ಖಾಯಂ ಓದುಗರು..(ನೀವೂ ಸೇರಬಹುದು)

30 June 2010

ರೂಂ ಮೇಟ್ಸ್ ಶ್ರೀಮಂತರಾಗಿದ್ದು..

ಮೊನ್ನೆ ಸಿಕ್ಕಿದವರಿಗೆ ಸೀರುಂಡ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳನ್ನು ನೋಡಿ ಸಂತೋಷ ಆಯ್ತು.. ಮತ್ತೆ ಹಳೇ ದಿನಗಳ ನೆನಪು ಆಗುವಾಗ ಒಂದು ಚಿಕ್ಕ ಘಟನೆ ನೆನಪಾಯಿತು..

ನಂ ರೂಮಲ್ಲಿ ಅವತ್ತು ಹೊಸ ವರ್ಷದ ಪಾರ್ಟಿ ಮಾಡಿದ್ವಿ. ಪಾರ್ಟಿ ಅಂದ್ರೆ, ಸುಮ್ನೇನಾ?? ನಾವೆಲ್ಲರೂ (ಶಿವಕುಮಾರ್, ಅಶ್ವಿನ್, ರಮೇಶ, ರಂಗನಾಥ, ಗುಂಡ ಮತ್ತು ನಾನು) ಸೇರಿ ದುಡ್ಡು ಹಾಕಿ, ಹೊಸ ವರ್ಷದ ಕೇಕು, ಸುಮಾರು ಹತ್ತು ಬಿಯರ್ (ವಿ.ಸೂ.:- ಬಿಯರ್ ಮಾಡಲ್ ಯಾವ್ದು ಅನ್ನೋದನ್ನು ಓದುಗರ ವಿನಂತಿಯ ಮೇರೆಗೆ ಹೇಳಲಾಗುವುದು. ಅಥವಾ ಯಾವುದೇ ಬಿಯರ್ ಕಂಪನಿಯವರು ದುಡ್ಡು ಕೊಟ್ಟು ತಮ್ಮ ಹೆಸರು ಹಾಕಿಸಿಕೊಳ್ಳಬಹುದು), ಎರಡು ಲೀಟರ್ ನ 3 ಬಿಸ್ ಲೆರಿ ನೀರಿನ ಬಾಟಲ್.. 3 ಕೆ.ಜಿ. ಚಿಕನ್, ಮುದ್ದೆ, ಚಪಾತಿ, ಕಬಾಬು, ಒಂದಿಷ್ಟು ಸೌತೇಕಾಯಿ, ಈರುಳ್ಳಿ, ಇತ್ಯಾದಿ ಇತ್ಯಾದಿ ಅರೇಂಜ್ ಮಾಡಿಕೊಂಡ್ವಿ..

ರಾತ್ರಿ ಹನ್ನೆರಡು ಗಂಟೆ ಆದ ಕೂಡಲೇ ಎಲ್ಲರೂ ಕೇಕ್ ಕಟ್ ಮಾಡಿ, ಎಣ್ಣೆ ಪಾರ್ಟಿ ಮಾಡಿದ್ವಿ.. ಎಲ್ಲಾ ಮುಗಿದು ನಾವು ಮಲ್ಕೊಂಡಾಗ ಬೆಳಿಗ್ಗೆ ನಾಲ್ಕು ಗಂಟೆ ಆಗಿತ್ತು.. ಬೆಳಿಗ್ಗೆ ಸುಮಾರು ಒಂಭತ್ತೂವರೆಗೆ ನನಗೆ ಮತ್ತು ಶಿವಕುಮಾರ್ ಗೆ ಎಚ್ಚರ ಆಯ್ತು.. ಎದ್ದ ಕೂಡಲೇ ಮುಖ ತೊಳೆಯಬೇಕಲ್ಲಾ... ಶಿವಕುಮಾರ್ ನಾನು ಹುಡುಕಿದ್ವಿ.. ಮನೇಲಿ ಸ್ನಾನ ಮಾಡೋಕೆ ಒಂದು ತೊಟ್ಟು ನೀರು ಇರಲಿಲ್ಲ. ಸಿಂಟೆಕ್ಸ್ ಪೂರ್ತಿ ಖಾಲಿ ಆಗಿತ್ತು..

ಮತ್ತೆ ಮನೆಯೆಲ್ಲಾ ಜಾಲಾಡಿದೆವು.. ನಾವು ತಂದ 3 ಬಿಸ್ಲೆರಿ ನೀರಿನ ಬಾಟಲಿ ಪೈಕಿ ಒಂದರಲ್ಲಿ ಮಾತ್ರ ಒಂದು ಲೀಟರ್ ನೀರಿತ್ತು.. ಬೇರೆ ಯಾರೂ ಎದ್ದಿರಲಿಲ್ಲವಾದ್ದರಿಂದ, ನಾನು ಮತ್ತು ಶಿವಕುಮಾರ್ ಒಪ್ಪಂದ ಮಾಡಿಕೊಂಡು, ಆ ಒಂದು ಲೀಟರ್ ನಲ್ಲಿ ಇಬ್ಬರೂ ಮುಖ ತೊಳ್ಕೊಂಡ್ವಿ.. ಆಗ ಅಶ್ವಿನ್ ಎದ್ದು ಬಂದ...ಶಿವಕುಮಾರ್:- ನೋಡು ಅಶ್ವಿನ್.. ನಾವೆಷ್ಟು ಶ್ರೀಮಂತರಾಗಿದೀವಿ.. ಹದಿನಾರು ರೂಪಾಯಿ ಲೀಟರ್ ನೀರಿನಲ್ಲಿ ಮುಖ ತೊಳ್ಕೊಂಡಿದೀವಿ.......


ಇದನ್ನು ಕೇಳಿ ನಾನೂ ಸಹ ನೀರು ತಗೊಂಡು ಬರ್ತೀನಿ ಅಂತಾ ರೂಮಿನೊಳಗೆ ಹೋದ.. ಪಾಪ ಅವನಿಗೇನು ಗೊತ್ತಿತ್ತು.. ಇದ್ದ ಅಲ್ಪ ಸ್ವಲ್ಪ ನೀರನ್ನೂ ನಾವಿಬ್ಬರೂ ಮೊದಲೇ ಖಾಲಿ ಮಾಡಿದ್ವಿ ಅಂತಾ..

ಅವನು ರೂಮೆಲ್ಲಾ ಹುಡುಕಿ ಬಂದ.. ನೀರು ಸಿಗದೇ ಪೆಚ್ಚು ಮೊರೆ ಹಾಕಿಕೊಂಡ ಅಶ್ವಿನ್ ನ ಮುಖ ನೋಡಿ ನಾವಿಬ್ಬರೂ ಗೇಲಿ ಮಾಡಿ ನಕ್ಕೆವು.. ಅಶ್ವಿನ್ ಗೆ ನಮ್ಮ ನಗು ನೋಡಿ, ಹೊಟ್ಟೆ ಉರಿದು ಹೋಯ್ತು.....


ಮತ್ತೆ ರೂಮಿನೊಳಗೆ ಹೋದವನೇ.. ಮಿಕ್ಕಿದ್ದ ಒಂದು ಬಿಯರ್ ತಗೊಂಡು ಬಂದ..

ಬೇಜಾರ್ ಮಾಡ್ಕೊಂಡು, ಬಿಯರ್ ಕುಡಿದು ಖಾಲಿ ಮಾಡ್ತಾನೆ ಅನ್ಕೊಂಡ್ವಿ...

ಅವನು ಹಾಗೆ ಮಾಡದೇ, ನಮ್ ಕಡೆ ನೋಡ್ತಾ ಹೇಳಿದ..

"ಯಳವತ್ತಿ.. ಶಿವಕುಮಾರ್... ನೀವು ಬರೀ ಹದ್ನಾರ್ ರೂಪಾಯ್ ಲೀಟರ್ ನೀರಿನಲ್ಲಿ ಮುಖ ತೊಳ್ಕೊಂಡ್ತಾ??
ನೋಡಿಲ್ಲಿ.. ನಾನು ಅರವತ್ತು ರೂಪಾಯಿ (ಒಂದಾನೊಂದು ಕಾಲದಲ್ಲಿ ಅರವತ್ತು ರೂಪಾಯಿ ಇತ್ತು.. ಇವಾಗ ಜಾಸ್ತಿ ಆಗಿದೆಯಂತೆ.. ಯಾಕೆಂದರೆ, ನಾನು ಕುಡಿಯೋದು ಬಿಟ್ಟಿದ್ದೀನಿ... ಮೋಸ್ಟ್ಲಿ ಇದು 8 ನೇ ಬಾರಿ ಬಿಡ್ತಿರೋದು ಅನ್ಸುತ್ತೆ...) ಬಿಯರ್ ನಿಂದ ಮುಖ ತೊಳ್ಕೊತ್ತೀನಿ ಅಂದವನೇ.. ಬಿಯರ್ ನಿಂದ ಮುಖ ತೊಳ್ಕೊಂಡು.. ಅರ್ಧ ಬಿಯರ್ ನ ಖಾಲಿ ಮಾಡಿದ....

ವರ್ಷದ ಮೊದಲನೇ ದಿನವೇ ನಾವು ಶ್ರೀಮಂತರಾದ್ವಿ...


ಹಳೆಯ ಲೇಖನಗಳನ್ನು ಓದಿ, ಕಾಮೆಂಟ್ ಬರೆಯುವುದನ್ನು ಮರೆಯದಿರಿ..

ಇಂತಿ,.

ಯಳವತ್ತಿ

13 comments:

ಸೀತಾರಾಮ. ಕೆ. / SITARAM.K said...

!!@@##$$%%^^&&**(())>><<??

sunaath said...

ಇದೇ ರೀತಿ ನೀವು ಹೆಚ್ಚೆಚ್ಚು ಶ್ರೀಮಂತರಾಗುತ್ತಾ ಇರಿ ಎಂದು ಹಾರೈಸುತ್ತೇನೆ.

ಮನದಾಳದಿಂದ............ said...

ಶ್ರೀಮಂತರಾದ ನೀವು ಈಗ ಯಾವುದರಲ್ಲಿ ಮುಖ ತೊಳೆದುಕೊಳ್ಳುತ್ತೀರಾ?
ಹ್ಹ ಹ್ಹ ಹ್ಹಾ...........
ಚೆನ್ನಾಗಿದೆ.

ಶಿವಪ್ರಕಾಶ್ said...

beer ninda mukha toleyodara badalu snanane maadbekittu... :)

ಶಿವಶಂಕರ ವಿಷ್ಣು ಯಳವತ್ತಿ said...

@ ಸೀತಾರಾಮ. ಕೆ. / SITARAM.K


Ee article nimgu artha agilla ansutte alva sir?

ಶಿವಶಂಕರ ವಿಷ್ಣು ಯಳವತ್ತಿ said...

@ sunaath sir

thanQ sir.. heege sumne thamashege madtha idvi aste.

ಶಿವಶಂಕರ ವಿಷ್ಣು ಯಳವತ್ತಿ said...

@ ಮನದಾಳದಿಂದ

ha ha.. ivaga naaavu badavaru..

aa kshanakke aste shreemantharagidvi..

ಶಿವಶಂಕರ ವಿಷ್ಣು ಯಳವತ್ತಿ said...

@ ಶಿವಪ್ರಕಾಶ್

ondu bottle neerinalli mukha aste toleyoke aagiddu..

bangalore ge bandaga snana madodu hege antha eli kodu shivu.. pls...

ಬಾಲು said...

shrimantharige jayavagali. :)

ಸಾಗರದಾಚೆಯ ಇಂಚರ said...

sakat article sir

Basavaraj said...

ಬರೀ ಮುಖ ಯಾಕೆ ಪೂರ್ತಿ ಮೈ ತೊಳೆದುಕೋ ಅನ್ನಬೇಕಿತ್ತು ಬೀಯರ್ನಲ್ಲಿ ನಿಮ್ಮ ಸ್ನೇಹಿತನಿಗೆ ಇನ್ನು ಹೆಚ್ಚು ಸಿರಿವಂತನಾಗುತ್ತಿದ್ದ

ಜಲನಯನ said...

Elavatti, belageddu ee kelsa maadiddu jalamandalige gottadre kudukrike rattri kudidu mikkidralle mukha tolkolli andubitre..??? hahaha chennaagide...paradata neerillade

!! ಜ್ಞಾನಾರ್ಪಣಾಮಸ್ತು !! said...

ಶಿವಶಂಕರ ವಿಷ್ಣು ಯಳವತ್ತಿ ,
ಸಖತ್ತಾಗಿದೆ.....