ಖಾಯಂ ಓದುಗರು..(ನೀವೂ ಸೇರಬಹುದು)

01 May 2010

ಚಿತ್ರಾನ್ನ ಚಿತ್ರಾನ್ನ... ಟ್ವಿಟರ್ ನ ಟ್ವೀಟುಗಳು.. ಭಾಗ-2

ಲೇಖನದ ಶೀರ್ಷಿಕೆ ನೋಡಿ, ಬುದ್ಧಿವಂತ ಸಿನಿಮಾ ಬಗ್ಗೆ ಹೇಳ್ತಾ ಇದ್ದೀನಿ ಅನ್ಕೋಬೇಡಿ.

ನಾನು ಬಹಳ ದಿನದಿಂದ ಬ್ಲಾಗ್ ಬರೆಯೋಕೆ ಆಗಿರಲಿಲ್ಲ. ಅದಕ್ಕೆ.. ಅದಕ್ಕೆ.. ಈ ಚಿತ್ರಾನ್ನ..

ಗೊತ್ತಾಗಲಿಲ್ಲವಾ?

ಮನೆಯಲ್ಲಿ ರಾತ್ರಿ ಜಾಸ್ತಿ ಅನ್ನ ಉಳಿದಿದ್ದರೆ ಏನ್ ಮಾಡ್ತಾರೆ ಹೇಳಿ? ಅದನ್ನೇ ಬೆಳಿಗ್ಗೆ ಬಿಸಿ ಬಿಸಿಯಾಗಿ ಚಿತ್ರಾನ್ನ ಮಾಡ್ತಾರೆ.

ಇವಾಗ ಚಿತ್ರನ್ನಾದ ವಿಷಯ ಯಾಕೆ ಹೇಳ್ತಾ ಇದೀನಿ ಅಂದ್ರೆ,
ನಾನು ಹಲವು ದಿನಗಳಿಂದ ಆಫೀಸಿನ ಕೆಲಸಗಳಲ್ಲಿ ಸ್ವಲ್ಪ ಬ್ಯುಸಿ ಇದ್ದೆ.. ಅದಕ್ಕೆ ಬ್ಲಾಗ್ನಲ್ಲಿ ಏನೂ ಬರೆಯೋಕೆ ಆಗಿರಲಿಲ್ಲ. ಏನ್ ಸಾರ್ ಏನೂ ಬರೆದಿಲ್ಲವಲ್ಲಾ? ಅಂತಾ ಕೆಲವರು ಕೇಳಿದರೆ, ಬ್ಲಾಗ್ ಬರೆಯೋದು ಮರೆತು ಹೋಯ್ತಾ? ಅಂತಾ ಕೆಲವರು ಮೂದಲಿಸಿದರು.. ಬರೀತೀರೋ ಇಲ್ವೋ? ನಿಮ್ಮ ಬ್ಲಾಗ್ ಮರೆತು ಹೋಗ್ತಾ ಇದೆ...ಅಂತಾ ಕೆಲವರು ಪ್ರೀತಿಯಿಂದ ಕೋಪ? ಮಾಡಿಕೊಂಡು ಕೇಳಿದಾಗ,
ಇನ್ನೂ ಸ್ವಲ್ಪ ದಿನ ಹೀಗೇ ಇದ್ದರೆ, ನನ್ನನ್ನು ನೀವೆಲ್ಲಾ ಮರೆಯುವ ಮುನ್ಸೂಚನೆಯನ್ನು ಅನುಮಾನ ಇಲಾಖೆ ಕೊಟ್ಟಿದ್ದರಿಂದ ಹೆದರ(ರಿ)ದೇ, ಬೆದರ(ರಿ)ದೇ.. ಈ ಕಡೆ ಸೋಲದೇ.. ಗೆಲ್ಲದೇ.. ಈ ಹಿಂದೆ ಬರೆದದ್ದನ್ನೇ ಬಿಸಿ ಮಾಡಿ ಫ್ರೆಶ್ ಆಗಿ ಚಿತ್ರನ್ನಾ ಮಾಡಿ ನಿಮ್ಮ ಮುಂದೆ ಇಡ್ತಾ ಇದ್ದೀನಿ..

ಈ ಟ್ವೀಟುಗಳನ್ನು ಬ್ಲಾಗಿನಲ್ಲಿ ಬರೆದಿರಲಿಲ್ಲ.. ನನ್ನ ಟ್ವಿಟರ್ ಅಕೌಂಟ್ ನಲ್ಲಿ ಬರೆದಿದ್ದೆ.. ಬ್ಲಾಗೋದುಗರಿಗಾಗಿ ಇಲ್ಲಿ ಮತ್ತೆ ಹಾಕ್ತಾ ಇದ್ದೀನಿ..(ಬರೋಬ್ಬರಿ 82 ಟ್ವೀಟುಗಳು.. ಓದಿ ಸುಧಾರಿಸ್ಕೊಳ್ಳಿ...)
ಇದಕ್ಕೂ ಮೊದಲು ಬರೆದ ಟ್ವೀಟುಗಳು
ಇಲ್ಲಿವೆ..


ಟ್ವಿಟರ್ ನ ಟ್ವೀಟುಗಳು.. ಭಾಗ-2


1) ಮಾನವನ ಮೂಲ ಮಂಗ ಎನ್ನುವುದು ಎಷ್ಟು ದಿಟ...?? ಅವಳು ದಿನಾ ಬೆಳಿಗ್ಗೆ ಗುಡ್ ಮಾರ್ನಿಂಗ್ ಕೋತಿ ಅಂತಾ ಮೆಸೇಜ್ ಕಳಿಸುತ್ತಾಳೆ.

2)
ಅವಳ ಮರೆಯಬೇಕೆಂದು ಕುಡಿದೆ..... ಮತ್ತೆ ನೆನಪಾದಳೆಂದು ಕಣ್ಣೀರಾದೆ......


3)
ಈ ಸಂಸಾರದ ಜವಾಬ್ದಾರಿ ನಿಭಾಯಿಸೋದು ತುಂಬಾ ಕಷ್ಟ... ನಮ್ಮಪ್ಪನಿಗೆ ನಾನು ಮೊದಲನೇ ಮಗ...

4)
ಪ್ರೀತಿಸಿದವರನ್ನೆಲ್ಲಾ ಮದುವೆ ಅಗೋ ಹಾಗಿದ್ರೆ.., ನಾನು ಮೂರನೇ ಕ್ಲಾಸಲ್ಲೇ ನನ್ನ ಟೀಚರ್ ನ ಮದುವೆ ಆಗ್ಬೇಕಿತ್ತು...
(ಇದಕ್ಕೆ ನನ್ನ ಸ್ನೇಹಿತನೊಬ್ಬ ನನಗೆ ಮೆಸೇಜ್ ಮಾಡಿದ್ದ.. ಅವನೇನಾದರೂ ಪ್ರೀತಿಸಿದವರನ್ನೆಲ್ಲಾ ಮದುವೆ ಆಗೋ ಹಾಗಿದ್ರೆ, ಇಲ್ಲಿವರೆಗೆ 36 ಮದುವೆ ಆಗಬೇಕಿತ್ತಂತೆ..!!)

5)
ಕುಡಿಯುವುದು ತುಂಬಾ ಒಳ್ಳೇದು.. ಅವಾಗಲೇ ನಮ್ಮನ್ನು ಪ್ರೀತಿಸುವವರು ನೇನಪಾಗೋದು...
(ಇದನ್ನು ಕೆಲವರು ಆರ್ಕುಟ್ ಸ್ಟೇಟಸ್ ಮೆಸೇಜಿನಲ್ಲಿ ಮತ್ತು ಪ್ರೊಫೈಲ್ ನಲ್ಲಿ ಹಾಕ್ಕೊಂಡಿದಾರೆ..!!)

6)
ಅವಳ ನೆನಪು ಮೊಬೈಲ್ ಥರಾ.. ಸ್ವಿಚಾಫ್ ಮಾಡಿ ಕಣ್ಮುಚ್ಚಿದರೂ, ಅಲಾರಂ ನೆಪದಲ್ಲಿ ಕಾಡಿಸ್ತಾ ಇರುತ್ತೆ..
(ಇದು ಇನ್ನೂ ಕೆ(ಹ)ಲವರಿಗೆ ಅರ್ಥ ಆಗಿಲ್ಲ)

7)
ಈ ಪ್ರಪಂಚವೇ ಬೇಡ ಅನ್ನಿಸೋದು ನಂಬಿದವರು ಕೈಬಿಟ್ಟಾಗ ಮತ್ತು ಜೇಬಲ್ಲಿ ಕಾಸಿಲ್ಲದಿದ್ದಾಗ..
(ನನ್ನ ಸ್ವಂತ ಅನುಭವ.. ನಿಮಗೂ ಆಗಿರಬಹುದು..)

8)
ದಿನವೂ ನೋಡುತ್ತಿದ್ದ ಹುಡುಗ ಒಂದು ಪ್ರಶ್ನೆ ಕೇಳಿದ್ದ..ಉತ್ತರ ಪಡೆಯದೆ ಬೇಸರಗೊಂಡವನನ್ನು ಕರೆಯಲು ಇವಳಿಗೆ ಮಾತು ಬರುತ್ತಿರಲಿಲ್ಲ... (ಇದನ್ನು ಒಂದೆರಡು ಸಾಲಿನ ಕಥೆಗಳಿಗೆ ಸೇರಿಸಬಹುದಿತ್ತೇನೋ?)

9)
ಹುಡುಗಿಯರಿಗೆ ಐ ಲವ್ ಯೂ ಅಂತಾ ಹೇಳೋದೇ ತಪ್ಪು.. ಒಪ್ಪದಿದ್ರೆ ದೂರವಾಗ್ತಾರೆ. ಒಪ್ಪಿದ್ರೆ ಹೆಂಡ್ತಿ ಥರಾ ಅಧಿಕಾರ ಚಲಾಯಿಸ್ತಾರೆ..
(ಇದು ಹಲವರ ಅನುಭವ ಅನ್ಕೋತೀನಿ..)

10)
ಎಲ್ಲಾ ಆತ್ಮ ಕಥೆಗಳು ಹೇಗೆ ಸತ್ಯವಲ್ಲವೋ ಹಾಗೆ ಎಲ್ಲಾ ಬ್ಲಾಗಿಗರು ಲೇಖಕರಲ್ಲ... ನಂ ಥರಾ.
(100% ನಿಜ ಅಲ್ವಾ??)

11)
ನನಗೆ ಗುಣಕ್ಕಿಂತ ರೂಪ ಮುಖ್ಯ,.. ಗುಣ ಬದಲು ಮಾಡಿಕೊಳ್ಳಬಹುದು.. ರೂಪವನ್ನಲ್ಲ.
(ಇದಕ್ಕೆ ನೀವೇನಂತಿರೋ??)

12)
ಪ್ರತಿ ವರ್ಷ ಹುಟ್ಟು ಹಬ್ಬ ಮಾಡಿಕೊಳ್ಳೋಕೆ ಖುಷಿ ಆಗುತ್ತೆ.. ಜೊತೆಗೆ ವಯಸ್ಸಾಯ್ತ್ಹಲ್ಲ ಅಂತಾ ಬೇಜಾರು ಕೂಡ ಆಗುತ್ತೆ..
(ನನಗೆ ಹೀಗೆ ಅನ್ನಿಸ್ತು.. ನಿಮಗೆ ನಿಮ್ಮ ಹುಟ್ಟಿದ ಹಬ್ಬದ ದಿನದಂದು ಅನ್ನಿಸಬಹುದು..)

13)
ಅವನ ಬಿಸಿ ಅಪ್ಪುಗೆಯಲ್ಲಿ ಇವಳಿಗೆ ಒಂದು ಮುತ್ತು ಬೇಕಾಗಿತ್ತು.. ಅಷ್ಟು ಜನರ ಎದುರು ಇವನು ಅಂತೂ ಇಂತೂ ಧೈರ್ಯ ಮಾಡಿದ.. ಬಡ್ಡಿಮಗ ಡೈರೆಕ್ಟರ್ ಕಟ್ ಹೇಳಿಬಿಟ್ಟ!!!!!
(ಇದನ್ನೂ 1-2 ಸಾಲಿನ ಕಥೆಗಳಿಗೆ ಸೇರಿಸಬಹುದಿತ್ತು)

14)
ಗೆಳೆಯ /ಗೆಳತಿಯ ಹುಟ್ಟು ಹಬ್ಬ ಬಂದರೆ ನಂಗೆ ತುಂಬಾ ಖುಶಿ ಆಗುತ್ತೆ.. ಆ ದಿನವನ್ನಾದರೂ ಅವರು ತನ್ನವರೊಂದಿಗೆ ಇರುತ್ತಾರೆ....

15)
ನನಗೆ ಪ್ರಾಣಿಗಳನ್ನು ಹಿಂಸೆ ಮಾಡೋದು ಅಂದ್ರೆ ಆಗಲ್ಲಾ.. ಅದಕ್ಕೇ ರೆಡಿ ಇರೋ ಚಿಕನ್ ಪೀಸ್ ಗಳನ್ನೇ ತಿಂತೀನಿ....

16)
ಒಂದು ಪುಸ್ತಕ ಬಿಡುಗಡೆ ಸಮಾರಂಭವೆಂದರೆ, ಹೊಸಬನನ್ನು ಪರಿಚಯಿಸುವುದು ಅಥವಾ ಹಳಬನನ್ನು ಮೇಲಕ್ಕೆತ್ತುವುದು ಎಂದರ್ಥ..

17)
"ಮಿಸ್ಡ್ ಕಾಲ್ ಕೊಡೋದ್ರಿಂದ ಹುಡುಗಿಯರ ಸೌಂದರ್ಯ ಕ್ಷೀಣಿಸುತ್ತೆ" ಅನ್ನೋ ಒಂದೇ ಒಂದು ಸುಳ್ಳು ತುಂಬಾ ಪ್ರಭಾವಕಾರಿ..ಬೇಕಿದ್ದರೆ ಟ್ರೈ ಮಾಡಿ ನೋಡಿ..
(ಟ್ರೈ ಮಾಡಿದವರ್ಯಾರೂ ಫಲಿತಾಂಶ ತಿಳಿಸಿಲ್ಲವೆಂದು ತಿಳಿಸಲು ವಿಷ(ಸೇವಿಸುತ್ತೇವೆ)ದಿಸುತ್ತೇವೆ..)

18)
ನನ್ನ ಆಪ್ತ ಗೆಳತಿ ನನಗೆ ಬಯ್ಯುವ ಒಂದೇ ಒಂದು ಪದ "NEJBB" NEJBB= Ninge E Janmakke Buddi Baralla
(Credit Goes to Anitha..)

19)
"ಗೆಳತಿಯ ಹುಟ್ಟು ಹಬ್ಬಕ್ಕೆ ಮೊಬೈಲ್ ಪ್ರೆಸೆಂಟ್ ಮಾಡಿದೆ... FM ಇರೋದು ಬೇಕು ಅಂತಾ ವಾಪಸು ಮಾಡಿದ್ದಾಳೆ"..... ದುರುಪಯೋಗಕ್ಕೊಂದು ಉತ್ತಮ ಉದಾಹರಣೆ...

20)
ಆಪ್ತ ಗೆಳತಿಯನ್ನು ಪ್ರೇಯಸಿ ಮಾಡಿಕೊಂಡಿದ್ದೇ ದೊಡ್ಡ ತಪ್ಪಾಯ್ತು.. ಮೊದಲು ಸುಮ್ಮನಿದ್ದವಳು, ಈಗ ನನಗಾಗಿ ಸಿಗರೇಟ್ ಸೇದುವುದು ಬಿಡು ಅಂತಾ ರಾಗ ತೆಗೆದಿದಾಳೆ....

21)
ನೀರನ್ನು ಜಾಸ್ತಿ ಕುಡಿಯುವುದೂ ಸಹ ಒಂದು ಉತ್ತಮ ವ್ಯಾಯಾಮ.. TOILET ದೂರದಲ್ಲಿದ್ದರೆ ಇನ್ನೂ ಒಳ್ಳೇದು..
(ಯಾವುದೋ ಒಂದು ನನ್ನ ಫೇವರಿಟ್ ಬ್ಲಾಗಿನಲ್ಲಿ ತೆಳ್ಳಗಾಗಲು ನೀಡಿದ್ದ ಸಲಹೆ.. Credit Goes to that ಬ್ಲಾಗೋತ್ತಮ)

22)
ಚಾಟಿಂಗ್ ಮಾಡಲು ಬೋರಾಗುತ್ತಿದೆ ಎಂದರೆ.. ಹೊಸ ಗರ್ಲ್/ಬಾಯ್ ಫ್ರೆಂಡ್ ಸಿಕ್ಕಿಲ್ಲವೆಂದೆ ಅರ್ಥ..

23)
ಅವನಿಗೆ ಕಾಫಿ ಅಂದರೆ ಇಷ್ಟ ಅಂತಾ ಇವಳು ಇಲ್ಲಿ ಕಾಫಿ ಕುಡಿಯುತ್ತಿದ್ದರೆ, ಅವಳಿಲ್ಲದೇ ಕುಡಿಯಲು ಮನಸ್ಸಾಗದೇ ಅವನು ಅಲ್ಲಿ ನೆಲಕ್ಕೆ ಚೆಲ್ಲಿದ್ದ...
(ಇದೂ ಸಹ ಒಂದೆರಡು ಸಾಲಿನ ಕಥೆಗಳ ಗುಂಪಿಗೆ..)

24)
ಪ್ಯಾಕ್ ಗಟ್ಟಲೇ ಸಿಗರೇಟು ಸೇದಿದೆ.ಎಚ್ಚರವಾಗದಷ್ಟು ಕುಡಿದೆ..ಹಗಲು ರಾತ್ರಿ ಇಸ್ಪೀಟ್ ಆಡಿದೆ..ಹುಚ್ಚನಂತೆ ಊರೂರು ಅಲೆದೆ.ಏನು ಮಾಡಿದರೂ ಅವಳ ನೆನಪು ಹೋಗುತ್ತಿಲ್ಲ
(ಹೊಸ ಐಡಿಯಾ ಇದ್ರೆ ಕೊಡಿ..)

25)
ಏನಾದ್ರೂ ಬರೆಯೋಣಾ ಅಂತಾ ಯೋಚಿಸಿದೆ..ನೆನಪು ಮಾಡಿಕೊಂಡೆ, ತಲೆ ಕೆರೆದುಕೊಂಡೆ.. ಏನೂ ಬರಲಿಲ್ಲವಾದರೂ, ಕೈಗೆ ಕೂದಲು ಕಿತ್ತುಬಂದಿತ್ತು.
(ಎಷ್ಟು ಜನಕ್ಕೆ ಬಂದಿದೆಯೋ?)

26)
ಅವಳಿಗಾಗಿ ನೂರಾರು ಕಿಲೋಮೀಟರ್ ಸಾಗಿ ಬಂದಿದ್ದೆ,,, ಆದರೆ ಅವಳಿಗೆ ಇವತ್ತು ಕಾಲೇಜಿನಲ್ಲಿ ಸ್ಪೆಶಲ್ ಕ್ಲಾಸ್ ಇದೆಯಂತೆ..

27)
ನನಗೀಗ ತುಂಬಾ ತಾಳ್ಮೆ ಬಂದಿದೆ ಅನ್ಸುತ್ತೆ... ನೆನ್ನೆ ಎರಡು ಧಾರವಾಹಿಗಳನ್ನು ಸತತವಾಗಿ ನೋಡಿದೆ..

28)
ಕೆಲವು ಸತ್ಯಗಳು ಗೊತ್ತಿದ್ದರೂ ಸಹ ಗೊತ್ತಿಲ್ಲದಿರುವಂತೆ ಇರಬೇಕು.. ಇದರಿಂದ ಸಂಬಂಧಗಳು ಬಹಳ ದಿನ ಉಳಿಯುತ್ತವೆ..

29)
ವಿಮಾನದ ಕಿಟಕಿಯಿಂದ ಹೊರಗಡೆ ನೋಡ್ತಾ ಇದಾನೆ ಅಂದ್ರೆ.. ಇದೇ ಮೊದಲ್ನೇ ಬಾರಿ ವಿಮಾನ ಹತ್ತಿದಾನೆ ಅಂತಾ ಅರ್ಥ

30)
ಆರ್ಕುಟ್ ಬೇಸರವಾಗಿದೆ ಅಂದ್ರೆ, ಅವನು/ಅವಳು Friend Request Accept ಮಾಡಿಲ್ಲಾ ಅಂತಾ ಅರ್ಥ

31)
ಸುಂದರವಾಗಿದಾಳೆ ಅಂತಾ ಕೂಡಲೇ ಪ್ರಪೋಸ್ ಮಾಡಬೇಡಿ.. ಯಾರ್ರಿಗ್ಗೊತ್ತು.. ಅವಳ ಅಕ್ಕ/ತಂಗಿ ಇನ್ನೂ ಸುಂದರವಾಗಿರಬಹುದು.
(ಅತ್ಯಮೂಲ್ಯ ಸಲಹೆ ಅನ್ಕೊಂಡ್ರೂ ಪರವಾಗಿಲ್ಲ...)


32)
ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿ ಕನಸುಗಳನ್ನು ಕಾಣಬೇಕು.. ಅವು ನಿಜವಾಗುವಂತಿದ್ದರೆ ಮಾತ್ರ..

33)
ಹುಡುಗ ತುಂಬಾ ಚನ್ನಾಗಿ ಶಾಯರಿ ಬರೀತಾನೆ ಅಂದ್ರೆ, ಹುಡುಗಾನೂ ಚನ್ನಾಗಿ ಇರಬೇಕು ಅಂತೇನಿಲ್ಲ..(ಭವಾನಿ ತಂಗಿ ಸಜೆಷನ್... ನನ್ನ ನೋಡಿಯೇ ಹೇಳಿದ್ದಾಳೆ..)

34)
ಬೇಡವೆಂದರೂ ಕಾಡುವಂತದಕ್ಕೆ "ಅವಳ/ಅವನ ನೆನಪು" ಅನ್ನಬಹುದು..
(
ಅಥವಾ ಅಳಿಸಲಾಗದ ಪಾಠಗಳು ಅನ್ನಬಹುದು..- ಇದು Kumara Subrahmanya Muliyala ಇವರ ಮಾತು)

35)
ಒಳ್ಳೆ ಪಾತ್ರವನ್ನು ಮಾಡಿದಕ್ಕೆ, ಒಳ್ಳೆಯವನಾಗಿರೆಲೇಬೇಕೆಂಬ ನಿಯಮವಿರದಿದ್ದರೂ ಸಹ ಅವರಿಂದ ಸದಾ ಒಳ್ಳೆಯತನವನ್ನೇ ನಿರೀಕ್ಷಿಸುವವರಿಗೆ "ಭಾರತೀಯರು" ಅನ್ನಬಹುದು

36)
ಹೆಂಡತಿಗಿಂತ ಸುಂದರವಾದ ಚೆಲುವೆಯರು ಹೆಚ್ಚಾಗಿ ಪಕ್ಕದ ಮನೆಯವನ ಹೆಂಡತಿಯಾಗಿರುತ್ತಾಳೆ
(ಹಿರಿಯರ ಮಾತು.. ನನ್ನದಲ್ಲ..)

37)
ಅವಳ ಮುಖ ಅವಳ ನಗು ಅವಳ ಮಾತು ನನ್ನ ನಿದ್ದೆಯನ್ನು ಕೆಡಿಸಿತ್ತು..ಸುಮ್ಮನೆ ಕಾಲೇಜಿನ ಪುಸ್ತಕ ಹಿಡಿದೆ..ಅವಳನ್ನು ಮರೆಸಿತ್ತು,.ನಿದ್ದೆಯನ್ನು ತರಿಸಿತ್ತು.
(ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇನೆ..)

38)
ಉಡುಗೊರೆ ಬೇಕೆಂದು ಪೀಡಿಸುತ್ತಿದ್ದವಳಿಗೆ ಮರೆಯಲಾಗದಂತಹ ಉಡುಗೊರೆ ನೀಡಿದ್ದ..ಮೂರು ತಿಂಗಳು ತುಂಬುವಷ್ಟರಲ್ಲಿ ಓಡಿ ಹೋಗಿದ್ದ..

39)
ನಮ್ ಹುಡುಗೀರ್ಗೂ software ಹುಡುಗೀರ್ಗೂ ಇರೋ ವ್ಯತ್ಯಾಸ ಅಂದ್ರೆ ಅವರು ದುಬಾರಿ COSMETICS ಖರೀದಿಸ್ತಾರೆ. ಆದರೆ ನಮ್ ಹುಡುಗೀರ boy frnd ಹತ್ರ ಅಷ್ಟೊಂದು ದುಡ್ಡು ಇರಲ್ಲ..

40)
ಚುನಾವಣೆ ಅಂದ್ರೆ ಕೇವಲ ಆಶ್ವಾಸನೆಗಳ ಸುನಾವಣೆ.. ಆಗುವುದಿಲ್ಲ ಯಾವುದೂ ಚಲಾವಣೆ..ಆಗದು ಎಂದೂ ಬದಲಾವಣೆ.. ತಪ್ಪದು ನಮ್ಮಯ ಬವಣೆ..

41)
ಹೆಣ್ಣು ಭ್ರೂಣ ಹತ್ಯೆ ಮಹಾಪಾಪ.. ಇದರಿಂದ ಹುಡುಗಿಯರಿಗೆ ಡಿಮ್ಯಾಂಡ್ ಜಾಸ್ತಿ ಆಗುತ್ತೆ.. ಹುಡುಗರ ಮಧ್ಯೆ ಕಾಂಪಿಟೇಶನ್ ಜಾಸ್ತಿ ಆಗುತ್ತೆ..
(ಕೆಲವರ ಗೂಗಲ್ ಟಾಕ್ ಮೆಸೇಜಾಗಿದೆ..)

42)
ಅಧಿಕಾರಿಯೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ದೂರು ಹೇಳ್ತಾ ಇದಾನೆ ಅಂದ್ರೆ, ಆತ ಒಳ್ಳೆಯ ಆಡಳಿತಗಾರನಾಗಿಲ್ಲವೆಂದೇ ಅರ್ಥ

43)
ನಾ ಪಕ್ಕಾ VEG ಅಂತ ಹೇಳ್ಕೊಂಡು ನನ್ನ ಮದುವೆ ಆದಳು..ಆದರೆ,ಇದು ಸುಳ್ಳು ಅಂತಾ ಇವಾಗ ನಂಗೆ ಗೊತ್ತಾಗಿದೆ.ಅದು ಬೇಕು ಇದು ಬೇಕು ಅಂತಾ ದಿನಾ ನನ್ನ ತಲೆ ತಿಂತಿದಾಳೆ..


44)
ಇಷ್ಟು ದಿನ ಆದ್ರೂ..ಅವಳು ನನ್ನ Orkut Friend Requst Accept ಮಾಡಿಲ್ಲಾ ಅಂದ್ರೆ,ಅವಳು ಆನ್ ಲೈನ್ ನಲ್ಲಿ ಇಲ್ಲಾ ಅಂತಾ..ಅಥವಾ ಅವಳಿಗೆ ಟೇಸ್ಟ್ ಇಲ್ಲಾ ಅಂತಾ ಅರ್ಥ..

45)
ಹುಡುಗೀರು ಫೋನ್ ಮಾಡಲಿ ಅಂತಾ ORKUTನಲ್ಲಿ ನಿನ್ನ Mb. No. ಹಾಕಿದಿಯೇನೋ ತರ್ಲೆ ಅಂತಾ ಶಶಿ ಅಕ್ಕ ಬೈದ್ರು..ನನ್ ದುರಾದೃಷ್ಟ..ಇನ್ನೂ ಯಾರೂ ಫೋನ್ ಮಾಡಿಲ್ಲ.
(ಇವಾಗ ಇದು ಸುಳ್ಳಾಗಿದೆ..)

46)
ಲೇ ತಿಕ್ಲು ಮನಸೇ ನೀ ಕನಸನ್ನು ಯಾಕೆ ಕಾಣ್ತಿ?ನನ್ನ ಯಾಕೆ ಹಾಳ್ಮಾಡ್ತಿ?ಈಗ ನೋಡು ದಿನಾ ರಾತ್ರಿ ನಿದ್ದೆ ಬರ್ತಿಲ್ಲ...ಇಂತಿ ನಿನ್ನ ತಲೆ
(ಪ್ರತಿಭಾ ಪಾಟೀಲ್ ಮೇಡಮ್ ಇಷ್ಟಪಟ್ಟಿದ್ದು..)

47)
ಹಾಡು ಹೇಳಿಕೊಳ್ಳೋಕೆ ಬಾಥ್ ರೂಂ ಒಂದೇ ಇದ್ದರೆ ಸಾಲದು..ಸ್ನಾನ ಮಾಡಲು ತಣ್ಣಿರು ಇರಬೇಕು ಮತ್ತು ಬಾಗಿಲಿಗೆ ಚಿಲ್ಕ ಇರಬಾರದು..
(ಎಲ್ಲೋ ಓದಿದ್ದು..)

48)
ಕುಡಿದು ತೂರಾಡುತ್ತಾ ಬಿದ್ದವನನ್ನು ಕಂಡು ಎಲ್ಲರೂ ದೂರ ಸರಿದರು.. ಕುತೂಹಲ ತಡೆಯಲಾಗದೇ ಅವನ ಬಳಿ ಹೋಗಿ ಕೇಳಿದೆ.. "ಇಷ್ಟೊಂದು ಕಿಕ್ಕು ಕೊಡೋ ಬ್ರಾಂಡು ಯಾವುದು?"

49)
ಕನಸಿನಲ್ಲೂ ಕೈ ಕೊಡಬೇಡ ಗೆಳತಿ ಆ ನೋವ ಕನಸಿನಾಚೆಗೂ ನ ಸಹಿಸಲಾರೆ ಯಾಕೆ೦ದರೆ ಕನಸಿನಲ್ಲಿ ನಾ ಕುಡಿವ ವಿಷದಿಂದ ನಾ ಸಾಯಲಾರೆ.(ಮೂಲ: ಸೋಮಾರಿ ಪ್ರಶಾಂತನ ಬ್ಲಾಗ್.. ಇಂಥವನ್ನು ಸಕತ್ತಾಗಿ ಬರೀತಾನೆ.. ಇಲ್ಲಿ ನೋಡಿ.. )

50)
ಸುಮ್ಮನೆ ದಿನಕ್ಕೆರಡು ಬಾರಿ ಅವಳ ಪ್ರೋಫೈಲ್ ವಿಸಿಟ್ ಮಾಡ್ತೀನಿ.. ರಿಜೆಕ್ಟ್ ಮಾಡಿದ್ರೆ ಬೇಜಾರಾಗುತ್ತೆ ಅಂತಾ ಫ್ರೆಂಡ್ ರಿಕ್ವೆಸ್ಟ್ ಕಳಿಸೋಕೆ ಹೆದರ್ತೀನಿ..

51)
ಗೆಳೆಯನೊಬ್ಬನ ಜಗಳವು ಅವನ ಹೆಂಡತಿ ಅಡಿಗೆ ಮನೆಗೆ ಹೋಗುವುದರೊಂದಿಗೆ ಮುಕ್ತಾಯವಾಗುತ್ತದೆ.. ಅವಳ ತವರುಮನೆ ಚಿತ್ರದುರ್ಗ ಅಂತೆ..
(ಇದೇ ಥರದ್ದನ್ನು ಬೀಚಿ ಈ ಮೊದಲೇ ಬರೆದಿಟ್ಟಿದ್ದಾರಂತೆ...??)

52)
ನಾನು ಸಂತೋಷವಾಗಿದೀನಿ ಅಂದ್ರೆ, ಇವತ್ತು ಆಫೀಸಿಗೆ ರಜ ಸಿಕ್ಕಿದೆ ಹಾಗೂ ಜೇಬಲ್ಲಿ ದುಡ್ಡಿದೆ ಅಂತಾ ಅರ್ಥ..

53)
ದೆವ್ವ,ಭೂತ,ಪಿಶಾಚಿ,ಮೋಹಿನಿಗಳು ಇರುವುದೆಲ್ಲವೂ ಸುಳ್ಳು ಅಂತಾ ವಾದಿಸುತ್ತಿದ್ದವನೊಬ್ಬ ಈಗ ಸೋಲೊಪ್ಪಿಕೊಂಡಿದ್ದಾನೆ.ಅವನಿಗೆ ಈಗ ಮದುವೆಯಾಗಿ ಮೂರು ತಿಂಗಳಾಗಿದೆ..
(ಇದೇ ಥರದ್ದನ್ನು ಬೀಚಿ ಈ ಮೊದಲೇ ಬರೆದಿಟ್ಟಿದ್ದಾರಂತೆ...??)


54)
ನನ್ನವಳ ವರ್ಣಿಸಿ ಬರೆದ ಕವನವನ್ನು ಪೇಪರಿನಲ್ಲಿ ಹಾಕಿಸಿದ್ದೇ ದೊಡ್ಡ ತಪ್ಪಾಗಿದೆ.ಅವಳ ಅಡ್ರಸ್ ಕೇಳಿಕೊಂಡು ನೂರಾರು ಪತ್ರಗಳು ಬಂದಿವೆಯಂತೆ..


55)
ಸುಮ್ಮನಿದ್ರೆ,ಫೋನ್ ಮಾಡೋ ಜಾಣ ಅಂತಾಳೆ.ಮಾಡಿದ್ರೆ,ನಂಜೊತೆ ಮಾತಾಡಬೇಡ ಹೋಗೋ ಅಂತಾ ಜಗಳ ಮಾಡ್ತಾಳೆಎಲ್ಲ ಹುಡುಗೀರೂ ಹೀಗೇನಾ?
(ಉತ್ತರ ಸಿಕ್ಕಿಲ್ಲ..)

56)
ನಾಬರೆದ ಕಥೆಗಳಲ್ಲಿ,ಟ್ವೀಟುಗಳಲ್ಲಿರೋ ಹಾಗೆ ನನಗೆ ಯಾರೂ ಗರ್ಲ್ ಫ್ರೆಂಡ್ಸ್ ಇಲ್ಲ.ನಂಗಿನ್ನೂ ಅಂಥಾ ಹುಡುಗಿ ಸಿಕ್ಕಿಲ್ಲ.ಇನ್ನೂ3ವರ್ಷ ಯೋಚನೆ ಇಲ್ಲಾ
(ಇದ್ಯಾಕೋ ಓವರ್ ಆಯ್ತಾ?)

57)
ಒಬ್ಬಳು ಹುಡುಗಿ ಸುಂದರವಾಗಿದಾಳೆ ಅಂದ್ರೆ, ಅವಳಿಗಿಂತ ಅವಳ ಅಣ್ಣಂದಿರು ಜಾಸ್ತಿ ಪವರ್ ಫುಲ್ ಆಗಿರ್ತಾರೆ ಅಂತಾ ಅರ್ಥ.

58)
ಕೆಲವರುತುಂಬಾಹಚ್ಚಿಕೊಳ್ತಾರೆ.ಅಕ್ಕ/ತಂಗಿ,ಗೆಳೆಯ/ಗೆಳತಿಯಿರಬಹುದು1ಲೆವೆಲ್ ಗೆ ಬಂದಮೇಲೆ ಇದ್ದಕ್ಕಿದ್ದಂತೆಅಪರಿಚಿತರಾಗಿಬಿಡ್ತಾರೆ ಗೊತ್ತಿದ್ದೂ ಗೊತ್ತಿಲ್ಲದವರ ಥರಾ..
(ಈಗ ಪ್ರತಿಭಾ ಪಾಟೀಲ್, ದೀಪಾ.. ಇನ್ನೂ ಹಲವರ ಥರಾ..)

59)
ಪ್ರಪಂಚವೇ ಗೆದ್ದ ವೀರನೊಬ್ಬ ಎದುರಾಳಿಗಳಿಲ್ಲದೇ ಮಂಕಾದ...


60)
ನನಗೂ ಲವ್ ಲೆಟರ್ ಬರೀಬೇಕು ಅಂತಾ ತುಂಬಾನೇ ಆಸೆ.. ಆದರೆ, ಯಾರಿಗೆ ಅನ್ನುವುದೇ ಜಿಜ್ಞಾಸೆ...


61)
ಸುಮ್ಮನೆ ಚಿಕ್ಕ ಮಕ್ಕಳನ್ನು ಕರೆದು "ಅಪ್ಪ" ಪದದ ವಿರುದ್ಧ ಪದ ಕೇಳಿ ನೋಡಿ.. 100% "ಅಮ್ಮ" ಅಂತಾನೇ ಹೇಳೋದು.

62)
ನನ್ನ ಮಗನನ್ನು ಕಂಡ್ರೆ ಇವಾಗ ಹೊಟ್ಟೆ ಉರೀತಾ ಇದೆ.. ಇವನು ಬಂದ ತಿಂಗಳಿಗೇ ಅವಳು ನನಗೆ ಕೊಡೋ ಮುತ್ತುಗಳ ಸಂಖ್ಯೆ ಕಮ್ಮಿ ಮಾಡಿದಾಳೆ..
(ಬ್ಲಾಗರ್ ಸವಿತಾ ಮೇಡಮ್ ಇಷ್ಟಪಟ್ಟಿದ್ದು..)

63)
ಹೃದಯ ಕದಿಯಲು ಸರಿರಾತ್ರಿಯಲ್ಲಿ ಅವಳ ಮನೆಗೆ ಹೋದೆ.ಯಾರ ಕಣ್ಣಿಗೆ ಬೀಳಲಿಲ್ಲವಾದರೂ ಅವಳ ಮನೆ ನಾಯಿ ಮರಿಯ ಕಣ್ಣಿಗೆ ಬಿದ್ದೆ.ಕೊನೆಗೆ ಅದೊಂದನ್ನೇ ಕದ್ಕೊಂಡು ಬಂದೆ..
(ಮತ್ತೇನೂ ಸಿಗಲಿಲ್ವಾ? ಅಂತಾ ಕಾಲೆಳೆದವರು ಹಲವರು..)

64)
ಹೃದಯ ಕದಿಯಲುಇನ್ನೊಂದು ರಾತ್ರಿ ಹೋದೆಅವಳಪ್ಪನ ಕೈಗೆ ಸಿಕ್ಕುಬಿದ್ದು ಕಳ್ಳ ಅಂತಾ ಅವಳೆದುರಿಗೇ4ಒದೆ ತಿಂದೆ.ಸತ್ಯ ಹೇಳಿದೆಜೋರಾಗಿ ನಕ್ಕರು.ಇವಾಗ ನಾನವರ ಮನೆ ಅಳಿಯ

65)
ಹೃದಯವನ್ನು ಯಾವತ್ತೂ ಖಾಲಿ ಇಡಬಾರದು.. ಸುಮ್ಮನಾದರೂ ಅಲ್ಲಿ ಯಾರನ್ನಾದರೂ(ಸಿನಿಮಾದವರನ್ನಾದರೂ) ಕೂರಿಸಿರಬೇಕು ಇಲ್ಲಾಂದ್ರೆ, ಕದ್ದುಕೊಂಡು ಹೋಗೋದಂತೂ ಗ್ಯಾರಂಟಿ..
(ಸುಂದರವಾಗಿರುವವರಿಗೆ ಮಾತ್ರ ಅನ್ವಯಿಸುತ್ತೆ.. ನನ್ನಂಥವರಿಗಲ್ಲಾ..)

66)
ಜೀವನದಲ್ಲಿ ನಾವು ಕಷ್ಟಗಳನ್ನು ಎದುರಿಸುವುದರಿಂದ ಸಿಗುವ ಲಾಭವೆಂದರೆ, ಕಷ್ಟಗಳು ಕಳೆಯುವಷ್ಟರಲ್ಲಿ ನಮ್ಮ ಒಳ್ಳೆ ಸ್ನೇಹಿತರು ಯಾರು ಅನ್ನೋದು ಅರ್ಥವಾಗಿರುತ್ತದೆ.

67)
ನೂರು ಖುಶಿ ಇದ್ರೂ ಸಾಲದು ಒಂದು ದುಖ ಮರೆಯೋಕೆ! ಒಂದೇ ಒಂದು ದುಃಖ ಸಾಕು ಜೀವನ ಪೂರ್ತಿ ಕೊರಗೋಕೆ- ನನ್ನ ಗೆಳತಿ ಶುಭ ಶಂಕರಿ ಹೇಳಿದ್ದು..


68)
"ಕಬ್ಬಿಣ ಕಾದಾಗಲೇ ಮೆತ್ತಗಾಗೋದು ಅಂತಾರೆ. ಅದಕ್ಕೇ ಇರಬೇಕು, ಹುಡುಗಿಯರು ಹುಡುಗರನ್ನು ನೂರಾರು ದಿನಗಳವರೆಗೆ ಕಾಯಿಸಿ, ಅವರನ್ನು ಮೆತ್ತಗೆ ಮಾಡಿದ ಮೇಲೆಯೇ ಆ ಮಧುರ ಮಾತುಗಳನ್ನು ಹೇಳಿ, ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ ಅನ್ಸುತ್ತೆ..
( ಪ್ರೇಮಿಗಳ ದಿನದಂದು ಬರೆದಿದ್ದು..ಗೆಳೆಯನೊಬ್ಬನ ಈ-ಮೇಲ್ ನಲ್ಲಿ ಹರಿದಾಡ್ತಿದೆ...)

69) ಪ್ರೀತಿಸಿ ಮದುವೆಯಾಗೋದಕ್ಕೂ, ಮದುವೆಯಾಗಿ ಪ್ರೀತಿಸೋದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಯಾವುದನ್ನು ಆರಿಸಿಕೊಳ್ಳುತ್ತೀರೋ, ನಿಮಗೆ ಬಿಟ್ಟಿದ್ದು..

70)
ಸಂತೋಷವಾಗಿ, ಸ್ವಲ್ಪವಾದ್ರೂ ನೆಮ್ಮದಿಯಿಂದ ಜೀವನ ಕಳೆಯಬೇಕು ಅಂದ್ರೆ, ತಾವಾಗಿ ತಾವೇ ಯಾವುದೇ ಸಮಸ್ಯೆಗಳನ್ನು ಹುಟ್ಟುಹಾಕಿಕೊಳ್ಳಬಾರದು. ಉದಾ: AFFAIR

71)
ಅಪ್ಪಟ ಪ್ರೀತಿ ಅನ್ನುವುದು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕವರೆಲ್ಲರೂ ಮದುವೆಯಾಗಲು ಪ್ರೀತಿಸಿರುವುದಿಲ್ಲ.


72)
ಬೇಡವಾದಾಗ ಜೊತೇಲೇ ಬಿದ್ದು ಸಾಯೋನಿಗೆ, ಬೇಕಾದಾಗ ಕೈಗೆ ಸಿಗದೇ ನಮ್ಮಿಂದ ಉಗಿಸಿಕೊಳ್ಳೋನಿಗೆ ಕ್ಲೋಸ್ ಫ್ರೆಂಡು ಅನ್ನಬಹುದು...

73)
ಜೀವನದ ಪ್ರತಿ ವಿಷಯದಲ್ಲಿ ಮೂಗು ತೂರಿಸ್ಕೊಂಡು, ಕಿರಿ ಕಿರಿ ಮಾಡೋ ಹಕ್ಕನ್ನು ಹೇಳದೇ ಕೇಳದೇ ಚಲಾಯಿಸೋನೆ ನಿಜವಾದ ಕ್ಲೋಸ್ ಫ್ರೆಂಡು

74)
ನಾವು ಸದಾ ಅವರ ಬಗ್ಗೇನೇ ಯೋಚನೆ ಮಾಡ್ತಾ ಇದೀವಿ ಅಂದ್ರೆ, ಅವರು ನಮ್ಮ ಪ್ರೀತಿ ಪಾತ್ರರಾಗಿರುತ್ತಾರೆ. ಅಥವಾ ಅವರು ನಮ್ಮ ಶತ್ರು ಆಗಿರುತ್ತಾರೆ
(ಎಲ್ಲೋ ಕೇಳಿದ್ದು ಅನ್ಸುತ್ತೆ..)


75)
Selfish ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕೇ? ಪ್ರೀತಿಸಿದವಳು ನಿಮ್ಮನ್ನು ಬಿಟ್ಟು ಹುಡುಗನ ಜೊತೆ ಹಲ್ಕಿರಿದು ಮಾತನಾಡುವುದನ್ನು ನೋಡಿ.. ಅರ್ಥ ಆಗುತ್ತೆ.
(ನನಗೆ ಅರ್ಥ ಆದ ಮೇಲೇನೇ ಬರೆದಿದ್ದು..)

76)
ಈ ಹುಡುಗಿಯರೇ ಹೀಗೆ.. ಯಾವಾಗಲೂ ಹುಡುಗರಿಗೆ ಮೋಸ ಮಾಡ್ತಾರೆ.. ನನ್ನವಳು ಕನಸಿನಲ್ಲಿ ಬರುವೆನೆಂದು ಮಾತು ಕೊಟ್ಟವಳು... ನಿದ್ದೆಯನ್ನೇ ಕೊಡದೇ ಮೋಸ ಮಾಡಿದಳು....


77)
ಕವಿಗಳ ಉಗಮಕ್ಕೆ ಹುಡುಗಿಯರೇ ಕಾರಣ, ಯಾಕೆಂದರೆ, ಪ್ರತಿ ಭಗ್ನ ಪ್ರೇಮಿಯೂ ಸಹ ಕವಿಯೇ...78)
ನಮ್ಮನ್ನು ಪ್ರೀತಿಸಿದವರು ನಮ್ಮನ್ನು Neglect ಮಾಡಿದರೆ, ಅದರಿಂದ ಉಂಟಾಗೋ ತಳಮಳ ಅಷ್ಟಿಷ್ಟಲ್ಲ..ಒಮ್ಮೊಮ್ಮೆ ತುಂಬಾನೇ ದುಃಖ ಕೂಡಾ ಆಗುತ್ತೆ ಅಲ್ವಾ??


79)
ಫೋಟೋ ಅಷ್ಟೆ ನೋಡಿ ಯಾರು ಯಾರಿಗೂ ಮನಸ್ಸು ಕೊಡಬಾರದು. ಫೋಟೋ ಕನಸು ಇದ್ದ ಹಾಗೆ. ಅವರಿಗೆ ಹೇಗೆ ಬೇಕೋ ಹಾಗೆ ತಿದ್ದಿ ತೀಡಿ ಅಂದವಾಗಿರಿಸಿರುತ್ತಾರೆ. ಅದಕ್ಕೆ ಸುಂದರವಾಗಿರುತ್ತೆ..


80)
ಪ್ರೀತಿ ಅನ್ನೋದು ಗೋಧೂಳಿ ಸಮಯದ ಥರಾ ಹಿತವಾಗಿರುತ್ತದೆ. ಪ್ರೀತಿ ಕಡಿಮೆಯಾದರೆ, ಬರಗಾಲ... ಪ್ರೀತಿ ಜಾಸ್ತಿಯಾದರೆ, ಚಳಿಗಾಲ.......

81)
ನನ್ನವಳು ದಿನಾ ಬೆಳಿಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಿ, ಗಣೇಶನ ಗುಡಿಗೆ ಹೋಗಿ ಬರ್ತಾಳಂತೆ.ನಾನೂ ಟ್ರೈ ಮಾಡಿದೆ. ಇವಾಗ ಶೀತ ಆಗಿದೆ...


82)
ನಾ ಬ್ಲಾಗ್ ಬರೆಯೋದನ್ನು ನಿಲ್ಲಿಸಿದರೆ ನರಕಕ್ಕೆ ಹೋಗ್ತೀನಂತೆ.. ನನ್ನ ಬ್ಲಾಗ್ ಅಭಿಮಾನಿ ಅವಿನಾಶ್ ಹೇಳಿದ್ದು...

9 comments:

sunaath said...

ತುಂಬಾ ಸಮಯದ ನಂತರ ದರ್ಶನ ಕೊಟ್ಟಿರಿ. ನಿಮ್ಮ ಟ್ವೀಟ್-ನಗೆಹನಿಗಳನ್ನು ಓದಿ ಖುಶಿಪಟ್ಟೆ. ಆದರೆ ೧೦ನೆಯ ನಂಬರಿನ ಟ್ವೀಟ್ ಮಾತ್ರ ಪೂರಾ ಸುಳ್ಳು!

Shashi jois said...

ಶಿವೂ,
ನಿನ್ನ ಎಲ್ಲಾ 82 ಚಿತ್ರಾನ್ನ ಟ್ವೀಟ್ ಗಳು ಸೊಗಸಾಗಿತ್ತು ಕಣೋ..ನನಗೆ ನಿದ್ದೆ ಬರಲು 37 ನ್ನು ಫಾಲೋ ಮಾಡ್ತಿದ್ದೀನಿ ಹ್ಹಾ ಹ್ಹಾ ಹ್ಹಾ

Jivith Dsouza said...

Blog Thumab Channgide

To Buy And Sell Liberty reserve india

Visit MAdi http://buynselllibertyreserve.hpage.com

manasu said...

hahha tumba chennagide chitranna....

Anonymous said...

modala bheti nimma blog ge.. sakattagi baradiree :)

manasa.jakkali@gmail.com said...

first visit nimma blog ge ... mast bariteeree :) .. nija shaayaree bariyorella sunadavaagirbeku antenilla ;) ... bariyorella lekhakaru alla :)

ವಿಕಾಸ್ ಹೆಗಡೆ said...

ಗುರುವೇ.. ಸೂಪರ್ರಾಗಿದೆ...

ಇಷ್ಟೆಲ್ಲಾ ಒಟ್ತಿಗೇ ಯಾಕ್ ಕೊಟ್ರಿ.. ಹೆವ್ವೀ ಮೀಲ್ಸ್ ..

Sitaram said...

ಅದ್ಬುತವಾದ ಸ೦ಗ್ರಹಗಳು. ಮನಸ್ಸಿಗೆ ಮುದ ನೀಡಿದವು. ತು೦ಬಾ ಕೊಟ್ಟುಬಿಟ್ಟಿರಿ ಒಮ್ಮೇಲೆ.... ಅಜೀರ್ಣ ಅಗುತ್ತೆನೋ ಅ೦ತಾ ಭಯ.

Anonymous said...

Le Yalavathi En samachara Nan Thippi from Madhugiri.