ಖಾಯಂ ಓದುಗರು..(ನೀವೂ ಸೇರಬಹುದು)

17 January 2010

ಒಂದೆರಡು ಸಾಲಿನ ಕಥೆಗಳು ಭಾಗ-1

ಬಹಳ ದಿನಗಳವರೆಗೆ ಬ್ಲಾಗ್ ಕಡೆ ತಲೆ ಹಾಕಿರಲಿಲ್ಲ.. ಹಾಗಂದ್ರೆ, ಬ್ಲಾಗ್ ಮೇಲೆ ಇಂಟರೆಸ್ಟ್ ಹೋಗಿದೆ ಅಂತಲ್ಲಾ..
ಬ್ಲಾಗ್ ಬರೆಯೋಕೆ ಟೈಮ್ ಆಗಿರಲಿಲ್ಲ ಅಷ್ಟೆ.. ಅವಾಗವಾಗ ಟ್ವಿಟರ್ ನಲ್ಲಿ ದಿನಕ್ಕೊಂದು ಸಾಲು ಬರೀತಿದ್ದೆ.. ಈ ಕೆಲಸದ ಮಧ್ಯೆ ಏನೂ ಬರೆಯಲು ಆಗಿಲ್ಲ.. ಇತ್ತೀಚೆಗೆ ನಂಗೆ ಇಷ್ಟುದ್ದ ಕಥೆಗಿಂದ ಒಂದೆರಡು ಸಾಲಿನಲ್ಲಿ ಏನಾದ್ರೂ ಹಾಳು ಮೂಳು ಬರೆಯೋದು ಇಷ್ಟವಾಗ್ತಾ ಇದೆ.. ಆದ್ರೂ ಬ್ಲಾಗ್ ನ ಬಿಡಲ್ಲ.. ಹಾಗೇ ಸುಮ್ನೆ ಬಸ್ಸಿನಲ್ಲಿ-ರೈಲಿನಲ್ಲಿ ಹೋಗಬೇಕಾದ್ರೆ ಮನಸ್ಸಿಗೆ ಅನ್ಸಿದ್ದನ್ನು ಎರಡು ಸಾಲಿನಲ್ಲಿ ಗೀಚಿ ನೋಡೋಣಾ ವಿಜಯ ಕರ್ನಾಟಕಕ್ಕೆ ಕಳಿಸಿದೆ.. ಅದನ್ನು ದಿ: 17-01-2010 ರ ವಿಜಯ ಕರ್ನಾಟಕದಲ್ಲಿ ಪ್ರಕಟಿಸಿದ್ದಾರೆ.. (ಅವರ ಧೈರ್ಯವನ್ನು ಮೆಚ್ಚಬೇಕು.. ಕಥೆಗಳನ್ನು ಓದಿ ಪೇಪರ್ ನವರನ್ನು ಬೈದುಕೊಂಡರೆ, ಓದಿ ಅರ್ಥವಾಗದೇ ಕನ್ ಫ್ಯೂಸ್ ಆಗಿ ಹುಚ್ಚು ಹಿಡಿದರೆ, ಖಂಡಿತವಾಗಿ ನಾನು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ..ಹಾಗೂ ಯಾವುದೇ ವೈದ್ಯಕೀಯ ವೆಚ್ಚವನ್ನು ಭರಿಸುವುದಿಲ್ಲ..) ಬ್ಲಾಗ್ ನಲ್ಲಿ ಹಾಕ್ತಿದೀನಿ.. ಓದಿ ನೋಡಿ....

1) ಪ್ರೇಮಿಗಳ ಮಧ್ಯೆ ವಿರಸ ಉಂಟಾಯಿತು. ಅವನು ಕೊಟ್ಟ ಉಡುಗೊರೆಗಳನ್ನೆಲ್ಲಾ ವಾಪಸ್ ಮಾಡಿ, ತಾನು ಕೊಟ್ಟಿದ್ದನ್ನು ಕೇಳಿದಳು...

ಅವಳು ಕೊಟ್ಟ ಮುತ್ತುಗಳ ಲೆಕ್ಕ ಸಿಗದೆ ಹುಡುಗ ಸೋಲೊಪ್ಪಿಕೊಂಡ.. ಹುಡುಗಿಯಕೆನ್ನೆ ಕೆಂಪಾಯಿತು.. ಅಲ್ಲಿಗೆ ವಿರಸದ ಕಥೆ ಮುಗಿಯಿತು.

2) ಅವಳಿಗೆ ಫೋನ್ ಮಾಡಲು ಕಾರಣ ಸಿಗದೆ ಒದ್ದಾಡಿ ಹೋದ.. ತಕ್ಷಣ ಮಿದುಳಿನಲ್ಲೊಂದು ಮಿಂಚು ಸುಳಿಯಿತು.. ಇವತ್ತು ಅವನ ಮುತ್ತಜ್ಜಿ ಬರ್ಥಡೇ ಅಂತೆ..

3) ಪ್ರೀತಿಸುವ ತಾಯಿ ಸತ್ತಾಗ ಭೋರೆಂದು ಅತ್ತಿದ್ದ.. ಬದುಕು ಕಲಿಸಿದ ತಂದೆ ಸತ್ತಾಗ, ಒಂದು ಹನಿ ಕಣ್ಣೀರು ಬರಲಿಲ್ಲ..ಅಪ್ಪ ಕಲಿಸಿದ್ದು ಸಾರ್ಥಕವಾಗಿತ್ತು.. ಗಂಭೀರನಾದ ಅವನಲ್ಲಿ ಮೌನವೇ ಮಾತಾಗಿತ್ತು..

4) ಯಾರ ಮಾತೂ ಕೇಳದ ಅವನು ಅವಳ ಮಾತು ಕೇಳಿ ಪರೀಕ್ಷೆ ಬರೆದ.. Rank ಬಂದ ದಿನವೇ ಒಪ್ಪಂದದ ಪ್ರಕಾರ ಮೂರು ಮುತ್ತುಗಳನ್ನು ಪಡೆದುಕೊಂಡ

5) ಬಸ್ಸಿನಲ್ಲಿ ಎಫ್.ಎಂ. ಕೆಳುತ್ತಿದ್ದವಳಿಗೆ ಪಕ್ಕದಲ್ಲಿ ಕುಳಿತವ ಏನೋ ಹೇಳಿದ.. ಅವಳು ದುರುಗುಟ್ಟಿಕೊಂಡು ನೋಡಿ ಸುಮ್ಮನಾದಳು ಸೀಟಿನಿಂದ ಎದ್ದ ಕೂಡಲೇ ಮೊಳೆಗೆ ಸಿಲುಕಿದ್ದ ಸೀರೆ ಹರಿಯಿತು

"ನಾನು ಮೊದಲೇ ಹೇಳಿದೆ" ಎಂದು ಅವನು ಪಿಸುಗುಟ್ಟಿದ್ದು ಕೇಳಿಸಿತು..


6) ಕಣ್ಣೆದುರಿಗೇ ಅಪ್ಪ ಸತ್ತಿದ್ದ, ಅಮ್ಮ ಸತ್ತಿದ್ದಳು.. ಪ್ರಾಣ ಸ್ನೇಹಿತ ಸತ್ತಿದ್ದ.. ಇವಾಗ ಮಗ ಸತ್ತಿದಾನೆ.. ಈ ಹಾಳು ಸಮಾಜ ಕಣ್ಣೀರಾಕಲು ಬಿಡುತ್ತಿಲ್ಲ.. ಗಂಡಸರು ಅಳಬಾರದಂತೆ... "ಅಳುವ ಗಂಡಸನ್ನು ನಂಬಬೇಡ, ನಗುವ ಹೆಣ್ಣನ್ನು ನಂಬಬೇಡ" ಎಂಬ ಮಾತೇನಾದರೂ ಕೆಲಸ ಮಾಡುತ್ತಿದೆಯೇ? ಅಥವಾ ಅಳುವುದು ಹೆಣ್ಣುಮಕ್ಕಳಿಗೆ ಮಾತ್ರ ಟೆಂಡರ್ ಆಗಿದೆಯೇ?.

7) ಸ್ಕೂಲಲ್ಲಿ ಭೇಟಿಯಾದರು, ಜೊತೆಯಲ್ಲಿ ಆಡಿದರು, ಓದಿದರು, ಕಾಲೇಜು ಮೆಟ್ಟಿಲು ಹತ್ತಿದರು, ಪ್ರೀತಿಸಿಕೊಂಡರು, ಮದುವೆಯಾದರು..ಮಕ್ಕಳು-ಮೊಮ್ಮಕ್ಕಳಾದರೂ ಇವರ ಮದುವೆ ಆಸೆ ತೀರಿಲ್ಲ...ಇವರು ಮತ್ತೆ ಮದುವೆಯಾಗಲು ಹೊರಟಿದ್ದಾರೆ...ಕಂಗ್ರಾಟ್ಸ್ ಹೇಳಿ ಪ್ಲೀಸ್... ಅವರ ಷಷ್ಠಿ ಪೂರ್ತಿ ಚನ್ನಾಗಿರಲಿ ಅಂತಾ..


8) ಪೆನ್ನು ತಗೊಂಡೆ, ಪೇಪರ್ ತಗೊಂಡೆ, ಒಳ್ಳೆ ಸ್ಥಳ ಹುಡುಕಿ ಏಕಾಂತದಲ್ಲಿ ದಿನವೆಲ್ಲ ಕಳೆದರೂ ಅವಳ ವಿಷಯವನ್ನು ಬಿಟ್ಟು ಬೇರೆಯದನ್ನು ಬರೆಯಲು ಮನಸ್ಸು ಒಪ್ಪುತ್ತಿಲ್ಲ.. ಬಲವಂತ ಮಾಡಿದೆ.. ಮನಸ್ಸಿಗೆ ಜ್ವರ ಬಂತು.!!.

9) ಅವಳಿಗಾಗಿ ಕಷ್ಟಪಟ್ಟು, ತರಬೇತಿ ಪಡೆದೆ, ನದಿಯಲ್ಲಿದ್ದ ಚಿಪ್ಪುಗಳನ್ನು ಹೆಕ್ಕಿ ತಂದು, ಲಕ್ಷಾಂತರ ಬಂಡವಾಳ ಹಾಕಿ, ಕೃಷಿಕನಾಗಿ ಶಸ್ತಚಿಕಿತ್ಸೆ ಮಾಡಿ, ಕೆರೆಯ ನೀರಿನಲ್ಲಿ ಬಚ್ಚಿಟ್ಟು, ಹದಿನಾಲ್ಕು ತಿಂಗಳು ಕಾದ ನಂತರ ಅದರಲ್ಲಿದ್ದ ಸುಂದರವಾದ ಮುತ್ತೊಂದನು ಅವಳಿಗೆ ಪ್ರೆಸೆಂಟ್ ಮಾಡಿದೆ.. ನನಗೆ ಬೇಡವೆಂದು ವಾಪಸ್ ಮಾಡಿದ್ದಾಳೆ.. ನಾನು ಕೇಳಿದ್ದೇ ಬೇರೆ ಅಂತಾ ಕೆನ್ನೆ ತೋರಿಸಿದ್ದಾಳೆ...

10) ಕುಡಿದು ಬಿದ್ದ ಹಳೇ ಪ್ರಿಯಕರನನ್ನು ನೋಡಿ ನಕ್ಕಳು. ಅವನಿಗೆ ಅರ್ಥವಾಗಲಿಲ್ಲ. ಪ್ರೀತಿಸಿದ ಐದು ವರ್ಷ ಜೊತೆಯಲ್ಲಿ ಇರುವುದಕ್ಕಿಂತ ಐದು ನಿಮಿಷ ಏಕಾಂತದಲ್ಲಿ ಕಳೆದಿದ್ದರೆ, ನಿನ್ನ ಸ್ಥಿತಿ ಹೀಗಿರುತ್ತಿರಲಿಲ್ಲ ಎಂದಳು. ಮತ್ತೆ ಅರ್ಥವಾಗಲಿಲ್ಲ. ಕುಡಿಯುವುದು ಮುಂದುವರಿಸಿದ. ಅವಳು ಗಂಡ ಮಕ್ಕಳೊಂದಿಗೆ ಸುಖವಾಗಿದ್ದಳು.

11) ಹಳಬ ಪ್ರೀತಿಸುತ್ತಿದ್ದ. ಹೊಸಬ ಪ್ರೀತಿಸುತ್ತಿದ್ದಾನೆ. ಅವನ ಬಳಿ ದುಡ್ಡು ಕಾರು ಇರಲಿಲ್ಲ. ಇವನ ಬಳಿ ಇದೆ. ಅವನು ಜೊತೆಯಲ್ಲಿ ಸಿನಿಮಾ ನೋಡುವುದು ಬೇಡ ಅನ್ನುತ್ತಿದ್ದ. ಇವನು ಬರೀ ಸಿನಿಮಾಗೆ ಕರೆಯುತ್ತಾನೆ. ಅವನು ಮದುವೆಯಾಗೋಣ ಅನ್ನುತ್ತಿದ್ದ. ಇವನಿಗೆ ಈಗಾಗಲೇ ಮದುವೆ ಆಗಿದೆ. ಇಬ್ಬರಿಂದಲೂ ಮೋಸವಾಗಿದೆ. ಅವನು ಮದುವೆಯಾಗದೇ ಮೋಸ ಮಾಡಿದ. ಇವನು ಮದುವೆ ಮಾಡಿಕೊಂಡು ಮೋಸ ಮಾಡಿದ. ಹಾಗಾದರೆ ಹುಡುಗಿ?


ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ.

18 comments:

mahesh said...

ಗುರು,
ಸಕ್ಕತಾಗಿವೆ ಕಥೆಗಳು....
ಬರೆಯುತ್ತಾ ಇರಪ್ಪ....
ಶುಭಾಶಯಗಳು......

mshebbar said...

ಎಲ್ಲಾ ಚೆನ್ನಾಗಿದೆ-----No. 7 ಗೆ 1st praiju------

sunaath said...

ಮತ್ತೆ ಮರಳಿದ್ದೀರಿ. ಚೆಂದದ ಕತೆಗಳನ್ನು ಹೇಳಿದ್ದೀರಿ. ಧನ್ಯವಾದಗಳು.

Anonymous said...

ಶಿವಶಂಕರ್,

ಮತ್ತೆ ನಿಮ್ಮ ಆಗಮನ ತುಂಬಾ ಆಗಿದೆ. ಮೊದಲ ಬಾಲಿನಲ್ಲೇ ಸಿಕ್ಸರ್...ಅನ್ನಿಸಿತು. ಎಲ್ಲವೂ ಚೆನ್ನಾಗಿದೆ. ವಿ.ಕ ದಲ್ಲಿ ಬಂದಿದ್ದಕ್ಕೆ ಅಭಿನಂದನೆಗಳು.

ಮೊದಲನೆಯದಂತೂ ಸಿಕ್ಕಾಪಟ್ಟೇ ಇಷ್ಟವಾಯಿತು...

shivaprakash hm said...

keep going buddy... :)

Anonymous said...

ಪ್ರೀತಿಯಿಂದ ಶಶಿ ಅಕ್ಕ ಈ ಕಾಮೆಂಟನ್ನು ನಂಗೆ ಮಿಂಚಂಚೆಯಲ್ಲಿ ಕಳಿಸಿದ್ದರು.. ಅದನ್ನೇ ಯಥಾವತ್ ಆಗಿ ಭಟ್ಟಿ ಇಳಿಸಿದ್ದೇನೆ..

ಹಾಯ್ ಶಿವಣ್ಣ ,
ನಾನು ಮೊನ್ನೆ ತಾನೇ ಎಣಿಸುತ್ತಿದ್ದೆ ಬ್ಲಾಗ್ ನಲ್ಲಿ ಬರೆಯದೆ ತುಂಬಾ ದಿನಾ ಆಯಿತಲ್ಲ ಅಂತ.ನಿನ್ನ ಒಂದೆರಡು ಸಾಲಿನ ಕಥೆಗಳು ಚೆನ್ನಾಗಿತ್ತು.ಬಸ್ಸಲ್ಲಿ ,ರೈಲಲ್ಲಿ ಕುಳಿತು ಇಷ್ಟು ಚಂದ ಗೀಚಿದೆಯಲ್ಲ ಅದೇ ಮೆಚ್ಚತಕ್ಕ ವಿಷಯ (ವಿಜಯಕರ್ನಾಟಕ ದವರ ದೈರ್ಯ ಮೆಚ್ಚತಕ್ಕದ್ದಲ್ಲ ) ಕಥೆ ಓದಿ ಅರ್ಥ ಆಗಿ ,ಕನ್ ಫ್ಯೂಸ್ ಆಗದೆ ಹುಡುಗಿಯರಿಗೆ ನಿನ್ನ ಹುಚ್ಚು ಹಿಡಿದರೆ ಏನು ಮಾಡ್ತಿ ಅಂತ ನಂಗೆ ಆಲೋಚನೆ ಶುರುವಾಗಿದೆ.ವೈದ್ಯರ ಅವಶ್ಯಕತೆ ಯಾರಿಗೆ ಅಂತ ನನ್ನ ಸಣ್ಣ ಡೌಟ್ ?
ನಾನು ಬರೆದದ್ದು ತಮಾಷೆಗಾಗಿ ಅಂತ ಪರಿಗಣಿಸತಕ್ಕದ್ದು.
ನೀನು ಹುಡುಗಿಯರಿಗೆ ಮುತ್ತಜ್ಜಿ ಬರ್ತ್ ಡೇ ಅಂತ ಫೋನ್ ಮಾಡಬೇಡಪ್ಪ .ಹಾಗೆ ಮಾಡಿದರೆ ಹುಡುಗಿಯರು ತಿರುಗಿ ಫೋನ್ ಮಾಡೋದೇ ಇಲ್ಲ ಹೇಳಿದ್ದೀನಿ!!!
ಅಳೋದು ಹೆಣ್ಣು ಮಕ್ಕಳ ಟೆಂಡರ್ಅಲ್ಲ ಗುತ್ತಿಗೆನೂ ಅಲ್ಲ.ನಿನಗೂ ಟೆಂಡರ್ ಪಾಸು ಮಾಡಿಸಬೇಕಾ?
ಅವಳ ವಿಷಯ ಬರೆದು ಬರೆದು ಜ್ವರ ಬಿಟ್ಟಿತಾ ಇಲ್ವಾ .ಇಲ್ಲದಿದ್ದರೆ ಮೊದಲು ಲೇಡಿ ಡಾಕ್ಟರ ಹತ್ತಿರ ಹೋಗು ತೋರಿಸು ಮಾರಾಯ!!!
9 ನೇ ಕಥೆ ಅತಿ ಆಯಿತಾ?ನೀನು ರೀಲ್ ಬಿಟ್ಟೆಯಾ?ಕೆನ್ನೆಗೆ ಎರಡು ಬಿಟ್ಲಾ ಅಂತ !!
ನಾಳೆಯಿಂದ ಜೋರು ತಿರುಗಾಟ .ಅದಕ್ಕೆ ಈಗಲಿ ಬರೆಯಲು ಕುಳಿತೆ.ಬರವಣಿಗೆ ಹೀಗೆ ಮುಂದುವರೆಸು.ಬೆಂಗಳೂರಿಗೆ ಬಂದಮೇಲೆ ಟ್ವಿಟ್ಟರ್ ಗೆಲ್ಲ ಉತ್ತರಿಸುವೆ ಆಯ್ತಾ?
ಮನೆಯಲ್ಲಿ ಎಲ್ಲರನ್ನು ಕೇಳಿದ್ದೇನೆಂದು ಹೇಳು .

ನಿನ್ನಕ್ಕ ಶಶಿ

ಯಳವತ್ತಿ said...

ಮಹೇಶಣ್ಣ... ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.. ಇವಾಗ ನೀವು ಆನ್ ಲೈನ್ ನಲ್ಲಿ ಸಿಗೋದು ಕಮ್ಮಿ ಆಗಿದೆಯಲ್ಲಾ??

ಹೆಬ್ಬಾರ್ ಸರ್ರ...ನಿಮ್ಮ ಕಮೆಂಟೇ ನನಗೆ ಬಂದ ಬಹುಮಾನ...

ಸುನಾಥ ಸರ್... ಅಷ್ಟೊಂದು ಕೆಲಸದ ಮಧ್ಯೆ ನನ್ನ ಬ್ಲಾಗಿನ ಪ್ರತಿಯೊಂದನ್ನೂ ಓದಿ ಕಾಮೆಂಟ್ ಮಾಡುತ್ತೀರಲ್ಲ... ನನ್ನ ಬಗ್ಗೆ ನನಗೆ ಹೆಮ್ಮೆ ಅನ್ನಿಸ್ತಿದೆ....

ಥ್ಯಾಂಕ್ಯೂ ಶಿವು..

ಶಶಿ ಅಕ್ಕ.. ನಿಮಗೆ ಖಾಸಗಿಯಾಗಿ ಉತ್ತರಿಸುತ್ತೇನೆ..
ಬೇಗ ಬೆಂಗಳೂರಿಗೆ ಬನ್ನಿ.. ಚಂದದ ಹುಡುಗಿಯರಿಗೆ ನನ್ನ ಜ್ವರ ಬಂದರೆ ಏನು ಮಾಡಬೇಕು ?? ಅಥವಾ ನಂಗೇ ಲೇಡಿ ಡಾಕ್ಟರ ಜ್ವರ ಬಂದುಬಿಟ್ಟರೆ??

ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು ಮತ್ತು ವಿಸ್ತೃತ ಚರ್ಚೆ ಆಗಬೇಕು..

ಬೇಗ ಬನ್ನಿ..

ನಿಮ್ಮ ಆಗಮನಕ್ಕಾಗಿ ಕಾಯುತ್ತಿರುವ

ನಿನ್ನ ತಮ್ಮ (ಬಾಡಿಗೆ) (ಕೀಟಲೆ, ಕಾಲೆಳೆಯುವುದು ಮತ್ತು ಪ್ರೀತಿಯೇ ಬಾಡಿಗೆ)

ಯಳವತ್ತಿ

Sitaram said...

ಎಳವತ್ತಿಯವರೇ ತಮ್ಮ ಪ್ರಯೋಗ ಅದ್ಭುತವಾಗಿದೆ. ಒ೦ದೆರಡು ಸಾಲಿನಲ್ಲಿ ಕಥೆಯೊ೦ದರ ಹರವನ್ನು ಹಿಡಿದಿಡುವ ತಮ್ಮ ಪ್ರಯತ್ನ ಶ್ಲಾಘನೀಯ. ಪ್ರಾಕಾರ ಮು೦ದುವರೆಸಿ. ನನಗೂ ಈ ತರ ಬರೆಯಬೇಕೆನಿಸಿದೆ.

ಯಳವತ್ತಿ said...

ಥ್ಯಾಂಕ್ಯೂ ಸೀತಾರಾಮ್ ಸರ್..

ನೀವು ಸಹ ಬರೆಯುವಿರಾದರೆ ಒಳ್ಳೆಯ ಆಲೋಚನೆ.. ಬೇಗ ಶುರು ಮಾಡಿ ಸರ್.... ನಾನು ಕಾಯುತ್ತಿರುತ್ತೇನೆ..

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

Dr.Gurumurthy Hegde said...

ತುಂಬಾ ಚೆನ್ನಾಗಿದೆ
ಕೆಲವು ವಿಚಾರಪೂರ್ಣವೂ ಆಗಿದೆ

Jalaxmi Patil said...

ಅರ್ಧಕ್ಕಿಂತ ಹೆಚ್ಚನ ಕತೆಗಳು ಇಷ್ಟವಾದವು. ಹೀಗೇ ಬರೆಯುತ್ತಿರಿ. ಸೊಗಸಾಗಿವೆ ಪುಟಾಣಿ ಕಥೆಗಳು.:)

ಯಳವತ್ತಿ said...

ಗುರುಮೂರ್ತಿ ಸರ್ ಗೆ ಮತ್ತು ಜಯಲಕ್ಷ್ಮಿ ಮೇಡಮ್ ಗೆ ಧನ್ಯವಾದಗಳು,,,

ಇನ್ನೂ ಚನ್ನಾಗಿ ಬರೆಯಲು ಪ್ರಯತ್ನ ಪಡುವೆ..

ಇದು ಸಧ್ಯದ ನನ್ನ ಮೊದಲಿನ ಪ್ರಯತ್ನ..

ಹೀಗೇ ಓದುತ್ತಾ ಇರಿ.. ಬರೆಯುತ್ತಾ (ಕಾಮೆಂಟ್) ಇರಿ..

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

Anonymous said...

ಶಿವಶಂಕರ್,

ಇಂಥ ಕತೆಗಳು ನನಗೆ ತುಂಬಾ ಇಷ್ಟ. ಓದಲು ಖುಷಿ ಕೊಡುತ್ತವೆ. ಅವತ್ತು ನೀವು ಬೆಂಗಳೂರಿಗೆ ಬಂದಾಗ ಬೇಟಿಯಾಗಲಿಲ್ಲ...ಮತ್ತೆ ಸಿಗೋಣ...ಇನ್ನಷ್ಟು ಬರೆಯಿರಿ.

azad (jalanayana) said...

ಶಿವಶಂಕರ್, ಎರಡು ಸಾಲು ಕಥೆಗಳು...??!! ಕಾನ್ಸೆಪ್ಟ್ ಬಹಳ ಚನ್ನಾಗಿದೆ...ನಮ್ಮ ಟಿ.ವಿ. ಧಾರಾವಾಹಿ ನಿರ್ದೇಶಕರು ಇದನ್ನ ನೋಡಬೇಕು...ಸುಮ್ ಸುಮ್ನೇ ಎಳೆದು ರಬ್ಬರ್ ಅಪ್ಪನ ತರಹ ಮಡಿಸೋ ಕಥೆಗಳು..ನಿಲ್ಲುತ್ವ..ಅಥವಾ ರಬ್ಬರ್ ಸ್ವಲ್ಪ ರಬ್ಬರ್ ಆಗುತ್ತೆ..ಅತಿರಬ್ಬರ್ ಆಗದೇ...ಹಹಹಹ್

Shashi said...

Super aagide kaNri.... aadaru avaLige phone maaDalu kaaraNave bekilla kaNri...

srinath said...

guru super aagide

jayaprakash said...

ಸಾರ್ ..ಓಂದೆರಡು ಸಾಲಿನ ಕತೆಗಳು ಬರುವ ದಿನ ನಾನು ...ಮೊದಲು ಓದುವುದೇ ಇದನ್ನು ನಂತರ ುಳಿದ ವಿಷಯ.....ಆದ್ರ ಅದನ್ನ ಬರಿತಿರೊದು ನೀವು ಅಂತ ತಿಲಿದಿರಲಿಲ್ಲ ,,,,,ತಾವೆಂದು ತಿಳೀದು ತುಂಬ ಸಂತೋಷ ಆಯ್ತು . ತುಂಬ ಚೆನ್ನಾಗಿ ಬರೀತೀರಿ ಸಾರ್ .....ನಿಮ್ಮ ಲೇಖನಗಳಿಂದ i can say u r alwys happiest person .......

SHOBHA.V said...

ಚೆನ್ನಾಗಿದೆ ನಾನು ಇದನ್ನು ಓದಿರಲ್ಲಿಲ್ಲ ಇವತ್ತಿ ಓದಿದ್ದೇನೆ ನಾನು ಮಾತ್ರ ನಿಮಗೆ ೧೧ ಗೆ 11 MARKS ಕೊಡುತ್ತೇನೆ , ತುಂಬ ತುಂಬಾ ಚೆನ್ನಾಗಿದೆ ಶಂಕರ್