ಖಾಯಂ ಓದುಗರು..(ನೀವೂ ಸೇರಬಹುದು)

23 February 2010

ಬ್ಲಾಗಿಗೆ ಒಂದು ವರ್ಷದ ಸಂಭ್ರಮ

ಪ್ರೀತಿಯ ಸ್ನೇಹಿತರೇ, "ಯಳವತ್ತಿ ಬ್ಲಾಗ್.. ಕನ್ನಡ ಹಾಸ್ಯ ಶಾಯರಿ, ಎಸ್ಸೆಮ್ಮೆಸ್ಸು ಬ್ಲಾಗ್" ಇವತ್ತಿಗೆ ಅಂದರೆ, ದಿನಾಂಕ: 23-02-2010 ಕ್ಕೆ ಒಂದು ವರ್ಷ ಪೂರ್ಣಗೊಳಿಸಿದೆ.

ಇವತ್ತಿಗೆ ಒಂದು ವರ್ಷದ ಹಿಂದೆ ಸುಮ್ಮನೆ ಯಾರದೋ ಜಿದ್ದಿಗೆ ಬಿದ್ದು, ಸೂಖಾ ಸುಮ್ಮನೆ ಶುರು ಮಾಡಿದ ಈ ಬ್ಲಾಗು ಇಲ್ಲಿಯವರೆಗೂ ಮುಂದುವರೆಯುತ್ತದೆಯೆಂದು ಯಾವತ್ತೂ ಅನ್ನಿಸಿರಲಿಲ್ಲ. ಅವತ್ತಿನ ದಿನ ಶಂಕ್ರಣ್ಣನ ಸೋಮಾರಿಕಟ್ಟೆ ಬ್ಲಾಗ್ ನೋಡಬೇಕಾದರೆ, ನಂಗೂ ಒಂದು ಬ್ಲಾಗು ಮಾಡಬೇಕೆನಿಸಿ, ಆಗಲೇ ಯಳವತ್ತಿ ಬ್ಲಾಗನ್ನು ಸೃಷ್ಟಿ ಮಾಡಿದೆ. ಅದಾಗಲೇ ಕನ್ನಡದಲ್ಲಿ ಸಾವಿರದ ಏಳುನೂರು ಬ್ಲಾಗಿಗರು, ತಮ್ಮದೇ ಆದ ಸ್ವಂತ ಬ್ಲಾಗುಗಳಲ್ಲಿ ಪ್ರಕಾಶಿಸುತ್ತಿದ್ದರು. ಇಷ್ಟೊಂದು ಜನರ ಮಧ್ಯೆ ಈ ಬ್ಲಾಗು ಉಸಿರಾಡುವುದು ಕಷ್ಟ ಅಂತಾ ಅನ್ನಿಸಿದ್ದು ಸುಳ್ಳಲ್ಲ.

ಆದರೂ ಬರೆಯಲು ಶುರು ಮಾಡಿದೆ. ಮೊದಲು ನಾನು ಕೇಳಿದ, ಹೇಳಿದ ಜೋಕುಗಳನ್ನು ಬರೆದು ಹಾಕಿದೆ. ನನ್ನ ಕೆಲವು ಬಾಲ್ಯದ ಘಟನೆಗಳನ್ನು ಬರೆದೆ. ಅಷ್ಟೊಂದು ಫೇಮಸ್ ಇರದೇ ಇದ್ದುದರಿಂದ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಬ್ಲಾಗನ್ನು ನೋಡುತ್ತಿದ್ದರು. ಈ ಬಗ್ಗೆ ನನ್ನ ಸ್ನೇಹಿತರಿಗೆ ಮೆಸೇಜು, ಈ-ಮೇಲ್ ಕಳಿಸಿ ನೋಡ್ರಿ ಅಂತಾ ಹೇಳಿದೆ. ನನ್ನ ಬಲವಂತಕ್ಕಾದರೂ ಬ್ಲಾಗ್ ನೋಡಿದರು. ಕೆಲವರಿಗೆ ಇಷ್ಟವೂ ಆಯಿತೆನ್ನಿ.

1) ಅವಳು... ಕವನ (ಕಷ್ಟವಾದರೂ ಸರಿ, ಈ ಕವನವನ್ನು ಪೂರ್ತಿ ಓದಿರಿ)
2)ಬಿಜಾಪೂರ ಶಾಯರಿ..
3)ಢಾಭಾದಲ್ಲಿ ನಡೆದ ಭಯಂಕರವಾದ ಘಟನೆ...
4)ನಾನು ಹೇಳಿದ್ದು, ಕೇಳಿದ್ದು,, ಜೋಕ್ಸು, ಸಾಂಗ್ಸು.. ಇತರೆ.. ನಿಮಗಾಗಿ
5)ನಿಡಸಾಲೆಯಲ್ಲಿ ನಡೆದ ಘಟನೆ..
6)ದೆವ್ವದ ಕಥೆ..
7)ಆಂಟಿಗೊಂದು ಪತ್ರ...
8)ಹಾಗೆ.. ಹುಡುಗುತನದಲ್ಲಿ...
9)ಗೆಳತೀ.. ನೀ ಹೀಗೇಕೆ ಮಾಡಿದೆ...???


ಈ ಪೋಸ್ಟುಗಳ ನಂತರ ಬ್ಲಾಗಿಗೆ ವೀಕ್ಷಕರು ಬರಲಾರಂಭಿಸಿದರು. ಇದಕ್ಕೆ ಇಟ್ಟಿಗೆ ಸಿಮೆಂಟಿನ ಪ್ರಕಾಶಣ್ಣ, ನೆನಪಿನ ಪುಟಗಳ ಶಿವು, ಶೋಭಾ, ದುಬೈ ಮಹೇಶಣ್ಣ, ಸೋಮಾರಿ ಪ್ರಶಾಂತು, ಅನಾಮಧೇಯ ಗೆಸ್ಟುಗಳು, ನಂದು ಅಣ್ಣ, ಪ್ರತಿಭಾ ಪಾಟೀಲ್, ಮಂಜುಳಾ ಜೋಶಿ, ಸುಗುಣಸಾಗರ, ಜಗದೀಶ, ಜ್ಞಾನಮೂರ್ತಿ, ಶಿವಪ್ರಶಾಂತ್, ಸುನಾಥ ಕಾಕಾ ಇವರೆಲ್ಲರೂ ಕಾಮೆಂಟ್ ಹಾಕಿ ಸಾಥ್ ನೀಡಿದರು.. "ಗೆಳತಿ ನೀ ಹೀಗೇಕೆ ಮಾಡಿದೆ" ಲೇಖನವು ಎಷ್ಟೋ ಜನರ ಮೆಚ್ಚುಗೆಗಳಿಸಿತು. ಇತ್ತೀಚೆಗೆ ಈ ಲೇಖನವನ್ನು ಓದಿದ ದಾವಣಗೆರೆ ಹುಡುಗಿಯೊಬ್ಬಳು ತುಂಬಾ ಅತ್ತುಬಿಟ್ಟಳಂತೆ.. ಹಲವರು ಅತ್ತಿದ್ದು ಸುಳ್ಳಲ್ಲ..

ನಂತರ ನನ್ನ ಬ್ಲಾಗಿನಲ್ಲಿ ಹಾಸ್ಯ ಸರಣಿಯನ್ನು ಮುಂದುವರೆಸಿ ಈ ಲೇಖನಗಳನ್ನು ಬರೆದೆ.

1)ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-1
2)ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-2
3)ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
4)ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-4
5)ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-5

ಇವುಗಳೆಲ್ಲವೂ ಸ್ವಲ್ಪ ಹೆಸರು ತಂದುಕೊಟ್ಟವು.

ಇದಾದ ಮೇಲೆ ಟ್ವಿಟರ್ ಎಂಬ ಕಿರು ಬ್ಲಾಗಿಂಗ್ ನಲ್ಲಿ ದಿನಕ್ಕೊಂದು ಸಾಲುಗಳನ್ನು ಬರೆಯಲಾರಂಭಿಸಿದೆ. www.twitter.com/shivagadag ಇವುಗಳನ್ನೂ ಸಹ ಹಲವರು ಇಷ್ಟಪಟ್ಟರು. ಕೆಲವರು ಆರ್ಕುಟ್ ನ ಸ್ಟೇಟಸ್ ಮೆಸೇಜಿನಲ್ಲಿ ಹಾಕಿಕೊಂಡರು. ಇವೆಲ್ಲದರ ನಡುವೆ ಒಮ್ಮೊಮ್ಮೆ ದೊಡ್ಡ ದೊಡ್ಡ ಕಥೆಗಳನ್ನು ಬರೆಯಲು ಹೋಗಿ ಕೈಸುಟ್ಟುಕೊಂಡೆ.. ಅದಕ್ಕಾಗಿ, ನಾನು ಒಂದೆರಡು ಸಾಲಿನ ಕಥೆಗಳನ್ನು ಬರೆಯಲಾರಂಭಿಸಿದೆ. ಮೂರು ಬಾರಿ ವಿಜಯ ಕರ್ನಾಟಕದವರು ತಮ್ಮ ಪೇಪರ್ ನ ಲವಲವಿಕೆ ಕಾಲಂ ನಲ್ಲಿ ಹಾಕಿದ್ದಾರೆ. ಮತ್ತೊಂದಿಷ್ಟು ಕಳಿಸಿದ್ದೇನೆ.

ಈಗ ಈ ಬ್ಲಾಗು ಸದ್ದಿಲ್ಲದೇ ಒಂದು ವರ್ಷ ಪೂರೈಸಿದೆ. ಇವತ್ತಿಗೆ 108 ಫಾಲೋಯರ್ಸ್ ಆಗಿದ್ದಾರೆ. 14,690 ಹಿಟ್ ಗಳಾಗಿವೆ. ಸುಮಾರು 6,110 ಕಂಪ್ಯೂಟರ್ ನಲ್ಲಿ ಈ ಬ್ಲಾಗ್ ವೀಕ್ಷಣೆ ಕಂಡಿದೆ. ಬ್ಲಾಗ್ ನಲ್ಲಿ ಆರ್ಕುಟ್ ಲಿಂಕ್ ಕೊಟ್ಟಿದ್ದರಿಂದ 707 ಸ್ನೇಹಿತರಾಗಿದ್ದಾರೆ.

ಹಲವಾರು ಬ್ಲಾಗಿಗರು ಆರ್ಕುಟ್ ನಲ್ಲಿ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಶಶಿ ಅಕ್ಕಾ, ದುಬೈ ಮಹೇಶಣ್ಣ, ಶಿವು, ಶುಭಶಂಕರಿ, ಮಂಜುನಾಥ್ ಬಮ್ಮನಕಟ್ಟಿ ಸರ್, ಜ್ಞಾನಮೂರ್ತಿ, ಗುರುಮೂರ್ತಿ, ರಾಣಿ, ಸೋಮಾರಿ ಪ್ರಶಾಂತ, ಮೇಘಾ, ಚಿನ್ಮಯ್, ರಾಜೇಶ್, ಮಂಜುಳಾ, ಇನ್ನೂ ಹಲವರು ತುಂಬಾ ಹತ್ತಿರವಾಗಿದ್ದಾರೆ.

ಎಲ್ಲರಿಗೂ ನಾನು ಚಿರಋಣಿ. ಸಧ್ಯ ಒಂದು ವರ್ಷ ಪೂರೈಸಿದೆ, ಇದೆಲ್ಲದರ ಮಧ್ಯೆ ಜ್ಞಾನಮೂರ್ತಿ (ಜ್ಞಾನಬಿಂದು ಬ್ಲಾಗ್), ಗುರುಮೂರ್ತಿ (ರಾಹುದೆಸೆ) ಇವರು ಬ್ಲಾಗ್ ಡಿಲೀಟ್ ಮಾಡಿದ್ದು, ರಾಜೇಶ್ ಮಂಜುನಾಥ್ ಬ್ಲಾಗ್ ಬರೆಯದೇ ಇದ್ದದ್ದು, ಬೇಸರ ತರಿಸಿದರೆ, ಛಾಯಾಕನ್ನಡಿ ಶಿವು ಸರ್, ನೆನಪಿನ ಪುಟಗಳ ಶಿವು, ಪ್ರಕಾಶಣ್ಣ ಇವರು ಭೇಟಿಯಾದದ್ದು, ಹಾಗೆ ಇಟ್ಟಿಗೆ ಸಿಮೆಂಟು ಬ್ಲಾಗ್ "ಹೆಸರೇ ಬೇಡ" ಪುಸ್ತಕವಾಗಿ ಬಿಡುಗಡೆಯಾದದ್ದು ಆದದ್ದು ಖುಷಿ ಕೊಡುತ್ತವೆ.

ಇವೆಲ್ಲದರ ಮಧ್ಯೆ ಈ ಬ್ಲಾಗ್ ಉಸಿರಾಡಿಕೊಂಡು ಬೆಳೀತಿದೆ. ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇರಲಿ.

ಇಂತಿ ನಿಮ್ಮ ಪ್ರೀತಿಯ,

ಯಳವತ್ತಿ

19 comments:

ಶೋಭಾ said...

ನಮಸ್ಕಾರಗಳು ಯಳವತ್ತಿಯವರಿಗೆ,
ಮೊದಲಿಗೆ ನಿಮಗೆ ಬಹಳ ಬಹಳ ಅಭಿನಂದನೆಗಳು. ನಮಗೆ ಇಂತ ಒಳ್ಳೆ ಬ್ಲಾಗ್ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮ ಎಲ್ಲ ಲೇಖನಗಳು ಬಹಳ ಸೊಗಸಾಗಿರುತ್ತೆ. ನೀವು ಹೊಸದನ್ನು ಏನಾದರು ಬರೆದಿದ್ದೀರ ಅಂತ ಗೊತ್ತಾದ ತಕ್ಷಣ ಅದನ್ನು ಓದಬೇಕು ಅನ್ನಿಸುತ್ತೆ. ಎಲ್ಲ ಕೆಲಸವನ್ನು ಪಕ್ಕಕ್ಕಿಟ್ಟು ಓದಿ ಅದಕ್ಕೆ ಪ್ರತ್ಯುತ್ತರ ಕೊಟ್ಟ ನಂತರನೆ ಸಮಾಧಾನ ಆಗೋದು. ದಯವಿಟ್ಟು ನಿಮ್ಮ ಬರವಣಿಗೆಯನ್ನು ಹೀಗೆ, ಇನ್ನು ಹೆಚ್ಚಾಗಿ, ಸೊಗಸಾಗಿ ನೀಡುತ್ತಲೇ ಇರಿ ಎಂದು ಕೇಳಿಕೊಳ್ಳುತ್ತೇನೆ.

ಮತ್ತೊಮ್ಮೆ ನಿಮಗೆ ಅಭಿನಂದನೆಗಳು

Sitaram said...

Congratulations & many more happy returns of the day. Keep writting.
I love your one line stories.
All the best

Sushrutha said...

Shubhashaya.. Bareethiri..

Anonymous said...

ಅಭಿನಂದನೆಗಳು

satisha said...

ಅಭಿನಂದನೆಗಳು

manasu said...

shivu,
nimma blog agaga oduttene tumba chennagirute, nannavaru yaavagalu nimma bagge heLuttale iruttare.

all the best and congrats... mattastu varushagaLannu kaaNalendu bayasuttene.

mahesh said...

ಶುಭಾಶಯಗಳು ಶಿವು.....
ನುಡಿ ಜಾತ್ರೆ ಸಾಗುತ್ತ ಇರಲಿ.....
ಶುಭವಾಗಲಿ...
ಉಜ್ವಲ ಭವಿಷ್ಯ ನಿನ್ನದಾಗಲಿ...

sunaath said...

ಶಿವಶಂಕರ,
ಒಂದು ವರ್ಷವಾಯಿತೆ! ಕಾಲ ಎಷ್ಟು ಬೇಗ ಹೋಗುತ್ತಿದೆ. ಈ ಒಂದು ವರ್ಷದಲ್ಲಿ, ನಿಮ್ಮ ಬ್ಲಾ^ಗು ನಮಗೆಲ್ಲರಿಗೆ
ರೋಚಕವಾದ ಸಾಹಿತ್ಯ ನೀಡಿದೆ. ತುಂಬಾ ಖುಶಿಯಾಗಿದೆ, ಶಿವಣ್ಣ. ಹುಟ್ಟುಹಬ್ಬದ ಶುಭಾಶಯಗಳು. ಇನ್ನೂ ಅನೇಕ ವರ್ಷ ಜೊತೆಯಾಗಿ ಸಾಗೋಣ.

Jagadeesha MK said...

Congrats ,,yelavathi.. :) I wish it for many more years... :)

Rajesh said...

ಪ್ರೀತಿಯ ಶಿವೂ,
ಮೊದಲಿಗೆ ವರುಷ ತುಂಬಿದ್ದಕ್ಕೆ ಹಾರ್ಧಿಕ ಶುಭಾಷಯಗಳು. ನಿಮ್ಮ ಅಕ್ಷರ ಕೃಷಿಗೆ ಒಳ್ಳೆಯದಾಗಲಿ. ಎಲ್ಲಾ ಒಳ್ಳೆಯ ಬರಹಗಳೇ, ಅದರಲ್ಲೂ ನಿಮ್ಮ ಒಂದು ಸಾಲಿನ ಕಥೆಗಳು ನನ್ನ ಮೆಚ್ಚಿನವು. ನಾನು ಮತ್ತೆ ಖಂಡಿತ ಬರೀತೀನಿ, ದಯವಿಟ್ಟು ಬೇಸರಿಸ ಬೇಡಿ.

Dr.Gurumurthy Hegde said...

ಪ್ರೀತಿಯ ಶಿವೂ
ನಿಮ್ಮ ವರುಷದ ಸಂಭ್ರಮಕ್ಕೆ ಶುಭ ಹಾರೈಕೆ
ಬ್ಲಾಗ್ ಪ್ರಪಂಚದಲ್ಲಿ ನಗಿಸುತ್ತಿರುವ ನೀವು ಇನ್ನಷ್ಟು ಹೆಚ್ಚೆಚ್ಚು ಬರೆಯುವಂತಾಗಲಿ
ನಿಮ್ಮ ಬ್ಲಾಗ್ ಅನೇಕ ವರ್ಷಗಳ ಕಾಲ ನಗಿಸುತ್ತಿರಲಿ

Anonymous said...

ಚುಟುಕು ಸಾಲಿನ ಸರದಾರ ಶಿವು..

ಅಭಿನಂದನೆಗಳು..

ಇನ್ನಷ್ಟು..
ಮತ್ತಷ್ಟು..
ಯಶಸ್ಸು ನಿಮ್ಮದಾಗಲಿ....

ಹೃದಯಪೂರ್ವಕ ಶುಭಾಶೀರ್ವಾದಗಳು...

Prakashanna..
ittigecementu..

ವಿಕಾಸ್ ಹೆಗಡೆ said...

ಶಿವಶಂಕರ, ಈ ಸಂಭ್ರಮದಲ್ಲಿ ನಾನೂ ಭಾಗಿ. ಹೀಗೆ ಬರೆಯುತ್ತಿರಿ. ಕಂಗ್ರಾಟ್ಸ್. keep blogging.

ಗುರು-ದೆಸೆ !! said...

'ಶಿವಶಂಕರ ವಿಷ್ಣು ಯಳವತ್ತಿ ' ಅವ್ರೆ..,

ಬ್ಲಾಗ್ ಲೋಕದಲ್ಲಿ ನಿಮ್ಮ ದೀವಿಗೆ ಇನ್ನಷ್ಟು ಪ್ರಜ್ವಲಿಸಲಿ..., ನಾನು ಹಾಗಾಗೆ ಎಣ್ಣೆ ಹಾಕುತ್ತಿರುತ್ತೇನೆ..
ಹಾಸ್ಯ ಮಾತ್ರ ಬೇಡ.. ನವರಸಗಳನ್ನು ಸೇರಿಸಿ ಬರೆಯಿರಿ..
ನನ್ನ 'ಮನಸಿನಮನೆ'ಯಲ್ಲೂ ನಿಮ್ಮ ದೀವಿಗೆಯ ಬೆಳಕಿರಲಿ..

Blog is Updated: http://manasinamane.blogspot.com

ಶರಶ್ಚಂದ್ರ ಕಲ್ಮನೆ said...

ಅಭಿನಂದನೆಗಳು ವಿಷ್ಣು ಅವ್ರಿಗೆ.... ಹೀಗೆ ನಿಮ್ಮ ಬರಹದ ಯಾನ ಮುಂದುವರೆಯಲಿ... ಶುಭವಾಗಲಿ :)

Anonymous said...

ಶಿವಶಂಕರ್ ಅವ್ರೆ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲನೇ ಬೇಟಿ. ಆಗಲೇ ನಾನು ನಿಮ್ಮ ಬ್ಲಾಗ್ ನ ಅಭಿಮಾನಿ ಆಗಿಬಿಟ್ಟೆ .....:)) ವರ್ಷ ತುಂಬಿದ ಸಂಭ್ರಮಕ್ಕೆ ಅಭಿನಂದನೆಗಳು ..:))

manada maatu said...

ಶಿವಶಂಕರ್ ಅವ್ರೆ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲನೇ ಬೇಟಿ. ಆಗಲೇ ನಾನು ನಿಮ್ಮ ಬ್ಲಾಗ್ ನ ಅಭಿಮಾನಿ ಆಗಿಬಿಟ್ಟೆ .....:)) ವರ್ಷ ತುಂಬಿದ ಸಂಭ್ರಮಕ್ಕೆ ಅಭಿನಂದನೆಗಳು ..:))

nethra/ renu said...

yalvati renu is here i think u forget me. since from one month i'm the regular and silent reader of your blog. till today i didn't send any comments for your writings but now sending congragulations to you and your blog. thank you for giving good and smart kannada blog to us for reading. nan nin no. kaldkodidini kano call to my number 9164645511 idu nan osa number call me

v said...

congrats:)