ಖಾಯಂ ಓದುಗರು..(ನೀವೂ ಸೇರಬಹುದು)

22 June 2011

ಒಂದು ಸೀಕ್ರೇಟ್ ಶೇರ್ ಮಾಡಬೇಕು.. ಹೇಳಲಾ?

ಹೌದು..ನಾನಿದನ್ನು ನಿಮ್ಮೆಲ್ಲರ ಮುಂದೆ ಒಪ್ಪಿಕೊಳ್ಳಬೇಕೆಂದು ತೀರ್ಮಾನಿಸಿದ್ದೀನಿ...

ಅದೂ ಹುಡುಗಿಯ ವಿಚಾರ..,


ನನಗೆ ಇತ್ತೀಚೆಗೆ ನಿಮ್ಮೆಲ್ಲರ ಸಮಕ್ಷಮ ಮದುವೆಯಾಗಿದ್ದರೂ ನನ್ನ ಹೆಂಡತಿಯನ್ನು ಬಿಟ್ಟು ಇನ್ನೊಬ್ಬಳ(?)
ಪ್ರೇಮ ಪಾಶದಲ್ಲಿ ಸಿಲುಕಿದ್ದು ನಿಜವೆಂದು ಒಪ್ಪಿಕೊಳ್ಳಬೇಕಿದೆ..

ನಾನವಳ ಪ್ರಭಾವಳಿಗೆ ಒಳಗಾಗಿದ್ದು ನಿಜ..ಕಟ್ಟಿಕೊಂಡವಳಿಗೆ ನನಗೇ ತಿಳಿಯದೇ ಮೋಸ ಮಾಡಿದ್ದು ನಿಜ..
ನನ್ನ ನಿಯತ್ತು ಬದಲಾಗಿದ್ದು ನಿಜ..

ಹೊಸದಾಗಿ ಮದುವೆಯಾಗಿದ್ದರೂ ನನ್ನವಳು ನನ್ನ ಬಳಿಯಿದ್ದರೂ ಮನಸು ಅವಳೆಡೆಗೆ ಹರಿಯುತ್ತಿದೆ...

ಇಷ್ಟು ದಿನ ಅವಳು ನನ್ನ ಜೊತೆಯಿದ್ದರೂ ಅವಳ ಬಗ್ಗೆ ನನಗೆ ಅಂತಹ ಒಲವು ಇರಲಿಲ್ಲ...

ಅವಳು ನನ್ನಿಂದ ದೂರಾದ ಮೇಲೆಯೇ ಅವಳ ನೆನಪಾಗುತ್ತಿದೆ. ಛೆ!! ಈ ಮನಸ್ಸು ಎಷ್ಟೊಂದು ಚಂಚಲ??

ಆದರೂ ನಾನು ಸತ್ಯವನ್ನು ಒಪ್ಪಿಕೊಳ್ಳಲೇಬೇಕಿದೆ. ನಿಮ್ಮೆಲ್ಲರ ಮುಂದೆ ಮನಸ ತುಮುಲವನ್ನು
ಬಯಲಿಗೆಳೆದು ಹಗುರಾಗಬೇಕೆಂದು ತೀರ್ಮಾನಿಸಿದ್ದೇನೆ.. Really I am Love with her......

ನನ್ನ ಬಗ್ಗೆ ನೀವು ಹಗುರಾಗಿ ತಿಳಿದುಕೊಂಡರೂ ಪರವಾಗಿಲ್ಲ.. ನನಗೆ ನಿಮ್ಮಿಂದ ಒಂದು ಸಹಾಯವಾಗಬೇಕಿದೆ..

ಅವಳು ನನ್ನಿಂದ ದೂರ ಓಡುತ್ತಿದ್ದಾಳೆ.. ಅವಳೇನಾದರೂ ನಿಮಗೆ ಸಿಕ್ಕಲ್ಲಿ ನನ್ನ ಒಂದೆರಡು
ಮಾತುಗಳನ್ನು ಅವಳಿಗೆ ತಲುಪಿಸುತ್ತೀರಾ???

"ಐ ಲವ್ ಯೂ MONEY" ಎಂದು........