ಖಾಯಂ ಓದುಗರು..(ನೀವೂ ಸೇರಬಹುದು)

13 November 2011

ಟ್ವೀಟುಗಳು


1)ಯಳವತ್ತಿ ಟ್ವೀಟ್:-
ಪ್ರೀತಿ ಪ್ರೇಮದ ಕಥೆ ಕವನಗಳು ಯಾರಿಗೂ Like ಆಗಲಿಲ್ಲ.. ಭಗ್ನ ಪ್ರೇಮಿಯ ನೋವುಗಳನ್ನೆಲ್ಲಾ ಸೇರಿಸಿ ಚಂದವಲ್ಲದ ಕಥೆ ಬರೆದೆ. ಎಲ್ಲರಿಗೂ ಇಷ್ಟವಾದರೂ ನನಗೆ ಮಾತ್ರ ನೋವಾಯಿತು.. ಕಥೆಯೊಳಗೆ ನಾನಿದ್ದೆ.


2) ಯಳವತ್ತಿ ಟ್ವೀಟ್:- ಪ್ರೀತಿಲಿ ಬೀಳದೇ ಇದ್ರೆ, ಏನೋ ಕಳಕೊಂಡ ಹಾಗೆ... ಪ್ರೀತಿಲಿ ಬಿದ್ದರೆ, ಎಲ್ಲವನ್ನೂ ಕಳಕೊಂಡ ಹಾಗೆ..


3) ಯಳವತ್ತಿ ಟ್ವೀಟ್:-
ಈ ದೇವರ ಸೃಷ್ಟಿನೇ ಒಂಥರಾ ವಿಚಿತ್ರ ಕಣ್ರೀ.. ಶತ್ರುಗಳಿಗೆ ನೋವು ಕೊಟ್ಟರೆ, ಅವರಿಗೆ ಮಾತ್ರ ನೋವಾಗುತ್ತೆ.. ಪ್ರೀತಿಸುವವರಿಗೆ ನೋವು ಕೊಟ್ಟರೆ, ಅವರಿಗಿಂತ ನಮಗೇ ಜಾಸ್ತಿ ನೋವಾಗುತ್ತೆ..4) ಯಳವತ್ತಿ ಟ್ವೀಟ್:-
ಪರೀಕ್ಷೆಯಲ್ಲಿ Distinction ಬಂದಿದ್ದಕ್ಕೆ ನನ್ನವಳಿಗೆ ಸ್ವೀಟ್ ಕೇಳಿದೆ.. ಸ್ವೀಟ್ ಅಂದ್ರೆ ಜಿಲೇಬಿ, ಜಾಮೂನು, ಲಾಡು, ಪೇಡಾ ಅಂತೆಲ್ಲಾ ಇರುತ್ತೆ ಅಂತಾ ನಂಗೆ ಇವತ್ತೇ ಗೊತ್ತಾಗಿದ್ದು.

5) ಯಳವತ್ತಿ ಟ್ವೀಟ್:- ನೀನು ನನ್ನ ಬಿಟ್ಟು ಹೋದ ಮೇಲೆ ನಾನು ತುಂಬಾ ಸಂತೋಷವಾಗಿದ್ದೇನೆ.. ಯಾವತ್ತೂ ನಿನ್ನನ್ನು ನೆನಪಿಸಿಕೊಳ್ಳಲಾಗಲಿಲ್ಲ. ನಿನ್ನ ಮೊಬೈಲ್ ನಂಬರ್ ಕೂಡಾ ಮರೆತು, ನೀ ಕೊಟ್ಟ ಮುತ್ತುಗಳ ಸಂಖ್ಯೆಗಳನ್ನು ಕಳೆದುಕೊಂಡಿದ್ದೇನೆ.. ನಾನಿವತ್ತಿನವರೆಗೂ ಬದಲಾಗಿಲ್ಲ... ಒಂದೇ ಬದಲಾವಣೆ ಎಂದರೆ, ಈಗ ನಾನು ಸುಳ್ಳು ಹೇಳೋದು ಕಲಿತುಕೊಂಡಿದ್ದೇನೆ ಅಷ್ಟೇ..


6) ಯಳವತ್ತಿ ಟ್ವೀಟ್:-
ನೀ ನನ್ನ ಬಿಟ್ಟು ಹೋದಾಗಿನಿಂದ, ಫೇಸ್ ಬುಕ್ ನಲ್ಲಿ ಪ್ರಕಟವಾಗುತ್ತಿರುವ ವಿರಹ ಗೀತೆಗಳನ್ನು Like ಮಾಡೋಕ್ಕೆ ತುಂಬಾನೇ ನೋವಾಗ್ತಿದೆ..


7) ಯಳವತ್ತಿ ಟ್ವೀಟ್:-
ಅವಳ ನೆನಪುಗಳಲ್ಲಿ ಬರೆದ ಕವನಗಳನ್ನೆಲ್ಲಾ ಸೇರಿಸಿ, ಸುಟ್ಟು ಹಾಕಬೇಕೆಂದು ಬೆಂಕಿ ಹಚ್ಚಿದೆ.. ಏನು ಮಾಡಿದರೂ ಬೆಂಕಿ ಹತ್ತಲೇ ಇಲ್ಲ.. ಎಲ್ಲವೂ ಕಣ್ಣೀರಿನಲ್ಲಿ ತೊಯ್ದು ತೊಪ್ಪೆಯಾಗಿತ್ತು..

8) ಯಳವತ್ತಿ ಟ್ವೀಟ್:-
ನೀ ನನ್ನ ಹೃದಯವನ್ನು ಒಡೆದುಹಾಕುವ ಮುನ್ನ ಕೊಂಚವಾದರೂ ಯೋಚಿಸಬೇಕಿತ್ತು.... ಮತ್ತೆ ಅದನ್ನು ಯಾರಿಂದಲೂ ಜೋಡಿಸಲು ಸಾಧ್ಯವಿಲ್ಲವೆಂದು...


9) ಯಳವತ್ತಿ ಟ್ವೀಟ್:-
ಈ ಅಪಘಾತಗಳೇ ಹೀಗೆ, ಹುಡುಗಿಯರ ಪ್ರೀತಿಯ ಥರಾ.. ಇದ್ದಕ್ಕಿದ್ದಂತೆ ಆಗಿಬಿಡುತ್ತೆ, ಆಮೇಲೆ ನೋವು ಕೊಡುತ್ತೆ.. ಕೊನೆಗೆ ಎಲ್ಲವನ್ನೂ ಮರೆತಾಗ, ಹಳೆ ನೋವುಗಳ ನೆಪದಲ್ಲಿ ಕಾಡಿಸುತ್ತೆ.


10) ಯಳವತ್ತಿ ಟ್ವೀಟ್:-
ನಾನು ತಗೋಳ್ಳೋದು ಅರ್ಧ ಬಾಟಲ್ ಮಾತ್ರ... ಐದಾರು ಅರ್ಧ ಬಾಟಲ್ ಆಗಬಹುದು ಅಷ್ಟೇ..


11)
ಪ್ರೇಮರಾಹಿತ್ಯದ
ಗಾಢ ಮೌನದ ಹಿಂದೆ ಸಿಗೋದು ಬರೀ ನೋವು..


12) ಹತ್ತಿರವಿದ್ದಾಗ ಬಿಟ್ಟುಹೋಗಲೊಲ್ಲದ ಮನಸ್ಯಾಕೆ?
ದೂರವಿದ್ದಾಗ ಸದಾ ನೀ ತರುವ ಕನಸ್ಯಾಕೆ..? ಮನಸಿಲ್ಲದಿದ್ದರೂ ತರಿಸುವ ಮುನಿಸ್ಯಾಕೆ? ನೂವು ಕೊಟ್ಟವರಿಗೂ ನೂವಾಗಲು ಕಾರಣ ನೀನು ಆದರೂ ಏ ಪ್ರೀತಿ ನಾ ನಿನ್ನ ನಂಬೋದ್ಯಾಕೆ? -ಯಳವತ್ತಿ


13)

ಕಾಡುವ
ಕನಸುಗಳಿಗೆ ಕೈ ಕಾಲುಗಳಿಲ್ಲ. ಮನಸ್ಸೇ ಇಲ್ಲದ ಮೇಲೆ ಖಾಲಿ ಉಳಿದಿದ್ದೆಲ್ಲಾ....


14)