ಖಾಯಂ ಓದುಗರು..(ನೀವೂ ಸೇರಬಹುದು)

04 March 2010

ಒಂದೆರಡು ಸಾಲಿನ ಕಥೆಗಳು ಭಾಗ-4

ಇನ್ನೊಂದಿಷ್ಟು ಒಂದೆರಡು ಸಾಲಿನ ಕಥೆಗಳು ಇವತ್ತಿನ (ದಿನಾಂಕ: 04-03-2010) ವಿಜಯ ಕರ್ನಾಟಕ ಪೇಪರ್ ನಲ್ಲಿ ಬಂದಿದೆ. ಬ್ಲಾಗೋದುಗರಿಗೆ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

1) ರೈಲಿನ ಟಿಕೆಟ್ ಕೌಂಟರ್ ನವ ಎಲ್ಲಿಗೆ ?? ಅಂತಾ ಮೂರನೇ ಬಾರಿ ಕೇಳಿದ.. ಅವನು ಅವಳ ಕಡೆ ನೋಡಿದ. ಅವಳು ಇನ್ನೂಊರುಗಳ ಚಾರ್ಟ್ ನೋಡುತ್ತಿದ್ದಳು.

2) ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಮನೆಯ ರೇಷನ್ ಖಾಲಿಯಾಗಿತ್ತು. ಅವಳು ಹೇಗೋ ಮಾಡಿ ರೇಷನ್ ತಂದು ಅಡಿಗೆ ಮಾಡಿದ್ದಳು. ಊಟ ಬಡಿಸಲು ಬಗ್ಗಿದಾಗ ತಾಳಿ ಕಾಣದಾದಾಗ, ಅವನ ಗೊಂದಲಗಳಿಗೆ ತೆರೆ ಬಿತ್ತು.


3) ಅವತ್ತೇ ಅವರು ಮನೆ ಖಾಲಿ ಮಾಡಿಕೊಂಡು ಊರು ಬಿಟ್ಟು ಹೋಗಬೇಕಾಗಿತ್ತು. ಮುದ್ದು ಮಗ ಎದುರುಮನೆಯ ತನ್ನಗೆಳೆಯ ಊರಿಂದ ಬರುವವರೆಗೂ ಇಲ್ಲಿಯೇ ಇರುತ್ತೇನೆಂದು ಹಠ ಮಾಡಿ ಕೂತಿದ್ದ. ಇವನ ಆಟದ ಸಾಮಾನನ್ನು ಅವನು ಕಡಒಯ್ದಿದ್ದ.

4) ಜೀವನದಲ್ಲಿ ಕೊನೆ ಬಾರಿ ನಡೆಸಿಕೊಡಬೇಕಾಗಿದ್ದ ಸಂಗೀತ ಸಂಜೆಯ ಕಾರ್ಯಕ್ರಮದ ದಿನದ ಮುಂಜಾವಿನಲ್ಲಿ ಹೆಸರಾಂತ ಗಾಯಕನ ದನಿ ಒಡೆದು ಹೋಗಿತ್ತು.

5) ಆಸ್ಪತ್ರೆಯ .ಸಿ.ಯು. ವಾರ್ಡಿನಲ್ಲಿ ಸಾವಿನ ಕ್ಷಣಗಳನ್ನು ಎಣಿಸುತ್ತಾ ಮಲಗಿದ್ದ ಮುದುಕನೊಬ್ಬ. ಪ್ರತಿ ಬಾರಿ ಮೊಮ್ಮಗನ ಮುದ್ದು ಮಾತುಗಳನ್ನು ಕೇಳಿದಾಗಲೆಲ್ಲಾ ಇನ್ನಷ್ಟು ಕ್ಷಣಗಳಿಗೆ ಮುಂದೂಡುತ್ತಿದ್ದ.


6) ಜನಸಂಖ್ಯಾ ನಿಯಂತ್ರಣಾಧಿಕಾರಿ ಮನೆಯ ನಾಯಿಯೊಂದು ಒಮ್ಮೆಲೆ 7 ಮರಿಗಳನ್ನು ಹಾಕಿ ತನ್ನ ಬಲ ಪ್ರದರ್ಶಿಸಿತು.


ಇನ್ನೊಂದೆರಡು..

1) ಕರೆಂಟ್ ಇಲ್ಲದ ಮನೆಗೆ ಲಾಟೀನು ಹಿಡಿದು ಬಂದವಳು ಜೀವನ ಪೂತಿ ಬೆಳಗಿದಳು.

2) ಜಗಳವಾಡಿಕೊಂಡ ಸಹೋದ್ಯೋಗಿಗಳನ್ನು ಮ್ಯಾನೇಜರು ಕೊಟ್ಟ ಪ್ರಾಜೆಕ್ಟ್ ವರ್ಕ್ ಒಂದು ಮಾಡಿತು.

3) ಉತ್ತಮವಾಗಿ ಕೆಲಸ ಮಾಡುತ್ತಿದ್ದ ಪ್ರತಿಷ್ಠಿತ ಕಂಪನಿಯ ನೌಕರನೊಬ್ಬ ರಿಷೆಷನ್ ಭಯದಿಂದ ಇನ್ನೊಂದು ಕಂಪನಿಗೆ ಅಪ್ಲಿಕೇಷನ್ ಹಾಕಿ, ಇದ್ದ ಕೆಲಸವನ್ನು ಕಳೆದುಕೊಂಡ.


ಇಂತಿ ನಿಮ್ಮ ಪ್ರೀತಿಯ,

ಯಳವತ್ತಿ.

ಬ್ಲಾಗಿನ ಹೊಸ ಓದುಗರಿಗಾಗಿ ಹಳೆಯ ಕೊಂಡಿಗಳು:-
1) ಒಂದೆರಡು ಸಾಲಿನ ಕಥೆಗಳು ಭಾಗ-1
2) ಒಂದೆರಡು ಸಾಲಿನ ಕಥೆಗಳು ಭಾಗ-2
3) ಒಂದೆರಡು ಸಾಲಿನ ಕಥೆಗಳು ಭಾಗ-3

9 comments:

Sitaram said...

nice
Excellent one line stories
Keep it up Dear Yelavatti

shashi jois said...

ಶಿವೂ ,
ನಿನ್ನ ಒಂದೆರಡು ಸಾಲಿನ ಕತೆ ಮನಮುಟ್ಟಿತು ಕಣೋ.
ಆದರೆ 2,5,6 ಹಾಗೂ ಕೊನೆಯ 3 ಕತೆಗಳು ತುಂಬಾ ಇಷ್ಟವಾಯ್ತು.
ಹೀಗೆ ಬರೆಯುತ್ತಾ ಇರು ಆಯ್ತಾ.
ಇನ್ನೂ ಕಳುಹಿಸಲಾ???????

manasu said...

ಶಿವು ಯಳವತ್ತಿಯವರೆ,
ಎರಡೇ ಸಾಲುಗಳಲ್ಲಿ ಎಷ್ಟೊಂದು ಅರ್ಥ ಕಲ್ಪಿಸಿಬಿಟ್ಟಿದ್ದೀರಿ ಕಥೆ ತುಂಬಾ ಇಷ್ಟವಾದವು... ಹೀಗೆ ಮುಂದುವರಿಯಲಿ.
ವಂದನೆಗಳು.

mahesh said...

ಎಲ್ಲ ಕಥೆ ಚೆನ್ನಾಗಿವೆ...
ಹೀಗೆ ಬರೆಯುತ್ತಾ ಇರು ಶಿವು.....

ಸವಿತ said...

>>ಕರೆಂಟ್ ಇಲ್ಲದ ಮನೆಗೆ ಲಾಟೀನು ಹಿಡಿದು ಬಂದವಳು ಜೀವನ ಪೂರ್ತಿ ಬೆಳಗಿದಳು.
ಚೆಂದನೆ ಸಾಲು :)

sunaath said...

ಶಿವಶಂಕರ,
Good work.

azad (jalanayana) said...

ಶಿವಶಂಕರ್ ನಿಮ್ಮ ಒಂದೆರಡು ಸಾಲಿನ ಕಥೆಗಳು...ಬರೆಯದಿದ್ದನ್ನು ಮಾರ್ಮಿಕವಾಗಿ ಸವಿಸ್ತಾರಗೊಳಿಸುತ್ತವೆ ಮನಹೊಕ್ಕು...ಉತ್ತಮ ಪ್ರಯತ್ನ...ಇವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ.

Anonymous said...

hey shiva all are very nice kano keep it up kano

LVJOLAD@gmail.com said...

nice