ಖಾಯಂ ಓದುಗರು..(ನೀವೂ ಸೇರಬಹುದು)

14 February 2012

ಪ್ರೇಮಿಗಳ ದಿನಕ್ಕೆ ಟ್ವೀಟುಗಳು

1) ಯಳವತ್ತಿ ಟ್ವೀಟ್:- ಪ್ರೇಮಿಗಳ ದಿನದಂದು, ನಾ ನಿನ್ನ ಪ್ರೀತಿಸ್ತಾ ಇದ್ದೀನಿ.. ನೀ ನನ್ನ ಪ್ರೀತಿಸ್ತೀಯಾ ಅಂತಾ ಹುಡುಗ ಅವಳ ಮೊಬೈಲ್ ಗೆ ಮೆಸೇಜ್ ಮಾಡಿದ. ಅವಳು ಸಹ ಇವನನ್ನು ಪ್ರೀತಿಸುತ್ತಿದ್ದಳಾದರೂ ದಿನವಿಡೀ ಕಳೆದರೂ, ಅವನ ಮೆಸೇಜಿಗೆ ಉತ್ತರ ಕಳುಹಿಸಲೇ ಇಲ್ಲ.. ದಿನಪೂರ್ತಿ ಹುಡುಗ ಒದ್ದಾಡಿ ಹೋದ..

ಅವಳ್ಯಾಕೆ ಅವನ ಮೆಸೇಜಿಗೆ ಉತ್ತರ ಕಳುಹಿಸಲಿಲ್ಲ ಗೊತ್ತೇ???
ಯಾಕೆಂದರೆ,

ಇವತ್ತು
ಒಂದು ಮೆಸೇಜಿಗೆ ಒಂದು ರೂಪಾಯಿ ಕಟ್ಟಾಗುತ್ತೆ...
ಹುಡುಗೀರು ಯಾವತ್ತೂ ತಮ್ಮ ಕರೆನ್ಸಿ ಖರ್ಚು ಮಾಡೋಲ್ಲ....

"ಜಾಗೋ ಬಾಯ್ಸ್ ಜಾಗೋ"


2)ಪ್ರೇಮಿಗಳ ದಿನಕ್ಕೆ ಪ್ರಿಯತಮೆಗೆ ಗಿಫ್ಟು ಕೊಡಬೇಕಿತ್ತು. ಆದರೆ, ಅವಳಿಗೆ ಉಡುಗೊರೆಗಳನ್ನು ತೆಗೆದುಕೊಳ್ಳುವುದೆಂದರೆ ಇಷ್ಟವಿರಲಿಲ್ಲ. ಅದಕ್ಕಾಗಿ ಅವನು ಒಂದು ಐಡಿಯಾ ಮಾಡಿದ. ಅವಳಿಗೆ ನೂರು ಮುತ್ತುಗಳನ್ನು ಕೊಡಲು ತಯಾರಿ ಮಾಡಿಕೊಂಡ.. ಅವಳು ತೆಗೆದುಕೊಂಡರೂ ಓ.ಕೆ. ವಾಪಸ್ಸು ಮಾಡಿದರೂ ಓ.ಕೆ..

3)
ಹಿಂಗೆ.. ಸುಮ್ ಸುಮ್ಕೆ.. ಒಂದು ತಲೆನೋವಿನ ಕವನ..

ಗೆಳತೀ..ನೀನೆಂದರೆ
ನನಗೆ ಇಷ್ಟ ಕಣೇ..

ಅಷ್ಟೊಂದು
ಸುಂದರ ಹುಡುಗಿಯರು
ಸುತ್ತುವರೆದಿದ್ದರೂ
ನಿನ್ನಲ್ಲೇ
ನನಗೆ ಆಕರ್ಷಣೆ..

ನಿನ್ನ ಬಳಿ ಬಂದಾಗ
ಘಮಲು ಹೂಗಳ ಕಂಪು..
ದುಂಬಿಗಳು ಹೂಗಳ ಗಿಡಗಳನ್ನು
ಹಿಂಬಾಲಿಸುವಂತೆ,
ನಿನ್ನ ಹಿಂದೆಯೇ ನಾನು....

ಇದ ನೋಡಿ
ಹೊಟ್ಟೆ ಕಿಚ್ಚುಪಡದ ಹುಡುಗಿಯರಿಲ್ಲ..
ನಿನ್ನ ಗುಟ್ಟಿನ ಮರ್ಮ ಅರಿಯಲಾಗದೇ
ಒದ್ದಾಡುತ್ತಿರುವರಲ್ಲಾ..

ನನಗೂ ಸಹ ನಿನ್ನ ಗುಟ್ಟ
ತಿಳಿಯುವ ಕುತೂಹಲ..

ನನಗಾಗಿ ನಿನ್ನ ಗುಟ್ಟನ್ನು
ಒಂದು ಬಾರಿ ರಟ್ಟು ಮಾಡೆಯಾ????

ನೀನು ಉಪಯೋಗಿಸುವ
Perfume ಯಾವುದೆಂದು
ಹೇಳೆಯಾ ಗೆಳತೀ..???