ಖಾಯಂ ಓದುಗರು..(ನೀವೂ ಸೇರಬಹುದು)

18 August 2010

HOW TO DOWNLOAD YOUTUBE VIDEOS?

YOUTUBE ವೀಡಿಯೋಗಳನ್ನು ಡೌನ್ ಲೋಡ್ ಮಾಡುವುದು ಹೇಗೆ"?

(HOW TO DOWNLOAD YOUTUBE VIDEOS?)

ಇಂತಹ ಒಂದು ಪ್ರಶ್ನೆನಾ ಗೂಗಲ್ ನಲ್ಲಿ ಎಷ್ಟು ಲಕ್ಷ ಜನ ಹಾಕಿದ್ದಾರೋ ಗೊತ್ತಿಲ್ಲ.. ಗೂಗಲ್ ಸಜೆಷನ್ ನಲ್ಲಿ ಯಾವಾಗಲೂ ತೋರಿಸ್ತಾನೇ ಇರುತ್ತೆ..

ಇದೇ ಪ್ರಶ್ನೇನಾ ನಾನೂ ಸಹ ಹಿಂದೆ ಗೂಗಲ್ ನಲ್ಲಿ ಕೇಳಿದ್ದೆ.. ಇದಕ್ಕೆ ಉತ್ತರವಾಗಿ ತರಹೇವಾರು ಸೈಟುಗಳು, ಯೂ ಟ್ಯೂಬ್ ವೀಡಿಯೋ ಡೌನ್ ಲೋಡಿಂಗ್ ಸಾಫ್ಟ್ ವೇರ್ ಗಳು ಸಿಕ್ಕವು.. DAP Video converter/ real player ಇಂತಹ ಸಾಫ್ಟ್ ವೇರ್ ಗಳನ್ನು ಹಾಕಿ ವೀಡಿಯೋ ಡೌನ್ ಲೋಡ್ ಮಾಡಿದೆ..

ಆದರೆ, ಆ ಹಾಡುಗಳು ನನ್ನ ಮೊಬೈಲ್ ನಲ್ಲಿ Mp3 Format ನಲ್ಲಿ ಬೇಕಾಗಿತ್ತು.. Youtube ನಿಂದ ಡೌನ್ ಲೋಡ್ ಆಗುವ ವೀಡಿಯೋಗಳು .flv Format ನಲ್ಲಿ ಇರುತ್ತವೆ. ಮೊಬೈಲ್ ನಲ್ಲಿ ವೀಡಿಯೋ ಬೇಕಾದರೆ, .flv format ನಿಂದ .3gp format ಗೆ Convert ಮಾಡಬೇಕಿತ್ತು.. ಮತ್ತೆ mp3 ಗೆ Convert ಮಾಡೋಕೆ ಬೇರೇ ಇನ್ನೊಂದು Software ಮೊರೆ ಹೋಗಬೇಕಾಗಿತ್ತು.. ಅಲ್ಲದೇ ಇವುಗಳ Quality ತುಂಬಾನೇ ಕಡಿಮೆ ಇರುತ್ತಿತ್ತು..

ಇಷ್ಟು ದಿನಗಳವರೆಗೆ ಇದೇ ಸರ್ಕಸ್ ಮಾಡಿ ಮಾಡಿ ಬೇಜಾರಾಗಿತ್ತು.. ಈಗ ನನಗೆ ಒಂದು ಸುಲಭ ಉಪಾಯ ಹೊಳೆದಿದೆ.. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ತಾ ಇದ್ದೇನೆ..

http://youtube.com

ನಿಂದ ವೀಡಿಯೋಗಳನ್ನು ಡೌನ್ ಲೋಡ್ ಮಾಡಬೇಕಾದರೆ, ನಿಮಗೆ ಬೇಕಾದ ಮೆಚ್ಚಿನ ಹಾಡಿನ ಲಿಂಕ್ ನ್ನು (URL) ಕಾಪಿ ಮಾಡಿ,

http://keepvid.com

ವೆಬ್ ಸೈಟ್ ಗೆ ಹೋಗಿ, ಅಲ್ಲಿ URL ಅನ್ನೋ ಕಾಲಂ ನಲ್ಲಿ ನಿಮ್ಮ ವೀಡಿಯೋ ಲಿಂಕನ್ನು Paste ಮಾಡಿ, ಡೌನ್ ಲೋಡ್ ಬಟನ್ನನ್ನು ಒತ್ತಿ..

ಒಂದೆರಡು ಕ್ಷಣಗಳು ಕಾದರೆ, ನಿಮ್ಮ ನೆಚ್ಚಿನ ವೀಡಿಯೋಗಳನ್ನ ಡೌನ್ ಲೋಡ್ ಮಾಡಲು ಈ ಕೆಳಗಿನಂತೆ Option ಕೊಡುತ್ತದೆ..

›› Download 3GP ‹‹ - Low Quality - 176x144
›› Download 3GP ‹‹ - Medium Quality - 176x144
›› Download FLV ‹‹ - Low Quality - 400×226
›› Download FLV ‹‹ - Medium Quality - 640×360
›› Download MP4 ‹‹ - High Quality - 480x360

ಆಗ, ನಿಮಗೆ ಬೇಕಾದ Quality ನಲ್ಲಿ ವೀಡಿಯೋಗಳನ್ನು ಸುಲಭವಾಗಿ ಡೌನ್ ಲೋಡ್ ಮಾಡಬಹುದು.. ಈ ವೀಡಿಯೋಗಳು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಆಗಬೇಕಾದರೆ, 3gp Format ನಲ್ಲಿ ಡೌನ್ ಲೋಡ್ ಮಾಡಿ.. ಒಂದೊಂದು ವೀಡಿಯೋಗಳನ್ನು High Quality ನಲ್ಲಿ ಸಹ ಪಡೆಯಬಹುದು..

ಇದೇ ವೀಡಿಯೋಗಳ mp3 ಬೇಕೇ???

ಅದಕ್ಕೆ ಇನ್ನೊಂದು ವೆಬ್ ಸೈಟ್ ಇದೆ.. (ಮಾನಸ ರವರ ಸಜೆಷನ್)

http://www.video2mp3.net

ಈ ವೆಬ್ ಸೈಟ್ ಮೂಲಕ mp3 Format ನಲ್ಲಿ Download ಮಾಡಬಹುದು..


ಇದು ನಿಮಗೆ ಉಪಯುಕ್ತವಾದರೆ, ಸಂತೋಷ..

-ಇಂತಿ,
ಯಳವತ್ತಿ

http://www.shivagadag.blogspot.com

15 comments:

ಸಾಗರದಾಚೆಯ ಇಂಚರ said...

Sir heege download madoke hogi system crash agittu

idu virus free anta nodidra?

nice suggestion

ಶಿವಶಂಕರ ವಿಷ್ಣು ಯಳವತ್ತಿ said...

@ ಸಾಗರದಾಚೆಯ ಇಂಚರ..

ನಾನು ಸುಮಾರು 6 ತಿಂಗಳಿಂದ ಈ ಲಿಂಕನ್ನು ಉಪಯೋಗಿಸುತ್ತಾ ಇದ್ದೀನಿ.. ಸಾಕಷ್ಟು ವೀಡಿಯೋಗಳನ್ನು ಡೌನ್ ಲೋಡ್ ಮಾಡಿದ್ದೀನಿ.. system crash ಅಂತೂ ಆಗಿಲ್ಲ..

ಅಲ್ಲದೇ, ನಾನು Kaspersky Internet Security 2010 (Licenced) ಬಳಸ್ತಾ ಇದ್ದೀನಿ.. ಈ ವೆಬ್ ಸೈಟ್ ನಲ್ಲಿ ಯಾವುದೇ ವೈರಸ್ ಗಳನ್ನು Detect ಮಾಡಿಲ್ಲ... ಹಾಗಾಗಿ, ವೈರಸ್ ಇಲ್ಲ ಅಂತಾ ಹೇಳಬಲ್ಲೆ..

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

ಇಂತಿ,
ಯಳವತ್ತಿ

Anonymous said...

http://superuser.com/questions/6675/youtube-and-google-video-downloaders

ದಿನಕರ ಮೊಗೇರ.. said...

thank you sir..... naanu saha Kaspersky Internet Security 2010 balasuttaa iddene haagaagi nanagu virus bhaya illa....

ಸೀತಾರಾಮ. ಕೆ. / SITARAM.K said...

nice info

ವಿ.ರಾ.ಹೆ. said...

olle information. Thanks.

bhat's said...

ಸಲಹೆಗಾಗಿ ಧನ್ಯವಾದಗಳು ಶಿವಶಂಕರ್ ಅವರೇ.,
ಆದ್ರೆ keepvid ಅಂತರ್ಜಾಲ ತಾಣದ ಬಹಳ ದೊಡ್ಡ ಸಮಸ್ಯೆ ಅದರ ಕಂಪನಾಂಕಗಳು(bandwidth) ತುಂಬಾ ಕೆಳಮಟ್ಟದಲ್ಲಿದ್ದು .,ಕೆಲವೊಮ್ಮೆ ತುಂಬಾ ಹೊತ್ತು ಕಾದರು ಕೊಂಡಿ ಸಿಗದೇ ಹೋಗುತ್ತದೆ.
ಸಿಕ್ಕರೂ ಅದರ ಗುಣಮಟ್ಟ ಬಹಳ ಎನ್ನುವಷ್ಟು ಕಡಿಮೆ ಇರುತ್ತದೆ.ತಕ್ಷಣಕ್ಕೆ ಯಾವೊದೋ ತಂತ್ರಾಂಶ ಇಳಿಸಿಕೊಳ್ಳುವುದಕ್ಕಿಂಥ ಅದು ಉತ್ತಮ. ಬೇಕಿದ್ದಲ್ಲಿ downloader9.com ಕೊಡ ಪ್ರಯತ್ನಿಸಬಹುದು.

Bana said...

ಯಳವತ್ತಿಯವರೇ, ಯೂಟೂಬ್ ಡೌನ್ಲೋಡ್ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.

ರಾಜೇಶ್ ನಾಯ್ಕ said...

ಯಳವತ್ತಿಯವರೆ,
ಉತ್ತಮ ಮತ್ತು ಉಪಯುಕ್ತ ಮಾಹಿತಿ ನೀಡಿದ್ದೀರಿ. ತುಂಬಾ ಉಪಕಾರವಾಯಿತು. ಧನ್ಯವಾದ.

- ಕತ್ತಲೆ ಮನೆ... said...

thaanks..

ಸ್ವಗತ said...

ರೀ ಯಳವತ್ತಿಯವರೆ, copyright material ನ downloadಮಾಡೋದು ಹೇಗೆ ಅಂತ ಹೇಳ್ಕೊಟ್ಟು illegal ಕೆಲಸ ಮಾಡ್ತಾ ಇದ್ದೀರಲ್ರೀ?

ಶಿವಶಂಕರ ವಿಷ್ಣು ಯಳವತ್ತಿ said...

@ ದಿನಕರ ಮೊಗೇರ..

ಬ್ಲಾಗಿಗೆ ಸ್ವಾಗತ..

@ ಸೀತಾರಾಮ. ಕೆ.
@ ವಿ.ರಾ.ಹೆ.

ನಿಮ್ಮ ಪ್ರೊತ್ಸಾಹ ಹೀಗೇ ಇರಲಿ.....

ಶಿವಶಂಕರ ವಿಷ್ಣು ಯಳವತ್ತಿ said...

@ bhat's

ನಿಮ್ಮ ಸಲಹೆಗೆ ಧನ್ಯವಾದಗಳು. ಕಂಪನಾಂಕಗಳು, ಇತ್ಯಾದಿಗಳ ಬಗ್ಗೆ ಅಷ್ಟೊಂದು ಜ್ಞಾನ ಇಲ್ಲ.


ಇಂತಿ,
ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ Bana
@ ರಾಜೇಶ್ ನಾಯ್ಕ
@ ಕತ್ತಲೆ ಮನೆ

ನಿಮ್ಮ ಕಮೆಂಟಿಗೆ ಧನ್ಯವಾದಗಳು. ಹೀಗೇ ಬ್ಲಾಗಿಗೆ ಭೇಟಿ ನೀಡ್ತಾ, ನಿಮ್ಮ ಸಲಹೆ ಸೂಚನೆಗಳನ್ನು ಕೊಡ್ತಾ ಇರಿ..

ಶಿವಶಂಕರ ವಿಷ್ಣು ಯಳವತ್ತಿ said...

@ ಸ್ವಗತ or ಬೆರ್ಚಪ್ಪ

Youtube ನಿಂದ ಹಾಡುಗಳನ್ನು ಡೌನ್ ಲೋಡ್ ಮಾಡೋದು ಕಾನೂನು ಬಾಹಿರ ಅಲ್ವಲ್ಲಾ. ಹೀಗಂತ ನಿಮಗೆ ಯಾರು ಹೇಳಿದ್ದು??? ಕಾನೂನು ಬಾಹಿರ ಆಗಿದ್ದಿದ್ರೆ, ವೀಡಿಯೋಗಳನ್ನು ಡೌನ್ ಲೋಡ್ ಮಾಡಲು ಇಷ್ಟೊಂದು ತಂತ್ರಾಂಶಗಳು ಬರುತ್ತಾ ಇರಲಿಲ್ಲ ಹಾಗೂ ಯೂ ಟ್ಯೂಬ್ ನವರು ಇಂತಹ ತಂತ್ರಾಂಶಗಳಿಗೆ ಅವಕಾಶನೂ ಕೊಡುತ್ತಿರಲಿಲ್ಲ..
ಇದನ್ನು ನೀವು ಮೊದಲೇ ಯೋಚನೆ ಮಾಡಿರ್ತೀರಾ ಅನ್ಕೊಂಡಿದ್ದೆ..