ಖಾಯಂ ಓದುಗರು..(ನೀವೂ ಸೇರಬಹುದು)

10 November 2009

ನಮ್ಮೂರ ಹುಡ್ಗಿ....

ಹಾಗೇ ಸುಮ್ಮನೆ ಜೀವನದ ಹಾದಿಯಲ್ಲಿ ನಡೆದ ಪ್ರಸಂಗದ ಸಣ್ಣ ಮೆಲುಕು...

me: ನಾನು ಅವತ್ತೊಂದಿನ ಭಾನುವಾರದಂದು ಒಬ್ಬನೇ ತೇರು ಬೀದಿಯಲ್ಲಿ ನಡಕೊಂಡು ಹೋಗ್ತಾ ಇದ್ದೆ..

ಮಧ್ಯಾನ್ಹದ ಸಮಯ.. ಯಾರೂ ಇರಲಿಲ್ಲ

ಬಹಳ ದಿನಗಳಾಗಿತ್ತು, ಆ ಊರಿನಲ್ಲಿ ಓಡಾಡಿ..

ಹಾಗೇ ನಡಕೊಂಡು ಹೋಗ್ತಾ ಇರಬೇಕಾದರೆ, ದೂರದಲ್ಲೊಂದು ಹುಡುಗಿ ಬರ್ತಾ ಇದ್ದಳು...

Pratibha Patil: mundhe

me: ಬಣ್ಣ ಬಣ್ಣದ ಚೂಡಿ ಹಾಕೊಂಡಿದ್ದಳು..

ಬರ್ತಾ ಬರ್ತಾ ಹತ್ತಿರವಾಗುತ್ತಿದ್ದಳು

ಬೆಳ್ಳಗೆ ತುಂಬಾ ಮುದ್ದಾಗಿದ್ದಳು

Pratibha Patil: hu mundhe

me: ಬಹಳ ದಿನಗಳಾದ ಮೇಲೆ ಇಂತಹ ಸುಂದರವಾದ ಹುಡುಗಿಯನ್ನು ನಾನು ಆ ಊರಿನಲ್ಲಿ ನೋಡಿದೆ..

ನನ್ನ ಹೈಟ್ ಗೆ ಕರೆಕ್ಟ್ ಆಗಿದ್ದಳು

ಅವಳ ಮುಖ ನಗುವಿನಿಂದ ತುಂಬಿಕೊಂಡಿತ್ತು

ಕಿವಿಯಲ್ಲಿ ಉದ್ದನೆಯ ವಾಲೆ ಇತ್ತು..

ಹಣೆಯ ಮೇಲೆ ಬೊಟ್ಟು ಇತ್ತು..

Pratibha Patil: oh oh

oh oh

me: ಯಾರಾದರೂ ನೋಡಿರಾರು ಅಂತಾ ನಾನು ಅವಳೆಡೆಗೆ ಇಟ್ಟಿದ್ದ ದೃಷ್ಟಿಯನ್ನು ಸರಿಸಿ, ಬೇರೆ ಕಡೆಗಡ ನೋಡತೊಡಗಿದೆ

ಅವಳು ನನ್ನನ್ನೇ ನೋಡುತ್ತಿದ್ದಳು..

ಬರುತ್ತಾ ಬರುತ್ತಾ

ಹತ್ತಿರವಾದಳು

Pratibha Patil: oh oh bhari idhe nim story

me: (ಇದೂ ನಿಜವಾಗಲೂ ನಡೆದದ್ದು)

ಹತ್ತಿರದಿಂದ ನೋಡಿದೆ..

Pratibha Patil: oh

me: ನಿಜವಾಗಲೂ ಇಂತಹ ಚೆಲುವೆಯರು ಈ ಊರಿನಲ್ಲಿದ್ದು ನನ್ನ ಕಣ್ಣಿಗೆ ಬೀಳಲಿಲ್ಲವಲ್ಲಾ ಅಂದುಕೊಂಡೆ

ಅವಳು ರಸ್ತೆಯ ಎಡ ಬದಿಯಲ್ಲಿ ಬರುತ್ತಿದ್ದರೆ, ನಾನು ಬಲ ಬದಿಯಲ್ಲಿ ಬರುತ್ತಿದ್ದೆ..

ಇವಳು ರಸ್ತೆಯ ಆ ಬದಿಯಲ್ಲಿ ಸಮೀಪದಲ್ಲಿ ಬರುತ್ತಿದ್ದಳು

ನನ್ನನ್ನೇ ನೋಡಿ ನಕ್ಕಳು.. ನನ್ನನ್ನೇ ನೋಡುತ್ತಿದ್ದಳು

ನನಗೆ ನಾಚಿಕೆಯಾಯಿತು,...

Pratibha Patil: oh tumba fast hudgi

me: ನನ್ನನ್ನೇ ನೋಡುತ್ತಾ, ರಸ್ತೆಯ ಆ ಬದಿಯಿಂದ ನಾನು ಇರುವಲ್ಲಿ ಬಂದಳು,.. ನನಗೆ ಭಯವಾಯಿತು

ಬಂದವಳೇ ನಗುತ್ತಾ.. ನನ್ನ ಸಮೀಪವೇ ಬಂದಳು..

Pratibha Patil: oh hudga agi bhaya

me: (ಸುಮ್ನಿರಿ.. ನಮಗೂ ಭಯವಾಗುತ್ತೆ)

ನಮ್ಮನ್ನು ಯಾರೂ ಗಮನಿಸುತ್ತಿಲ್ಲವೆಂದು ಸುತ್ತಲೂ ನೋಡಿದೆ

ಪುಣ್ಯಕ್ಕೆ ಯಾರೂ ಇರಲಿಲ್ಲ..

ನನ್ನ ಹತ್ತಿರ ಬಂದು ಯಾವುದೋ ಪರಿಚಯವಿರುವಂತಹ ನಗುವನ್ನು ಬೀರುತ್ತಾ

ಒಂದು ಮಾತು ಕೇಳಿದಳು

Pratibha Patil: enu

me: " ಅಣ್ಣಾ ಚನ್ನಾಗಿದೀರಾ..? ಗೀತಾ ಮನೇಲಿ ಇದಾಳಾ? ನಾನು ಇವಾಗ ನಿಮ್ಮ ಮನೆಗೆ ಹೋಗ್ತಾ ಇದ್ದೆ.." ಅಂದಳು,.....

ಅವಳು ನನ್ನ ತಂಗಿಯ ಗೆಳತಿ ಆಗಿದ್ದಳು..

Pratibha Patil: ha ha ha

me: ನಾನು ಅವಳ ಮಾತುಗಳನ್ನು ಕೇಳಿ ಸುಸ್ತೋ ಸುಸ್ತು

Pratibha Patil: love story full stop

me: ಅದು ಸರಿ.. ತಂಗಿಯ ಫ್ರೆಂಡ್ಸ್ ಗಳೆಲ್ಲಾ ಅಣ್ಣಾ ಅನ್ನೋದು ಯಾವ ನ್ಯಾಯ>

?

ಎಲ್ಲರನ್ನೂ ತಂಗಿ ಅಂತಾ ಒಪ್ಕೊತೀನಿ

Pratibha Patil: ha ha ha

me: ಸುಂದರವಾಗಿರೋರು ಅಣ್ಣಾ ಅಂದಾಗ ಹೊಟ್ಟೆಲಿ ಬೆಂಕಿ ಬೀಳುತ್ತೆ..

Pratibha Patil: tagi idhre idhe disadvantage yellarigu anna agbidtira default agi

me: ಎಲ್ಲರನ್ನೂ ತಂಗಿ ಮಾಡ್ಕೊಂಡರೆ, ನಾನು ಲವ್ ಮಾಡೋದು ಯಾವಾಗ..? ಲೈಫ್ ಸೆಟ್ಲ್ ಮಾಡ್ಕೊಳ್ಳೋದು ಯಾವಾಗಾ..?


ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ.


--
www.shivagadag.blogspot.com

11 comments:

shobha said...

ನಮಸ್ಕಾರ ಶಿವಶಂಕರ್ ಯಳವತ್ತಿಯವರೇ,

ನಿಮ್ಮ ಸಂಭಾಷಣೆ ಬಹಳ ಚೆನ್ನಾಗಿದೆ. ಆದರೆ ಪ್ರತಿಭಾ ಪಾಟೀಲ್ ಸಂಭಾಷಣೆ ಅಷ್ಟು ಹಿಡಿಸಲಿಲ್ಲ.

ಶಿವಶಂಕರ ವಿಷ್ಣು ಯಳವತ್ತಿ said...

ಥ್ಯಾಂಕ್ಯೂ ಶೋಭಾ...

ನೆನ್ನೆ ನಾನು ಮತ್ತು ಪ್ರತಿಭಾ ಪಾಟೀಲ್ ಮೇಡಮ್ ಜೊತೆಚಾಟ್ ಮಾಡ್ತಿರಬೇಕಾದ್ರೆ, ಲೈಫ್ ನಲ್ಲಿ ನಡೆದ ಈ ಘಟನೆ ನೆನಪಾಯಿತು.. ಅದನ್ನೇ ಯಥಾವತ್ ಇಳಿಸಿದ್ದೀನಿ ಅಷ್ಟೆ...

ಭೇಟಿ ನೀಡಿದ್ದ ತುಂಬಾ ಧನ್ಯವಾದಗಳು..

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

http://shivagadag.blogspot.com

ಸವಿಗನಸು said...

ಯಾರಾದರೂ ಸಿಗ್ತಾರೆ ಬಿಡು ಶಿವಾ....!

sunaath said...

ಅಲ್ಲಾ, ನಿಮ್ಮ ಜೊತೆಗೆ ರಾಷ್ಟ್ರಪತ್ನಿಯವರೇ ಹರಟೆ ಹೊಡೆಯುತ್ತಾರಲ್ರೀ! ಭಾರೀ ವಜನದಾರ ಆಸಾಮಿ ಬಿಡ್ರೆಪಾ ನೀವು!

ರಾಹುದೆಸೆ !! said...

ಶಿವು ಅವ್ರೆ..

... ಹೌದುರೀ... ಸುಂದರವಾಗಿರೋರು ಅಣ್ಣಾ ಅಂದಾಗ ಹೊಟ್ಟೆಲಿ ಬೆಂಕಿ ಬೀಳುತ್ತೆ..

--www.balipashu.blogspot.com

parameshwara said...

ಶಿವು ಅವ್ರೆ.
ನೀವು ನಡ್ಕೊಂಡ್ ಹೋಗ್ತಇದ್ರಿ ಅಂಥ ಅವಳು ಅಣ್ಣ ಅಂದ್ಲು .ಅದೇ ನೀವು ಬೈಕ್ ನಲ್ಲಿ ಮೊಬೈಲ್ ನಲ್ಲಿ ಮಾತಾಡ್ಕೊಂಡು ಹೋಗಿದ್ರೆ ?ಹೋಗ್ಲಿ ಬಿಡಿ next time try madi

shivaprakash hm said...

ha ha ha...
paapa shivu...

Azad said...

Neevadru betteru...naavu maatnaadsidre..melinda kelakke ondu baari nodi mukha gantikki...hengide maige..andu bidtaare...hahaha...namma golu yarigree helodu shivshank

Shashi said...

nimma love sambhashane onthara chennagittu.try madi ....

ಶಿವಶಂಕರ ವಿಷ್ಣು ಯಳವತ್ತಿ said...

ಸಧ್ಯಕ್ಕೆ ಬೇಡ ಮಹೇಶಣ್ಣಾ.......

ಅರಾಮಾಗಿದೀನಿ........ಹ್ಹ ಹ್ಹಹ್ಹ

ಬನಶಂಕರ ಆರಾಧ್ಯ said...

ಹಲೋ ಯಳವತ್ತಿಯವರೇ, ನಿಮ್ಮ ಬ್ಲಾಗು ಚೆನ್ನಾಗಿದೆ. ನನ್ನದೊಂದು ಬ್ಲಾಗಿದೆ.
ambana.blogspot.com