ಖಾಯಂ ಓದುಗರು..(ನೀವೂ ಸೇರಬಹುದು)

13 May 2010

ಒಂದೆರಡು ಸಾಲಿನ ಕಥೆಗಳು ಭಾಗ-6

ಮತ್ತದೇ ಬೆಂಗಳೂರಿಗೆ ಹೋಗೋ ಬಸ್ಸಲ್ಲಿ ಕೂತುಕೊಂಡು ಬರೆದ ಸಾಲುಗಳು... ವಿಜಯ ಕರ್ನಾಟಕ ಪೇಪರ್ ನಲ್ಲಿ ದಿನಾಂಕ: 13-05-2010 ರಂದು ಪ್ರಕಟಿಸಿದ್ದಾರೆ.. (ಎಡಿಟರ್ ಇನ್ನೂ ರಜೆಯಿಂದ ಬಂದಿಲ್ಲ ಅನ್ಸುತ್ತೆ...)

ಇಂತಿ ನಿಮ್ಮ ಪ್ರೀತಿಯ,

ಯಳವತ್ತಿ೧) ಪ್ರೀತಿಸಿ ಮದುವೆಯಾದ ಪ್ರೇಮಿಗಳಿಬ್ಬರು ತಮ್ಮ ಹಳೆ ದಿನಗಳ ಮೆಲುಕು ಹಾಕುತ್ತಿದ್ದರು.. ಹಿಂದೊಮ್ಮೆ ಮುನಿಸಿಕೊಂಡಾಗ ಬೇಕಂತಲೇ ಇವನು ಬೇರೊಬ್ಬ ಹುಡುಗಿಯ ಜೊತೆಗೆ ಹಲ್ಕಿರಿದು ಮಾತನಾಡಿದ್ದನ್ನು ಇವತ್ತು ನೆನಪು ಮಾಡಿಕೊಂಡು ಮುಖ ಊದಿಸಿಕೊಂಡಳು..

೨) ಅಹಿಂಸಾವಾದಿ ಸುಬ್ಬಾ ಶಾಸ್ತ್ರಿಗಳು, ತಮಗೆ ತೊಂದರೆ ನೀಡುತ್ತಿದ್ದ ಸೊಳ್ಳೆಗಳನ್ನು ಒಂದೊಂದನ್ನೇ ಹಿಡಿದು, ಹಿಸುಕಿ, ಸಾಯಿಸಿ ಸಂಭ್ರಮಿಸಿದರು..

೩) ಊರಿನ ಸಹವಾಸವೇ ಬೇಡ ಎಂದು ಮನೆ ಬಿಟ್ಟು ಬಂದಿದ್ದ ರಮೇಶ ಬೆಳ್ಳಂಬೆಳಗ್ಗೆ ಬೆಂಗಳೂರು ಕಡೆಗೆ ಹೊರಟಿದ್ದ ಸೂಪರ್ deluxe ಬಸ್ಸನ್ನೇರಿ ಕುಳಿತಿದ್ದ..
ವೇಗವಾಗಿಯೇ ಹೊರಟ ಬಸ್ಸು, ಇವನ ಮನೆ ಮುಂದೆ ಬಂದ ಕೂಡಲೇ ಮುಂದೆ ಹೋಗಲೊಲ್ಲದೆ ಕೆಟ್ಟು ನಿಂತಿತ್ತು..

೪) ಮದುವೆಯ ಹಿಂದಿನ ದಿನವೇ "ನನಗೆ ಎರಡು ಮದುವೆ ಮಾಡಿಕೊಳ್ಳಬೇಕೆಂದು ಆಸೆ" ಎಂದು ಹೇಳಿದಾಗ ಅವಳ ಕಣ್ಣು ಕೆಂಪಾಗಿ.. ಕಣ್ಣಂಚಿನಲ್ಲಿ ನೀರು ಮೂಡಿತ್ತು.. "ಇವಾಗ ಒಂದು ಸಾರಿ, ಷಷ್ಠಿ ಪೂರ್ತಿಗೆ ಒಂದು ಸಾರಿ" ಅಂತ ಹೇಳಿದಾಗ.. ದುಖ ಕರಗಿ,, ಅವನ ಮೇಲೆ ಅವಳಿಗೆ ಮುನಿಸಾಯಿತು..

೫) ದಿನಂಪ್ರತಿ ೭ಕ್ಕೆ ಏಳುತ್ತಿದ್ದವನಿಗೆ ೫ಕ್ಕೆ ಎಚ್ಚರವಾಗುತ್ತಿದೆ.. ಕೊರೆಯುವ ಚಳಿ ಮೈ ತುಂಬಿಕೊಂಡಾಗ ಮಡದಿಯ ಬಿಸಿ ಅಪ್ಪುಗೆ ನೆನಪಾಗುತ್ತಿದೆ.. ಅಕ್ಕ ಬಂದ ೩ ದಿನಕ್ಕೆ ಕರೆದುಕೊಂಡು ಹೋಗಲು ಬಂದ ಭಾವನನ್ನು ನೋಡಿ ನಾದಿನಿಯರು ಮುಸಿ ಮುಸಿ ನಗುತ್ತಿದ್ದಾರೆ..

೬) ಇಡ್ಲಿ ಮತ್ತು ದೋಸೆ ಜಗಳವಾಡುತ್ತಿದ್ದರು... ಬಿಡಿಸಲು ನಡುವೆ ಬಂದ ತೆಂಗಿನಕಾಯಿ ಚಟ್ನಿಯಾಗಿದೆ.

೭) ಹುಡುಗ ಹುಡುಗಿಗೆ ಸ್ನೇಹವಾಯಿತು..
ಎಸ್ಸೆಮ್ಮೆಸ್ ಗಳ ಸಾಗರವೇ ಹರಿಯಿತು..
ಪ್ರೀತಿಸಿಕೊಂಡರು. ಇಬ್ಬರ ನಂಬರ್ ಬ್ಯುಸಿಯಾಯಿತು..
ಮದುವೆಯಾದರು.. ಇವಾಗ ಇಬ್ಬರ ಮೊಬೈಲ್ ನಲ್ಲಿ currency ಇಲ್ಲವಂತೆ..


೮) "ನೀ ಹೇಗಿದ್ದರೂ ನಂಗೆ ಇಷ್ಟ ಕಣೆ" ಅನ್ನುತ್ತಿದ್ದ ಗಂಡ.. ಇವಾಗ "ನಿಮ್ಮಮ್ಮ ಡುಮ್ಮಿ ಆಗಿಬಿಟ್ಟಿದಾಳೆ" ಅಂಥಾ ಮಗಳ ಎದುರು ಮೂದಲಿಸ್ತಾ ಇದಾನೆ...

-ಯಳವತ್ತಿ

5 comments:

sunaath said...

Short and sweet!

!! ಜ್ಞಾನಾರ್ಪಣಾಮಸ್ತು !! said...

6neyadu super

Sitaram said...

nice stories

praveen r gowda, manadaaladinda said...

good stories sir,
keep writing

mahesh said...

chennagidhe....
keep writing....editor banda meloo saha