ಖಾಯಂ ಓದುಗರು..(ನೀವೂ ಸೇರಬಹುದು)

11 November 2010

ಚಿತ್ರಾನ್ನ ಚಿತ್ರಾನ್ನ... ಟ್ವಿಟರ್ ನ ಟ್ವೀಟುಗಳು.. ಭಾಗ-5

1)ಯಳವತ್ತಿ ಟ್ವೀಟ್:-

ಬೈಕ್ ಕೊಡಿಸ್ಲಿಲ್ಲ ಅಂತಾ ಅಪ್ಪ ಅಮ್ಮನ ಜೊತೆ ಜಗಳ ಆಡ್ಕೊಂಡು, ಮನೆ ಬಿಟ್ಟು ಬಂದು ಪಾರ್ಕಲ್ಲಿ ಕೂತಿದ್ದೆ..

ದೇವರ ಜಪ ಮಾಡಿದ್ರೆ ದೇವರು ಪ್ರತ್ಯಕ್ಷ ಆಗಿ ವರ ಕೊಡ್ತಾರಂತೆ ಅಂತಾ ಎಲ್ಲೋ ಕೇಳಿದ್ದೆ..
ಇರಲಿ ನೋಡೋಣ, ದೇವರನ್ನೇ ಬೈಕ್ ಕೇಳೋಣ ಅಂತಾ ಪಾರ್ಕಲ್ಲಿ ದೇವರ ಜಪ ಮಾಡ್ತಾ ಕೂತೆ..

ಅರ್ಧ ರಾತ್ರಿ ಕಳೆದಿತ್ತು..ಆದರೂ ಆಸೆ.. ಒಮ್ಮೆಯಾದರೂ ಪ್ರತ್ಯಕ್ಷವಾಗಲಿ ಅಂತಾ..

ಅಂತೂ ಸುಮಾರು ರಾತ್ರಿ ಮೂರೂವರೆಲಿ ಇಬ್ಬರು ದೇವರುಗಳು ಪ್ರತ್ಯಕ್ಷವಾದರು..
"ದೇವರೇ ನಂಗೆ ಬೈಕ್ ಕೊಡಿಸಿ" ಅಂತಾ ಬಾಯಿ ತೆಗೆದೆ..

ಅಷ್ಟರಲ್ಲಿ..

"ಏ ಲೋಫರ್, ಎಲ್ಲಿ ಅಂತಾ ಹುಡುಕೋದೋ ನಿನ್ನ.. ಇಲ್ಲಿ ಕೂತ್ಕೊಂಡು ಏನ್ ಮಾಡ್ತಾ ಇದ್ದೀಯಾ? ನಡೀ ಮನೆಗೆ" ಅಂತಾ ಆ ದೇವರುಗಳು (ನನ್ ಅಪ್ಪ ಅಮ್ಮ) ಬಯ್ದು ಎಳಕೊಂಡು ಹೋದರು..

ಮಧ್ಯಾನ್ಹವಾಗುವಷ್ಟರಲ್ಲಿ ನಮ್ ಮನೆ ಮುಂದೆ ಹೊಸ ಬೈಕ್ ನಿಂತಿತ್ತು..2)ಯಳವತ್ತಿ ಟ್ವೀಟ್:-

ನಮ್ಮ ದೇವಿ ಇಲ್ಲದಾಗ ಅವಳ ಜಾಗಕ್ಕೆ ನಿದ್ರಾದೇವಿ ಬರುವ ಸೂಚನೆಗೆ ಆಕಳಿಕೆ ಎನ್ನಬಹುದು


3) ಯಳವತ್ತಿ ಟ್ವೀಟ್:-

ನೆನಪಿಸಿಕೊಂಡಾಗಲೆಲ್ಲಾ ಬಿಕ್ಕಳಿಕೆ ಬರುತ್ತೆ ಅನ್ನೋದು ಶುದ್ಧ ಸುಳ್ಳು..
ಇದೇನಾದ್ರೂ ನಿಜ ಆಗಿದ್ದಿದ್ರೆ, ನನ್ನವಳು ಯಾವಾಗಲೂ ಬಿಕ್ಕಳಿಸ್ತಾನೇ ಇರಬೇಕಿತ್ತು..

(ಸಾಲ ಪಡೆದವರೆಲ್ಲರೂ ಬಿಕ್ಕಳಿಸ್ತಾ ಇರಬೇಕಿತ್ತು...)

(ಪ್ರಿಯತಮೆ ನೆನಪಿಸಿಕೊಂಡಾಗ ಆಕಳಿಕೆ..
ಹೆಂಡತಿ ನೆನಪಿಸಿಕೊಂಡಾಗಲೆಲ್ಲಾ ಬಿಕ್ಕಳಿಕೆ............ ಸ್ನೇಹಿತ ಅನಿಲ್ ಪಾಡಿಘಾಟೆ ಹೇಳಿದ್ದು)


4) ಮರೆಯೋದು ಸಹಜ ಕಣ್ರೀ.. ಆದರೆ, ಈ ವಯಸ್ನಲ್ಲಿ ಅದಕ್ಕೆ ಅಸಹಜ ಅಂತಾರೆ..

ನನ್ನನ್ನು ಮರೆತವರಿಗಾಗಿ ಇದು..............


5) ಯಳವತ್ತಿ ಟ್ವೀಟ್:-
Hot ಅನ್ನೋ ಕಾರಣಕ್ಕೆ Kaspersky Antivirus ನನ್ನ ಬ್ಲಾಗನ್ನು ಬ್ಲಾಕ್ ಮಾಡ್ತು.. ಇದ್ಯಾಕಪ್ಪ ಅಂತಾ ತಡಕಾಡಿ ನೋಡಿದರೆ, ನನ್ನ ಫಾಲೋಯರ್ ಲಿಸ್ಟ್ ನಲ್ಲಿ ಮಲ್ಲಿಕಾ ಶೆರಾವತ್ ಹೆಸರಿತ್ತು..


6)ಯಳವತ್ತಿ ಟ್ವೀಟ್:-

ನಾ ಕೆನ್ನೆಗೆ ಮುತ್ತು ಕೊಡಲು ಹೋದಾಗಲೆಲ್ಲಾ ನನ್ ಬಂಗಾರಿ ದೂರ ಓಡ್ತಿದಾಳೆ..

"ಅಪ್ಪಾ ನಿನ್ ಗಡ್ಡ ಚುಚ್ಚುತ್ತೆ" ಅಂತಾ ತೊದಲುತ್ತಾಳೆ..


No comments: