ಖಾಯಂ ಓದುಗರು..(ನೀವೂ ಸೇರಬಹುದು)

02 December 2011

ಟ್ವೀಟುಗಳು...

1) ಯಳವತ್ತಿ ಟ್ವೀಟ್:-

ನೀ ನನ್ ಮಗು ಕಣೇ ಅಂತಾ ಹೇಳಿದ್ದೇ ತಪ್ಪಾಯ್ತು..

ಇವತ್ತು (ಮಕ್ಕಳ ದಿನಾಚರಣೆ) ಗಿಫ್ಟ್ ಕೊಡಿಸಿ ಅಂತಾ ಗಂಟು ಬಿದ್ದಿದಾಳೆ..

(ಮಕ್ಕಳ ದಿನಾಚರಣೆಯ ಶುಭಾಷಯಗಳು)


2) ಯಳವತ್ತಿ ಟ್ವೀಟ್:- ಹೃದಯದುರಿಯ ಶಾಖ ತಾಳಲಾರದೆ ಮನಸ್ಸು, ಕಣ್ಣೀರ ಹೊರ ಹಾಕಿತ್ತು.. ಅದಕ್ಕೆ ಅದು ಬಿಸಿಯಾಗಿತ್ತು.


3) ಯಳವತ್ತಿ ಟ್ವೀಟ್-

ಕೆಟ್ಟ
ಜನರೊಡನೆ
ಹೋರಾಡಿ,
ಸೋತು ಸುಣ್ಣವಾಗಿ
ನನ್ನವಳ
ಮಡಿಲು ಸೇರಿದೆ..

ಪ್ರಪಂಚವನ್ನೇ ಗೆದ್ದ ಹಾಗಾಯ್ತು..


4) ಯಳವತ್ತಿ ಟ್ವೀಟ್:-

ಗೆಳತಿ..

ನೀನಿಲ್ಲದೇ
ನಾ
ಬದುಕಬಲ್ಲೆ..

ಒಂದರೆಕ್ಷಣದವರೆಗೆ
ಮಾತ್ರ..


5) ಯಳವತ್ತಿ ಟ್ವೀಟ್:-

ಡಿಸೆಂಬರ್ 21ಕ್ಕೇನೇ ಪ್ರಳಯ ಆಗ್ಲೇಬೇಕು ಅಂತೇನಿಲ್ಲಾ..

ಪ್ರತಿಯೊಬ್ಬರ ಲೈಫ್ ನಲ್ಲೂ ಒಂದಲ್ಲಾ ಒಂದು ದಿನ ಪ್ರಳಯ ಆಗೇ ಆಗುತ್ತೆ..

ಅದನ್ನು ಈ ನಮ್ ಜನ "ಮದುವೆ" ಅಂತಾರೆ...