ಖಾಯಂ ಓದುಗರು..(ನೀವೂ ಸೇರಬಹುದು)

01 September 2010

ಇದರಲ್ಲಿ ಯಾರದು ತಪ್ಪು..???

ಅವತ್ತು ಹೊರಗಡೆ ತುಂತುರು ಮಳೆ ಬರ್ತಿತ್ತು. ರೂಮಲ್ಲಿ ಎಲ್ಲರೂ ರಮ್ಮಿ (ಕಾರ್ಡ್ಸ್) ಆಡ್ತಾ ಇದ್ವಿ. ರಾತ್ರಿ 9.00 ಗಂಟೆ ಆಗಿತ್ತು,. ಊಟದ ಸಮಯ. ಅಂತಾ ಛಳಿ-ಮಳೆಯಲ್ಲಿ ಹೊರಗಡೆ ಊಟ ಮಾಡ್ಕೊಂಡು ಬರೋಕೆ ಎಲ್ಲರಿಗೂ ಬೇಜಾರು. ಯಾರು ಹೋಗ್ತೀನಿ ಅಂತಾರೆ, ಅವರ ಕೈಗೆ ದುಡ್ಡು ಕೊಟ್ಟು ಪಾರ್ಸಲ್ ತರಿಸೋಣ ಅಂತಾ ನಾನು ಪ್ಲಾನ್ ಮಾಡಿದೆ. ಆದರೆ, ಯಾರೂ ಊಟಕ್ಕೆ ಏಳಲಿಲ್ಲ. ಎಲ್ಲರೂ ಸಹ ಇದೇ ಪ್ಲಾನ್ ಮಾಡಿದ್ದರು. ಕೊನೆಗೆ ಹಸಿವು ತಡೆಯಲಾರದೇ, ನಮ್ ರೂಂ ಮೇಟ್ ರಮೇಶ ಊಟಕ್ಕೆ ಹೋಗಲು ನಗು ನಗುತ್ತಾ ಎದ್ದು ನಿಂತ. ಎಲ್ಲರೂ ಅವನಿಗೆ ಮುಗಿ ಬಿದ್ದು, ತಮಗೆ ಏನು ಬೇಕೋ ಅದನ್ನು ಪಾರ್ಸಲ್ ತಗೊಂಡು ಬಾ ಅಂತಾ ದುಡ್ಡು ಕೊಟ್ಟು ಕಳಿಸಿದೆವು.

ನಾವು ಇನ್ನೂ ರಮ್ಮಿ ಆಡ್ತಾ ಇದ್ವಿ, ಸ್ವಲ್ಪ ಹೊತ್ತಿನಲ್ಲಿ ರಮೇಶ ಎಲ್ಲರಿಗೂ ಅವರು ಹೇಳಿದ್ದನ್ನು ಪಾರ್ಸಲ್ ತಂದಿದ್ದ. ಅಶ್ವಿನ್, ಶಿವಕುಮಾರ್, ಗುಂಡ ಮತ್ತು ನಾನು ಎಗ್ ರೈಸ್ ಗೆ ಕಾಸುಕೊಟ್ಟಿದ್ದೆವು , ರಂಗನಾಥ ಚಿತ್ರನ್ನ ತರಿಸಿದ್ದ. ಆದರೆ, ಚಿತ್ರನ್ನ ತಣ್ಣಗಾಗಿತ್ತು. ನಾವು ತರಿಸಿದ ಎಗ್ ರೈಸ್ ಇನ್ನೂ ಬಿಸಿ ಇತ್ತು.

ಆಗ ರಂಗನಾಥ ನನಗೆ ಎಗ್ ರೈಸ್ ಕೊಡು ಅಂತಾ ನನ್ನನ್ನು ಕೇಳ್ದ. ನಾನು ಕೊಡಲಿಲ್ಲ.. ಹೋಗಲೇ.. ಇಂತಾ ಥಳೀಲಿ ಯಾರು ಚಿತ್ರನ್ನ ತಿಂತಾರೆ ಅಂತಾ ಅವನ ಕೋರಿಕೆಯನ್ನು ಖಾರವಾಗಿ ತಿರಸ್ಕರಿಸಿದೆ..

ನಾನು ಕೈ ತೊಳ್ಕೊಳ್ಳೋಕೆ ಹೋದಾಗ ಎಲ್ಲಿ ಎಗ್ ರೈಸ್ ತಿಂದ್ ಬಿಡ್ತಾನೋ ಅಂತಾ ಅದರ ಮೇಲೆ ಥೂ..ಥೂ..ಥೂ.... ಅಂತಾ ಮೂರು ಸರ್ತಿ ಉಗಿದೆ.. ಸಪ್ಪೆ ಮುಖದ ರಂಗನಾಥ, "ಯಳವತ್ತಿ, ನಂಗೆ ಸಿಗದೇ ಇದ್ದುದು ನಿಂಗೂ ಸಿಗಬಾರ್ದು" ಅಂತಾ ಅಂದವನೇ, ಅದೇ ಎಗ್ ರೈಸ್ ಗೆ ಅವನೂ ಸಹ ಥೂ ಥೂ ಥೂ ಅಂತಾ ಉಗಿದ.

ನಂಗೆ ಒಮ್ಮೆಲೆ ಸಿಟ್ಟು ನೆತ್ತಿಗೆ ಏರಿತು. ರಂಗನಾಥ ನನಗಿಂತಲೂ ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವನು ಅನ್ನೋದನ್ನೂ ಸಹ ನೋಡದೇ..

ರಪ್ಪನೆ ಕಪಾಳಕ್ಕೆ ಬಿಗಿದೆ...!!! ನಮ್ಮ ರೂಂ ನಲ್ಲಿ ಪಿನ್ ಡ್ರಾಪ್ ಸೈಲೆನ್ಸ್.. ರೂಂ ನಲ್ಲಿದ್ದ ಯಾರೂ ಸಹ ಏನೂ ಮಾತನಾಡಲಿಲ್ಲ..


ಮತ್ತೆ ನಾವಿಬ್ರೂ ಯಾರು ಯಾರನ್ನೂ ಸಾರಿ ಕೇಳಲಿಲ್ಲ.. ಅದಾದ ಎರಡು ದಿನಗಳ ನಂತರದಿಂದ ನಾವಿಬ್ರೂ ಸಕತ್ ಕ್ಲೋಸ್ ಫ್ರೆಂಡ್ಸ್ ಆದ್ವಿ.. ಐದು ವರ್ಷಗಳಿಂದಲೂ ಹೀಗೇ ಆತ್ಮೀಯತೆಯಿಂದ ಇದ್ದೀವಿ...

ಆದರೆ, ತಪ್ಪು ಯಾರು ಮಾಡಿದ್ದು ಅಂತಾ ನಮಗೆ ಇನ್ನೂ ಗೊತ್ತಾಗಿಲ್ಲ..

ಇಂತಿ,
ಯಳವತ್ತಿ..

(ನಾನು ಏನು ಬರೆದರೂ ಓದಿ ಸಹಿಸಿಕೊಳ್ಳೋರಿಗೆ ಧನ್ಯವಾದಗಳು)

24 comments:

ದಿನಕರ ಮೊಗೇರ.. said...

ಶಿವಶಂಕರ್,
ನನಗೇನೊ ನಿಮ್ಮ ಸ್ನೇಹಿತನದೇ ತಪ್ಪು ಎನಿಸುತ್ತದೆ..... ನಿಮಗೆ ತಂದ ವಸ್ತು ಎಂದಿಗೂ ನಿಮ್ಮದೇ ಆಗಿರುತ್ತದೆ..... ಅದು ನನ್ನ ಅಭಿಪ್ರಾಯ ಅಷ್ಟೆ..

ದಿನಕರ ಮೊಗೇರ.. said...

nanna blogi gomme banni.......

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ನೀವಿಬ್ಬರೂ ಸ್ನೇಹಿತರು ನೀವು ಹ೦ಚಿಕೊ೦ಡು ತಿನ್ನಬೇಕಿತ್ತು ಆದರೆ ನೀವು ಸ್ವಾರ್ಥಿಗಳಾದಿರಿ. ಸ್ವಾರ್ಥಿಯಾಗಿದ್ದಲ್ಲದೇ ಗೆಳೆಯನನ್ನು ಸ೦ಶಯಿಸಿದಿರಿ. ಜೊತೆಗೆ ಅವನು ತಿನ್ನುವನೆ೦ದು ಉಗುಳುವ ಮೂಲಕ ಅವನಲ್ಲಿನ್ನ ರಾಕ್ಷಸನನ್ನು ಕೆಣಕಿದಿರಿ. ಯಾವಾಗ ಅವನಲ್ಲಿನ ರಕ್ಕಸ ರೊಚ್ಚಿಗೆದ್ದು ನಿಮಗೂ ದಕ್ಕದ ಹಾಗೆ ಮಾಡಿದನೋ ಆಗ ನಿಮ್ಮಲ್ಲಿನ ರಕ್ಕಸ ಅವನ ಕೆನ್ನೆಗೆ ಬಾರಿಸಿದ.

-ಅವನದಲ್ಲ ವಸ್ತುವಿನ ಮೇಲೆ ವ್ಯಾಮೋಹ ಇಟ್ಟಿದ್ದು ನಿಮ್ಮ ಗೆಳೆಯನ ತಪ್ಪು. ಗೆಳೆತನದಲ್ಲಿ ಅವನು ಕೇಳಿದ್ದು ಸಹ್ಯವೂ ಸಹಾ! ನೀವು ಅನುಮಾನಿಸಿ ಛೇಡಿಸಿದಾಗ ಅವನಲ್ಲಿನ ರಕ್ಕಸ ಜಾಗೃತನಾಗಬಾರದಿತ್ತು.

ಇಬ್ಬರ ತಪ್ಪು ಇದೆ.

ಆದರೆ ನೀವಿಬ್ಬರೂ ಮಿತ್ರರಾಗಿರುವದರಿ೦ದ ನಿಮ್ಮ ತಪ್ಪೇ ಜಾಸ್ತಿ ಎ೦ದು ನನ್ನ ಅಭಿಪ್ರಾಯ.

ವಿ.ಆರ್.ಭಟ್ said...

ಸೀತಾರಾಮ್ ಸರ್ ಏನ್ ಹೇಳ್ಲಿ ಹತ್ತಾರೋ ನಾ ಅದ್ನೇ ಹೇಳ್ತೀನ್ ನೋಡ್ರೀ ಯಪ್ಪಾ , ನಿಮ್ದ ಇಬ್ಬರ್ದೂ ತಪ್ಪೈತಿ ಇದ್ರಾಗ, ಒಟ್ತಾಯ್ಸಿ ಆಮೇಲಾದ್ರೂ ಸರೀ ಹೋತು ಹೌದಿಲ್ಲೋ, ಬಿಟ್ಟಾಕ್ರಿ ಮತ್ತ, ಕಥೀ ಕೇಳಿ ಕೊಂಚ ಬ್ಯಾಸರಾತೇನಪಾ, ಇನ್ಮ್ಯಾಲ ಹಂಗ ನಡೀದಂಗ ನೋಡ್ಕೋರಿ, ಧನ್ಯವಾದ

ಶಿವಶಂಕರ ವಿಷ್ಣು ಯಳವತ್ತಿ said...

@ ದಿನಕರ ಮೊಗೇರ.

ತಪ್ಪು ಯಾರದ್ದು ಅನ್ನೋದರ ಬಗ್ಗೆ ಇನ್ನೂ ಯೋಚನೆ ಮುಗೀತಾನೇ ಇಲ್ಲ. ಬ್ಲಾಗಿಗೆ ಸ್ವಾಗತ. ನಿಮ್ಮ ಬ್ಲಾಗಿಗೆ ಇದೀಗ ತಾನೇ ಭೇಟಿ ನೀಡಿ ಬಂದೆ..

ಇಂತಿ,
ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ ಸೀತಾರಾಮ. ಕೆ. ಮತ್ತು
@ ವಿ.ಆರ್.ಭಟ್

ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ನಿಮ್ಮ ಅಭಿಪ್ರಾಯವನ್ನು ಒಪ್ಪಬೇಕಾದ್ದೇ.. ಆದರೆ, ಇವೆಲ್ಲಾ ಹರೆಯದ ಹುಡುಗಾಟದಲ್ಲಿ ಆಗಿದ್ದು..... ಇವೆಲ್ಲಾ ಅಲ್ಲಿಗೇ ನಿಂತೋಯ್ತು. ಮುಂದೆ ಈ ಥರಾ ನಡೆಯಲಿಲ್ಲ..

ಇಂತಿ,
ಯಳವತ್ತಿ

sunaath said...

ತಪ್ಪನ್ನ ಎಲ್ಲಾರೂ ಮಾಡ್ತಾರಿ. ಮತ್ತ close friends ಆದರಿ ನೋಡ್ರಿ, ಅದು ಮಹತ್ವದ್ದು.

Doddamanimanju said...

ಅನ್ನದ ಮೇಲೆ ಉಗಿದಿದ್ದೆ ಒಂದು ದೊಡ್ಡ ತಪ್ಪು ..!
ನೀವು ಸ್ವಲ್ಪ ಯೋಚನೆ ಮಾಡಿ ಕೈಲಿರೋ ತುತ್ತನ್ನ ಹಂಚಿಕೋ ಬಹುದಿತ್ತು ಹಂಚಿ ಕೊಂಡು ತಿನ್ನೋದ್ರಲ್ಲಿ ಸಿಗೋ ಸುಖನೆ ಬೇರೆ ..:)
ಅದೇನೋ ಹೇಳ್ತಾರಲ್ಲ ಇಬ್ಬರ ಜಗಳ ಮೂರನೆಯವನಿಗೆ ಲಾಭ ಅಂತ ಹಾಗಾಯ್ತು..!
ಕೆಲವೊಮ್ಮೆ ಇಂತಹ ಘಟನೆಗಳೇ ಸ್ನೇಹವನ್ನ ಬೆಳೆಸುತ್ತೆ ಇನ್ನು ಹತ್ತಿರ ಮಾಡುತ್ತೆ..!

http://manjukaraguvamunna.blogspot.com/

http://doddamanimanju.blogspot.com/

nimmolagobba said...

ಸ್ನೇಹದ ಕಡಲಲ್ಲಿ ಇಂಥಹ ಸಣ್ಣ ಪುಟ್ಟ ಕದನ ಸಾಮಾನ್ಯ , ಸ್ನೇಹದಲ್ಲಿ ಇವು ಉಪ್ಪು, ಹುಳಿ, ಖಾರ ಇದ್ದಂತೆ. ಮುಂದೆ ಇವು ಸುಂದರ ನೆನಪಾಗಿ ಉಳಿಯುತ್ತವೆ.ಆದರೂ ಪ್ರೀತಿಯ ಸಮರಸವೇ ಜೀವನ ಅಲ್ವ . ಇದರಲ್ಲಿ ಯಾರು ಸೋತರೂ ಅವರು ತಮ್ಮ ದೊಡ್ದತನಕ್ಕೆ ಭಾಜನರಾಗುತ್ತಿದ್ದರು. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಎಲ್ಲರೂ ಸೋತಿರಿ.ಆಲ್ವಾ

- ಕತ್ತಲೆ ಮನೆ... said...

ಹೀಗೂ ಇರ್ತಾರ್ರಪ್ಪ ಜನ..

ಶಿವಪ್ರಕಾಶ್ said...

nim friend de tappu...
good writeup

Va said...

ತಪ್ಪು ಹಸಿವಿದ್ದು.... :)

ashokkodlady said...

Shivshankar,Ibraddu tappide, aadre tinno tuttina mele ugidaddu nimma doddatappu....baraha chennagide...

nanna blog visit maadiddakke dhanyavadagalu...heege barta iri...

ದಿನಕರ ಮೊಗೇರ.. said...

ಹೊಸ ಕಥೆ ಬರೆದಿದ್ದೇನೆ.... ಬಂದು ಓದಿ, ಅನಿಸಿಕೆ ತಿಳಿಸಿರಿ....

ಶಿವಶಂಕರ ವಿಷ್ಣು ಯಳವತ್ತಿ said...

@ ಸುನಾಥ ಕಾಕ..

ಹೌದು. ಕ್ಲೋಸ್ ಫ್ರೆಂಡ್ ಆದ್ಮೇಲೆ, ಇದೆಲ್ಲಾ ಮರ್ತು ಹೋಯ್ತು..

ಶಿವಶಂಕರ ವಿಷ್ಣು ಯಳವತ್ತಿ said...

@ ದೊಡ್ಡಮನಿ ಮಂಜು.

ಹೌದು. ಇದೇ ಘಟನೆ ನಮ್ಮನ್ನು ಆಪ್ತರನ್ನಾಗಿಸಿತು.

ಶಿವಶಂಕರ ವಿಷ್ಣು ಯಳವತ್ತಿ said...

@ ಬಾಲು ಸರ್..

ನಾವು ಸೋತು ಗೆದ್ದೆವು..

ಶಿವಶಂಕರ ವಿಷ್ಣು ಯಳವತ್ತಿ said...

@ ಗುರುಪ್ರಸಾದ್ ಗೌಡ.

ಇನ್ನೂ ಹೆಂಗೆಂಗೋ ಇರ್ತಾರೆ..

ಶಿವಶಂಕರ ವಿಷ್ಣು ಯಳವತ್ತಿ said...

@ ಶಿವು..

ಫ್ರೆಂಡ್ ಶಿಪ್ ದಾ ತಪ್ಪು? ಗೊತ್ತಾಗಲಿಲ್ಲ ಕಣೋ.. ಫ್ರೆಂಡ್ ಮಾಡ್ಕೊಂಡಿದ್ದು ತಪ್ಪಾ?

ಶಿವಶಂಕರ ವಿಷ್ಣು ಯಳವತ್ತಿ said...

@ ಅಮಾವಾಸ್ಯೆ VA ಸರ್..

ನೀವು ಕರೆಕ್ಟಾಗಿ ಹೇಳಿದ್ರಿ ನೋಡಿ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಶಿವಶಂಕರ ವಿಷ್ಣು ಯಳವತ್ತಿ said...

@ ಅಶೋಕ ಶೆಟ್ಟಿ..

ಧನ್ಯವಾದಗಳು.

ಶಿವಶಂಕರ ವಿಷ್ಣು ಯಳವತ್ತಿ said...

@ ದಿನಕರ ಮೊಗೇರ.

ಸರಿ ಬರುತ್ತೇನೆ. ನೆನಪಿಸಿದ್ದಕ್ಕೆ ಧನ್ಯವಾದಗಳು.