ಖಾಯಂ ಓದುಗರು..(ನೀವೂ ಸೇರಬಹುದು)

28 March 2010

ಮನೆಯಲ್ಲಿ ಒಪ್ಪದಿದ್ರೆ ನಿನ್ನನ್ನು ಹಾರಿಸಿಕೊಂಡು ಹೋಗ್ತೇನೆ.

(ಇದೇ ಮೊದಲ ಪ್ರಯತ್ನ ಎಂಬಂತೆ ಒಂದು ಲವ್ ಲೆಟರ್ ಬರೆದು ವಿಜಯ ಕರ್ನಾಟಕ ಪೇಪರ್ ಗೆ ಕಳಿಸಿದೆ. ಇವತ್ತಿನ ದಿ: 28-03-2010) ರ ಲವಲವಿಕೆ ಪೇಜ್ ನಲ್ಲಿ "ಈ ಗುಲಾಬಿಯು ನಿನಗಾಗಿ" ಶೀರ್ಷಿಕೆಯಡಿ ಪ್ರಕಟಿಸಿದ್ದಾರೆ..
ನಿಮಗಿಷ್ಟವಾದರೆ ನನಗೂ ಸಂತೋಷ.. ಇಷ್ಟವಾಯಿತು ಅಂತಾ ಯಾರಾದ್ರೂ ಸುಂದರವಾದ ಹುಡುಗಿಯರು ನನ್ನ ಲವ್ ಮಾಡೋಕೆ ಶುರು ಮಾಡಿದರೆ, ಇದಕ್ಕೆ ನಾನು ಯಾವುದೇ ಜವಾಬ್ದಾರಿಯನ್ನು ಹೊರಿಸಿಕೊಳ್ಳುವುದಿಲ್ಲ..)

-ಯಳವತ್ತಿನನ್ನವಳಿಗೆ...

ನೀನು ಹೀಗೆ ನನಗೆ ಮೋಸ ಮಾಡಬಾರದಾಗಿತ್ತು ಕಣೇ.. ಕನಸಿನಲ್ಲಿ ಬರುವೆನೆಂದು ಮಾತು ಕೊಟ್ಟು, ನನ್ನ ನಿದ್ದೆಯನ್ನು ಕದ್ದು, ನಿದ್ದೆಯನ್ನೇ ಕೊಡದೇ ಮೋಸ ಮಾಡಿದೆಯಲ್ಲಾ???? ಇದರಿಂದ ನಿನ್ನ ಮೇಲೆ ನನಗೆ ಸಾಸಿವೆ ಕಾಳಿನಷ್ಟು ಕೋಪ, ಸಾಗರದಷ್ಟು ಪ್ರೀತಿ ಬಂದು ಬಿಟ್ಟಿದೆ ಕಣೆ ..ಇವತ್ತು ರಾತ್ರಿ ನಾನು ಏನೆಲ್ಲಾ ಸರ್ಕಸ್ ಮಾಡಿದ್ರೂ ನಿದ್ರಾದೇವಿ ನನ್ನ ಬಳಿ ಬರಲಿಲ್ಲ... ಅದು ಹೇಗೆ ಬರಲು ಸಾಧ್ಯ ಹೇಳು? ನನ್ನ ದೇವಿ ನೀನು ನನ್ನಲ್ಲಿ ಇದ್ದೆಯಲ್ಲಾ..

ನನಗೆ ತಿಳಿಯದಂತೆಯೇ ನನ್ನ ಮನಸ್ಸಿನ ಕೋಟೆಗೆ ಲಗ್ಗೆ ಹಾಕಿ, will u love me?? ಅನ್ನೋ ಒಂದೇ ಒಂದು ವಾಕ್ಯದಿಂದ ನನ್ನ ಸೋಲಿಸಿಬಿಟ್ಟೆ ಕಣೇ ನೀನು...!!! i LoVe yOu ... i Love you so muchhhhhhhhhhhh... ನೀನು ನಂಗೆ ಬೇಕು ಕಣೇ.. I Need you.. ನೀನೇ ನನ್ನವಳು ಅಂತಾ ನನ್ನ ಮನಸ್ಸು ಸಾರಿ ಸಾರಿ ಹೇಳ್ತಾ ಇದೆ. ನನ್ನ ಬಿಟ್ಟು ಒಂದು ಕ್ಷಣವೂ ದೂರ ಆಗಬೇಡ. ನನಗೆ ಮೊದ್ಲಿಂದಾನೂ ನಿನ್ನ ಮೇಲೆ ಪ್ರೀತಿ.. ಗೆಳತಿಯಾಗಿ ಬಂದವಳು, ಇಷ್ಟು ಹತ್ತಿರದವಳಾಗ್ತೀ ಅಂತಾ ಗೊತ್ತೇ ಇರಲಿಲ್ಲ. ನಾನು ಇಷ್ಟು ದಿನಗಳಿಂದ ನಿನ್ನ ಪ್ರೀತಿ ಮಾಡ್ತಾ ಇದ್ದದ್ದು ನಿಂಗೆ ಗೊತ್ತೇ ಆಗ್ಲಿಲ್ವೇನೇ? ದಿನಾ ನಿನ್ನ ಜೊತೆ ಮಾತನಾಡಬೇಕು ಅಂತಾ ಯಾವಾಗಲೂ ಅನ್ನಿಸ್ತಿತ್ತು. ಹೀಗಿದ್ದಾಗ ನಿನ್ನ ಜೊತೆ ಮಾತನಾಡಬೇಕಾದಾಗ, ನೀನು ನನ್ನ ಲೈಫ್ ಗೆ ಯಾಕೆ ಬಂದೆ ಅಂತಾ ಹುಸಿ ಮುನಿಸಿನಿಂದ ಕೇಳಿದೆ.. ಆದರೆ, ನೀನು ನನ್ನ ಲೈಫ್ ಗೆ ಬಹಳ ತಡವಾಗಿ ಬಂದೆ ಅಂತಾ ನಂಗೆ ಅನ್ನಿಸ್ತಾ ಇದೆ. ನನಗೆ ಮೊದಲಿನಿಂದಲೂ ಬೆಂಗಳೂರೆಂದರೆ, ಪಂಚಪ್ರಾಣ.. ಅಲ್ಲೇ ಸಾಯುವಷ್ಟು ಪ್ರೀತಿ.. ಇದು ಯಾಕೆ ಅಂತಾ ಗೊತ್ತಿರಲಿಲ್ಲ jaaanu... ಇವತ್ತು ನನಗೆ ಗೊತ್ತಾಗಿದೆ.. ನನ್ನವಳಾದ ನೀನು ಬೆಂಗಳೂರಿನಲ್ಲೇ ತಾನೆ ಇರೋದು.. ಅದಕ್ಕೇ ಈ ಸೆಳೆತ.. ನನಗೆ ಇವಾಗಲೇ ನಿನ್ನ ಬಳಿ ಓಡಿ ಬಂದು ಬಿಡಬೇಕು ಅನ್ನಿಸಿದೆ. ನಿನ್ನ ನೋಡಬೇಕು. ನಿನ್ನ ಕೈ ಹಿಡಿದು, ಐ ಲವ್ ಯೂ ಕಣೇ ಅಂತಾ ಹೇಳಬೇಕೆನಿಸಿದೆ. ಆದರೆ, ನಾನೇ ಹಾಕಿಕೊಂಡ ನಿಯಮದಂತೆ, ನಾನು ಇನ್ನೂ ಎರಡು ತಿಂಗಳು ಬೆಂಗಳೂರಿಗೆ ಬರೋಕೆ ಆಗಲ್ಲ ಕಣೇ. ನಿನ್ನ ನೋಡಬೇಕು ಅಂತಾ ತುಂಬಾನೇ ಅನ್ನಿಸಿಬಿಟ್ಟಿದೆ.. ಐ ಮಿಸ್ ಯೂ ಸೋ ಮಚ್.. ನಿನಗಾಗಿ ಬೇಗ ಎರಡು ತಿಂಗಳೂ ಕಳೆದುಹೋಗಲೀ ಅಂತಾ ಕಾಯ್ತಾ ಇದೀನಿ..

ನೀನು ದಿನಾಲೂ ತಣ್ಣೀರು ಸ್ನಾನ ಮಾಡ್ತೀನಿ ಅಂದ್ಯಲ್ಲಾ.. ನಾನು ಮೂರು ದಿನದಿಂದ ಟ್ರೈ ಮಾಡಿದೆ.. ಇವಾಗ ಶೀತ ಆಗಿದೆ ಕಣೆ.. ಆದರೂ ನನ್ನಲ್ಲಿ ಒಂಥರಾ ಸಂತೋಷ.. ಪ್ರತಿ ತಣ್ಣೀರಿನ ಹನಿಯ ಚಳಿಯಲ್ಲೂ ನೀನಿರ್ತೀಯ... I am Loving it...

ನೀನೇ ಹೇಳಿದಂತೆ, ಇನ್ನು ಮೂರು ವರ್ಷ ಹೀಗೇ ಇದ್ದು ಬಿಡೋಣ. ದುಡ್ಡು ಒಂದು ಇದ್ದರೆ, ಜಾತಿ ಅನ್ನೋದು ಯೂಸ್ ಲೆಸ್ ಆಗೋಗುತ್ತೆ. ನಾನು ನಿಂಗೋಸ್ಕರ ಜಾಸ್ತಿ ದುಡ್ಡು ಸಂಪಾದನೆ ಮಾಡೋಕೆ ಶುರು ಮಾಡ್ತೀನಿ.. ಅಂದ್ರೆ, ಕೆಲಸದಲ್ಲಿ ಲಂಚ ತಗೋತೀನಿ ಅಂತಲ್ಲಾ, ಅಥವಾ ಬೇರಾವುದೇ ಅಡ್ಡ ಹಾದಿ ಹಿಡೀತೀನಿ ಅಂತಲ್ಲಾ.. ನನ್ನ ಜವಾಬ್ದಾರಿ ಮುಗಿದಂತೆ, ನಾನು ಮತ್ತು ನನ್ನಮ್ಮ ಇಬ್ಬರೂ ಬೆಂಗಳೂರಿಗೆ ಬಂದು ಬಿಡ್ತೀವಿ ಕಣೇ.. ಬೆಂಗಳೂರಿಗೆ ಯಾಕೆ ಅಂತೀಯಾ??? ನಿನಗಾಗಿ ಕಣೇ.. ನಿನ್ನ ಪಡೆಯುವುದಕ್ಕಾಗಿ..


ನಾನು ರಾತ್ರಿಯೆಲ್ಲಾ ಈ ಬಗ್ಗೆ ಯೋಚಿಸಿದೆ. ನನ್ನ ಹೃದಯವನ್ನು ಕದ್ದ ಕಳ್ಳಿ ನೀನು ಅಂತಾ ನೆನ್ನೆ ರಾತ್ರೀನೇ ಸಾಬೀತಾಗಿದೆ. ಅದಕ್ಕಾಗಿ ಹೃದಯವನ್ನು ಕದ್ದ ಕಳ್ಳಿಯನ್ನೇ ಕಿಡ್ನ್ಯಾಪ್ ಮಾಡಲು ನಾನು ಬೆಂಗಳೂರಿಗೆ ವಲಸೆ ಬರಬೇಕಿದೆ.. ಇದು ನಂಗಿಷ್ಟ ಕಣೇ.......... ಏನಾದರೂ ಮಾಡಿ ನಿನ್ನ ಮನೆಯವರನ್ನು ಒಪ್ಪಿಸ್ತೀನಿ.. ಆಗದಿದ್ರೆ.... ಹಾರಿಸಿಕೊಂಡು ಬಂದು ಬಿಡ್ತೀನಿ ಅಷ್ಟೇ.. ಇದೇನು ಮುಂಗಾರು ಮಳೆ ಫಿಲಂ ಡೈಲಾಗ್ ಅಲ್ಲಾ.. ಇದು ನಿನ್ನ ಪ್ರೀತಿಯ ಹುಡುಗನ ಆತ್ಮವಿಶ್ವಾಸದ ಮಾತು...

ಒಂದು ಪುಟ್ಟ ಪ್ರಶ್ನೆ..

ಅಂಥದೊಂದು ಸಂಧರ್ಭ ಬಂದರೆ ನನ್ನ ಬೆಂಬಲಕ್ಕೆ ನೀನಿರ್ತೀಯ ಅಲ್ವಾ?ಇಂತಿ,

ನಿನ್ನವ........................

6 comments:

Anonymous said...

sooperrrrrrrrrrrrrr kano.........

Anonymous said...

ರೀ ಯಳವತ್ತಿ ಸಾಹೇಬ್ರೆ, ನೀವು ಈ ತಾರಾ ೬-೭ ವರ್ಷ ಮುಂಚೆನೇ love letter ಬರೆದಿದ್ರೆ ನಾನು ಅದನ್ನ copy ಮಾಡಿ ಮೂರ್ನಾಲ್ಕು ಹುಡುಗಿಯರಿಗಾದರೂ ಕೊಡ್ತಿದ್ದೆ. ಆದ್ರೆ ಈಗ ಸ್ವಲ್ಪ ಲೇಟಾಗಿದೆ!
ತನ್ನ ಸಂಪೂರ್ಣ ಪ್ರೀತಿಯನ್ನೇ ತನ್ನವಲಿಗಾಗಿ ಮೀಸಲಿಟ್ಟು, ಆಕೆಯ ಚಿಂತೆಯಲ್ಲೇ ದಿನಗಳೆವ, ತನ್ನ ಸಂಪೂರ್ಣ ಪ್ರೀತಿಯನ್ನು ನಿವೇದಿಸಿಕೊಂಡ ನಿಮ್ಮ ಪ್ರೀತಿಯ ರಾಯಬಾರಿ, ವಾವ್, ಸೂಪರ್

mahesh said...

ಶಿವು,
ನಿನ್ನ ನಿದ್ದೆಯನ್ನು ಕದ್ದ ಆ ದೇವಿ ಬೇಗ ನಿನಗೆ ಸಿಗಲಿ....
ಎರಡು ತಿಂಗಳು ಬೇಗ ಸಾಗಲಿ.....
ನೀನು ಬೆಂಗಳೂರಿಗೆ ಹೋಗ್ತಿಯಾ....ಅವಳ ಅಪ್ಪನಿಗೆ ಗದಗಿಗೆ ಕೆಲಸ transfer ಮಾಡಿಸುತ್ತೀನಿ ಬಿಡು....
ಚೆನ್ನಾಗಿದೆ ಪ್ರೇಮ ಪತ್ರ .....
ಲವ್ ಟ್ರೈನಿಂಗ್ ಸ್ಕೂಲ್ ಶುರು ಮಾಡು......

ಶೋಭಾ said...

ನಮಸ್ಕಾರ ಯಳವತ್ತಿಯವರಿಗೆ,
ನೀವು ಬರೆದ ಈ ಪ್ರೇಮ ಪತ್ರವನ್ನು ನೋಡಿದ್ರೆ "ಇದೇ ಮೊದಲ ಪ್ರಯತ್ನ ಎಂಬಂತೆ ಒಂದು ಲವ್ ಲೆಟರ್ ಬರೆದು " ಈ ಸಾಲು ಸುಳ್ಳು ಅಂತ ಅನ್ಸುತ್ತೆ ರೀ. ಇದು ನಿಮ್ಮ ಮೊದಲ ಪ್ರೇಮ ಪತ್ರ ಅನ್ನಿಸೋದೇ ಇಲ್ಲ.
ಬಹಳ ಚೆನ್ನಾಗಿ ಬರೆದಿದ್ದೀರ excellent

Dr.Gurumurthy Hegde said...

ಸರ್

ತುಂಬಾ ಚೆನ್ನಾಗಿದೆ ಪ್ರೇಮ ಪತ್ರ
ಮೊದಲ ಸಲ ಅಂತ ಅನ್ನೋಸೋದಿಲ್ಲ

Sitaram said...

nice