ಖಾಯಂ ಓದುಗರು..(ನೀವೂ ಸೇರಬಹುದು)

27 September 2010

ನಮ್ಮಜ್ಜ

ಅಜ್ಜನವರ ಪುಣ್ಯ ತಿಥಿಯ ಈ ದಿನ ದಿ: 27-09-2010 ರಂದು ಅವರ ನೆನಪಿಗಾಗಿ..


ನಮ್ಮಜ್ಜ


ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ..
ಕಣ್ಣು ಇಲ್ಲದೆ ಮೆರೆದಾನ
ಕಣ್ಣಿಲ್ಲದೋರಿಗೆ ದಾರಿ ತೋರ್ಸ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.


ಮೂರು ಭಾಷೆ ಪಂಡಿತ
ತಬಲಾ ಹಾರ್ಮೋನಿ ವಾದಕ
ಸಾಹಿತ್ಯ ಕೃಷಿ ಹಚ್ಚ್ಯಾನ
ಸಂಗೀತ ಶಾಲೆ ಮಾಡ್ಯಾನ.
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.

ಆರ್ರಾಗ ಕಣ್ಣು ಕಳಕೊಂಡ,
ಮನಸಿನ ಕಣ್ಣು ತೆರಕೊಂಡ
ಗಾನ ವಿದ್ಯೆಗೆ ಸೋತಾವ
ಪಂಚಾಕ್ಷರಿಗಳ ಹಿಂದೆ ಬಂದಾವ.
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.

ಹಲವಾರು ಶಾಸ್ತ್ರ ಕಲತಾವ
ನೂರಾರು ರಚನೆ ಮಾಡಿದಾವ
19 ಪುರಾಣ ಬರೆದಾನ
19 ನಾಟಕ ಆಡ್ಸ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.

ಕುರುಡರ ಹಿಂಡು ಕಟ್ಯಾನ
ಅನಾಥರ ತಂದೆ ಆಗ್ಯಾನ
ಗದುಗಿಗೆ ಬಂದು ನೆಲೆಸ್ಯಾನ
ವೀರೇಶ್ವರಾಶ್ರಮ ಮಾಡ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.

ಅನಾಥರ ಬಾಳು ಬೆಳಗ್ಯಾನ
ಅಂಧರಿಗೆ ಊರುಗೋಲು ಆಗ್ಯಾನ
ನಿಂತು ವಿದ್ಯೆ ಕಲಸ್ಯಾನ
ನಿತ್ಯ ದಾಸೋಹ ನಡೆಸ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.


ಸಂಗೀತದ ಸಾಧನೆ ಮಾಡ್ಯಾನ
ನೂರಾರು ಬಿರುದು ಪಡೆದಾನ
ಗದುಗಿಗೆ ಕೀರ್ತಿ ತಂದಾನ
ಪುಣ್ಯ ಭೂಮಿ ಮಾಡ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.

ಲೋಕವ ಬಿಟ್ಟು ನಡದಾನ
ಅನಾಥರ ಅನಾಥ ಮಾಡ್ಯಾನ
ಸಂಗೀತದ ಪೀಳಿಗೆ ಕಟ್ಯಾನ
ಎಲ್ಲರ ಮನದಾಗ ನೆಲೆಸ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.


-ಇಂತಿ
ಶಿವಶಂಕರ ವಿಷ್ಣು ಯಳವತ್ತಿ

www.shivagadag.blogspot.com

16 comments:

ಸಿಮೆಂಟು ಮರಳಿನ ಮಧ್ಯೆ said...

ತುಂಬಾ ಚೆನ್ನಾಗಿದೆ...

ಸವಿಗನಸು said...

chennagide shivu....

Doddamanimanju said...

ಕವನ ಮೊಲಕ ಅಗಲಿದ ಯೋಗಿಗೆ ನಿಮ್ಮ ನಮನ ತುಂಬಾ ಚನ್ನಾಗಿದೆ

PARAANJAPE K.N. said...

ಯಳವತ್ತಿ, ಚೆನ್ನಾಗಿದೆ, ಕಾವ್ಯ ನಮನ

ಪ್ರಗತಿ ಹೆಗಡೆ said...

ಚೆನ್ನಾಗಿ ಬರೆದಿದ್ದೀರಿ ಶಿವಶಂಕರ್ ಅವರೇ...

sunaath said...

ಪುಟ್ಟರಾಜರಿಗೆ ನೀವು ಅರ್ಪಿಸಿದ ಕಾವ್ಯ-ಶ್ರದ್ಧಾಂಜಲಿಯ ಜೊತೆಗೆ
ನನ್ನದೂ ಒಂದು ಹನಿ ಕಣ್ಣೀರು.

ಸಾಗರದಾಚೆಯ ಇಂಚರ said...

kaavya namana kke nammadoo namana

- ಕತ್ತಲೆ ಮನೆ... said...

ಅಜ್ಜಯ್ಯನವರಿಗೆ ನನ್ನ ಭಾವನಮನಗಳು..

vanishree said...

Ajjayyarige mommaga korida bhaavothkrushta shraddhaanjali idu!!Nijavagloo thumba chennaagide!!

vanishree said...
This comment has been removed by the author.
ದಿನಕರ ಮೊಗೇರ.. said...

ಯಳವತ್ತಿ ಸಾಹೆಬ್ರ...
ಅಜ್ಜನ ಬಗ್ಗೆ ಕರಾವಳಿಯ ಜನರಿಗೆ ಹೆಚ್ಚಿಗೆ ಗೊತ್ತಿಲ್ಲ..... ಆದರೂ ಸ್ವಲ್ಪ ತಿಳಿದಿದ್ದೇನೆ..... ನಿಮ್ಮ ಕವನ ಓದಿ ಅವರ ಬಗ್ಗೆ ಗೌರವ ಹೆಚ್ಚಿದೆ.... ಅವರಿಗೆ ನನ್ನ ನಮನ.... ನಿಮ್ಮ ಕವನಕ್ಕೆ ಧನ್ಯವಾದ....

ashokkodlady said...

Nice one sir, ishta aitu....

ಶಿವಶಂಕರ ವಿಷ್ಣು ಯಳವತ್ತಿ said...

@ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು.
ಅಜ್ಜನವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇದು ನನ್ನ ಚಿಕ್ಕ ಪ್ರಯತ್ನ ಅಷ್ಟೇ..

ಇಂತಿ,
ಯಳವತ್ತಿ

shivap said...

olle kavana magaa......

shivap said...

olle kavana magaa......

ಚಿನ್ನುಡಿ..... said...

ಧನ್ಯವಾದಗಳು ಗುರುಗಳೇ....
೭ನೇ ತರಗತಿಯಲ್ಲಿ ನಮ್ಮಜ್ಜನ(ರ) ಒಂದು ಪಾಠವಿದೆ....೪ ದಿನದ ಮೊದಲಷ್ಟೇ ಆ ಪಾಠವನ್ನು ಪ್ರಾಯಶಃ ಮನತಟ್ಟುವಂತೆ ಮಾಡಿ ಮುಗಿಸಿದ್ದೆ...ಮರುದಿನವೇ ಶಿಷ್ಯರಿಂದ ಆರೋಗ್ಯ ಹದಗೆಟ್ಟಿದೆಯೆಂದು ತಿಳಿದು ಬಂತು...ತರಗತಿಯಲ್ಲಿ ಎಲ್ಲರೂ, ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದೆವು....ಆದರೆ.....
ಅವರು ಹೇಳಿದ ಮಾತು... ನನಗೇನು ಗೊತ್ತಿಲ್ಲ..ನಾನು “ಪುಟ್ಟ” ಅನ್ನುವುದನ್ನು ಒತ್ತಿ ಒತ್ತಿ ಹೇಳಿದ್ದೆ...
ಏನೂ ಇಲ್ಲದ “ನಾನು”ಎಲ್ಲಿ ಅವರ ವಿನಯತೆ..ಸಜ್ಜನತೆ..ಎಲ್ಲಿ... ಅವರು ನಮಗೆಲ್ಲಾ ದಿಗ್ದರ್ಶಕರು....
ಬ್ಲಾಗಿಗೆ ಬಂದು ವಿಮರ್ಶಿಸಿದ್ದಕ್ಕೆ ಚಿರರುಣಿ....”ಅನುಭವಗಳ ಮೂಟೆಗಳ ರಾಶಿಯೇ ಜೀವನವಲ್ಲವೇ...!!” ಪ್ರೀತಿ
ಹೀಗೆ ಇರಲಿ..
ಧನ್ಯವಾದಗಳು
ಪ್ರೀತಿಯಿಂದ......
ಸಂತೋಷ ಭಟ್ಟ