ಖಾಯಂ ಓದುಗರು..(ನೀವೂ ಸೇರಬಹುದು)

13 March 2012

ಯಳವತ್ತಿ ಟ್ವೀಟುಗಳು


1) ಯಳವತ್ತಿ ಟ್ವೀಟ್:-

ಸಾಫ್ಟ್(ವೇರ್) ಹುಡುಗರೇ, ನಿಮಗೆ ಕೈಕೊಟ್ಟು ಹೋದ, ಸಾಫ್ಟ್(ಅಲ್ಲದ) ಮನಸಿನ ಪ್ರಿಯತಮೆಯನ್ನು ನಿಮ್ಮ ಮೊರಿಯಿಂದ ಅಳಿಸಿಹಾಕಲು ಪ್ರಯತ್ನಿಸಬೇಡಿ.. ಅವರು ಮತ್ತೆ Recycle Bin ನಲ್ಲಿ ಕುಳಿತು ಕಾಡಿಸುತ್ತಾರೆ,
ಅಲ್ಲಿಂದಲೂ ಡಿಲೀಟ್ ಮಾಡಿದರೆ, ಮತ್ತೆ ರಿಕವರಿಯಾಗಲು ಪ್ರಯತ್ನಿಸುತ್ತಾರೆ...

ಅದಕ್ಕಾಗಿ, ನನ್ನ ಸಲಹೆ...

ಅವಳ ಜಾಗವನ್ನು ಬೇರೆ ಹುಡುಗಿಯಿಂದ Replace ಮಾಡಿಬಿಡಿ.. ಯಾವ ತಲೆನೋವು ಇರೋಲ್ಲ...

2) "ಕವಿತೆಯಲ್ಲ"

ನಾ ಕವಿಯಲ್ಲವೆಂದು
ನೀ ನನ್ನ
ತೊರೆದುಹೋದುದು
ತರವೇ?

ನಾ ನೀರಲ್ಲಿ ಮಿಂದಾಗ,
ನಿನ್ನ ನೆನಪಲ್ಲಿ ದುಃಖಿಸಿದಾಗ
ಕವಿತೆ ಬರೆದುಬಿಡುತ್ತೇನೆ.. .

ಆದರೆ,
ಸಾಬೀತು ಮಾಡಲಾಗದೇ
ಸೋತುಹೋಗುತಿರುವೆನು..


ಭಗವಂತ ನೀರಲ್ಲಿ
ಇಲ್ಲ
ಕಣ್ಣೀರಲ್ಲಿ ಅಳಿಸಿಹಾಕಿರುತ್ತಾನೆ.......


3) ಯಳವತ್ತಿ ಟ್ವೀಟ್- ಹುಡುಗಿ, ತನ್ನ ಬಾಯ್ ಫ್ರೆಂಡ್ ಜೊತೆ ಏನೇ ವಿಚಾರದ ಬಗ್ಗೆ ಮಾತು ಶುರು ಮಾಡಿದ್ರೂ ಕೂಡಾ, ಕೊನೆಗೆ ಅದು ಬಾಯ್ ಫ್ರೆಂಡ್ ಬಾಯಿಂದ ಸಾರಿ ಕೇಳೋದರೊಂದಿಗೆ ಮುಕ್ತಾಯ ಆಗುತ್ತೆ....

ಎಷ್ಟು ಜನಕ್ಕೆ ಅನುಭವ ಆಗಿದೆ? Like Button ಒತ್ತಿ ನೋಡೋಣ