ಖಾಯಂ ಓದುಗರು..(ನೀವೂ ಸೇರಬಹುದು)

20 February 2012

ಚಿತ್ರ ಕವನ

ಪ್ರಿಯಾ ಮೆನನ್ ರವರ ಪ್ರೊಫೈಲ್ ಚಿತ್ರದಿಂದ ಸ್ಪೂರ್ತಿ ಪಡೆದು ಬರೆದ ಕವನವಿದು. ಇನ್ನೂ ಚನ್ನಾಗಿ ಬರೆಯಬಹುದಿತ್ತೇನೋ ಅನ್ನಿಸಿದ್ದು, ಮತ್ತೆ ಅವರ ಚಿತ್ರ ನೋಡಿದಾಗಲೇ....
(ಅವರ ಅನುಮತಿಯೊಂದಿಗೆ ಅವರ ಫೋಟೋವನ್ನು ಇಲ್ಲಿ ಶೇರ್ ಮಾಡಲಾಗಿದೆ)"ಹೇ ಹುಡುಗಿ.."

ನೀ ನನ್ನ
ನೋಡಿ
ಮುಗುಳ್ನಗೆಯ ಸೂಸಿಬಿಟ್ಟೀಯ ಜೋಕೆ..
ನಿನ್ನ ನಗುವಿಗೆ
ನನ್ನನಾ ಮರೆತವನು
ನಿನ್ನ ಮುಗುಳ್ನಗೆಗೆ
ಕಳೆದು ಹೋಗಿಬಿಟ್ಟೇನು..

ನೀ
ನನ್ನ ತಪ್ಪಾಗಿಯಾದರೂ
ಸ್ವರ್ಶಿಸಿಬಿಟ್ಟೀಯ ಜೋಕೆ
ನಿನ್ನ ನಿರ್ಜೀವ ಚಿತ್ರಕ್ಕೇ
ಕರೆಂಟ್ ಹೊಡೆಸಿಕೊಂಡವನು
ನಿನ್ನ ನಿಜ ಸ್ಪರ್ಶಕ್ಕೆ ಕರಗಿ ಹೋದೇನು..

ನೀ
ಎಲ್ಲಿದ್ದರೂ ಕೂಡಾ
ಅರೆಕ್ಷಣವಾದರೂ
ನನ್ನ ಕಣ್ಣ ಮುಂದೆ
ಬಂದು ಬಿಟ್ಟೀಯ ಜೋಕೆ..

ನಿನ್ನ
ಬಣ್ಣದ ಚಿತ್ರಕ್ಕೆ ಸೋತವನು
ನಿನ್ನ ಸುಂದರ ಮೊಗವ ನೋಡಿ
ಸತ್ತೇ ಹೋದೇನು..

-ಯಳವತ್ತಿ.