ಖಾಯಂ ಓದುಗರು..(ನೀವೂ ಸೇರಬಹುದು)

01 February 2012

ಕೆಲವು ಕವನಗಳು ಮತ್ತು ಒಂದೆರಡು ಟ್ವೀಟುಗಳು

1) ಮೌನ.....

ಗೆಳತೀ.
ಗುಡುಗು ಸಿಡಿಲುಗಳು
ನನ್ನನ್ನು ಅಲುಗಾಡಿಸಲಿಲ್ಲ..

ನಾ ಪಾತಾಳಕ್ಕೆ ಕುಸಿಯಲು
ನಿನ್ನೀ ಮೌನವೇ ಸಾಕಾಯಿತಲ್ಲ..

( ಗೆಳತಿ ಚಂದ್ರಕಲಾ ಆಚಾರ್ಯ ರವರ ಕವನದಿಂದ ಸ್ಪೂರ್ತಿ ಪಡೆದಿದ್ದು )

-ಯಳವತ್ತಿ.

2) ಯಳವತ್ತಿ ಟ್ವೀಟ್:- ಪ್ರಪಂಚದ ಅತೀ ಕಷ್ಟದ ಕೆಲಸ, ಒಳ್ಳೆಯ ಕೆಲಸ ಮತ್ತು ನಂತರ ಸಮಾಧಾನ ನೀಡುವ ಒಂದೇ ಒಂದು ಕೆಲಸ ಎಂದರೆ...

ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳುವುದು.. ಒಮ್ಮೆ ಕೇಳಿ ನೋಡಿ.. ಅನುಭವಕ್ಕೆ ಬರುತ್ತೆ..


3) ಯಳವತ್ತಿ ಟ್ವೀಟ್:- Reasonಗೂ (ಕಾರಣಕ್ಕೂ) Reasoningಗೂ (ತರ್ಕಕ್ಕೂ) ಒಂದಕ್ಕೊಂದು ಸಂಬಂಧ ಇದೆ..

ಕಾರಣ ಇಲ್ಲದೇ ಪ್ರೀತಿಸಬಹುದು..ಆದರೆ, ಕಾರಣ ಇಲ್ಲದೇ ಬದುಕೋಕೆ ಸಾಧ್ಯವಿಲ್ಲ (ಇದು ಕಾರಣ)

ಪ್ರೀತಿಸದೇ ಇದ್ದವನು ಬದುಕೋಕೆ ಲಾಯಕ್ಕಾದವನಲ್ಲ.. (ಇದು ತರ್ಕ)


4) ಕವನ
ಶೀರ್ಷಿಕೆ:- ನ್ಯಾಯಸಮ್ಮತವಲ್ಲ..

ಚಿಕ್ಕ ತಪ್ಪಿಗೆ ದೊಡ್ಡ ಶಿಕ್ಷೆ ಎಂದು
ಯಾವ ನ್ಯಾಯಾಲವೂ ಹೇಳಿಲ್ಲವಲ್ಲ..

ಗೆಳತೀ..
ಚಿಕ್ಕ ತಪ್ಪಿಗೆ ದೊಡ್ಡ ಶಿಕ್ಷೆ ಎಂದು
ಯಾವ ನ್ಯಾಯಾಲವೂ ಹೇಳಿಲ್ಲವಲ್ಲ..

ನಾ ನಿನಗೆ ಐ ಲವ್ ಯೂ ಎಂದ ಮಾತ್ರಕ್ಕೆ,
ನಿಮ್ಮಪ್ಪ ನಮಗೆ ಮದುವೆ ಮಾಡಿ,
ನನಗೆ ಜೀವಾವಧಿ ಶಿಕ್ಷೆ ಕೊಟ್ಟುಬಿಟ್ಟನಲ್ಲ...

ನ್ಯಾಯಸಮ್ಮತವಲ್ಲ ಗೆಳತಿ..
ಇದು ನ್ಯಾಯಸಮ್ಮತವಲ್ಲ..........

5) ಒಂದೆರಡು ಸಾಲಿನ ಕಥೆ..
ದೀಪಾವಳಿಗೆ ಹೊಸ ಅಳಿಯ ಬರುವವನಿದ್ದ.. ಮನೆಯ Ration ಖಾಲಿಯಾಗಿತ್ತೆಂದು ರಾಮರಾಯರು ಚಡಪಡಿಸುತ್ತಿದ್ದರು..ನಾಲ್ಕೈದು ಚೀಲಗಳಲ್ಲಿ Ration ತುಂಬಿಕೊಂಡು ಬಂದ ಅಳಿಯನನ್ನು ನೋಡಿ ರಾಯರಿಗೆ ತಮ್ಮ ಸತ್ತು ಹೋದ ಮಗನ ನೆನಪಾಗಿ ಕಣ್ಣಂಚಿನಲ್ಲಿ ನೀರು ಜಿನುಗಿತು..

6) ಯಳವತ್ತಿ ಟ್ವೀಟ್:-

ಗೆಳೆಯರನು ನಾ ಹುಡುಕುತ ಹೊರಟೆ.. ನೂರಾರು ಗೆಳೆಯರು ಸಿಕ್ಕರಲ್ಲ.. ಒಮ್ಮೆ ಅವರನ್ನು ಪರೀಕ್ಷಿಸಿ ನೋಡೇ, ಅವರ್ಯಾರು ಗೆಳೆಯರಲ್ಲ...