ಖಾಯಂ ಓದುಗರು..(ನೀವೂ ಸೇರಬಹುದು)

06 May 2010

ಒಂದೆರಡು ಸಾಲಿನ ಕಥೆಗಳು ಭಾಗ-5

ಮೊನ್ನೆ ಬೆಂಗಳೂರಿಗೆ ಬಂದಾಗ ಬಸ್ಸಿನಲ್ಲಿ ಕೂತುಕೊಂಡು ಒಂದೆರಡು ಸಾಲಿನ ಕಥೆಗಳು ಅನ್ನಿಸಿಕೊಳ್ಳುವಂಥದ್ದನ್ನು ಬರೆದಿದ್ದೆ. ಅದನ್ನು ಇವತ್ತಿನ ದಿನಾಂಕ: 06-07-2010 ರಂದು ವಿಜಯಕರ್ನಾಟಕ ಪೇಪರ್ ನಲ್ಲಿ ಪ್ರಕಟಿಸಿದ್ದಾರೆ. ಈ ಬಾರಿಯ ವಿಶೇಷ ಏನಪ್ಪಾ ಅಂದ್ರೆ.. ಒಂದು ಚೂರು ಎಡಿಟ್ ಮಾಡದೇ ಹಾಗೇ ಪ್ರಿಂಟ್ ಮಾಡಿದ್ದಾರೆ. ಮೋಸ್ಟ್ಲಿ ಎಡಿಟರ್ ರಜ ಹಾಕಿದ್ರು ಅನ್ಸುತ್ತೆ.1) ಪ್ರತಿಯೊಂದು ಸ್ಟಾಪ್ ಬಂದಾಗಲೂ ವಾಚ್ ನೋಡಿ ಚಡಪಡಿಸುತ್ತಿದ್ದಳು. ಅಪ್ಪ ಅಮ್ಮನಿಗೆ ಹೇಳಿದ ಸುಳ್ಳಿಂದ ದಿಗಿಲಾಗುತ್ತಿದ್ದರೂ, ತನಗಾಗಿ ಕಾಯುತ್ತಿದ್ದವನ ನೆನಪಾಗಿ ನಾಚಿಕೊಂಡಳು.

2) ಪ್ರತಿ ಬಾರಿ "ನೀ ನನ್ನ ಪ್ರೀತಿಸ್ತೀಯಾ?" ಅಂತಾ ಕೇಳುತ್ತಿದ್ದ.. ಪ್ರತಿ ಬಾರಿಯೂ "ಇಲ್ಲ ಕಣೋ!!" ಅಂತಾನೇ ಹೇಳುತ್ತಿದ್ದಳು..
"ನಾ ನಿನ್ನ ಪ್ರೀತಿಸ್ತೀನಿ ಕಣೇ!!" ಅನ್ನೋ ಅವನ ಒಂದು ಮಾತಿಗಾಗಿ ಇವಳು ಕಾಯುತ್ತಲೇ ಇದ್ದಳು.

3) ಇಂಟರ್ನೆಟ್ ಫ್ರೆಂಡ್ ಗೆ ಇವತ್ತು "ಐ ಲವ್ ಯೂ" ಅಂತಾ ಹೇಳಬೇಕಿತ್ತು.. ಬಡ್ಡಿಮಕ್ಕಳು ಇವಳ ಅಕೌಂಟನ್ನು ಹ್ಯಾಕ್ ಮಾಡಿದ್ದರು.

4) ಬಿ.ಎಂ.ಟಿ.ಸಿ. ಬಸ್ಸಿನ ಡ್ರೈವರ್ ಗೂ ಕಂಡಕ್ಟರ್ ಗೂ ಜಗಳವಾಗಿದ್ದಕ್ಕೆ ಎಲ್ಲರಿಗೂ ತಡವಾಗಿತ್ತು.. ಇವಳು ಪಾರ್ಕಿಗೆ ತಡವಾಗಿ ಬಂದಿದ್ದಕ್ಕೆ ಅವನು ಇವಳ ಜೊತೆ ಜಗಳ ಮಾಡಿದ.

5) ಪಕ್ಕದ ಸೀಟಿನಲ್ಲಿ ಕುಳಿತ ಚಲುವೆಯ ಮೇಲೆ ಕವನ ಬರೆದು ಅವಳಿಗೆ ಕೇಳಿಸೋ ಹಾಗೆ ಜೋರಾಗಿ ಹೇಳಿಕೊಂಡ. ತನ್ನ ಪಾಡಿಗೆ ತಾನಿದ್ದ ಅವಳು ಬಸ್ಸಿಂದ ಇಳಿಯುವಾಗ ಬಹುಮಾನವಾಗಿ ಸ್ಮೈಲ್ ಕೊಟ್ಟು ಹೋದಳು.

6) "ನಾನು ಯಾರನ್ನೂ ಪ್ರೀತಿಸುತ್ತಿಲ್ಲ!!" ಎಂದು ಹೇಳುತ್ತಿದ್ದವಳು, "ನಿನ್ನನ್ನು ಬಿಟ್ಟು" ಅಂತಾ ಅವನಿಗೆ ಕೊನೆಯವರೆಗೂ ಹೇಳಲೇ ಇಲ್ಲ...

7) ಬೆಂಗಳೂರಿನ ಒಂದೂ ಬಾವಿಯಲ್ಲಿ ನೀರಿಲ್ಲ ಅನ್ನುತ್ತಿದ್ದವನಿಗೆ, ತನ್ನ ಹಿತ್ತಲಲ್ಲಿದ್ದ ದೊಡ್ಡ ಬಾವಿಯನ್ನು ತೋರಿಸಬಾರದಾಗಿತ್ತು ಅಂತಾ ಅನ್ನಿಸಿದ್ದು, ಬಾವಿಯಲ್ಲಿ ಅವನ ಹೆಣ ತೇಲುತ್ತಿದ್ದಾಗಲೇ..

8) ನೂರಾರು ಹುಡುಗಿಯರನ್ನು ಪ್ರೀತಿಸಿಕೊಂಡು ಅಂಡಲೆಯುತ್ತಿದ್ದ ಪೊರ್ಕಿಗೆ, ಅಕ್ಕನ ಮಗಳು ಕೈಹಿಡಿದು ಲಗಾಮು ಹಾಕಿದಳು..


ಇಂತಿ ನಿಮ್ಮ ಪ್ರೀತಿಯ,
ಇಂತಿ,
ಯಳವತ್ತಿ

7 comments:

manasu said...

hahah chennagide ella saalugaLu

!! ಜ್ಞಾನಾರ್ಪಣಾಮಸ್ತು !! said...

6th one superb..

sunaath said...

Hilarious mini stories!

Shashi Jois said...

ಶಿವೂ ಚೆನ್ನಾಗಿದೆ ಕಣೋ ಎಲ್ಲಾ ಸಾಲುಗಳು.
ಬೆಂಗಳೂರಿಗೆ ಬಂದಾಗ ಬರೆದೆ ಅಂತ ನನಗೆ ಹೇಳಲೇ ಇಲ್ಲ ಯಾಕೆ?ಹ್ಹಾ ಹ್ಹಾ
ಹೀಗೆಯೇ ಬರೆಯುತ್ತಿರು

mahesh said...

sakkat aagidhe shivu....keep writing....

Manasa said...

Superb lines :)

shobha.v said...

ayyoo nanage artane agallilla Shankar . kate chennagide but nanage nivu yara bage helta iddira antane artha agallilla
matte oduttene