ಖಾಯಂ ಓದುಗರು..(ನೀವೂ ಸೇರಬಹುದು)

17 September 2010

ಸುಮ್ಕೆ ಹಿಂಗೇ ಟೈಂಪಾಸ್ತೆ... ಬ್ರೆಡ್ ಒಗ್ಗರಣೆ.. (ಬಜ್ ರಿಕವರಿ)

Buzziಗರು ಈಗಾಗಲೇ ಇವುಗಳನ್ನು ನೋಡಿದ್ದಾರೆ.. ನೋಡದೇ ಇರೋರಿಗೆ ಈ ಸಾಲುಗಳು..1)
ಇರೋ ಗರ್ಲ್ ಫ್ರೆಂಡುಗಳಲ್ಲಿ ಒಬ್ಬಳನ್ನು ಸೆಲೆಕ್ಟ್ ಮಾಡ್ಕೊಂಡು, ಗಿಫ್ಟ್ ಗಾಗಿ ಜಾಸ್ತಿ ತಲೆ ಕೆಡುಸ್ಕೊಂಡು, ಹೊಸ ಬಟ್ಟೆ ತಗೊಂಡು, ಫ್ರೆಂಡ್ ಗಳ ಸೆಂಟ್ ಹಾಕ್ಕೊಂಡು, ಗುಲಾಬಿ ಹಿಡ್ಕೊಂಡು ಅವಳ ಮುಂದೆ ಪೆಕರನ ಥರಾ ಹೋಗಿ ನಿಂತುಕೊಳ್ಳೋ ವಿಶೇಷ ದಿನಕ್ಕೆ ಫೆಬ್ರವರಿ 14 ಅನ್ನಬಹುದು.


2) ಎಲ್ಲಾ ಪ್ರಶ್ನೆಳಿಗೂ ಉತ್ತರಿಸುತ್ತಿದ್ದ ಹುಡುಗಿಯೊಬ್ಬಳು, ಮುಗ್ಧ ಸಹಪಾಠಿಯ ಮುದ್ದು ಪ್ರಶ್ನೆಗೆ ಉತ್ತರಿಸಲಾಗದೇ, ಅನಿರ್ಧಿಷ್ಟ ಕಾಲಾವಕಾಶ ಬೇಡಿಕೊಂಡು ಬಂದಿದ್ದಳು. ಅಷ್ಟೊಂದು ದಿನದಿಂದ ಕಾದಿದ್ದ ಅವನಿಗೆ ಇವತ್ತಿನ ಅವಳ ವ್ಯಾಲಂಟೈನ್ ಕಾರ್ಡು, ಅವಳ ಉತ್ತರದ ಮುನ್ಸೂಚನೆ ನೀಡಿದೆ. ಅವನ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲ.


3) ನೂರಾರು ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿದ್ದ ಶ್ರೀಮಂತ ಹುಡುಗನೊಬ್ಬನ ತಂದೆ ತಾಯಿ ತೀರಿಹೋದರು. ಜವಾಬ್ದಾರಿ ಬಂದ ಕೂಡಲೇ ಎಲ್ಲ ಸ್ನೇಹಿತರನ್ನು ಹಿಗ್ಗಾ ಮುಗ್ಗಾ ಬೈದು ವಿನಾಕಾರಣ ದೂರ ಮಾಡಿದ. ನೂರಾರು ಸ್ನೇಹಿತರಲ್ಲಿ ಮೂರು ಜನ ವಾಪಸ್ ಬಂದು, ಬಿಟ್ಟು ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.


4) ಹುಡುಗಿಗೆ munch ಕೊಟ್ಟ..
punch ನೀಡಿದಳು..
perk ಕೊಟ್ಟ..
ಪೊರ್ಕಿಅಂದಳು..
ನಾನು ನಿನ್ನ ಪ್ರೀತಿಸ್ತೀನಿ ಕಣೆ Cadbury ಅಂದ..
i too love you ಕಣೋ Don't Worry ಅಂದಳು..
ಒಂದೇ ಒಂದು ಮುತ್ತು ಕೊಡು Alpenliebe ಅಂದ..
ಅಷ್ಟಕ್ಕೇ ಅವಳ ಜೊತೆ ಆಯಿತು Kit-Kat
ಕೊನೆಯಬಾರಿ ಅವಳಿಗೆ ಕೊಡಿಸಿದ್ದು Milky Bar
ಈಗ ಅವನ ವಾಸಸ್ಥಳ only Bar Bar Bar..


5) ಮದುವೆಯಾದ 3ತಿಂಗಳಿಗೇನೇ ನನಗೆ ಸಕ್ಕರೆ ಖಾಯಿಲೆ ಬರುತ್ತೆ ಅನ್ಸುತ್ತೆ.ನನ್ನವಳು ಕೊಡೋ ಮುತ್ತುಗಳು ತುಂಬಾನೇ ಸಿಹಿಯಾಗಿರುತ್ತೆ..


6) ಅವಳಿಗೆ ಪ್ರಪೋಸ್ ಮಾಡಲು ಕವನ ಬರೆದು ಕೊಟ್ಟೆ. ಅವಳು ರಿಜೆಕ್ಟ್ ಮಾಡಿದರೂ ಅವಳ ಜೊತೆಯಲ್ಲಿದ್ದವಳಿಗೆ ಇಷ್ಟವಾಯಿತು. ಇವಾಗ ಅವಳ ಹೆಸರು "ನನ್ನ ಹೆಂಡ್ತಿ"


7) ಎಲ್ಲಾ ಹುಡುಗೀರು Question Bank ಥರಾ, ಅವರಿಗೆ ಯಾವುದಾದ್ರೂ Question ಕೇಳಿ ನೋಡಿ, ವಾಪಸ್ ನಿಮ್ಮನ್ನೇ Question ಕೇಳ್ತಾರೆ.


8) ಅವತ್ತಿನ ಮಾತು.. "ಕೊಡು ದೇವಿ ವರವನ್ನು ಕುಟುಕನಲ್ಲದ ಗಂಡನ..
ಇವತ್ತಿನ ಮಾತು.. "ಕೊಡು ದೇವಿ ವರವನ್ನು ಕಮ್ಮಿ ಕುಡಿಯುವ ಗಂಡನ..9) ಮಾತು ಬೆಳ್ಳಿ.. ಮೌನ ಬಂಗಾರ.. ಇದು ಮಹೇಶಣ್ಣನ Status ಮೆಸೇಜ್

ನನ್ನವಳು ಇವತ್ತು ಮಾತನಾಡದೇ ಮೌನವಾಗಿದ್ದಾಳೆ...

ನೈಸ್ ಮಾಡಲು ಮೋಸ್ಟ್ಲಿ ಬಂಗಾರ ಕೊಡಿಸಬೇಕೋ ಏನೋ???10) ನನ್ನವಳು ಮಗು ಥರಾ ಮುದ್ದಾಗಿದಾಳೆ.. ಅದಕ್ಕೆ ಈ ತಿಂಗಳು ಅವಳಿಗಾಗಿ Johnson & Johnson ಬೇಬಿ ಸೋಪ್ ತಗೊಂಡು ಬಂದಿದೀನಿ.


11) ಇಷ್ಟಪಟ್ಟ ಹುಡುಗಿಯ ಪ್ರೀತಿಯನ್ನು ಕಷ್ಟಪಟ್ಟು ಪಡೆದುಕೊಂಡಾಗ ಆಗುವ ಸಂತೋಷದ ನೂರು ಪಟ್ಟು ದುಃಖ ಅವಳನ್ನು ಕಳೆದುಕೊಂಡಾಗ ಆಗುತ್ತೆ.12) ಇದೇ ಮೊದಲನೇ ಬಾರಿ ಆಂಗ್ಲ ಭಾಷೆಯಲ್ಲಿ ಟ್ವೀಟ್ ಬರೆಯೋಕೆ ಟ್ರೈ ಮಾಡಿದೀನಿ...
(ಗ್ರಾಮರ್ ತಪ್ಪಿದ್ರೆ ಹೇಳಿ...)

ಯಳವತ್ತಿ ಟ್ವೀಟ್:- If he/she is thinking about someone and talking about that person with his friend means that he/she impressed..


13) I LOVE MY INDIA Coz, It is full of sentimentals, "ಉಪ್ಪಿನ ಋಣ ತೀರಿಸೋಕೆ ಆಗಲ್ಲ" ಅಂತಾ ಕಳ್ಳನು ಸಹ ಅದನ್ನು ಕದ್ದುಕೊಂಡು ಹೋಗೋಲ್ಲ.


14) ಯಳವತ್ತಿ ಟ್ವೀಟ್: ಎಲ್ಲಾ ಹುಡುಗೀರೂ ಸಹ ಹುಚ್ಚು ಹುಡುಗೀರೇ.. ನಾನು ಕುಡಿದಾಗ ಮನಸು ಬಿಚ್ಚಿ ಮಾತಾಡ್ತೀನಿ ಅಂದ್ರೆ, ಕುಡಿಯೋಕೆ ಕಾಸು ಕೊಡ್ತೀನಿ ಅಂತಾರೆ..


15) ಯಳವತ್ತಿ ಟ್ವೀಟ್: ನಾನು ಮತ್ತು ನನ್ನವಳು ಸಿನಿಮಾಕ್ಕೆ ಹೋಗಿದ್ವಿ.. ಅವಳು ಮಾತ್ರ ಸಿನಿಮಾ ನೋಡಿದಳು.. ಮನೆಗೆ ಬಂದ ಕೂಡಲೇ ನನ್ನವಳಿಗೆ ದೃಷ್ಟಿ ತೆಗೆದೆ..


16) ಯಳವತ್ತಿ ಟ್ವೀಟ್:-

ಸೈಕಾಲಜಿ ಎಕ್ಸಾಮ್ ನಲ್ಲಿ, ಪ್ರೀತಿ ಅನ್ನೋದನ್ನು 20 ಮಾರ್ಕ್ಸ್ ಗೆ ವಿವರಿಸಿ ಅಂತಾ ಕೇಳಿದರು.. ನನ್ನವಳ ಹೆಸರನ್ನು 20 ಸಲ ಬರೆದು ಬಂದಿದ್ದೀನಿ..17) ಯಳವತ್ತಿ ಟ್ವೀಟ್:-

ಅವಳ ಫೋಟೋ ಅಂದ್ರೆ, ನಂಗೆ ಇಷ್ಟ & ಕಷ್ಟ..ಎಷ್ಟು ಮುತ್ತು ಕೊಟ್ಟರೂ ಸಹ ಕಿರಿಕ್ ಮಾಡದೇ ಸುಮ್ನೆ ಇರುತ್ತಲ್ಲ..ಅದು ಇಷ್ಟ.. ಮತ್ತು ಅದೇ ಕಷ್ಟ..18) ಯಳವತ್ತಿ ಟ್ವೀಟ್:-

ನಾನು ಸೊಳ್ಳೆ ಬತ್ತಿ ತರಲಿಲ್ಲ ಅಂತಾ.. ಸೊಳ್ಳೆಯೊಂದು ನನ್ನವಳ ಕೆನ್ನೆಯನ್ನು ಕಚ್ಚಿತು.. ನನ್ನವಳಿಗೆ ಕೋಪ ಬಂದು ನನ್ನ ಕೆನ್ನೆಯನ್ನು ಕಚ್ಚಿದಳು.


19) ಶುಭಶಂಕರಿ:- ನನ್ ಅಪ್ಪ-ಅಮ್ಮ ನಂಗೆ ಪಾಕೆಟ್ ಮನಿ ಕೊಡ್ತಿಲ್ಲ ಕಣೋ..
ಶಿವ:- ಅವರ ಹತ್ರಾನೇ ಸಾಲ ಕೇಳು.., ನನ್ ಮದ್ವೆ ಆದಮೇಲೆ ವಾಪಸ್ ಕೊಡ್ತೀನಿ ಅಂತಾ ಹೇಳು.. ವರ್ಕ್ ಔಟ್ ಆಗುತ್ತೆ....


20) ತೆಲುಗು ನಾಗವಲ್ಲಿ ನಮ್ಮ ಹುಬ್ಬಳ್ಳಿಯವಳಾದ್ರೆ ಆಕೆಯ ಡೈಲಾಗ್ ಹೇಗಿರುತ್ತೆ ಅಂತ ಒಂದು ಹೊಸ ಎಸ್.ಎಮ್.ಎಸ್ ಬಂತು..

"ಏಯ್,, ಊರ್ ಬಾಡ್ಕೊ ತೆಗಿಲೆ ಬಾಗ್ಲಾ ನಿಮ್ಮವ್ವನ್..
ಹೆಂಗಸುರ್ ಮ್ಯಾಲ್ ಧಿಮಾಕ್ ತೋರ್ಸು ನೀ ಯಾವ್ ಊರ್ ಗಂಡ್ಸ್ ಲೇ.. ತೆಗಿಲೇ ಬಾಗ್ಲಾ ಒಮ್ಮೆ.. ತಿಗಿಯೋ ಊರ್ ಹರಾಮಕೋರ್.. ಬರು ಅಮಾಸಿ ರಾತ್ರಿ ನಿನ್ ಕಣ್ ಕಿತ್ತ್, ನಿನ್ ಹೆಣಾ ಎತ್ತಲಿಲ್ಲ ನಾನು ಸವಣೂರ್ ಸಾವ್ಕಾರ್ ಸಿದ್ಧಲಿಂಗಪ್ಪನ ಮಗಳು ನಾಗವ್ವನೇ ಅಲ್ಲ.. "21) ನನ್ನ ಫ್ರೆಂಡ್ ಒಬ್ಬರು ಕಳಿಸಿದ ಎಸ್ಸೆಮ್ಮೆಸ್ಸು......


ಹುಡುಗೀಯರು ಹೇಳುವ Top 10 ಸುಳ್ಳುಗಳು..

1) ಐ ಲವ್ ಯೂ...

2) ನಿನ್ ಬಿಟ್ಟು ಯಾರನ್ನೂ ಲವ್ ಮಾಡೋಲ್ಲ..

3) ನಮ್ ಅಪ್ಪ ಅಮ್ಮನ್ನ ನಾನೇ ಒಪ್ಪಿಸ್ತೀನಿ..

4) ನೀನು ತುಂಬಾ ಒಳ್ಳೆಯವನು..

5) ಅಕಸ್ಮಾತ್ ಅಪ್ಪ ಅಮ್ಮ ಒಪ್ಪದಿದ್ರೆ, ಇಬ್ರೂ ಸಾಯೋಣ..

6) ನಿನ್ನಿಷ್ಟಾನೇ ನನ್ನಿಷ್ಟ..

7) ನೀನು ನನ್ Sweet Heart..

8) ನಿನ್ನಂಥ ಹುಡುಗನನ್ನ ಪಡೆಯೋಕೆ ಏಳೇಳು ಜನ್ಮದ ಪುಣ್ಯ ಮಾಡಿರಬೇಕು..

9) ಪ್ರಾಣ ಬಿಟ್ರು ನಿನ್ನ ಮಾತ್ರ ಬಿಡೋಲ್ಲ..

10) (ತುಂಬಾ ಇಂಪಾರ್ಟೆಂಟ್..)

ನಿಂಗೆ ನನಗಿಂತ ಒಳ್ಳೆ ಹುಡುಗಿ ಸಿಕ್ಕೇ ಸಿಕ್ತಾಳೆ...........

(ಅಂದ ಹಾಗೆ.. ಇದು ನನ್ನ ಲವ್ ಮಾಡ್ತಿರೋ ಹುಡುಗಿಯರಿಗೆ ಬಿಟ್ಟು... ಸುಮ್ನೆ ನಾನ್ ಯಾಕೆ ರಿಸ್ಕ್ ತಗೋಳೋದು ಅಲ್ವಾ???)


-ಯಳವತ್ತಿ


22) ನಾನ್ ಒಂದ್ ಜೋಕ್ ಬರ್ದಿದೀನ್..

(ಇನ್ ಮ್ಯಾಕ್ ನಾನ್ ಅರ್ಕಾವತ್ ನಾಗ್ ಮಾತಾಡ್ತೀನ್..)

Height of Addiction of Buzz..

ಒಬ್ ನೆಟ್ ಹುಳ ಬಜ್ ನಾಗ ತನ್ ಸೂಪರ್ರಾಗಿರೋ ಹೆಂಡ್ತೀನ್ ಪರಿಚಯ್ ಮಾಡ್ಸಾಕ್ ಅಂತಾ ಅವಳ್ ಒಂದ್ ಫೋಟೋ ಅಪ್ ಲೋಡ್ ಮಾಡಿ, ಅದಕ್ಕ್ "ಇವಳು ನನ್ ಹೆಂಡ್ತಿ" ಅಂತಾ ಫೋಟೋ ಮ್ಯಾಗ್ ಹೆಡ್ಡಿಂಗ್ ಕೊಟ್ಟ... ಜೊತೆಗೆ ಫೋಟೋ ಕೆಳಗ ಹಿಂಗ್ ಬರ್ದ್ ಹಾಕ್ದ..


Warning:- Don't Reshare this Buzz, ಯಾಕಂದ್ರ ಇವ್ಳ್ ನನ್ ಹೆಂಡ್ರು....

23)
ಯಳವತ್ತಿ ಟ್ವೀಟ್...
"ಅವಳ ಕೂದಲುಗಳನ್ನು ಅವಳಮ್ಮ ತುಂಬಾ ಮುದ್ದಿನಿಂದ ಸಾಕಿದ್ದಾರೆ ಅನ್ಸುತ್ತೆ. ಅವಳ ಕೆನ್ನೆಗೆ ಮುತ್ತು ಕೊಡಲು ಹೋದಾಗಲೆಲ್ಲಾ ಅಡ್ಡ ಬಂದು ತನ್ನ ನಿಷ್ಠೆಯನ್ನು ತೋರುತ್ತಿವೆ..."

18 comments:

ದಿನಕರ ಮೊಗೇರ.. said...

naanu idannu buzz nalli odiralilla.....
ellavu tumbaa sogasaagide.....

kevalu tumbaa nagu tarisitu....

ಸವಿಗನಸು said...

chennagive shivu....

ಸುಮ said...

ತುಂಬ ಚೆನ್ನಾಗಿವೆ .ಹುಬ್ಬಳ್ಳಿ ನಾಗವಲ್ಲಿಯ ಮಾತುಗಳು !! ...ಹ..ಹ..ಹ.

nimmolagobba said...

ಯಳವತ್ತಿ ಸಾರ್ ಎಲ್ಲಾ ಸಿಕ್ಸರ್ ಗಳೇ ಅಲ್ರೀ !!!! ಹಾಸ್ಯವಾಗಿ ಚೆನ್ನಾಗಿವೆ. ನಕ್ಕೂ ನಕ್ಕೂ ಸುಸ್ತಾದೆ.

sunaath said...

sunaath tweets:
ನಾನು ಇಷ್ಟು ದಿನ ಸೊಳ್ಳೆಬತ್ತಿ ತಂದದ್ದು ಎಂಥಾ ಮೂರ್ಖತನ ಅನ್ನೋದು ಇವತ್ತು ಗೊತ್ತಾಯ್ತು!

ನನ್ನೊಳಗಿನ ಕನಸು.... said...

very nice sir , i enjoy it.

ಮನದಾಳದಿಂದ............ said...

ಯಳವತ್ತಿ ಸರ್,
ಸೂಪರ್ರೋ ಸೂಪರ್..........

shivu.k said...

ಶಿವಶಂಕರ್,
ಬಜ್‍ನಲ್ಲಿ ಓದಿದ್ದರೂ ಮತ್ತೆ ಓದಿದೆ. ತುಂಬಾ ಖುಷಿಕೊಡುತ್ತವೆ ಕೆಲವು.

ashokkodlady said...

Yalavatti yavre,,,

very Niceeeeeee...

ಶಿವಶಂಕರ ವಿಷ್ಣು ಯಳವತ್ತಿ said...

@ ದಿನಕರ್.

ಎಷ್ಟೊಂದು ಜನರು ಬಜ್ ನಲ್ಲಿ ಇಲ್ಲ ಅಂತಾ ಬ್ಲಾಗಿಗೆ ಹಾಕಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ಶಿವಶಂಕರ ವಿಷ್ಣು ಯಳವತ್ತಿ said...

@ ಸವಿಗನಸು ಮಹೇಶಣ್ಣ..

ನಿಮ್ಮ ಆಶೀರ್ವಾದ ಅಣ್ಣಾ...

ಶಿವಶಂಕರ ವಿಷ್ಣು ಯಳವತ್ತಿ said...

@ ಸುಮ ಮೇಡಮ್..

ಇನ್ನೂ ನಮ್ ಸವಣೂರ್ ಡೈಲಾಗ್ ಗಳು ತುಂಬಾನೇ ಸಕತ್ತಾಗಿವೆ.. ಮುಂದಿನ ಪೋಸ್ಟ್ ನಲ್ಲಿ ಬರೆದು ಹಾಕುವೆ. ಪ್ರತಿಕ್ರಿಯೆಗೆ ಧನ್ಯವಾದಗಳು.

-ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ ಬಾಲು ಸರ್..

ತುಂಬಾ ಥ್ಯಾಂಕ್ಸ್. ಒಬ್ಬರಿಗಾದರೂ ನಗಿಸಿದೆನಲ್ಲಾ ಅನ್ನೋದೇ ಖುಶಿ.

ಶಿವಶಂಕರ ವಿಷ್ಣು ಯಳವತ್ತಿ said...

@ ಸುನಾಥ ಕಾಕ..

ಇನ್ನೂ ಒಳ್ಳೊಳ್ಳೇ ತಪ್ಪುಗಳು ತುಂಬಾನೇ ಇದಾವೆ ಕಾಕಾ..

ಶಿವಶಂಕರ ವಿಷ್ಣು ಯಳವತ್ತಿ said...

@ ನನ್ನೊಳಗಿನ ಕನಸು ವೆಂಕಟೇಶ ಹೆಗಡೆ ಸಾಹೇಬ್ರಿಗೆ..

ಥ್ಯಾಂಕ್ಸೋ ಥ್ಯಾಂಕ್ಸು. ಬ್ಲಾಗಿಗೆ ಬಂದು ಮಾಡಿದ್ದಕ್ಕೆ. ಮೊದಲನೆ ಬಾರಿಗೆ ಬ್ಲಾಗಿಗೆ ಬರುತ್ತಿದ್ದೀರಿ. ಸುಸ್ವಾಗತ.

ಶಿವಶಂಕರ ವಿಷ್ಣು ಯಳವತ್ತಿ said...

@ ಪ್ರವೀಣ್ ಗೌಡ,.

ಥ್ಯಾಂಕ್ಯೂ ಗುರೂ..

ಶಿವಶಂಕರ ವಿಷ್ಣು ಯಳವತ್ತಿ said...

@ ಶಿವಣ್ಣ..

ಸಣ್ಣವನಿಗೆ ನಿಮ್ಮ ಪ್ರೊತ್ಸಾಹ ಹಿಂಗೇ ಇರಲಿ..

ಶಿವಶಂಕರ ವಿಷ್ಣು ಯಳವತ್ತಿ said...

@ ಅಶೋಕ ಶೆಟ್ಟಿ..

ಸಾಹೇಬ್ರೇ.. ನಿಮ್ಮ ಕಾಮೆಂಟನ್ನು ಖುಷಿಯಿಂದ ಅಪ್ಪಿಕೊಳ್ಳುತ್ತಿದ್ದೀನಿ.