ಖಾಯಂ ಓದುಗರು..(ನೀವೂ ಸೇರಬಹುದು)

25 October 2010

500/- ಬಹುಮಾನ. ಪುಸ್ತಕ ಓದುಗರಿಗಾಗಿ ಕಾಂಪಿಟೇಶನ್.

ಯಳವತ್ತಿ ಪ್ರಶ್ನೆಗಳು-01

ರೂ. 500/- ಬಹುಮಾನ..

ಈ ಕೆಳಗೆ ಕಾಣಿಸಿದ ಸಾಲುಗಳು ಯಾವ ಕಾದಂಬರಿಯದ್ದು ಅಂತಾ ಹೇಳಬೇಕು, ಯಾವ ಕಾದಂಬರಿ ಎಂದು ಹೇಳಿದರೆ ರೂ. 100/- ಕಾದಂಬರಿಯ ಕತೃ ಯಾರು ಅಂತಾ ಹೇಳಿದರೆ 100/- ಯಾವ ಸಂದರ್ಭದಲ್ಲಿ ಅಂತಾ ಹೇಳಿದರೆ 100/- ಕಾದಂಬರಿಯ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ 100/-, ಅಲ್ಲದೇ ನಾನು ಕೇಳಿದ ಪ್ರಶ್ನೆಯಲ್ಲಿ ಒಂದು ತಪ್ಪಿದೆ ಅದನ್ನು ಗುರುತಿಸಿ ಹೇಳಿದರೆ 100/- ಆದರೆ, ಇವನ್ನೆಲ್ಲಾ ಒಬ್ಬರೇ ಒಟ್ಟಿಗೇ ಹೇಳಬೇಕು.. ಮೊದಲು ಉತ್ತರ ಹೇಳಿದವರಿಗೆ ಮಾತ್ರ ಬಹುಮಾನ.. ಒಂದು ಪಾಯಿಂಟ್ ಮಿಸ್ ಆದರೂ ಬಹುಮಾನ ಇಲ್ಲ.. ಇವತ್ತಿನಿಂದ ಒಂದು ತಿಂಗಳವರೆಗೆ ಸಮಯ ಅಂದರೆ,

ಕ್ಲೂ:- ಇದು ನನ್ನ ಫೇವರಿಟ್ ಕಾದಂಬರಿ..ಸುಮಾರು 20 ಸಲ ಓದಿರಬಹುದು...


ಪ್ರಸಂಗ 01:-

"ಕರೆಕ್ಟ್, ಯಾರೋ ಬಂದು ಬಸ್ನಲ್ಲಿ ನೋಡಿದ. ಅದೇ ಕ್ಷಣವೇ ಪ್ರೇಮಿಸುತ್ತಿದ್ದೇನೆ ಎಂದು ಹೇಳಿದರೆ ಯಾವ ಹುಡುಗಿಗೂ ಸದಭಿಪ್ರಾಯವುಂಟಾಗುವುದು ಸಾಧ್ಯವಿಲ್ಲ..ಇನ್ನು ಎರಡನೆಯ ಮಾರ್ಗ ಈ ಪ್ರೇಮವನ್ನು ಮನದಲ್ಲಿ ಅಡಗಿಸಿಕೊಂಡು ಸಾಧಾರಣವಾಗಿ ಪರಿಚಯವನ್ನು ಬೆಳೆಸಿಕೊಂಡು, ಮನದ ಆಸೆಯನ್ನು ಮನಸ್ಸಿನಲ್ಲಿಯೇ ಅಡಗಿಸಿಕೊಂಡು ಪರಸ್ಪರ ಅರಿತಂತೆ ಕೆಲವು ಕಾಲ ಸ್ನೇಹ ಬೆಳೆಸಿ 'ನಾವು ಮದುವೆ ಮಾಡಿಕೊಳ್ಳೋಣ, ನೀನಿಲ್ಲದೇ ನಾನು ಬದುಕುವುದು ಸಾಧ್ಯವೇ ಇಲ್ಲವೆಂದು ಹೇಳಬೇಕು. ಅದೂ ಕೂಡ ಒಂದು ರೀತಿಯಲ್ಲಿ ಆತ್ಮವಂಚನೆ ತಾನೇ? ನಿಜವಾದ ಪ್ರೇಮವೆಂದರೆ ಇನ್ನೊಬ್ಬರ ದೌರ್ಬಲ್ಯಗಳನ್ನು ಮನಸಾ ಪ್ರೇಮಿಸಬೇಕು. ಇನ್ನೊಂದು ರೀತಿ ಹೇಳಬೇಕೆಂದರೆ ಒಮ್ಮೆ ಪ್ರೇಮ ಉಂಟಾದರೆ ನಂತರ ಬದುಕಿನುದ್ದಕ್ಕೂ ಅದೇ ಪ್ರೇಮದೊಂದಿಗೆ ಇರಬೇಕು, ಅಥವಾ ಸಾಯಬೇಕು. ಈ ಮಾತು ನಿಜವೋ ಸುಳ್ಳೋ ಎಂದು ತಿಳಿಯಲು ನನಗೆ ಇಷ್ಟು ವರ್ಷ ಬೇಕಾಯಿತು. ನೀವಿಲ್ಲದೇ ನಾನು ಬದುಕುವುದು ಸಾಧ್ಯವಿಲ್ಲ..

ಪ್ರಸಂಗ02:-
"ಈ ಪ್ರೇಮರಾಹಿತ್ಯವು ನನ್ನನ್ನು ಕೊಲ್ಲುತ್ತಿದೆ" ಅವಳು ಬಿಕ್ಕುತ್ತಾ ಹೇಳಿದಳು.
"ಪ್ರೇಮರಾಹಿತ್ಯವೆಂದರೆ ನಿನ್ನನ್ನು ಯಾರೂ ಪ್ರೇಮಿಸದೆ ಇರುವುದು ಅಥವಾ ನೀನೇ ಯಾರನ್ನೂ ಪ್ರೇಮಿಸದೆ ಇರುವುದೋ?"

"ನನ್ನನ್ನು ಯಾರೂ ಪ್ರೇಮಿಸುವುದಿಲ್ಲ. ಯಾರಾದರೂ ಪ್ರೇಮಿಸಿದರೆ ಅದು ಅವರ ಸ್ವಾರ್ಥಕ್ಕಾಗಿ ಮಾತ್ರವೇ ಪ್ರೇಮಿಸುತ್ತಾರೆ. ಆದ್ದರಿಂದ ನಾನು ಯಾರನ್ನೂ ಪ್ರೇಮಿಸಲಿಲ್ಲ."

"ನಾನು ಬರ್ತೇನೆ" ಎಂದ ಸಹಾನುಭೂತಿಯಿಂದ ಅವನು, ಆ ಸಹಾನುಭೂತಿ ತನ್ನ ಮೇಲೋ, ಅವಳ ಮೇಲೋ, ಅವನಿಗೆ ಗೊತ್ತಿರಲಿಲ್ಲ.

ತತ್ ಕ್ಷಣವೇ ಅವನ ಕೈ ಹಿಡಿದು "ಇಷ್ಟು ಬೇಗನೆ ಹೋಗುತ್ತೀಯಾ?" ಎಂದು ಕೇಳಿದಳು..

ಅವನು ನಕ್ಕು "ನನಗೂ ಇಲ್ಲಿಯೇ ಇರೋಣ ಎನಿಸುತ್ತಿದೆ. ಆದರೆ ಹಾಗೆ ಅನಿಸುವುದು ಸ್ವಾರ್ಥ, ನೀನೇ ಹೇಳಿದಂತೆ ಸ್ವಾರ್ಥದೊಂದಿಗೆ ಮಿಳಿತವಾಗಿರುವುದು ಹೇಗೆ ತಾನೆ ಪ್ರೇಮವಾಗಲು ಸಾಧ್ಯ?"ಸೂಚನೆ:- ಇವತ್ತಿನಿಂದ ಒಂದು ತಿಂಗಳವರೆಗೆ ಸಮಯ ಅಂದರೆ, ದಿನಾಂಕ: 24-11-2010 ಸೋಮವಾರ ಅಂತಿಮ ದಿನ. ನಿಮ್ಮ ಉತ್ತರವನ್ನು shivagadag@gmail.com ಗೆ ಮಿಂಚಂಚೆ ಕಳಿಸಬಹುದು, ಬಜ್ ನಲ್ಲಿ ಅಥವಾ ಬ್ಲಾಗ್ www.shivagadag.blogspot.com ನಲ್ಲಿ ಕಮೆಂಟ್ ಮೂಲಕ ಉತ್ತರಿಸಬಹುದು.. ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ..

ಈ ಪ್ರಶ್ನೆ ಕೇಳಿದ ಉದ್ದೇಶವೆಂದರೆ, ಕಾದಂಬರಿಯನ್ನು ಓದಲು ಪ್ರೋತ್ಸಾಹಿಸುವುದು ಹಾಗೂ ನಿಮ್ಮ ಬುದ್ದಿಮತ್ತೆಯನ್ನು ಪರೀಕ್ಷೆ ಮಾಡುವುದು..

ಈ ಬಜ್ ನ್ನು ದಯವಿಟ್ಟು ರೀಶೇರ್ ಮಾಡಿ, ಓದುವುದನ್ನು ಪ್ರೋತ್ಸಾಹಿಸಿ..

-ಯಳವತ್ತಿ

8 comments:

ಚುಕ್ಕಿಚಿತ್ತಾರ said...

ಇದು ಯ೦ಡಮೂರಿಯವರ ಕಾದ೦ಬರಿ.. [ಅ೦ದುಕೊ೦ಡಿದ್ದೇನೆ]
ಕಾದ೦ಬರಿಯ ಹೆಸರು ಮರೆತುಹೋಗಿದೆ..
”ಬಡಳೆಸಿಕೊಂಡು” ಅನ್ನುವುದು ನೀವು ಮಾಡಿದ ತಪ್ಪು..
ಸ೦ದರ್ಭ ಗೊತ್ತಿಲ್ಲ..

ಸಾಹಿತ್ಯ ಓದುವುದನ್ನು ಬೆಳೆಸಲು ಉತ್ತಮ ಪ್ರಯತ್ನ.

ಶಿವಶಂಕರ ವಿಷ್ಣು ಯಳವತ್ತಿ said...

@ ಚುಕ್ಕಿಚಿತ್ತಾರ..

ಒಹ್.. ನಿಮ್ಮ ಪ್ರಶ್ನೆಗೆ ಉತ್ತರ ನಾನು ಈಗಲೇ ಹೇಳೋಲ್ಲ.. ಒಂದು ತಿಂಗಳು ಕಾಯಬೇಕು..

ನೀವು ಗುರುತಿಸಿದ ತಪ್ಪು ಗುರುತರವಾದ ತಪ್ಪಲ್ಲ.. ಸ್ಪೆಲ್ಲಿಂಗ್ ಮಿಸ್ಟೇಕ್ ಅಷ್ಟೇ.. ಅದನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.. ಅದನ್ನು ಸರಿ ಮಾಡಿದ್ದೇನೆ.. ಮೇಜರ್ ಮಿಸ್ಟೇಕ್ ಒಂದಿದೆ.. ಅದನ್ನು ಕಂಡುಹಿಡಿಯಬೇಕು..

-ಯಳವತ್ತಿ

sunaath said...

ಯಳವತ್ತಿಯವರೆ,
ಕಠಿಣ ಪರೀಕ್ಷೆಯನ್ನೇ ಇಟ್ಟಿರುವಿರಿ. ನನಗನಿಸುವದೇನೆಂದರೆ ಈ ವಾಕ್ಯಗಳು ಯಾವುದೇ ಕಾದಂಬರಿಯಲ್ಲಾದರೂ ಇರಬಹುದಾದಂತಹ ವಾಕ್ಯಗಳು!

ಶಿವಶಂಕರ ವಿಷ್ಣು ಯಳವತ್ತಿ said...

@ ಸುನಾಥ ಕಾಕ..

ಸರಿಯಾಗೇ ಗುರುತಿಸಿದಿರಿ.. ಇದು ಕಾದಂಬರಿಯ ಪ್ರಸಂಗಗಳು..

ಕೆಲವರು ಹತ್ತಿರದಲ್ಲಿದ್ದಾರೆ.. ಸರಿಯಾದ ಉತ್ತರ ಹೇಳಿದರೆ ಬಹುಮಾನ ಖಂಡಿತ..

-ಯಳವತ್ತಿ

- ಕತ್ತಲೆ ಮನೆ... said...

ಬ್ಲಾಗ್ ಓದೋಕೆ ಸಮಯ ಇಲ್ಲ.. ಇನ್ನು ಕಾದಂಬರಿನ..?
.ನನ್ನ 'ಮನಸಿನಮನೆ'ಗೂ ಬನ್ನಿ..

ಶ್ರೀನಿವಾಸ ವೀ. ಬಂಗೋಡಿ said...

ಕಾದಂಬರಿ - ಥ್ರಿಲ್ಲರ್
ಕರ್ತೃ - ಯಂಡಮೂರಿ ವೀರೇಂದ್ರನಾಥ್
ಅಭಿಪ್ರಾಯ - ಚೆನ್ನಾಗಿದೆ :-)
ತಪ್ಪು ಗೊತ್ತಾಗುತ್ತಿಲ್ಲ.
ಸಂದರ್ಭ ಸರಿಯಾಗಿ ಗೊತ್ತಿಲ್ಲ.

ಶಿವಶಂಕರ ವಿಷ್ಣು ಯಳವತ್ತಿ said...

@ ಶ್ರೀನಿವಾಸ ವೀ. ಬಂಗೋಡಿ

ಉತ್ತರದ ಹತ್ತಿರದಲ್ಲಿ ಇದ್ದೀರಿ..

ಸ್ವಲ್ಪ ಪ್ರಯತ್ನಿಸಿದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹೇಳಿ, 500/- ಬಹುಮಾನ ಗೆಲ್ಲುವ ಅವಕಾಶ ನಿಮಗಿದೆ..

-ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

ಈಗಾಗಲೇ ಈ ಪ್ರಶ್ನೆಯ ಕಾಲಾವಧಿ ಮುಗಿದು ಹೋಗಿದೆ..

ಈ ಪ್ರಶ್ನೆಗೆ ಯಾರೂ ಉತ್ತರ ಹೇಳಲಿಲ್ಲ.. ಕೆಲವರು ಗೆಸ್ ಮಾಡಿದರು. ಶ್ರೀನಿವಾಸ ವೀ. ಬಂಗೋಡಿ ಅವರು ಉತ್ತರಕ್ಕೆ ತುಂಬಾ ಹತ್ತಿರದಲ್ಲಿದ್ದರು.. ಇನ್ನೊಂಚೂರು ಪ್ರಯತ್ನಪಟ್ಟಿದ್ದರೆ ಖಂಡಿತವಾಗಿಯೂ ಬಹುಮಾನ ಸಿಗ್ತಿತ್ತು...

ಪ್ರಶ್ನೆಗೆ ಸರಿ ಉತ್ತರಗಳು...

1) ಈ ಕೆಳಗೆ ಕಾಣಿಸಿದ ಸಾಲುಗಳು ಯಾವ ಕಾದಂಬರಿಯದ್ದು ಅಂತಾ ಹೇಳಬೇಕು:- ಈ ಸಾಲುಗಳು "ಥ್ರಿಲ್ಲರ್" ಕಾದಂಬರಿಯದ್ದು..

2) ಕಾದಂಬರಿಯ ಕತೃ :- ಯಂಡಮೂರಿ ವೀರೇಂದ್ರನಾಥ್

3) ಯಾವ ಸಂದರ್ಭದಲ್ಲಿ:-
ಇದಕ್ಕೆ ನೀವೇ ಪುಸ್ತಕ ಓದಿ ಕಂಡುಕೊಳ್ಳಿರಿ.. ಹ್ಹ ಹ್ಹ ಹ್ಹ..

4) ಕಾದಂಬರಿಯ ಬಗ್ಗೆ ನಿಮ್ಮ ಅಭಿಪ್ರಾಯ:-

ಪ್ರೀತಿ ಎಂದರೇನು ಅಂತಾ ಯಾರಾದರೂ ಕೇಳಿದರೆ, ಈ ಪುಸ್ತಕ ಓದಲು ಹೇಳಿ..

5) ನಾನು ಕೇಳಿದ ಪ್ರಶ್ನೆಯಲ್ಲಿ ಒಂದು ತಪ್ಪಿದೆ ಅದನ್ನು ಗುರುತಿಸಿ:-

ಪ್ರಶ್ನೆಯ ಕೊನೆಯಲ್ಲಿ ದಿನಾಂಕ: 24-11-2010 ಸೋಮವಾರ ಅಂತಿಮ ದಿನ ಅಂತಾ ಹೇಳಿದ್ದೆ.. 24-11-2010 ರಂದು ಸೋಮವಾರ ಆಗಿತ್ತು...

ಈ ಬ್ಲಾಗ್ ಪೋಸ್ಟ್ ಓದಿದ ಎಲ್ಲರಿಗೂ ಧನ್ಯವಾದಗಳು..

-ಯಳವತ್ತಿ