ಖಾಯಂ ಓದುಗರು..(ನೀವೂ ಸೇರಬಹುದು)

26 July 2010

ಜ್ವರ ಬಂದಾಗ, ಹೀಗೇಕೆ ಆಗುತ್ತೆ? ಯಾರಾದ್ರೂ ಉತ್ತರ ಹೇಳುವಿರಾ?

ನನಗೆ ನೆನ್ನೆಯಿಂದ ಛಳಿ ಜ್ಚರ, ಕೆಮ್ಮು, ಗಂಟಲುನೂವು.. ಸಖತ್ ಸುಸ್ತು. ಡಾಕ್ಟ್ರಿಗೆ ತೋರಿಸಿದ್ದಾಯಿತು.. ಇನಾಕ್ಯುಲೇಶನ್ (ಚುಚ್ಚುಮದ್ದು) ಮಾಡಿಸಿಕೊಂಡಿದ್ದಾಯಿತು.ಅವರು ಹೇಳಿದ ಮಾತ್ರೆಗಳನ್ನೆಲ್ಲಾ ತಿಂದದ್ದಾಯ್ತು.. ಆದರೂ ನೆನ್ನೆ ರಾತ್ರಿಯೆಲ್ಲಾ ನಿದ್ದೆ ಇಲ್ಲ. ಇವತ್ತು ಮತ್ತೊಮ್ಮೆ ತೋರಿಸಿಕೊಂಡು ಬರಬೇಕು..

ಇವಾಗ ವಿಷಯ ಏನಪ್ಪಾ ಅಂದ್ರೆ, ನಂಗೆ ತುಂಬಾನೇ ಜ್ಷರ ಬಂದಾಗ, ನನ್ನ ಮನಸ್ಸು ತಾನಾಗಿ ತಾನೇ ಎಲ್ಲಾ ರಿವೈಂಡ್ ಮಾಡುತ್ತೆ.
ನನ್ನ ಬಾಲ್ಯದಲ್ಲಿ ನೋಡಿದ ಡಿ.ಡಿ.-1 ಚಾನೆಲ್, ಅದರಲ್ಲಿ ಪ್ರತಿ ಭಾನುವಾರ ಬರುತ್ತಿದ್ದ ಸಂಸ್ಕೃಂತ ವಾರ್ತೆ, (ಇತಿ ವಾರ್ತಾಃ ಅನ್ನೋದು ಬಿಟ್ಟರೆ ಏನೂ ಅರ್ಥವಾಗದಿದ್ದರೂ ಕಣ್ ಕಣ್ ಬಿಟ್ಟು ಕೊಂಡು ನೋಡಿದ್ದು,) ಮೂಕಿ ವಾರ್ತೆ..
ಗೋದ್ರೆಜ್ ಜ ಜಾಹಿರಾತು,

ಕನ್ನಡದಲ್ಲಿ ಬರುತ್ತಿದ್ದ ಭಾವಗೀತೆಗಳು,
1)ಎದೆಯಾಂತರಾಳದಲಿ ಅಡಗಿರುವ ನೂವುಗಳು, ನೂರುಂಟು ನನ್ನ ನಲ್ಲಾ..
2) ಓ ಪುಟಾಣಿ ನೀಲಿ ಹಕ್ಕಿ.. ಹಾಡು ಹಾಡು ಹಾಡು.. ಹಾಡು..
3) ಹಾವು ಅಂದ್ರೆ ಮರಿಗುಬ್ಬೀಗೆ ಭಾರೀ ದಿಗಲೇನೇ.. ನೆನಸಿಕೊಂಡ್ರೆ ಮೈ ನಡಗುತ್ತೆ, ಹಾಡೇ ಹಗಲೇನೇ..
4) ಗುಡ್ಡದ ಭೂತ ಧಾರವಾಹಿ,
5) ಎ ಎಲ್ ಭರತ್ ಗಿಲ್ ತೋನಿಯಲ್' ಅಂತಾ ಮಂತ್ರ ಹೇಳುತ್ತಿದ್ದ ಮಂತ್ರವಾದಿ ಇದ್ದ ಯಾವುದೋ ಧಾರಾವಾಹಿ..
5) ಟೊರಿನೋ ಜಾಹಿರಾತು.
6) ಏನೋ ಮಾಡಲು ಹೋಗಿ, ಏನು ಮಾಡಿದೆ ನೀನು... (ಏಳು ಸುತ್ತಿನ ಕೋಟೆ ಸಿನಿಮಾ ಹಾಡು)
7) ತಲಕಟ್ಟು, ಇಳೆ, ಗುಡ್ಸು, ಗುಡ್ಸುಂಧೀರ್ಗ, ಕೊಂಬು, ಕೊಂಬಿಳೆ ಹೇಳಿಕೊಟ್ಟ ಮಹಾದೇವಪ್ಪ ಮೇಷ್ಟು..


ಎಲ್ಲವೂ ನೆನಪಾಗುತ್ತದೆ. ಇದು ಯಾಕೆ ನನಗೆ ಗೊತ್ತಿಲ್ಲ. ಇದು ನನ್ನೊಬ್ಬನಿಗೆ ಅಷ್ಟೇ ಆಗುತ್ತೊ, ಇಲ್ಲಾ ಎಲ್ಲರಿಗೂ ಅಥವಾ ಕೆಲವೊಬ್ಬರಿಗೆ ಅಷ್ಟೇ ಆಗುತ್ತಾ??
ಇದಕ್ಕೇನಾದರೂ ವೈಜ್ಞಾನಿಕ ಕಾರಣ ಏನಾದ್ರೂ ಇದೆಯಾ? ನಿಮಗೇನಾದ್ರೂ ಈ ಬಗ್ಗೆ ಗೊತ್ತಿದೆಯಾ?

ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಸ್ವಾಗತ..

-ಇಂತಿ,
ಯಳವತ್ತಿ

14 comments:

ಮನಸು said...

kaarana gottillappa mostly savinenapu irabeku adakke hahaha

ಸೀತಾರಾಮ. ಕೆ. / SITARAM.K said...

ಮನಸ್ಸಲ್ಲಿ ಅಚ್ಚೊತ್ತಿದ ಬಾಲ್ಯದ ನೆನಪುಗಳು ಜ್ವರದ ತಾಪದಲ್ಲಿ ಹೊರಬರುವದು ಸಹಜ ಪ್ರಕ್ರಿಯೆ. ತಮ್ಮದು ಅಷ್ಟೆ!

ತಮ್ಮ ಘಟನೆಗಳು ಬೇರೆಯವರಿಗೆ ಬರೋಲ್ಲ!!! ಆದರೆ ಅವರ ಆಪ್ತವಾದ ಬಾಲ್ಯದ ಘಟನೆ ಅವರಿಗೆ ಬರಬಹುದು!

-ಕತ್ತಲೆ ಮನೆ. said...

ಶಿವಶಂಕರ ವಿಷ್ಣು ಯಳವತ್ತಿ ,

ನನ್ಗತ್ತು ಗೊತ್ತಿಲ್ಲ...

- ಕತ್ತಲೆ ಮನೆ... said...
This comment has been removed by the author.
ಮನದಾಳದಿಂದ............ said...

ನನಗೂ ಈ ತರದ ಅನುಭವಗಲಾಗುತ್ತವೆ, ಆದರೆ ಸವಿನೆನಪುಗಳಲ್! ಭಯಾನಕ ಕನಸುಗಳು!
ಯಾಕಂತ ಗೊತ್ತಿಲ್ಲ!

ವನಿತಾ / Vanitha said...

"ನನ್ನ ಬಾಲ್ಯದಲ್ಲಿ ನೋಡಿದ ಡಿ.ಡಿ.-1 ಚಾನೆಲ್, ಅದರಲ್ಲಿ ಪ್ರತಿ ಭಾನುವಾರ ಬರುತ್ತಿದ್ದ ಸಂಸ್ಕೃಂತ ವಾರ್ತೆ, (ಇತಿ ವಾರ್ತಾಃ ಅನ್ನೋದು ಬಿಟ್ಟರೆ ಏನೂ ಅರ್ಥವಾಗದಿದ್ದರೂ ಕಣ್ ಕಣ್ ಬಿಟ್ಟು ಕೊಂಡು ನೋಡಿದ್ದು,) ಮೂಕಿ ವಾರ್ತೆ.." - Super..ಮಧ್ಯಾನ್ನ ೧೨ ಗಂಟೆ ಮೇಲೆ ಬರುತ್ತಿದ್ದ ನೆನಪು:))..get well soon..

ಸುಬ್ರಮಣ್ಯ ಮಾಚಿಕೊಪ್ಪ said...

:-)

ವಿ.ಆರ್.ಭಟ್ said...

:)

ದಿನಕರ ಮೊಗೇರ.. said...

ellarigoo aagalla.... some special janarige maatra aagattante...

Latha said...

Yalavatti avre..nangu anta time nalli intadde nenapugalu i mean rewind galu..ade chandrakanta dharavahi ya krroor singhna ''yakku pithaji'', surag serial na inspctr bharat, nammoorina dodda hunasemarada hunasekayi matte adu bhutha pretha galige guest house agiro interesting kathegalu, aache eeeche maneyavra beli-jagala, ajja preethiyinda tinnisuttidda shira, mangaluru buns, sabbassige idli, gadde topinalli meenu hididadu, aa bhyankara kere haavu, dharmandhara hodedaatadalli talegalu uruliddu, jeeva ulisikollalu adeshto janru ratro ratri mane mata maari ooru bittu odi hogiddu...
sanjeyaguttiddante kaanuva light house na flash belaku matte samudrada borgaretha...hosadagi try maadidda baadusha reciepe yu kettu hogi avantara maadiddu, ade white uniform with red ribbons, aa ratrigalli adbhutavagi kanuttidda bana chandra...nanna prathiyondu coluorful rangoli ya rekhegalu... kuda hage hageye rewind aagutte..adu baalyadde agirbeku antenu ilweno avakke...teera ittichinavarege anno tanaka ella nenapugalu...(adu priyavo, apriyavo devre balla..)once more kelo taradalli play aguttave...
idelladdakku nanaganiso haage, namma manassina adyaavudo mooleyalli naanenaadru ee prapanchadalli illavaagibitre anno samshaya ve idellavannu rewind maadisutteno...adanna saavina bhaya anta exact aagi helokaagalla.. deha roga stitiyalliddaga manasu durbalavagattala..adella, nodu ee baduku illiyavarege heegittu, idellavanna anubhavisida ee jeevakke mattu jeevanakke mattu adeshto surprise galive...idalla badukina kone...ennuva hopes tumboke, haage matte jeevisuva hurupu, chaitanya kododakke...ee namma(memory card enno chip ennabahude:)) manasse maadikollo treatment..adu!!!...

Latha said...
This comment has been removed by the author.
ಶಿವಶಂಕರ ವಿಷ್ಣು ಯಳವತ್ತಿ said...

@ ಕಾಮೆಂಟಿರಗರಿಗೆ ನಿಮ್ಮ ಅಭಿಪ್ರಾಯವನ್ನು ನೀಡಿದ್ದಕ್ಕೆ ಧನ್ಯವಾದಗಳು..

@ ಲತಾ ಮೇಡಮ್..

ನಿಮ್ಮ ಅನುಭವಗಳು ಮತ್ತು ನನ್ನ ಅನುಭವಗಳು ಒಂದೇ ಇವೆ.. ಈ ಪ್ರಶ್ನೆಗೆ ಉತ್ತರ ಗೊತ್ತಾಗದೆ ನಾನು ಕಾರಣ ಹುಡುಕಿ, ಸಾಕಾಗಿ ಕೊನೆಗೆ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೇನೆ
ಹೌದು.ನೀವು ಹೇಳಿದ ಹಾಗೆ, ಸಾವು ಹತ್ತಿರ ಬಂದಾಗ ನಮ್ಮ ಮನಸ್ಸು ಹಳೇ ಘಟನೆಗಳನ್ನೆಲ್ಲಾ ರಿವೈಂಡ್ ಮಾಡುತ್ತಂತೆ.ಇದೇ ಲೇಖನವನ್ನು ನಾನು ಸಂಪದದಲ್ಲಿ ಹಾಕಿದ್ದೆ.. ಅದಕ್ಕೆ naasomeswara ಅನ್ನೋ ಡಾಕ್ಟ್ರು ಕಾರಣಗಳನ್ನು ಹೇಳಿದ್ದಾರೆ..ಅದನ್ನೇ ಭಟ್ಟಿ ಇಳಿಸುತ್ತಿದ್ದೇನೆ.. ಈ ಕಾಮೆಂಟಿನಲ್ಲಿ ಅಕ್ಷರಗಳು ಸಾಕಾಗದೇ ಇದ್ದುದರಿಂದ ಮುಂದಿನ ಕಮೆಂಟಿನಲ್ಲಿ ನೋಡಿ..

ಶಿವಶಂಕರ ವಿಷ್ಣು ಯಳವತ್ತಿ said...

ಡಾಕ್ಟ್ರು ಹೇಳಿದ್ದು..

•ಮನುಷ್ಯನು ಉಷ್ಣರಕ್ತದ ಜೀವಿ. ಅಂದರೆ ಪರಿಸರದ ಉಷ್ಣತೆ ಏನೇ ಇರಲಿ, ಈತನ ದೇಹದ ಉಷ್ಣತೆಯು ಮಾತ್ರ ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿರುತ್ತದೆ. ಇರಬೇಕು. ಇರುವ ಹಾಗೆ ಮಿದುಳಿನ ’ಹೈಪೋಥಲಾಮಸ್’ (ಅಧೋಶಿರಕುಳಿ) ನಲ್ಲಿರುವ ’ಉಷ್ಣ ನಿಯಂತ್ರಣಾ ಕೇಂದ್ರ’ (ಥರ್ಮೋರೆಗ್ಯುಲೇಶನ್ ಸೆಂಟರ್) ನೋಡಿಕೊಳ್ಳುತ್ತದೆ.
•ಜ್ವರ ಎನ್ನುವುದು ನಮ್ಮ ದೇಹ ತೋರುವ ಒಂದು ರೋಗರಕ್ಷಣಾ ವಿಧಾನ. ಜ್ವರಕಾರಕವು ಪರಿಸರದಿಂದ ಬರಬಹುದು ಅಥವ ದೇಹದೊಳಗೆಯೇ ಹುಟ್ಟಬಹುದು.
•ಜ್ವರ ಬಂದಾಗ ದೇಹದ ಉಷ್ಣವು ಸಹಜವ್ಯಾಪ್ತಿಯನ್ನು ಮೀರುತ್ತದೆ. ಏರಿದ ಉಷ್ಣತೆಯು ಜ್ವರಕಾರಕ ನಿಯಂತ್ರಣದಲ್ಲಿ ನೆರವಾಗುತ್ತದೆ. ಇದು ಅಗತ್ಯ. ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ಅನಗತ್ಯ. ಆದರೆ ಮಿತಿ ಮೀರಿದ ಜ್ವರ ಹಾನಿಕಾರಿ. ಹಾಗಾಗಿ ಅಧಿಕ ಜ್ವರವನ್ನು ಔಷಧ ಹಾಗೂ ಇತರ ವಿಧಾನಗಳಿಂದ ನಿಯಂತ್ರಿಸಬೇಕು.
•’ಮನಸ್ಸು” ಎನ್ನುವುದು ಇರುವ ಕಾರಣ ನಾವು ಮನುಷ್ಯರು. ಮನಸ್ಸಿನಲ್ಲಿ ಎರಡು ಬಗೆ. ಹೊರ ಮನಸ್ಸು ಮತ್ತು ಒಳಮನಸ್ಸು. ಒಳಮನಸ್ಸು ಎನ್ನುವುದು ಶಾಲಾಮಕ್ಕಳ ಚೀಲದ ಹಾಗೆ. “ಉಪಯುಕ್ತ-ಅನುಪಯುಕ್ತ” ನೆನಪುಗಳ ಆಗರ.
•ನೆನಪುಗಳಲ್ಲಿ ಅಲ್ಪಕಾಲಿಕ ನೆನಪುಗಳು ಹಾಗೂ ದೀರ್ಘಕಾಲಿಕ ನೆನಪುಗಳಿವೆ. ಯಾವ ಯಾವ ನೆನಪುಗಳು ದೀರ್ಘಕಾಲಿಕ ನೆನಪುಗಳಾಗಿ ಉಳಿಯಬೇಕು ಎನ್ನುವುದನ್ನು ಒಳಮನಸ್ಸು ನಿರ್ಧರಿಸುತ್ತದೆ. ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ.
•ಮನಸ್ಸು ತನಗೆ ಅಗತ್ಯವಾಗಿರುವುದನ್ನು ಮಾಹಿತಿಯನ್ನು ದೀರ್ಘಕಾಲಿಕ ನೆನಪಾಗಿ ಪರಿವರ್ತಿಸಿ ಒಳಮನಸ್ಸಿನಲ್ಲಿಟ್ಟುಕೊಳ್ಳುತ್ತದೆ. ಸೈಕಲ್ ಹೊಡೆಯುವುದು, ಈಜುವುದು ಇತ್ಯಾದಿಯನ್ನು ಒಂದು ಸಲ ಕಲಿತರೆ ಸಾಕು, ಅದು ದೀರ್ಘಕಾಲಿಕ ನೆನಪಾಗಿ ಪರಿವರ್ತನೆಯಾಗುತ್ತದೆ. ಓದಿನಲ್ಲಿ ಆಸಕ್ತಿ ಇಲ್ಲದವನ್ನು ಹತ್ತರ ಮಗ್ಗಿಯನ್ನೂ ನೆನಪಿನಲ್ಲಿಡಲಾರ. ಓದಿನಲ್ಲಿ ಆಸಕ್ತಿಯಿದ್ದವನು ೧೩ ರ ಮಗ್ಗಿಯನ್ನೂ ಸುಲುಭವಾಗಿ ನೆನಪಿನಲ್ಲಿಡಬಲ್ಲ. – ಮನಸ್ಸು ತನ್ನ ಬದುಕಿಗೆ ಅಗತ್ಯವಾದ ಮಾಹಿತಿಯನ್ನು ದೀರ್ಘಕಾಲಿಕ ನೆನಪಾಗಿ ಇಟ್ಟುಕೊಳ್ಳುತ್ತದೆ ಎಂದು ಹೇಳಬಹುದು. ಇದು ವೈಯುಕ್ತಿಕವಾದದ್ದು. ಒಬ್ಬರಿಗೆ ಮುಖ್ಯವಾದದ್ದು ಮತ್ತೊಬ್ಬರಿಗೆ ಗೌಣವಾಗಿರುತ್ತದೆ ಎನ್ನುವುದು ವಿಚಿತ್ರ ಆದರೂ ಸತ್ಯ.
•ಮರೆವು ಎನ್ನುವುದು ಅಲ್ಪಕಾಲಿಕ ನೆನಪುಗಳಲ್ಲಿ ಹೆಚ್ಚು. ೬೦ ರ ಅರಳು ಮರಳಿನ ಅಜ್ಜ ಬೆಳಿಗ್ಗೆ ಉಪಾಹಾರಕ್ಕೆ ಏನು ತಿಂದ ಎನ್ನುವುದನ್ನು ಮರೆಯುತ್ತಾನೆ ಆದರೆ ತಾನು ಸೈಕಲ್ ಕಲಿಯಲು ಹೋಗಿ ಕೆಳಕ್ಕೆ ಬಿದ್ದದ್ದು, ಈಜುವುದನ್ನು ಕಲಿಯುವಾಗ ಮುಳುಗಿ ಸತ್ತೇ ಹೋದೆ ಎಂದು ಅನಿಸಿದ್ದು, ಮೊದಲ ಬಾರಿ ಹುಡುಗಿಯೋರ್ವಳು ಆಕರ್ಷಿಸಿದ್ದು, ಮೊದಲ ಮುತ್ತನ್ನು ನೀಡಿದ್ದು, ಮದುವೆಯಾದದ್ದು, ಪ್ರಥಮ ರಾತ್ರಿ ಹೀಗೆ…. ಇಂತಹ ದೀರ್ಘಕಾಲಿಕ ನೆನಪುಗಳನ್ನು ಸದಾ ಕಾಲಕ್ಕೂ ಸ್ಮರಿಸುತ್ತಾನೆ. ಅವನ್ನು ಮರೆಯಲಾರ! “ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಈಗನ ಕಾಲದಲ್ಲಿ ಎಲ್ಲ ಕೆಟ್ಟು ಹೋಗಿದೆ…” ಎಂದು ಹಿರಿಯರು ಮಾತನಾಡುವುದನ್ನು ನಾವು ಕೇಳಬಹುದು.
•ದೀರ್ಘಕಾಲಿಕ ನೆನಪುಗಳನ್ನು ಯಾರಾದರು ಕೆದಕಿದಾಗ ಮಾತ್ರ ಅವು ಒಳಮನಸ್ಸಿನಿಂದ ಹೊರಬರುತ್ತವೆ. ಇಲ್ಲದಿದ್ದರೆ ಅವು ಒಳಮನಸ್ಸಿನಲ್ಲಿಯೇ ಸುಪ್ತವಾಗಿ ಇರುತ್ತವೆ. ಅವು ಹೊರಬರದಂತೆ ತಡೆಯುವ ಒಂದು “ಮುಚ್ಚಳ” ಇರುತ್ತದೆ ಎನ್ನಬಹುದು.
•ಜ್ವರ ಬಂದಾಗ ಒಳಮನಸ್ಸಿನಲ್ಲಿ ಇರುವ ನೆನಪುಗಳು ಹೊರಬಾರದಂತೆ ತಡೆ ಹಿಡಿದಿರುವ ’ಮುಚ್ಚಳ’ ತೆರೆದುಕೊಳ್ಳುತ್ತದೆ. ದೀರ್ಘಕಾಲಿಕ ನೆನಪುಗಳು ಒಂದೊಂದಾಗಿ ಹೊರಬರಲಾರಂಭಿಸುತ್ತವೆ.
•ಜ್ವರವು ತೀರಾ ಹೆಚ್ಚಿಲ್ಲದಿದ್ದಾಗ ಹಠಾತ್ತಾಗಿ ವಿನಾಕಾರಣ ನೆನಪುಗಳು ದಾಳಿಯಿಡುತ್ತವೆ. ಅವನ್ನು ವ್ಯಕ್ತಿಯು ವ್ಯಕ್ತಪಡಿಸಬಹುದು ಅಥವ ತನ್ನ ಮನಸ್ಸಿನಲ್ಲಿಯೇ ಮೆಲುಕು ಹಾಕಬಹುದು. ಜ್ವರ ತೀವ್ರವಾಗಿದ್ದಾಗ, ವ್ಯಕ್ತಿಯು ಕನವರಿಸುತ್ತಾನೆ. ಆಗ ಒಳಮನಸ್ಸಿನಲ್ಲಿನ ನೆನಪುಗಳು ಹೊರಬರುತ್ತವೆ. ವ್ಯಕ್ತಿಯು ತನಗೆ ಅರಿವಿಲ್ಲದಂತೆಯೇ ಬಡಬಡಿಸುತ್ತಾನೆ. ಆ ಬಡಬಡಿಕೆ ಅರ್ಥವತ್ತಾಗಿರಬಹುದು ಅಥವ ಗೊಂದಲ ಪೂರಿತವಾಗಿ ಹಲವು ವಿಚಾರಗಳ ಕಲಸು ಮೇಲೋಗರವಾಗಿರಬಹುದು.
•ಜ್ವರ ಕಡಿಮೆಯಾದ ನಂತರ ’ಮುಚ್ಚಳ’ ಮುಚ್ಚಿಕೊಳ್ಳುತ್ತದೆ. ದೀರ್ಘ ಕಾಲಿಕ ನೆನಪುಗಳು ಒಳಮನಸ್ಸಿನಲ್ಲಿ ಅಡಗುತ್ತವೆ.
•ಒಂದು ವಿಚಿತ್ರವನ್ನು ನಾನು ಹಲವು ಪ್ರಕರಣಗಳಲ್ಲಿ ಗಮನಿಸಿದ್ದೇನೆ. ವ್ಯಕ್ತಿಯು ಸಾವಿನ ಹೊಸ್ತಿಲಿನಲ್ಲಿದ್ದಾಗ, ಸಾವು ಇನ್ನೇನು ಒಂದೆರಡು ದಿನಗಳಲ್ಲಿ ಸಂಭವಿಸಲಿದೆ ಎನ್ನುವಾಗ ಹೀಗೆ ’ಮುಚ್ಚಳ” ತೆರೆದುಕೊಳ್ಳುತ್ತದೆ. ವ್ಯಕ್ತಿಯು ತನ್ನ ಒಳಮನಸ್ಸಿನಲ್ಲಿರುವ ಎಲ್ಲ ದೀರ್ಘಕಾಲಿಕ ನೆನಪುಗಳನ್ನು ಹೊರಹಾಕಲಾರಂಭಿಸುತ್ತಾನೆ. ತಾನೇನು ಮಾತನಾಡುತ್ತಿದ್ದೇನೆ ಎಂಬ ಪರಿವೆ ಆತನಿಗಿರುವುದಿಲ್ಲ. ಯಾರಾದರು ಮಾತನಾಡದಂತೆ ತಡೆಯಲೆತ್ನಿಸಿದರೆ, ಆತ ನಿಲ್ಲಿಸುವುದಿಲ್ಲ. ಎಲ್ಲ ಹಳೆಯ ನೆನಪುಗಳು. ಆತನ ಲೆಕ್ಕಾಚಾರದಲ್ಲಿ ಉಪಯುಕ್ತ ನೆನಪುಗಳು. ನಿರಂತರವಾಗಿ ಹೊರಹೊಮ್ಮುತ್ತಿರುತ್ತವೆ.

ನಮ್ಮ ಮನಸ್ಸಿನ ಬಗ್ಗೆ ಪರಿಪೂರ್ಣವಾಗಿ ಅರಿಯಲು ಇನ್ನೂ ನಮಗೆ ಸಾಧ್ಯವಾಗಿಲ್ಲ. ಮಿದುಳಿನ ಯಾವ ಭಾಗದಲ್ಲಿ ಹೊರಮನಸ್ಸಿಗೆ, ಎಲ್ಲಿ ಒಳಮನಸ್ಸಿದೆ ಎನ್ನುವುದು ನಮಗೆ ತಿಳಿದಿಲ್ಲ. ’ಮುಚ್ಚಳ’ ಎಲ್ಲಿದೆ, ಅದನ್ನು ಹಾಕುವ ಬಗೆ ಹೇಗೆ, ತೆರೆಯುವ ಬಗೆ ಹೇಗೆ ನಮಗೆ ಅರ್ಥವಾಗಿಲ್ಲ. ಈ ಮುಚ್ಚಳವನ್ನು ಯಾರು/ಯಾವುದು ಹಾಕಿ-ತೆಗೆಯುತ್ತದೆ ಎನ್ನುವುದು ತಿಳಿದಿಲ್ಲ. – ಇವೆಲ್ಲವೂ ಮಿದುಳಿನ ಪ್ರಧಾನ ಮಸ್ತಿಷ್ಕದಲ್ಲಿ ನಡೆಯುತ್ತದೆ ಎನ್ನುವುದರ ಬಗ್ಗೆ ಅನುಮಾನವಿಲ್ಲ. ಆದರೆ ಪ್ರಧಾನ ಮಸ್ತಿಷ್ಕದಲ್ಲಿ ಎಲ್ಲಿ???

ಜ್ವರ ಮತ್ತು ಸಾವು ಮಾತ್ರ ಈ ಮುಚ್ಚಳವನ್ನು ತೆಗೆಯಬಲ್ಲವು ಎಂಬುದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಯಳವತ್ತಿಯವರೆ! ನಿಮ್ಮ ಒಳಮನಸ್ಸಿನಲ್ಲಿ ಶೇಖರವಾಗಿದ್ದ ಒಂದಷ್ಟು ಮಾಹಿತಿಗಳನ್ನು ನಮ್ಮೊಡನೆ ಹಂಚಿಕೊಂಡಿರಿ. ಧನ್ಯವಾದಗಳು! :)

-ನಾಸೋ

ಶಿವಶಂಕರ ವಿಷ್ಣು ಯಳವತ್ತಿ said...

•ಜ್ವರ ಕಡಿಮೆಯಾದ ನಂತರ ’ಮುಚ್ಚಳ’ ಮುಚ್ಚಿಕೊಳ್ಳುತ್ತದೆ. ದೀರ್ಘ ಕಾಲಿಕ ನೆನಪುಗಳು ಒಳಮನಸ್ಸಿನಲ್ಲಿ ಅಡಗುತ್ತವೆ.
•ಒಂದು ವಿಚಿತ್ರವನ್ನು ನಾನು ಹಲವು ಪ್ರಕರಣಗಳಲ್ಲಿ ಗಮನಿಸಿದ್ದೇನೆ. ವ್ಯಕ್ತಿಯು ಸಾವಿನ ಹೊಸ್ತಿಲಿನಲ್ಲಿದ್ದಾಗ, ಸಾವು ಇನ್ನೇನು ಒಂದೆರಡು ದಿನಗಳಲ್ಲಿ ಸಂಭವಿಸಲಿದೆ ಎನ್ನುವಾಗ ಹೀಗೆ ’ಮುಚ್ಚಳ” ತೆರೆದುಕೊಳ್ಳುತ್ತದೆ. ವ್ಯಕ್ತಿಯು ತನ್ನ ಒಳಮನಸ್ಸಿನಲ್ಲಿರುವ ಎಲ್ಲ ದೀರ್ಘಕಾಲಿಕ ನೆನಪುಗಳನ್ನು ಹೊರಹಾಕಲಾರಂಭಿಸುತ್ತಾನೆ. ತಾನೇನು ಮಾತನಾಡುತ್ತಿದ್ದೇನೆ ಎಂಬ ಪರಿವೆ ಆತನಿಗಿರುವುದಿಲ್ಲ. ಯಾರಾದರು ಮಾತನಾಡದಂತೆ ತಡೆಯಲೆತ್ನಿಸಿದರೆ, ಆತ ನಿಲ್ಲಿಸುವುದಿಲ್ಲ. ಎಲ್ಲ ಹಳೆಯ ನೆನಪುಗಳು. ಆತನ ಲೆಕ್ಕಾಚಾರದಲ್ಲಿ ಉಪಯುಕ್ತ ನೆನಪುಗಳು. ನಿರಂತರವಾಗಿ ಹೊರಹೊಮ್ಮುತ್ತಿರುತ್ತವೆ.

ನಮ್ಮ ಮನಸ್ಸಿನ ಬಗ್ಗೆ ಪರಿಪೂರ್ಣವಾಗಿ ಅರಿಯಲು ಇನ್ನೂ ನಮಗೆ ಸಾಧ್ಯವಾಗಿಲ್ಲ. ಮಿದುಳಿನ ಯಾವ ಭಾಗದಲ್ಲಿ ಹೊರಮನಸ್ಸಿಗೆ, ಎಲ್ಲಿ ಒಳಮನಸ್ಸಿದೆ ಎನ್ನುವುದು ನಮಗೆ ತಿಳಿದಿಲ್ಲ. ’ಮುಚ್ಚಳ’ ಎಲ್ಲಿದೆ, ಅದನ್ನು ಹಾಕುವ ಬಗೆ ಹೇಗೆ, ತೆರೆಯುವ ಬಗೆ ಹೇಗೆ ನಮಗೆ ಅರ್ಥವಾಗಿಲ್ಲ. ಈ ಮುಚ್ಚಳವನ್ನು ಯಾರು/ಯಾವುದು ಹಾಕಿ-ತೆಗೆಯುತ್ತದೆ ಎನ್ನುವುದು ತಿಳಿದಿಲ್ಲ. – ಇವೆಲ್ಲವೂ ಮಿದುಳಿನ ಪ್ರಧಾನ ಮಸ್ತಿಷ್ಕದಲ್ಲಿ ನಡೆಯುತ್ತದೆ ಎನ್ನುವುದರ ಬಗ್ಗೆ ಅನುಮಾನವಿಲ್ಲ. ಆದರೆ ಪ್ರಧಾನ ಮಸ್ತಿಷ್ಕದಲ್ಲಿ ಎಲ್ಲಿ???

ಜ್ವರ ಮತ್ತು ಸಾವು ಮಾತ್ರ ಈ ಮುಚ್ಚಳವನ್ನು ತೆಗೆಯಬಲ್ಲವು ಎಂಬುದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಯಳವತ್ತಿಯವರೆ! ನಿಮ್ಮ ಒಳಮನಸ್ಸಿನಲ್ಲಿ ಶೇಖರವಾಗಿದ್ದ ಒಂದಷ್ಟು ಮಾಹಿತಿಗಳನ್ನು ನಮ್ಮೊಡನೆ ಹಂಚಿಕೊಂಡಿರಿ. ಧನ್ಯವಾದಗಳು! :)

-ನಾಸೋ