ಖಾಯಂ ಓದುಗರು..(ನೀವೂ ಸೇರಬಹುದು)

27 March 2012

ಓ ಹೆಣ್ಣೇ ಅಸಲಿಗೆ ನೀ ಯಾರು???

This Poem is Dedicated to Special Ones..

ಹೊಸ ಥರಾ ಪ್ರಯತ್ನ.. ಓದಿ ನೋಡಿ ಗೊತ್ತಾಗುತ್ತೆ..

ಓ ಹೆಣ್ಣೇ ಅಸಲಿಗೆ ನೀ ಯಾರು???

ಈ ಜನ ನಿನ್ನ ಭೂ ತಾಯಿ ಎಂದು ಪೂಜಿಸುವರಲ್ಲಾ,
ನಿನ್ನ ಕಾಲಡಿಯಲ್ಲಿ ಹಾಕಿ ತುಳಿಯುವರಲ್ಲಾ..

ನೀ ಪುರುಷನ ಶಕ್ತಿ ಎಂದು ಕರೆವರಲ್ಲಾ,
ನಿನ್ನ ಪ್ರಲೋಭನೆಗಾಗಿ ದುರ್ಬಳಕೆ ಮಾಡುವರಲ್ಲಾ..

ನೀ ತಾಯಿಯಾಗಿ ಮಕ್ಕಳ ಪಾಲಿಸುವೆಯಲ್ಲಾ,
ವಯಸ್ಸಾದ ಮೇಲೆ ನಿನ್ನ ಕಡೆಗಣಿಸುವರಲ್ಲಾ..

ನೀ ಪ್ರೀತಿಗೆ ನ್ಯಾಯವನ್ನು ಒದಗಿಸುವೆಯಲ್ಲಾ,
ನೀ ಪ್ರೀತಿಸಿ ಮೋಸ ಮಾಡುವೆ ಎನ್ನುವರಲ್ಲಾ..

ನೀ ಹಸಿದಿದ್ದರೂ ಮಕ್ಕಳಿಗಾಗಿ ನಿನ್ನ ಹಸಿವನ್ನು ಸಾಯಿಸಿ ತುತ್ತಿಡುವೆಯಲ್ಲಾ,
ನಿನ್ನ ಕೊನೆಯಲ್ಲಿ ನಿನಗೆ ಒಂದು ತುತ್ತು ಹಾಕಲು ಹಿನ್ನಡೆವರಲ್ಲಾ...

ಕಾಮಪೀಡಿತರ ತೃಷೆಯ ತೀರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವೆಯಲ್ಲಾ,
ನಿನ್ನ ಸೂಳೆಯೆಂದು ಈ ಜನ ಜರಿವರಲ್ಲಾ..

ಓ ಹೆಣ್ಣೇ ಅಸಲಿಗೆ ನೀ ಯಾರು???

ಇದರಲ್ಲಿ ಟ್ವಿಸ್ಟ್:- ಕೆಳಗಿನಿಂದ ಮೇಲಕ್ಕೆ ಓದಿದರೂ ಸಹ ಇದೇ ಅರ್ಥ ಬರುವ ಹಾಗೆ ಬರಲು ಪ್ರಯತ್ನಿಸಿದ್ದೇನೆ..

www.shivagadag.blogspot.com