ಖಾಯಂ ಓದುಗರು..(ನೀವೂ ಸೇರಬಹುದು)

07 February 2010

ಗಂಡು ನೋಡಲು ಹುಡುಗಿಯ ಕಡೆಯವರು ಬಂದಿದ್ದು..


ಇದು ನನ್ನ ಗೆಳೆಯನೊಬ್ಬನ ಜೀವನದಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ..

ನನ್ನ ಗೆಳೆಯನೊಬ್ಬ ಮದುವೆ ಮಾಡಿಕೊಳ್ಳೋಕೆ ಹುಡುಗೀನ ಹುಡುಕ್ತಾ ಇದ್ದ. ಅವನು ಕೆಲಸ ಮಾಡುತ್ತಿದ್ದ ಕಚೇರಿ ಮ್ಯಾನೇಜರೊಬ್ಬರು ಇವನಿಗೆ ಅದಾಗಲೇ ಒಂದೆರಡು ಹೆಣ್ಣುಗಳನ್ನು ಸಹ ತೋರಿಸಿದ್ದರು. ಅವರ್ಯಾರೂ ಇವನಿಗೆ (ಸೈಜ್ ಗೆ ಮತ್ತು ಏಜ್ ಗೆ) ಮ್ಯಾಚ್ ಆಗಲಿಲ್ಲವಾದ್ದರಿಂದ ಬೇಜಾರು ಮಾಡಿಕೊಂಡಿದ್ದ.

ಅಪ್ಪ ಅಮ್ಮ ಇಲ್ಲದ್ದರಿಂದ ಅಜ್ಜಿಯ ಜೊತೆಯಲ್ಲಿ ಬೆಳೆದ ಇವನಿಗೆ ಏನಾದರೂ ಮಾಡಿ ಮದುವೆ ಮಾಡಿಸಲೇಬೇಕೆಂದು ಪಟ್ಟು ಹಿಡಿದ ಮ್ಯಾನೇಜರು, ಒಳ್ಳೆ ಅಂದ-ಚಂದದ ಹುಡುಗಿಯನ್ನು ಇವನಿಗಾಗಿ ಹುಡುಕಲು ಶುರು ಮಾಡಿದರು. ಅಷ್ಟರಲ್ಲಿ ಅವರ ಪರಿಚಯದ ಹಳೇ ಸ್ನೇಹಿತರು ಆಫೀಸಿಗೆ ಬಂದಾಗ, ಇವನ ಬಗ್ಗೆ ಹೇಳಿ ಪರಿಚಯ ಮಾಡಿಸಿದರು.

ನಿಮ್ಮ ಕೆ.ಬಿ. (ಕುಲ ಭಾಂಧವರು) ಇದ್ದಾನೆ. ಒಳ್ಳೇ ಹುಡುಗ. ಸರಕಾರಿ ಕೆಲಸ. ಅದು ಇದು ಅಂತಾ ಒಂದಿಷ್ಟು ಮಸಾಲೆ ಸೇರಿಸಿ, ನಿಮ್ಮ ಪರಿಚಯದಲ್ಲಿ ಯಾರಾದರೂ ಒಳ್ಳೇ ಹುಡುಗಿ ಇದ್ದರೆ ಹೇಳಿ ಅಂತಾ ಅವಲತ್ತುಗೊಂಡರು. ಆಯ್ತು ಅಂತಾ ಹೇಳಿದ ಅವರು, ಖಂಡಿತಾ ಹೇಳ್ತೀನಿ ಅಂತಾ ಭರವಸೆ ನೀಡಿ ಹೋದರು.


ಅವತ್ತಿನ ರಾತ್ರಿಯೇ ಅವರಿಂದ ಮ್ಯಾನೇಜರ್ ಗೆ ಫೋನ್ ಬಂದಿತ್ತು. ನನ್ನ ಮಗಳೊಬ್ಬಳಿದ್ದಾಳೆ. ಅವಳಿಗೂ ಮದುವೆ ಮಾಡಬೇಕೆಂದು ವಿಚಾರ ಮಾಡಿದೀನಿ.ನಾನು ಹುಡುಗನ ಮನೆಯವರನ್ನೊಮ್ಮೆ ನೋಡಬೇಕು ಅಂದರು. ನಾಳೆಯೇ ಬನ್ನಿ ಅಂತಾ ನಮ್ಮ ಮ್ಯಾನೇಜರು ಆಹ್ವಾನ ನೀಡಿದರು. ಆದರೆ, ಇವನಿಗೆ ಹೇಳುವುದನ್ನು ಮರೆತರು.


ಮಾರನೇ ದಿನ ಹುಡುಗಿಯ ಅಪ್ಪ (ಮ್ಯಾನೇಜರ ಸ್ನೇಹಿತ) ಮತ್ತು ಹುಡುಗಿಯ ಅಣ್ಣ ಸೀದಾ ಆಫೀಸಿಗೆ ಬಂದಾಗ, ಇವರಿಗೆ ನೆನಪಾಯಿತು. ಕೆಲಸ ಮಾಡುತ್ತಿದ್ದ ಇವನನ್ನು ಬಿಡಿಸಿ, ನಿಮ್ಮ ಮನೆಯನ್ನೊಮ್ಮೆ ನೋಡಬೇಕಂತೆ ಎಂದು ಹೇಳಿ, ತಡಮಾಡದೇ ಅವರನ್ನು ಇವನ ಮನೆಗೆ ಕರಕೊಂಡು ಬಂದರು.

ಅವನ ಮನೆಯಲ್ಲಿ ಅವರ ಅಜ್ಜಿ ಮಾತ್ರ ಇದ್ದರು. ಬಂದವರು ಅವರ ಪರಿಚಯ ಮಾಡಿಕೊಂಡು, ಅಜ್ಜಿಯನ್ನು ಮಾತನಾಡಿಸಹತ್ತಿದರು. ಅಷ್ಟರಲ್ಲಿ ಇವನು ಕಿಚನ್ ಗೆ ಹೋಗಿ ಬಂದವರಿಗೆ ಚಹಾ ಮಾಡಿಕೊಂಡು ಬಂದ. ಇವನೇ ಇದ್ದದ್ದರಿಂದ ಒಂದು ತಟ್ಟಯಲ್ಲಿ ಚಹಾ ಲೋಟಗಳನ್ನು ತಂದು ಕೊಟ್ಟ. (ಹುಡುಗಿಯರು ಚಹಾ ಕೊಡುವಂತೆ)

ಅಷ್ಟರಲ್ಲಿ ಚಾಟು ಚಟಾಕಿನ ಅಜ್ಜಿಯು ಬಂದವರಿಗೆ ಮೊಮ್ಮಗನನ್ನು ತೋರಿಸುತ್ತಾ,

"ನನ್ನ ಮೊಮ್ಮಗ ನಿಮಗೆ ಇಷ್ಟವಾದನಾ??" ಅಂತಾ ಕೇಳಿದರು.

ಟಕ್ಕನೆ ಎಲ್ಲರಿಗೂ ನಗು ಬಂದಿತು. ಅಲ್ಲಿಯೇ ಚಹಾದ ತಟ್ಟೆ ಹಿಡಿದುಕೊಂಡು ನಿಂತಿದ್ದ ಇವನಿಗೆ ನಗು ತಡೆಯಲಾರದೇ, ರೂಮಿನೊಳಗೆ ಹೋದ..
ಆಗ ಅವನ ಮ್ಯಾನೇಜರ್ ಇದ್ದವರು..

"ನೋಡಿ ನೋಡಿ, ನಾಚಿಕೊಂಡು ಒಳಗೆ ಹೋಗ್ತಾ ಇದಾನೆ.." ಅಂದುಬಿಟ್ಟರು..

ಮತ್ತೆ ಎಲ್ಲರೂ ನಕ್ಕರು..

ಅಲ್ಲಿಗೆ ಇವನ "ಗಂಡು ನೋಡುವ ಪ್ರಹಸನ" ಮುಗಿದಿತ್ತು.. ಬಂದವರು ಇವನನ್ನು ಮೆಚ್ಚಿಕೊಂಡು ಹೋಗಿದ್ದರು. ನಗು ನಗುತ್ತಾ...!!!ಇಂತಿ ನಿಮ್ಮ ಪ್ರೀತಿಯು,

ಶಿವಶಂಕರ ವಿಷ್ಣು ಯಳವತ್ತಿ

13 comments:

shashi jois said...

"ಗಂಡು ನೋಡುವ ಪ್ರಹಸನ" ಓದಿ ನಗು ಬಂತು.ಏನು ಕಾಲ ಬಂತಲ್ಲಪ್ಪ.next ನಿನ್ನ ಸರದಿನಾ!!??ಹ್ಹ ಹ್ಹ ಹ್ಹ

sunaath said...

ಇಂಥಾ ‘ಹೆಣ್ಣು ಹುಡುಗ’ ಸಿಕ್ಕಾನೆಯೇ? ಸಿಕ್ಕಾಗ ಬಿಡಬಾರದು!

mahesh said...

ನೀನು ಯಾವಾಗ ಬರಿತೀಯಾ ಮಾರಾಯ ನಿನ್ನ ನೋಡಲು ಬಂದ ಕಥೆಯನ್ನ......
ಚೆನ್ನಾಗಿತ್ತು ಪ್ರಹಸನ....

ramya said...

really this is a nice joke

Anonymous said...

what a surprise! chennagide

Anonymous said...

nimma snehitana photo iddiddare inna swarasya irodu shivu nice....

pramichullikkana @gmail.com said...

thumba thamaasheyaagide.neevu barda shiliyanthu innu chennagide.nagu thadeyaakagalla.

Dr.Gurumurthy Hegde said...

ಒಳ್ಳೆಯ ಹುಡುಗ, ನಾಚಿಕೊಳ್ತಾ ಇದ್ದಾನೆ ಅಂದ್ರೆ
ಮಾಡುವೆ ಮಾಡಿಸ್ಕೋಬೇಕು ಆಲ್ವಾ
ಚೆನ್ನಾಗಿದೆ ನಿಮ್ಮ ಗೆಳೆಯನ ಸ್ಥಿತಿ

Anonymous said...

ಕಾಲ ಬದಲಾಗೋಯ್ತು. ತಮ್ಮ ಕಾಲದಲ್ಲಿ ಹೀಗಿರಲಿಲ್ಲ. ಕಾಲಾಯ ತಸ್ಮೈ ನಮಃ. ಪ್ರಹಸನ ಚೆನ್ನಾಗಿದೆ.

Sitaram said...

ಕಾಲ ಬದಲಾಗೋಯ್ತು. ತಮ್ಮ ಕಾಲದಲ್ಲಿ ಹೀಗಿರಲಿಲ್ಲ. ಕಾಲಾಯ ತಸ್ಮೈ ನಮಃ. ಪ್ರಹಸನ ಚೆನ್ನಾಗಿದೆ.

ಶಿವಶಂಕರ ವಿಷ್ಣು ಯಳವತ್ತಿ said...

channagide baraha, nagu tadeyalu aaguttilla.. heege ollolle hasya maya lekhana bareyuttiri- Aditya B.V

ಶಿವಶಂಕರ ವಿಷ್ಣು ಯಳವತ್ತಿ said...

ಶಿವಶಂಕರ್, ನಾನು..ಒಂದು ನಾಟಕದಲ್ಲಿ ಈ ಪಾತ್ರ ಮಾಡಿದ್ದೆ...ಎಲ್ಲಾ ಉಲ್ಟಾ...ವರಪರೀಕ್ಷೆ ಅಂತ...ಹಹಹ, ಚನಾಗಿದೆ ಈ ನಿಮ್ಮ ಲೇಖನ...ಹಹಹ

ಶಿವಶಂಕರ ವಿಷ್ಣು ಯಳವತ್ತಿ said...

ಸಕ್ಕತಾಗಿದೆ ಸರ್ ನಿಮ್ಮ ಸ್ನೇಹಿತನ ಅನುಭವ..

ನಿಮ್ಮೊಲವಿನ,
ಸತ್ಯ..