ಖಾಯಂ ಓದುಗರು..(ನೀವೂ ಸೇರಬಹುದು)

15 February 2012

ನಾನು ಶೂಟ್ ಮಾಡಿದ್ದು..

ಯಳವತ್ತಿ ಟ್ವೀಟ್:-
ನಾನವತ್ತು ನಾಗರಹೊಳೆ ಅಭಯಾರಣ್ಯಕ್ಕೆ ಹೋದಾಗ, ಯಾವುದೇ ಪ್ರಾಣಿ ಪಕ್ಷಿಗಳನ್ನು ಶೂಟ್ ಮಾಡಬಾರದೆಂದು ಅರಣ್ಯ ಇಲಾಖೆಯವರು ತಿಳಿಸಿದ್ದರು. ಆದರೂ, ನನ್ನ ಖಯಾಲಿಯನ್ನು ಬಿಡೋಕೆ ಆಗಲಿಲ್ಲ. ಗುಟ್ಟಾಗಿ ನನ್ನ ಜೊತೆಗೆ ಆಯುಧವನ್ನು ತೆಗೆದುಕೊಂಡು ಹೋಗಿದ್ದೆ.

ಯಾರೂ ಇಲ್ಲದಾಗ, ಗುಟ್ಟಾಗಿ, ಶಬ್ದ ಮಾಡದ ಹಾಗೆ ಯಾರಿಗೂ ಗೊತ್ತಾಗದಂತೆ, ಒಂದು ಪಕ್ಷಿಯನ್ನು ಶೂಟ್ ಮಾಡಿಬಿಟ್ಟೆ..

ಅದೆಲ್ಲಿಂದ ಬಂದನೋ ಅರಣ್ಯ ರಕ್ಷಣಾ ಕಾವಲುಗಾರ, ನಾನು ಶೂಟ್ ಮಾಡಿದ್ದನ್ನು ನೋಡಿಬಿಟ್ಟ. ನನ್ನ ಹತ್ತಿರ ಓಡಿ ಬಂದವನೇ, ಇದೇನ್ ಮಾಡಿಬಿಟ್ಟಿರಿ ಸರ್ ನೀವು.. ನಾವು ಮೊದಲೇ ಹೇಳಿದ್ದೆವಲ್ಲ, ಶೂಟ್ ಮಾಡಬೇಡಿ ಅಂತಾ.. ಸಾಹೆಬ್ರು ನೋಡಿದ್ರೆ, ನಿಮ್ಮನ್ನು ಸುಮ್ಮನೆ ಬಿಡೋಲ್ಲ ಅಂದವನೇ,

ನನ್ನ ಕೈಲಿದ್ದ ಕ್ಯಾಮೆರಾ ಕಿತ್ತುಕೊಂಡು, ನಾನು ಶೂಟ್ ಮಾಡಿದ ಫೋಟೋಗಳನ್ನು ಡಿಲೀಟ್ ಮಾಡಿಬಿಟ್ಟ ಬಡ್ಡಿಮಗ..