ಖಾಯಂ ಓದುಗರು..(ನೀವೂ ಸೇರಬಹುದು)

24 January 2010

ಉತ್ತರ ಕರ್ನಾಟಕ ಶೈಲಿಯಲ್ಲಿ "ಬಾಲಿವುಡ್ ಸಿನಿಮಾಗಳು"

ಕಳೆದ ಬಾರಿ ನನ್ನ ಸ್ನೇಹಿತ ನಾಗರಾಜ್ ಹಾಗೂ ಅವೀನ್ ಕುಮಾರ್ ಕಳಿಸಿದ್ದ "ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು" ಲೇಖನವನ್ನು ಬಹಳ ಮಂದಿ ಇಷ್ಟಪಟ್ಟಿದ್ದರು. ಇದಕ್ಕೆ ಸಾಕ್ಷಿ ಹೆಚ್ಚಿನ ಕಾಮೆಂಟುಗಳು ಮತ್ತು ವೀಕ್ಷಕರು.(ಹಿಂದಿನ ಯಾವ ಲೇಖನಕ್ಕೂ ಇಷ್ಟು ವೀಕ್ಷಕರು ಬಂದಿರಲಿಲ್ಲ ಹಾಗೂ ಕಾಮೆಂಟುಗಳು ಬಂದಿರಲಿಲ್ಲ.)

ಇದೇ ರೀತಿ
"ಉತ್ತರ ಕರ್ನಾಟಕ ಧಾಟಿಯಲ್ಲಿ ಬಾಲಿವುಡ್ ಸಿನಿಮಾಗಳು" ಬರೀಬೋದಲ್ವಾ ಅಂತಾ ಅವಧಿ ಬ್ಲಾಗ್ ನ ಸುನಾಥ ಕಾಕ ಮತ್ತು ಇಟ್ಟಿಗೆ ಸಿಮೆಂಟು ಬ್ಲಾಗಿನ 'ಬ್ಲಾಗ್ ಲೋಕದ ಸಜ್ಜನ' ಅಂತಾ ಖ್ಯಾತಿವೆತ್ತ ಪ್ರಕಾಶಣ್ಣ ಐಡಿಯಾ ಕೊಟ್ಟಿದ್ದರು.. ಇರಲಿ ನೋಡೋಣಾ ಅಂತಾ ಒಂದು ಸಣ್ಣ ಪ್ರಯತ್ನ ಮಾಡ್ತಿದೀನಿ...

1) Paa
..................ಯಪ್ಪಾ!
2) Three idiots....ಮೂರು ಮಂಗ್ಯಾಗೋಳು.
(1 ಮತ್ತು 2 ಸುನಾಥ ಕಾಕಾ)
3) Dhadkan........ಎದಿ ಗುಂಡಗಿ ಸದ್ದು
4) Hum Aap ke Hain Koun.....ನೀ ನಂಗೇನಾಗ್ಬೇಕಾಗೈತಿ?
5)
Nani.........ಯಮ್ಮಾ ಬೇ
6)Nartaki....ಮನ್ಯಾಗ ಡ್ಯಾನ್ಸ್ ಮಾಡಾಕಿ
7) Kaho na pyaar hain... ಲವ್ ಮಾಡ್ತೀ ಇಲ್ಲಾ?
8) Mission Kashmir.... ಬೆಳಗಾಂವ್ ನ್ಯಾಗೊಂದು ಮಿಶಿನ್ನು
9) Hadh kar di aapne....
ನಿಂದು ಭಾಳ ಆಗ್ಯಾತೀ
10) Hamara dil aapke paas hain...ನಂ ಕಡೆ ಇದ್ದಿದ್ದು ನಿಂ ಕಡೆ ಐತಿ
11) He Raam,... ಲೇ ರಾಮ್ಯಾ..
12) Le chale apna sang... ನಿಂ ಜೋಡಿ ಕರ್ಕೊಂಡು ಹೋಗು
13) Papa the great.. ಯಪ್ಪಾ, ನೀನಾ ದೊಡ್ಡಂವಾ..
14) Raju chacha.. ರವ್ಯಾ ಕಾಕಾ
15) Tera jadoo chal gaya.. ನೀ ಮಾಟ ಮಾಡ್ಸಿದ್ದು ಆಗ್ಯಾತಿ ನೋಡು
16) Indian.. ನಮ್ಮೂರ್ನಾಗಿನ್ ರೈತ
17) Dil chahta hain... ನನ್ನ ಹೃದಯ ಕೇಳಕತ್ಯಾತಿ
18) Chori chori chupke chupke... ಒಳೊಳ್ಗ ಕದ್ದು ಮುಚ್ಚಿ
19) Mujhe Kuch Kehna Hain... ನಾ ಏನಾ ಒಂದ್ ಹೇಳವ ಅದೀನಿ
20)Awara Paagal Deewana.. ಯಡಿಯೂರಪ್ಪ-ದೇವೇಗೌಡ ಮತ್ತ ನಮ್ ಕರ್ನಾಟಕ
21) Hum Tumhare Hain Sanam.. ನಾ ನಿನ್ನವಾಂ ಅದೀನಿ..
22) Ankhiyon se goli maare.. ಕಣ್ಣಿಂದ ಗುಂಡಾ ಆಡ್ತಾಳ
23) Chalo ishq ladaye.. ಪಟಾಸೋಕ ಗುದ್ದಾಡೋಣು ಬಾ..
24) Main Hu naa.. ನಾ ಇರ್ತೀನಿ, ಚಿಂತಿ ಬಿಡು..
25) Hum Kisise Kam Nahin... ನಾ ಯಾವಳ್ಗಿಂತ ಕಮ್ಮಿ ಇಲ್ಲೇಳು..
26) Khalnayakon ka Khalnayak.. ಗುಂಡಾಗಳ ಗ್ಯಾಂಗಿನ ಮಾವ
27) Tumko naa bhool payenge... ನಾ ಮರೆತಿಲ್ಲ ನಿನ್ನ ಹಳ್ಳಿ, ನೆನಪು ಬರತೈತಿ ವಳ್ಳಿ ವಳ್ಳಿ
28) Munnabhai MBBS.. ಬಸ್ಯಾ MBBS
29) Darna Mana Hain.. ಹೆದರಿ ಸಾಯ್ ಬೇಡ್ ಲೇ
30) Ek Din 24 Ghante... ಒಂದ್ ದಿವ್ಸ್ ಅಂದ್ರ ಇಪ್ಪತ್ನಾಲ್ಕು ತಾಸು
31) Escape from Taliban.. ವಿಜಾಪೂರ ಗಲ್ಲಿನಾಗಿಂದ ತಪ್ಪುಸ್ಕೊಂಡು ಬಂದಾವನಿಮಗೆ ಯಾವುದಾದರೂ ಹೊಳೆದಿದ್ದರೆ, ದಯವಿಟ್ಟು ಕಾಮೆಂಟಿನಲ್ಲಿ ತಿಳಿಸಿ ಅಥವಾ ನನಗೆ shivagadag@gmail.com ಗೆ ಮಿಂಚಂಚೆ ಕಳಿಸಿ...

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ


ಈ ಲೇಖನವನ್ನ ಸಂಪದದಲ್ಲಿ ಓದಿದ
ಶ್ರೀಹರ್ಷ ಸಾಲಿಮಠ ಸರ್ರ್ ತಮಗೆ ಹೊಳೆದಿದ್ದೊಂದಿಷ್ಟನ್ನು ಕಳುಹಿಸಿದ್ದಾರೆ..
ನಿಮಗಾಗಿ ಇಲ್ಲಿದೆ..

GURU - ಗುರ್ಯಾ
ANARI- ತೆಪರಾ
Welcome to Sajjanpur- ಹೋಗಾನ ಬಾರಪಾ ಹಲಗೇರಿಗೆ!
kamine - ಲುಚ್ಚಾ
wanted- ಎಲ್ಲದಾನವಾ?
sikandar - ಬಹುದ್ದೂರ
oye lucky lucky oye- ಏನಪಾ ದೇಶವಾನಾ
barah ana- ಹನ್ಯಾಲ್ಡಾಣೆ
padosan- ಮಗ್ಗುಲ ಮನಿಯಾಕಿ
what's your Rashi? - ಯಾವೂರು ನಿಂದು?
billu barber- ಹಡಪದೋರ ಹಣಮ್ಯಾ
wake up sid - ಎದ್ದೇಳಲೇ ಸಿದ್ದ

5 comments:

sunaath said...

ಶಿವಶಂಕರ,
ಏಷ್ಟರ ಛಂದನ್ನ ತಲಿಪಟ್ಟಿ ಹುಡಕ್ತೀರಪಾ. ನಿಮಗ ನಮೋ ನಮಃ!
ಈ ಸಲ ಸಾಲಿಮಠ ಅವರೂ ಮಸ್ತನ್ನ ಸಿನೆಮಾ ತಗದ ಬಿಟ್ಟಾರಲಾ;ಅವರಿಗೂ ನಮೋ ನಮಃ!

mahesh said...

sakkatagidhe hesarugalu....bega cinema release aagli.....

shivap said...

jabardast hesar hudkeeri....

pramodc84 said...

Cool translations ;)

ಬನಶಂಕರ ಆರಾಧ್ಯ said...

ಶಿವಶಂಕರ್, ಬ್ಯಾಲ್ಯಾವುಡ ಶಿನಿಮಾ ಹೆಸರು ಚೆನ್ನಾಗಿವೆ. ನಗಿಸುತ್ತವೆ.