ಖಾಯಂ ಓದುಗರು..(ನೀವೂ ಸೇರಬಹುದು)

04 February 2012

ಒಂದೆರಡು ಸಾಲಿನ ಕಥೆ.

ಒಂದೆರಡು ಸಾಲಿನ ಕಥೆ:-
ಶ್ರೀಮಂತನ ಒಬ್ಬನೇ ಮಗನೊಬ್ಬ ಮನೆ ಎದುರಿನ ಗುಡಿಸಲಲ್ಲಿನ ಮಕ್ಕಳ ಬಳಿಯಿದ್ದ ಹಳೇ ಆಟಿಕೆಗಳೊಂದಿಗೆ ಸಂತೋಷವಾಗಿ ಆಡುತ್ತಿದ್ದ. ಇದನ್ನು ನೋಡಿದ ಶ್ರೀಮಂತ ಮಗನಿಗಾಗಿ ಸಾವಿರಾರು ಮೌಲ್ಯದ ಹೊಚ್ಚ ಹೊಸ ಆಟಿಕೆಗಳನ್ನು ತಂದು ಉಡುಗೊರೆಯಾಗಿ ನೀಡಿದ..

ಅವತ್ತಿನ ಸಂಜೆ ಮಗ ಮತ್ತದೇ ಗುಡಿಸಿಲಿನ ಹುಡುಗರ ಜೊತೆ ಹಳೇ ಆಟಿಕೆಗಳೊಡನೆ ಸಂತೋಷವಾಗಿ ಆಡುತ್ತಿದ್ದುದನ್ನು ನೋಡಿ, ಸಂತೋಷ ಅನ್ನೋದು ವಸ್ತುವಿನಲ್ಲಿ ಅಡಗಿಲ್ಲ ಎಂಬ ಸತ್ಯವನ್ನು ತಿಳಿದುಕೊಂಡ..


ಯಳವತ್ತಿ ಟ್ವೀಟ್:-

ಅಜ್ಜೀ.. ಕರಿಬಸವಯ್ಯ ಸತ್ತೋದ್ರಂತೆ..

ಯಾವ ಕರಿಬಸವಯ್ಯ?

ಅದೇ ಅಜ್ಜಿ.. ಲಕುಮಿ ಧಾರವಾಹಿಲಿ ಲಕುಮಿ ಮಾವ ದೇವಲಿಂಗಯ್ಯನ ಪಾರ್ಟು ಮಾಡಿದ್ದಾರಲ್ಲಾ.. ಅದೇ ಕರಿಬಸವಯ್ಯ ಕಣಜ್ಜಿ..

ಓಹ್ ಅವ್ನಾ? ಲಕುಮಿಗೆ ಎಷ್ಟು ಕಾಟ ಕೊಟ್ಟ, ಲಕುಮಿನ ಕೊಲೆ ಮಾಡಕೆ ಸುಪಾರಿ ಬೇರೆ ಕೊಟ್ಟಿದ್ನಲ್ಲ.. ಮಾಡಿದ ಪಾಪ ಸುಮ್ನೆ ಬಿಡುತ್ತಾ? ಆ ದ್ಯಾವ್ರೂ ಸುಮ್ನೆ ಬಿಡದಿಲ್ಲ..

ಅಜ್ಜಿಯ ಮುಗ್ಧತೆಗೆ ನಗಬೇಕೋ, ಕರಿಬಸವಯ್ಯನವರ ಅದ್ಭುತ ನಟನೆಗೆ ತಲೆಬಾಗಬೇಕೋ..

ನಮ್ಮನ್ನಗಲಿದ ಬಹುವಲ್ಲಭ ಕಲಾವಿದನಿಗೆ ಯಳವತ್ತಿ ಟ್ವೀಟ್ ಮೂಲಕ ನಮನ...ಒಂದೆರಡು ಸಾಲಿನ ಕಥೆ:-
ಕೊನೆಯ ಬಸ್ಸು ಹೊರಟು ನಿಂತಿತ್ತು. ಅವಳು ಬರದೇ ಇದ್ದುದಕ್ಕೆ ಇವನಿಗೆ ಜೀವನವೇ ಬೇಡವೆನಿಸಿ ಮನಸ್ಸು ತೂಗುಯ್ಯಾಲೆಯಾಗಿತ್ತು.. ಆದರೆ, ಇಲ್ಲಿ ಅವಳೊಬ್ಬಳೇ ಕತ್ತಲೆ ಕೋಣೆಯೊಳಗೆ ಕೂತು ಬಿಕ್ಕಳಿಸುತ್ತಿದ್ದಳು..