ಖಾಯಂ ಓದುಗರು..(ನೀವೂ ಸೇರಬಹುದು)

28 October 2010

ಸುಲಭವಾದ ಪ್ರಶ್ನೆಗೆ ಉತ್ತರಕ್ಕೆ 100/- ಬಹುಮಾನ. ಪುಸ್ತಕ ಓದುಗರಿಗಾಗಿ ಕಾಂಪಿಟೇಶನ್. ಯಳವತ್ತಿ ಪ್ರಶ್ನೆಗಳು-02

ಸುಲಭವಾದ ಪ್ರಶ್ನೆಗೆ ಉತ್ತರಕ್ಕೆ 100/- ಬಹುಮಾನ. ಪುಸ್ತಕ ಓದುಗರಿಗಾಗಿ ಕಾಂಪಿಟೇಶನ್.
ಯಳವತ್ತಿ ಪ್ರಶ್ನೆಗಳು-02

ರೂ. 100/- ಬಹುಮಾನ..

ಈ ಕೆಳಗೆ ಕಾಣಿಸಿದ ಸಾಲುಗಳು ಯಾವ ಪುಸ್ತಕದ್ದು ಮತ್ತು ಯಾರು ಬರೆದಿದ್ದು ಅಂತಾ ಹೇಳಬೇಕು,
1)ಯಾವ ಪುಸ್ತಕ ಎಂದು ಹೇಳಿದರೆ ರೂ. 50/-
2)ಪುಸ್ತಕದ ಲೇಖಕರು ಯಾರು ಅಂತಾ ಹೇಳಿದರೆ 50/-
3)ಉತ್ತರವನ್ನು ಬಜ್ ನಲ್ಲಿ ಅಥವಾ ಬ್ಲಾಗ್ನಲ್ಲಿ www.shivagadag.blogspot.com ಕಮೆಂಟ್ ಮೂಲಕ ಉತ್ತರಿಸಬಹುದು ಅಥವಾ shivagadag@gmail.com ಗೆ ಮಿಂಚಂಚೆ ಕಳುಹಿಸುವುದರ ಮೂಲಕ ಉತ್ತರಿಸಬಹುದು.
4)ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ..

ಸೂಚನೆಗಳು:-
1) ಎರಡೂ ಪ್ರಶ್ನೆಗಳಿಗೆ ಒಬ್ಬರೇ ಒಟ್ಟಿಗೇ ಹೇಳಬೇಕು..
2) ಮೊದಲು ಉತ್ತರ ಹೇಳಿದವರಿಗೆ ಮಾತ್ರ ಬಹುಮಾನ..
3) ಒಂದು ಪಾಯಿಂಟ್ ಮಿಸ್ ಆದರೂ ಬಹುಮಾನ ಇಲ್ಲ..
4) ಇವತ್ತಿನಿಂದ ನಾಳೆವರೆಗೆ ಮಾತ್ರ ಸಮಯ. ಅಂದರೆ, ದಿನಾಂಕ: 29-10-2010 ರ ರಾತ್ರಿ 12.00 ಗಂಟೆವರೆಗೆ
ಮಾತ್ರ ಸಮಯ ಇದೆ..
5) ಈ ಪ್ರಶ್ನೆ ಕೇಳಿದ ಉದ್ದೇಶವೆಂದರೆ, ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸುವುದು ಹಾಗೂ ನಿಮ್ಮ ಬುದ್ದಿಮತ್ತೆಯನ್ನು ಪರೀಕ್ಷೆ ಮಾಡುವುದು..
6) ಈ ಬಜ್ ನ್ನು ದಯವಿಟ್ಟು ರೀಶೇರ್ ಮಾಡಿ, ಓದುವುದನ್ನು ಪ್ರೋತ್ಸಾಹಿಸಿ..

ಕ್ಲೂ:- ಇದು ಒಬ್ಬರು ಸ್ವಾಮೀಜಿಗಳು ಬರೆದ ಪುಸ್ತಕ.


ಪುಸ್ತಕದ ಒಂದು ಪ್ರಸಂಗ:-


"ಭೂ ಸಂಚಾರಿ ಮಾರ್ಕೊಪೋಲೋ ಹೇಳಿದ: 'ಭೂಲೋಕದಲ್ಲಿ ಅತ್ಯಂತ ಒಳ್ಳೆಯವರೂ, ಸತ್ಯವಂತರೂ ಆದ ವ್ಯಾಪಾರಿಗಳು. ಯಾವ ಕಾರಣದಿಂದಲೂ ಇವರು ಸುಳ್ಳು ಹೇಳುವವರಲ್ಲ."

ಮಹಮ್ಮದ್ದೀಯ ಭೂವಿವರಣೆಗಾರ ಇದ್ರಿಸಿ 'ಇಂಡಿಯಾ ದೇಶದ ಜನರು ನಂಬಿಕೆ, ಸತ್ಯನಿಷ್ಠೆಗೆ ಪ್ರಸಿದ್ಧರಾಗಿದ್ದಾರೆ' ಎಂದಿದ್ದಾನೆ. ಇದು ಕ್ರಿಸ್ತಶಕ ಹನ್ನೊಂದನೆ ಶತಮಾನದಲ್ಲಿ ಆತನು ಹೇಳಿದ್ದ ಮಾತು.

ಮುನ್ನೂರು ವರ್ಷಗಳ ಹಿಂದೆ ಇಲ್ಲಿಗೆ ಬಂದ ಪೋರ್ಚುಗೀಸರು ಬರೆದಿಟ್ಟರು "ಹಿಂದುಗಳು ಯುದ್ಧ ಮಾಡುವಾಗ ಮೊದಲು ಸೂಚನೆ ನೀಡದೇ ಎಷ್ಟಕ್ಕೂ ಯುದ್ಧ ಮಾಡರು. ವೀರರಾದ ಅವರು ಶತ್ರುವಿನ ಬಗ್ಗೆ ಸ್ವಲ್ಪವೂ ದ್ವೇಷ ಇಟ್ಟುಕೊಂಡವರಲ್ಲ. ಆದುದರಿಂದ ಯುದ್ಧದ ವಿರಾಮ ಕಾಲದಲ್ಲಿ ಒಂದೇ ನದಿಯಲ್ಲಿ ಸ್ನಾನ ಮಾಡಿ, ಎಲೆ ಅಡಿಕೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅಪಮಾನದ ಬದುಕು ಸಾವಿಗಿಂತಲೂ ಕಳಪೆ ಎಂದು ಅವರು ಭಾವಿಸುತ್ತಿದ್ದರು.

'ತಾವು ಯುದ್ಧದಲ್ಲಿ ಸೆರೆ ಹಿಡಿದವರನ್ನು ಬಿಡುಗಡೆ ಹಣ ತರುವುದಕ್ಕಾಗಿ ದೂರದ ಊರುಗಳಿಗೆ ಹೋಗಲು ಪೂರ್ಚುಗೀಸ್ ಅಧಿಕಾರಿಗಳು ಬಿಡುತ್ತಿದ್ದರು. ಕೆಲವರು ಹಣ ತರಲು ಸಮರ್ಥರಾಗಿದ್ದರೆ, ಹಲವರು ಸಮರ್ಥರಾಗುತ್ತಿರಲಿಲ್ಲ. ಊರಿಗೆ ಹೋದ ಅವರಿಗೆ ತಪ್ಪಿಸಿಕೊಳ್ಳಲು ಅವಕಾಶವಿದ್ದರೂ, ಆಡಿದ ಮಾತಿಗೆ ತಪ್ಪಬಾರದು, ಸುಳ್ಳು ಹೇಳಬಾರದು- ಎಂಬ ದೃಢನಿಷ್ಠೆಯಿಂದ ಮತಾಂತರ ಅಥವಾ ಮರಣ ದಂಡನೆಯ ಶಿಕ್ಷೆಯನ್ನು ಎದುರಿಸಲು ಹಿಂತಿರುಗಿ ಬರುತ್ತಿದ್ದರು! ಇವರ ಸತ್ಯನಿಷ್ಠೆ, ಶೀಲ ಬಲವನ್ನು ಕಂಡು ಪೂರ್ಚುಗೀಸರೂ ಅಚ್ಚರಿಪಡುತ್ತಿದ್ದರು.'


-ಯಳವತ್ತಿ

2 comments:

ಪವನಕುಮಾರ ಚಿಪ್ಪಲಕಟ್ಟಿ Pavankumar Chippalkatti said...

ನನ್ನ ಮಟ್ಟಿಗೆ ಇದು ತುಂಬಾ ಕಠಿಣ ಪ್ರಶ್ನೆ.......
ಏನೇ ಆಗಲಿ ನೀವು ಪ್ರಶ್ನೆಗಳನ್ನು ಕೇಳುವದರಲ್ಲಿ ಮುಂದೆ ಇರುವಿರಿ.........

ಆದರೆ, ಉತ್ತರ ನೀಡಲು ಮುಂದೆ ಬರುವರು ತೀರಾ ವಿರಳ ಅಲ್ವೇ''''''

ಶಿವಶಂಕರ ವಿಷ್ಣು ಯಳವತ್ತಿ said...

ಈ ಪ್ರಶ್ನೆಗೆ ಯಾರಾದ್ರೂ ಉತ್ತರ ಹೇಳ್ತಾರೆ ಅನ್ಕೊಂಡೆ.. ಯಾರೂ ಉತ್ತರ ಹೇಳಲಿಲ್ಲ. ತುಂಬಾ ಬೇಜಾರಾಗ್ತಿದೆ.. ಅದಕ್ಕಿಂತ ನಾನು ಕೊಟ್ಟ ಪುಸ್ತಕದ ಪ್ರಸಂಗದಲ್ಲಿ ನಮ್ಮ ಭಾರತದ ಜನರ ಬಗ್ಗೆ ಇದ್ದ ನುಡಿಗಳನ್ನು ಓದಿಕೊಂಡರಲ್ಲಾ.. ಅಷ್ಟೇ ಸಾಕು. ಈ ಬರಹಗಳನ್ನು ನೋಡಿದರೆ, ಭಾರತ ಹೀಗೂ ಇತ್ತಾ ಅಂತಾ ಆಶ್ಚರ್ಯ ಆಗುತ್ತೆ..

ಈಗ ಉತ್ತರ ಹೇಳುವೆ..

ನಾನು ಹೇಳಿದ ಪ್ರಸಂಗವನ್ನು
ಸ್ವಾಮಿ ಜಗತ್ಮಾನಂದರ "ಬದುಕಲು ಕಲಿಯಿರಿ"
ಪುಸ್ತಕದಿಂದ ಆಯ್ದುಕೊಂಡಿದ್ದೇನೆ.. ನೀವೇನಾದರೂ ಹಿಂದೆ ಈ ಪುಸ್ತಕವನ್ನು ಓದಿದ್ದೀರಾ? ಓದದಿದ್ದಲ್ಲಿ ದಯವಿಟ್ಟು ಓದಿ ನೋಡಿ.. ಉತ್ತಮವಾದ ಪುಸ್ತಕ.

-ಯಳವತ್ತಿ