ಖಾಯಂ ಓದುಗರು..(ನೀವೂ ಸೇರಬಹುದು)

21 June 2010

ಸಿಕ್ಕಿದೋರಿಗೆ ಸೀರುಂಡ...

ಬಹಳ ದಿನಗಳಾಗಿತ್ತು.. ಬ್ಲಾಗಿನಲ್ಲಿ ಏನೂ ಬರೆದಿರಲಿಲ್ಲ..

ಇವತ್ತು ನನ್ನ ಜೀವನದ ಒಂದು ಹಳೇ ಕಥೆಯನ್ನು ನಿಮ್ಮ ಮುಂದೆ ಇಡ್ತಿದೀನಿ.

ಇದು ಸುಮಾರು ನಾಲ್ಕು ವರ್ಷದ ಹಿಂದೆ ನಡೆದ ಘಟನೆ. ಅವಾಗ ನಾನು ಮಧುಗಿರಿಯಲ್ಲಿ ಒಂದು ಬಾಡಿಗೆ ರೂಂ ಮಾಡಿಕೊಂಡು ನನ್ನ ಫ್ರೆಂಡ್ಸ್ ಗಳ ಜೊತೆ ಇದ್ದೆ. ರೂಮಿನಲ್ಲಿ ನಾನು, ಶಿವಕುಮಾರ್, ಅಶ್ವಿನ್, ರಮೇಶ, ರಂಗನಾಥ ಮತ್ತು ಗುಂಡ ಇದ್ವಿ...

ನಮ್ಮ ರೂಮಿನಲ್ಲಿ ಒಂದು ನಿಯಮ ಮಾಡಿದ್ವಿ..(ಹಲವಾರು ಇವೆ..) ಐದು ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿಯವರೆಗೆ ನೋಟುಗಳು ಬಿದ್ದಿದ್ರೂ ನಾವ್ ಯಾರೂ ಮುಟ್ಟುತ್ತಿರಲಿಲ್ಲ. ಯಾರು ಇಟ್ಟಿರುತ್ತಾರೋ.. ಅವರೇ ಅದನ್ನು ತಗೋಬೇಕಿತ್ತು.. ಆದರೆ, ಯಾರದಾದ್ರೂ ಚಿಲ್ರೆ ಕಾಸು ಬಿದ್ದರೆ... ಯಾರು ಅದನ್ನು ಆಯ್ಕೋತಾರೋ ಅವರಿಗೇ ಅದು ದಕ್ಕುತ್ತಿತ್ತು.. ಸಿಕ್ಕಿದೋರಿಗೆ ಸೀರುಂಡ..ನಮ್ ರೂಮಲ್ಲಿದ್ದ ರಮೇಶ ಯಾವಾಗಲೂ ಪ್ಯಾಂಟ್ ಹಾಕ್ಕೊಂಡೇ ಮಲ್ಕೋತಿದ್ದ (ನಾವು ಪಂಚೆ/ನೈಟ್ ಪ್ಯಾಂಟ್ ಇತ್ಯಾದಿ ಹಾಕ್ಕೋತ್ತಿದ್ವಿ..).. ಬೆಳಿಗ್ಗೆ ಆಗೋವಷ್ಟರಲ್ಲಿ ಅವನ ಪಕ್ಕದಲ್ಲಿ ಜೇಬಿನಲ್ಲಿದ್ದ ಚಿಲ್ರೆ ಕಾಸು ಬಿದ್ದಿರ್ತಿತ್ತು.. ಈ ವಿಷಯ ರೂಮಿನಲ್ಲಿದ್ದವರೆಲ್ಲರಿಗೂ ಗೊತ್ತಿತ್ತು. ಅದಕ್ಕೇ ಎಲ್ಲರೂ ಬೆಳಿಗ್ಗೆ ಎದ್ದ ಕೂಡಲೇ ಮೊದಲು ರಮೇಶನ ಅಕ್ಕ ಪಕ್ಕದಲ್ಲಿ ಚೆಕ್ ಮಾಡ್ತಿದ್ವಿ.. ಸಿಗೋ ಚಿಲ್ರೆ ಕಾಸು, ಬೆಳಿಗ್ಗೆ ಕಾಫಿ-ಟೀ ಕುಡಿಯೋಗೆ ಆಗ್ತಿತ್ತು...

ರಮೇಶ ಎಲ್ಲಾ ಆದಮೇಲೆ ಎದ್ದಾಗ ಇಂಗು ತಿಂದ ಮಂಗನ ಥರಾ ಮುಖ ಮಾಡಿಕೊಳ್ತಿದ್ದ..


ಒಮ್ಮೆ ಏನಾಯ್ತು ಅಂದ್ರೆ, ನಮ್ ರೂಮಿನಲ್ಲಿದ್ದ ಶಿವಕುಮಾರ್ ತಮ್ಮನ ಮದುವೆಗೆ ಬೆಂಗಳೂರಿಗೆ ಹೋಗಿದ್ವಿ.. ಮದುವೆಯ ಹಿಂದಿನ ದಿನ ಶಿವಕುಮಾರ್ ಮನೇಲಿ ಉಳಿದುಕೊಂಡಿದ್ವಿ. ನಮಗೆ ಹಾಲ್ ನಲ್ಲಿ ಹಾಸಿಕೊಟ್ಟು ಶಿವಕುಮಾರ್ ಫ್ಯಾಮಿಲಿ ಜೊತೆಗೆ ಬೆಡ್ ರೂಮಿಗೆ ಹೋಗಿ ಮಲ್ಕೊಂಡಿದ್ದ..

ನೈಟ್ ಲ್ಯಾಂಪ್ ಕೆಳಗೆ ಎಲ್ಲರೂ ಮಲ್ಕೊಂಡು 2 ನಿಮಿಷ ಆಗಿರಲಿಲ್ಲ.. ನನ್ ಪಕ್ಕ ಮಲ್ಕೊಂಡಿದ್ದ ರಮೇಶನ ಜೇಬಿನಿಂದ ಸಾಕಷ್ಟು ಚಿಲ್ರೆ ಕಾಸುಗಳು ತುಪು ತುಪು ಅಂತಾ ಉದುರಿದವು.. ಎಲ್ಲರೂ ಫುಲ್ ಅಲರ್ಟ್... ಕಾಳಗಕ್ಕೆ ಬಿದ್ದವರಂತೆ, ನಾನು ರಂಗನಾಥ ಮತ್ತು ಅಶ್ವಿನ್ ಮೂರು ಜನರೂ ಬಿದ್ದ ಚಿಲ್ರೆ ಕಾಸುಗಳನ್ನು ಆಯ್ಕೊಳ್ಳೋಕೆ ಶುರು ಮಾಡಿದ್ವಿ..(ಮೋಸ್ಟ್ಲಿ ಎಲ್ಲರೂ ಹೋದ ಜನ್ಮದಲ್ಲಿ ಒಂದೇ ದೇವಸ್ಥಾನದ ಮುಂದೆ ಕೂತ್ಕೋತಿದ್ವಿ ಅನ್ಸುತ್ತೆ..) ಗಲಾಟೆ ಕೇಳಿ, ಶಿವಕುಮಾರ್ ಬೆಡ್ ರೂಂ ನಿಂದ ಓಡಿ ಬಂದು ಲೈಟ್ ಹಾಕಿದ,,, ಅಷ್ಟರಲ್ಲಾಗಲೇ ಚಿಲ್ರೆ ಕಾಸುಗಳು ನಮ್ ಕೈನಲ್ಲಿದ್ವು.. ಅಶ್ವಿನ್ ಗೆ 6 ರೂಪಾಯಿ, ರಮೇಶನಿಗೆ 5 ರೂಪಾಯಿ.. ನಂಗೆ 16 ರೂಪಾಯಿ ಮತ್ತು ರಂಗನಾಥನಿಗೆ 21 ರೂಪಾಯಿ ಸಿಕ್ಕಿತ್ತು.. ಎಲ್ಲರೂ ನಮಗೆ ಬಂದ ಲಾಭದ ಬಗ್ಗೆ ಹೊಗಳಿಕೊಳ್ಳುತ್ತಿದ್ದರೆ, ಅವಾಗ ತಾನೆ ಬಂದ ಶಿವಕುಮಾರ್ ತನಗೆ ಒಂದು ರೂಪಾಯಿಯೂ ಸಿಗದೇ ಇದ್ದುದ್ದಕ್ಕೆ ಬೇಜಾರು ಮಾಡ್ಕೊಂಡ..


ನನಗೆ ಸಿಕ್ಕ ಚಿಲ್ರೆ ಕಾಸುಗಳನ್ನು ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡರೆ ಉದುರಿ ಹೋಗುತ್ತೆ ಅಂತಾ ಹ್ಯಾಂಗರ್ ಗೆ ನೇತು ಹಾಕಿದ್ದ ನನ್ನ ಶರ್ಟ್ ಗೆ ಹಾಕಿ ಬಂದೆ.. ನನ್ನನ್ನು ನೋಡಿ ರಂಗನಾಥ್ ಕೂಡಾ ಅವನಿಗೆ ಸಿಕ್ಕಿದ್ದ ಚಿಲ್ರೆ ಕಾಸುಗಳನ್ನು ಹ್ಯಾಂಗರ್ ಗೆ ನೇತು ಹಾಕಿದ್ದ ಶರ್ಟ್ ಜೇಬಿಗೆ ಹಾಕಿ ಬಂದ.. ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ, ಶಿವಕುಮಾರ್ ಲೈಟ್ ಆಫ್ ಮಾಡಿ, ಬೆಡ್ ರೂಂ ಗೆ ಹೋಗಿ ಮಲ್ಕೊಂಡ..

ನಾವೆಲ್ಲರೂ ಸಲ ಮಲಗಿ ಹತ್ತು ನಿಮಿಷವಾಗಿತ್ತು.. ಆಗ ರಂಗನಾಥ್ ನನ್ನನ್ನು ಎಬ್ಬಿಸಿ..

ಲೇ ಯಳವತ್ತಿ, ಒಂದು ದೊಡ್ಡ ಮಿಸ್ಟೇಕ್ ಮಾಡಿಬಿಟ್ಟಿದ್ದೀನಿ ಕಣ್ಲ... ಎದ್ದು ಲೈಟ್ ಹಾಕು ಎಂದ..
ಯಾಕೋ ಏನಾಯ್ತೋ? ಅಂತಾ ಎದ್ದು ಲೈಟ್ ಹಾಕಿದೆ..

ಎಲ್ಲರೂ ಎದ್ದರು.. ರಂಗನಾಥ್ ಇದ್ದೋನು, ಹ್ಯಾಂಗರ್ ಗೆ ನೇತುಹಾಕಿದ್ದ ಶರ್ಟ್ ಗಳನ್ನು ಹೋಗಿ ಚೆಕ್ ಮಾಡಿ, ಮುಖ ಸಪ್ಪಗೆ ಮಾಡಿಕೊಂಡು ಬಂದು ಕುಳಿತ..

ಏನಾಯ್ತೋ ರಂಗ.. ಅಂತಾ ಎಲ್ಲರೂ ಗಾಭರಿಯಿಂದ ಕೇಳಿದೆವು...

" ಯಳವತ್ತಿ... ಫುಲ್ ಲಾಸ್ ಆಗೋಯ್ತು ಕಣ್ಲ.." ಅಂದ.....

ನಮಗೆ ಅರ್ಥವಾಗಲಿಲ್ಲ.. ಅದೇನು ಅಂತಾ ಬಿಡಿಸಿ ಹೇಳೋ ಅಂದೆವು..


ಅವಾಗ ರಂಗನಾಥ ಹೇಳಿದ..


"ನಾನು ನನ್ನ ಶರ್ಟು ಅಂತಾ ರಮೇಶನ ಶರ್ಟಿನ ಜೇಬಿಗೆ ಚಿಲ್ರೆ ಕಾಸುಗಳನ್ನು ಹಾಕಿ ಬಂದೆ ಕಣೋ" ಅಂದಾ..

ಅವನು ನೈಟ್ ಲ್ಯಾಂಪಿನ ಮಂದ ಬೆಳಕಿನಲ್ಲಿ ರಮೇಶ ಉದುರಿಸಿದ ಕಾಸುಗಳನ್ನು ರಮೇಶನ ಶರ್ಟಿನ ಜೇಬಿಗೆ ಹಾಕಿ ಬಂದಿದ್ದ...

ಇದನ್ನು ಕೇಳಿ ಎಲ್ಲರೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು...

ನಮ್ ನಗುವನ್ನು ಕೇಳಿದ ಶಿವಕುಮಾರ್ ಮಿಸೆಸ್ ರೂಂನಿಂದ ಆಚೆ ಬಂದು, ಏನಾಯ್ತು ಅಂತಾ ಕೇಳಿದರು.. ಆಮೇಲೆ ಹೇಳ್ತೀನಿ ಅಂದ ಶಿವಕುಮಾರ್ ನಮಗೆಲ್ಲರಿಗೂ ಗುಡ್ ಬೈ ಹೇಳಿ, ಮಿಸೆಸ್ ಜೊತೆ ಹೋಗಿ ಮಲ್ಕೊಂಡ...

ಸ್ವಲ್ಪ ಹೊತ್ತಿನ ನಂತರ ಬೆಡ್ ರೂಂ ನಿಂದ ಇಬ್ಬರೂ ಜೋರಾಗಿ ನಗೋದು ಕೇಳಿಸಿತು.. ಮತ್ತೆ ನಾವೆಲ್ಲರೂ ನಕ್ಕೆವು..

ವಿ.ಸೂ.:- ರಂಗನಾಥ ರಮೇಶನ ಜೇಬಿಗೆ ಹಾಕಿದ್ದ ಚಿಲ್ರೆ ಕಾಸುಗಳನ್ನು ವಾಪಸ್ ತಗೋಬಹುದಿತ್ತು.. ಆದರೆ ನಮ್ ರೂಮಿನ ಇನ್ನೊ0ದು ನಿಯಮ ಇದಕ್ಕೆ ಅವಕಾಶ ಕೊಟ್ಟಿರಲಿಲ್ಲ.. ಇನ್ನೊಂದು ನಿಯಮದ ಪ್ರಕಾರ "ಯಾರೂ ಸಹ ಇನ್ನೊಬ್ಬರ ಜೇಬಿಗೆ ಕೈ ಹಾಕುವಂತಿಲ್ಲ"

ಇಂತಿ ನಿಮ್ಮ ಪ್ರೀತಿಯ,

ಯಳವತ್ತಿ

ಫ್ರೀ ಇದ್ದಾಗ ಇವುಗಳನ್ನೂ ನೋಡಿ..

1) ಒಂದೆರಡು ಸಾಲಿನ ಕಥೆಗಳು ಭಾಗ-1
2) ಒಂದೆರಡು ಸಾಲಿನ ಕಥೆಗಳು ಭಾಗ-2
3) ಒಂದೆರಡು ಸಾಲಿನ ಕಥೆಗಳು ಭಾಗ-3
4) ಒಂದೆರಡು ಸಾಲಿನ ಕಥೆಗಳು ಭಾಗ-4
5)ಒಂದೆರಡು ಸಾಲಿನ ಕಥೆಗಳು ಭಾಗ-5
6) ಒಂದೆರಡು ಸಾಲಿನ ಕಥೆಗಳು ಭಾಗ-6
7) ನ್ಯಾನೋ ಕಥೆಗಳು ಭಾಗ-1
8) ಒಂದು ವರ್ಷದ ಸಂಭ್ರಮ

33 comments:

ಸವಿಗನಸು said...

ಇನ್ನು ಎನೇನೂ ನಿಯಮ ಇದ್ಯೊ ಮಾರಾಯ.....

ಶಿವಪ್ರಕಾಶ್ said...

ha ha ha... rules channagidave :)

ಶಿವಶಂಕರ ವಿಷ್ಣು ಯಳವತ್ತಿ said...

@ ಸವಿಗನಸು:-

ಇನ್ನೂ ಸಾಕಷ್ಟು ನಿಯಮಗಳನ್ನು ಮಾಡಿದ್ವಿ ಮಹೇಶಣ್ಣ...

ಸಮಯ ಬಂದಾಗ ಒಂದೊಂದನ್ನೇ ಹಾಕ್ತಿನಿ..

-ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ ಶಿವಪ್ರಕಾಶ್:-

ಸಜೆಷನ್ಸ್ ಬೇಕಿದ್ರೆ ಕೇಳು ಶಿವು..

ಹೇಗೂ ನೀನು ಸಹ ಇನ್ನೂ ಬ್ಯಾಚುಲರ್.. ಅಲ್ಲದೇ ಫ್ರೆಂಡ್ಸ್ ಜೊತೆ ರೂಮಲ್ಲೇ ಇದ್ದೀಯಲ್ಲ.. ಉಪಯೋಗವಾಗುತ್ತೆ..

=ಯಳವತ್ತಿ

sunaath said...

ಯಳವತ್ತಿಯವರ,
ಸಕತ್ ನಗಿಸಿದಿರಿ. ನಾನೂ ನಿಮ್ಮ ರೂಮ್ ಮೇಟ್ ಆಗಿದ್ದರೆ, ಅಂತ ಕನಸು ಕಾಣೋ ಹಾಗಾಯ್ತು!

Anonymous said...

ನಮಸ್ಕಾರ ಯಳವತ್ತಿಯವರಿಗೆ,

"ಸಿಕ್ಕಿದೋರಿಗೆ ಸೀರುಂಡ..." ಬಹಳ ಚೆನ್ನಾಗಿದೆ.
ನಿಮ್ಮ ಅನುಭವ ನಮ್ಮೆಲ್ಲರ ನಗು.

MANJUNATH TALLIHAL said...

ಲೇಖನ ತುಂಬಾ ಚನ್ನಾಗಿದೆ ತುಂಬಾ ನಗು ತರಿಸಿತ್ತು, ಉತ್ತಮ ಲೇಖನ, ಇನ್ನೂ ಎನೇನೂ ನಿಯಮಗಳನ್ನು ಮಾಡಿದ್ದಿರಾ ಸಿಕ್ಕಾಗ ಮರೆಯದೇ ತಿಳಿಸಿ,,,,

*ಮಂಜುನಾಥ ತಳ್ಳಿಹಾಳ

prakash said...

ಹ್ಹ....ಹ್ಹ....ಹ್ಹ.....ತುಂಬ ಚೆನ್ನಾಗಿದೆ ಯಳವತ್ತಿಯವರೆ ....ಈ ಅಲಿಖಿತ ನಿಯಮ ನಮ್ಮ ರೂಮ್ ನಲ್ಲು ಇದೆ ಆದ್ರೆ ಇದೊಂತರ different .......superb

prakash said...

ಹ್ಹ....ಹ್ಹ....ಹ್ಹ.....ತುಂಬ ಚೆನ್ನಾಗಿದೆ ಯಳವತ್ತಿಯವರೆ ....ಈ ಅಲಿಖಿತ ನಿಯಮ ನಮ್ಮ ರೂಮ್ ನಲ್ಲು ಇದೆ ಆದ್ರೆ ಇದೊಂತರ different .......superb

shobha.v said...

ನಿಮ್ಮ ಫ್ರೆಂಡ್ ರಂಗನಾಥ್ ಕಥೆ ಕೇಳಿ ತುಂಬಾ ( ಒಬ್ಬಳೇ ಇದ್ದರೂ ) ನಗು ಬಂತು. ರಮೇಶ್ ಅವರು ನಿದ್ದೆ ಮಾಡುತ್ತಲ್ಲೇ ೨೧ ರೂ ಗಳನ್ನೂ ಸಂಪಾದಿಸಿದ್ದಾರೆ.

Manasa said...

ಹೇ ಹೇ ಹೇ...
'ಆಸೆಯೇ ರೋಕಕ್ಕೆ ಮುಲಾ'

ಶಿವಶಂಕರ ವಿಷ್ಣು ಯಳವತ್ತಿ said...

@ ಸುನಾಥ್ ಸರ್:-

ನಾವು ರೂಂ ನಲ್ಲಿದ್ದಾಗ ಸಕತ್ ಎಂಜಾಯ್ ಮಾಡಿದ್ವಿ..

ಸಾಕಷ್ಟು ಹಾಸ್ಯ ಪ್ರಸಂಗಗಳು ನಡೆದಿವೆ.. ಒಂದೊಂದನ್ನೇ ಬರೆಯುವೆ..

ನೀವೇನಾದ್ರೂ ರೂಂ ಮೇಟ್ ಆಗಿದ್ದಿದ್ರೆ, ನಕ್ಕು ನಕ್ಕು ಸುಸ್ತಾಗಿ, ಹೊಟ್ಟೆ ನೂವು ಬಂದಿರೋದು...

ಇಂತಿ,
ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ ಸುನಾಥ್ ಸರ್:-

ನಾವು ರೂಂ ನಲ್ಲಿದ್ದಾಗ ಸಕತ್ ಎಂಜಾಯ್ ಮಾಡಿದ್ವಿ..

ಸಾಕಷ್ಟು ಹಾಸ್ಯ ಪ್ರಸಂಗಗಳು ನಡೆದಿವೆ.. ಒಂದೊಂದನ್ನೇ ಬರೆಯುವೆ..

ನೀವೇನಾದ್ರೂ ರೂಂ ಮೇಟ್ ಆಗಿದ್ದಿದ್ರೆ, ನಕ್ಕು ನಕ್ಕು ಸುಸ್ತಾಗಿ, ಹೊಟ್ಟೆ ನೂವು ಬಂದಿರೋದು...

ಇಂತಿ,
ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ ಸುನಾಥ್ ಸರ್:-

ನಾವು ರೂಂ ನಲ್ಲಿದ್ದಾಗ ಸಕತ್ ಎಂಜಾಯ್ ಮಾಡಿದ್ವಿ..

ಸಾಕಷ್ಟು ಹಾಸ್ಯ ಪ್ರಸಂಗಗಳು ನಡೆದಿವೆ.. ಒಂದೊಂದನ್ನೇ ಬರೆಯುವೆ..

ನೀವೇನಾದ್ರೂ ರೂಂ ಮೇಟ್ ಆಗಿದ್ದಿದ್ರೆ, ನಕ್ಕು ನಕ್ಕು ಸುಸ್ತಾಗಿ, ಹೊಟ್ಟೆ ನೂವು ಬಂದಿರೋದು...

ಇಂತಿ,
ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ ಅನಾಮಧೇಯ ಕಮೆಂಟಿಗರಿಗೆ..

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..


ಮತ್ತೊಮ್ಮೆ ಕಮೆಂಟಿಸುವಾಗ, ನಿಮ್ಮ ಹೆಸರನ್ನು ತಪ್ಪದೇ ಬರೆಯಿರಿ..

ಇಂತಿ,
ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ಮಂಜುನಾಥ ತಳ್ಳಿಹಾಳ

ಯಾವಾಗ ಸಿಗ್ತೀಯಾ ಮಂಜು??


ಇಂತಿ,
ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ ಪ್ರಕಾಶ್ ಸರ್..

ಧನ್ಯವಾದಗಳು..

ನಿಮ್ಮ ರೂಮಲ್ಲಿ ಯಾವ್ ಥರಾ ಇದೆ ಅಂತಾ ಗೊತ್ತಾಗಲಿಲ್ಲ..

ಇಂತಿ,
ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ಶೋಭಾ

ಅವಾಗ ನಮ್ ರಂಗನಾಥನ ಮುಖ ನೋಡ್ಬೇಕಿತ್ತು..

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಇಂತಿ,
ಯಳವತ್ತಿ

ಶಿವಶಂಕರ ವಿಷ್ಣು ಯಳವತ್ತಿ said...

@ ಮಾನಸ:-

ಧನ್ಯವಾದಗಳು..

ಇನ್ನೂ ಒಂದಿಷ್ಟು ನಗೆ ಪ್ರಸಂಗಗಳು ಇವೆ..

ಇಂತಿ,
ಯಳವತ್ತಿ

Dileep Hegde said...

ಹ ಹ ಹ.. ಸಕ್ಕತ್ತಾಗಿದೆ.. :)

ಸೀತಾರಾಮ. ಕೆ. / SITARAM.K said...

ಚೆನ್ನಾಗಿದೆ ತಮ್ಮ ಪ್ರಸ೦ಗ!

ಸತ್ಯ ಚರಣ ಎಸ್.ಎಂ.(Sathya Charana S.M.) said...

ಧನ್ಯವಾದಗಳು..
ಸದ್ಯ.. ಇನ್ನೂ ಹೆಚ್ಚಿಗೆ ಹೇಳಲು ಪದಗಳು.. ಸಿಕ್ಕಿಲ್ಲ..
ಮತ್ತೆ ಧನ್ಯವಾದಗಳು..

ನಿಮ್ಮೊಲವಿನ,
ಸತ್ಯ..

ಸಾಗರದಾಚೆಯ ಇಂಚರ said...

ಸರ್
ನಿಮ್ಮ ನಿಯಮಗಳಿಗೆ ಒಂದು ನಿಯಮ ಮಾಡುವಂತಿದೆ
ತುಂಬಾ ಚೆಂದದ ನಗೆ ಬರಹ

ಮನದಾಳದಿಂದ............ said...

ಇನ್ನೂ ಏನೇನು ನಿಯಮಗಳಿದ್ದವು?
ಸಧ್ಯ ನಿಯಮಗಳು ಕೇವಲ ನಿಯಮಗಳಾಗಿರದೆ ಅವುಗಳ ಪಾಲನೆ ಮಾಡ್ತಾ ಇದ್ರಲ್ಲಾ. ತುಂಬಾ ಖುಷಿಯಾಯಿತು.
ಇನ್ನಷ್ಟು ಬರೆಯಿರಿ.

!! ಜ್ಞಾನಾರ್ಪಣಾಮಸ್ತು !! said...

ಶಿವಶಂಕರ ವಿಷ್ಣು ಯಳವತ್ತಿ,

ಹನಿ ಹನಿಯಾಗಿದೆ..
ನಿಯಮ ಸೂಪರ್ರ್..

ಶಿವಶಂಕರ ವಿಷ್ಣು ಯಳವತ್ತಿ said...

@ dileep hegde..


Thank you dileep..

how r u ?

ಶಿವಶಂಕರ ವಿಷ್ಣು ಯಳವತ್ತಿ said...

@ ಸೀತಾರಾಮ. ಕೆ. / SITARAM.K

vandanegalu sir nimma pratikriyege..

ಶಿವಶಂಕರ ವಿಷ್ಣು ಯಳವತ್ತಿ said...

@ ಸತ್ಯ ಚರಣ ಎಸ್.ಎಂ.
ThanQ

ಶಿವಶಂಕರ ವಿಷ್ಣು ಯಳವತ್ತಿ said...

@ ಸಾಗರದಾಚೆಯ ಇಂಚರ

haagidre neevu try madi nodi...

olle maja barutthe

ಶಿವಶಂಕರ ವಿಷ್ಣು ಯಳವತ್ತಿ said...

@ ಮನದಾಳದಿಂದTHANK U sir.. mattastu prasangagalannu bareyuve

ಶಿವಶಂಕರ ವಿಷ್ಣು ಯಳವತ್ತಿ said...

@ !! ಜ್ಞಾನಾರ್ಪಣಾಮಸ್ತು !!


vandanegalu..

innu sakastu niyamagalu idvu

shridhar said...

Ella OK . nimma Freind Kiseyali sumaru 50 roopayigalashtu chillare kasu yake itkondidru annodu dodda prashne agbitide Yalavattiyavare ...

:)

Bana said...

ಯಳವತ್ತಿ ನಿಮ್ಮ ಬರಹಗಳು ಸರಳ ಸುಂದರ, ಸುಲಿದ ಬಾಳೆ ಹಣ್ಣಿನ ಥರ.
-ಬನಶಂಕರ ಆರಾಧ್ಯ,
ಚಾಮರಾಜನಗರ.