಯಾಗುವ ಎಲ್ಲ ಲಕ್ಷಣಗಳೂ ಅವರಲ್ಲಿವೆ" ಎಂದಿದ್ದಾರೆ. ಆದರೆ, ನಾನು ಯಾವುದೇ ಅನುವಾದವನ್ನು ಮಾಡಿಲ್ಲ. ದೊಡ್ಡ ಅಲ್ಪವಿರಾಮಕ್ಕೆ ಸ್ವಲ್ಪ ಮೊದಲು ಪ್ರಕಟವಾಗಿದ್ದಕ್ಕೆ ಖುಷಿಯಾಗಿದೆ.