ಖಾಯಂ ಓದುಗರು..(ನೀವೂ ಸೇರಬಹುದು)

26 March 2012

ಸುಮ್ನೆ ಟ್ವೀಟುಗಳು

1) ಯಳವತ್ತಿ ಟ್ವೀಟ್:- ಈ ಹುಡುಗಿಯರು ಭಯಂಕರ ಸುಳ್ಳುಗಾರ್ತಿಯರು.. ಪ್ರತಿಯೊಬ್ಬರೂ ಕೊನೆಗೆ ಕೈ ಕೊಟ್ಟು ಹೋಗುವಾಗಲೆಲ್ಲಾ, ನಿನಗೆ ನನಗಿಂಗಲೂ ಒಳ್ಳೆಯ ಹುಡುಗಿ ಸಿಕ್ಕೇ ಸಿಕ್ತಾಳೆ ಅಂತಾ ಕೊನೆ ಕ್ಷಣದಲ್ಲೂ ಸುಳ್ಳು ಹೇಳಿ ಹೋಗ್ತಾರೆ...


2) ಯಳವತ್ತಿ ಟ್ವೀಟ್:- ಕಬ್ಬಿನ ಜಲ್ಲೆಯಂತಹ ಹುಡುಗಿ, ನನ್ನ ಸಿಹಿಯಾದ ಪ್ರೀತಿಯನ್ನು ಹೀರಿ ನನ್ನನ್ನು ರಚ್ಚಿನಂತೆ ಬಿಸಾಡಿ ಹೋದಳು.. ಇದ ನೋಡಿ ನನಗೆ ತುಂಬಾ ನೋವಾಗುತ್ತಿದೆ.. ಯಾಕೆಂದರೆ, ಮುಂದೆಂದಾದರೂ ಅವಳಿಗೆ ಈ ಗತಿ ಬಂದರೆ ಅವಳಿಗೆ ತಡೆದುಕೊಳ್ಳುವ ಶಕ್ತಿಯನ್ನು ದೇವರು ಕೊಟ್ಟಿಲ್ಲವಲ್ಲಾ ಅಂತಾ...