ಖಾಯಂ ಓದುಗರು..(ನೀವೂ ಸೇರಬಹುದು)

01 November 2010

ಚಿತ್ರಾನ್ನ ಚಿತ್ರಾನ್ನ... ಟ್ವಿಟರ್ ನ ಟ್ವೀಟುಗಳು.. ಭಾಗ-4

1) ಯಳವತ್ತಿ ಟ್ವೀಟ್:-

ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿಕೊಂಡಿದ್ದರೂ, ಯಾವುದಕ್ಕೂ ಒಮ್ಮತಕ್ಕೆ ಬಂದವರಲ್ಲ. ಮದುವೆಯಾದ ಮೇಲೆ ಒಂದು ವಿಷಯದಲ್ಲಿ ಮಾತ್ರ ಒಮ್ಮತಕ್ಕೆ ಬಂದಿದ್ದರು..

"ರಾತ್ರಿಗಳು ತುಂಬಾ ಚಿಕ್ಕದಾಗಿರುತ್ತೆಂದು"2) ಯಳವತ್ತಿ ಟ್ವೀಟ್:-

ಯಾವಾಗಲೊಮ್ಮೆ ನಾವು ಬೇಗ ಏಳುವುದರ ನಷ್ಟವೆಂದರೆ, ನಾವು ಯಾವತ್ತು ಬೇಗ ಎದ್ದಿರ್ತೀವಿ, ಅವತ್ತೇ ಪೇಪರ್ ನವನು ಮತ್ತು ಹಾಲಿನವನು ಲೇಟಾಗಿ ಬಂದಿದಾರೆ ಅನ್ಸುತ್ತೆ..

-ಯಳವತ್ತಿ


3) ಯಳವತ್ತಿ ಟ್ವೀಟ್:-

ನಾನು ಇವಳನ್ನು ಪ್ರೀತಿಸುತ್ತಿದ್ದರೂ, ಬೇರೇ ಹುಡುಗಿಯನ್ನು ನೋಡಿ ಒಪ್ಪಿಕೊಂಡಿದ್ದರಲ್ಲಿ ನನ್ನದೇನೂ ತಪ್ಪಿಲ್ಲ.. ಎಲ್ಲ ಹುಡುಗಿಯರೂ ಅವಳಂತೆಯೇ ಕಾಣುತ್ತಾರೆ..


ಬದುಕಲು ಪ್ರೀತಿ ಬೇಕು ವಿನಾಃ ಪ್ರೀತಿಯೇ ಬದುಕಲ್ಲ. ಪ್ರೀತಿ ಅಂತ್ಯವಾಯಿತೆಂದು ಬದುಕನ್ನು ಅಂತ್ಯಗಾಣಿಸುವುದು ನಿಜವಾಗಲೂ ಸರಿಯಲ್ಲ.


(ಶರಶ್ಚಂದ್ರ ಕಲ್ಮನೆ ಯವರ "ನಿನಗೊಂದು ನಿಜ ಹೇಳ್ತೀನಿ" ಲೇಖನ ಓದ್ತಾ ಇರಬೇಕಾದ್ರೆ ಅನುಭವಕ್ಕೆ ಬಂದಿದ್ದು.. ನೀವೂ ಓದಿ, http://bhaavayaana.blogspot.com/2010/05/blog-post_08.html )


No comments: