ಖಾಯಂ ಓದುಗರು..(ನೀವೂ ಸೇರಬಹುದು)

26 October 2009

mindry.in ತಂಡದ ನಗೆ ಬುಗ್ಗೆಗಳು

ಸುಮಾರು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಕನ್ನಡ ಸಿನಿಮಾದ ಜೋಕುಗಳನ್ನು ಹುಡುಕುತ್ತಾ ಇದ್ದೆ. ಮೊದಲೇ ಸಿನಿಮಾದಲ್ಲಿ ಕಂಡತಹ ನೋಡಿದ, ನೋಡಿಲ್ಲದ ವೀಡಿಯೋಗಳನ್ನು ಹುಡುಕಬೇಕಾದರೆ, ಕಣ್ಣಿಗೆ ಬಿದ್ದಿದ್ದು "ಯಮನ ಸೋಲು" ಎಂಬ ದೇಸೀ ವೀಡಿಯೋ.. ಒಮ್ಮೆ ನೋಡಿ ಬನ್ನಿ..



ಈ ವಿಡಿಯೋ ನೋಡಿ, ನಾನು ಮತ್ತು ನಮ್ಮ ಮನೆಯವರೆಲ್ಲರೂ ಮನಸಾರೆ..ಹೊಟ್ಟೆ ತುಂಬಾ (ಊಟ ಮಾಡಿರದೇ ಇದ್ದುದ್ದರಿಂದ) ನಕ್ಕು ನಲಿದೆವು. ಈ ವೀಡಿಯೋದಲ್ಲಿ ಬರುವ ವ್ಯಂಗ್ಯ,,. ವಿಡಂಬನೆ ಮತ್ತು ಕೊನೆಯಲ್ಲಿನ ಚಿಕ್ಕ ಕಿವಿಮಾತುಗಳು ತುಂಬಾ ಹಿಡಿಸಿದವು. ನಿಮಗೆ ಇಷ್ಟವಾಯಿತೇ..??

ಈ ವೀಡಿಯೋವನ್ನು ಡೌನ್ ಲೋಡ್ ಮಾಡಬೇಕೇ..??
"Speed bit video downloader" ಸಾಫ್ಟ್ ವೇರ್ ಮುಖಾಂತರ ಡೌನ್ ಲೋಡ್ ಮಾಡಿಕೊಳ್ಳಬಹುದು.

ಇದು ಇಷ್ಟಕ್ಕೇ ಮುಗೀಲಿಲ್ಲಾ.. ಮತ್ತಷ್ಟು ವೀಡಿಯೋಗಳನ್ನು ಹುಡುಕುತ್ತಾ ಹೋದಂತೆ ಸಿಕ್ಕಿದ್ದು ರಾಶಿ ರಾಶಿ ಗೊಂಚಲು.. ಒಂದಕ್ಕಿಂತ ಒಂದು ಸೂಪರ್.. ನಿರೂಪಣೆ, ಹಾಸ್ಯ, ಶೈಲಿ, ಸಂಭಾಷಣೆ ಎಲ್ಲವೂ ಸೂಪರ್..

ಈ ವೀಡಿಯೋಗಳನ್ನೊಮ್ಮೆ ನೋಡಿ ಬನ್ನಿ...

"ಕಾಲ ಚಕ್ರ ಭಾಗ-1"


"ಕಾಲ ಚಕ್ರ ಭಾಗ-2"


ಈ ವೀಡಿಯೋದಲ್ಲಿ ಬರುವ ICICI ಬ್ಯಾಂಕ್ ನ ಯುವತಿ "ನಿಮ್ಮ ತಿಥಿಗೂ ಸಾಲ ಕೊಡ್ತಾಳೆ !!" ನಿರೂಪಕರ ಹಾಗೂ ಬ್ರಹ್ಮಾಂಡಾನಂದ ಸ್ವಾಮಿಗಳ ಮಾತುಗಳಂತೂ whatoooo whatu...

ನಂತರದ್ದು "ಮದುವೆ ಪ್ರಕರಣ.." ಮನೆಯವರೆಲ್ಲಾ ನಕ್ಕು ನಲಿದ ವೀಡಿಯೋ




" ಜಟ್ ಅಂತಾ ಹೇಳಿ ಭಾಗ-1 "


" ಜಟ್ ಅಂತಾ ಹೇಳಿ ಭಾಗ-2 "


ಈ ವೀಡಿಯೋಗಳ ಶ್ರಮದ ಮೂಲ ಇರುವುದು


ತಂಡದಲ್ಲಿ..

ತಂಡದ ಬಗ್ಗೆ ಅವರು ಅವರದೇ ಆದ ಮಾತುಗಳಲ್ಲಿ...

ಮೈಂಡ್ರೈ .ಇನ್ ಎಪ್ರಿಲ್ ೨೦೦೮-ರಲ್ಲಿ ಮೂವರು ಯುವಕರು (ಅರ್ಜುನ್, ಹರೀಶ್ ಮತ್ತು ಶರತ್)ಸೇರಿ ಸ್ಥಾಪಿಸಿದ ತಂಡವಾಗಿ ಜನ್ಮ ತಾಳಿತು. ಕನ್ನಡ ಹಾಸ್ಯಕ್ಕೆ ವೈವಿಧ್ಯತೆಯಿರುವ,ಸದಭಿರುಚಿಯ ಕೊಡುಗೆ ನೀಡಿ ಅಳಿಲು ಸೇವೆ ಸಲ್ಲಿಸುವ ಉದ್ದೇಶವನ್ನಿಟ್ಟುಕೊಂಡು ಈ ತಂಡವು ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಅಂತರ್ಜಾಲದಲ್ಲಿ(www.youtube.com/user/mindryin) ನಾವು ಚಿತ್ರೀಕರಿಸಿದ ವೀಡಿಯೋ-ಗಳನ್ನು ಹಾಕುತ್ತ ಬರುತ್ತಿದ್ದು, ಆ ನಮ್ಮ ಹಾಸ್ಯ ಚಟಾಕಿಗಳಿಗೆ ಇತರ ಕನ್ನಡಿಗರಿಂದ ಒಳ್ಳೆಯ ಪ್ರತಿಕ್ರಿಯೆ, ಪ್ರೋತ್ಸಾಹಗಳು ದೊರೆತಿವೆ. ಕಳೆದ ಒಂದೂವರೆ ವರ್ಷದಲ್ಲಿ ಈ ಹಾಸ್ಯ ವೀಡಿಯೋಗಳು ಎರಡು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿವೆ.

ವಿಚಿತ್ರಮಂಜರಿ ಎಂಬ ನಾಟಕದೊಂದಿಗೆ ನಮ್ಮ ಈ ತಂಡವು, ೨೦೦೮-ರ ನವೆಂಬರ್-ನಲ್ಲಿ ಯಶಸ್ವಿ ರಂಗಪ್ರವೇಶ ಮಾಡಿತು. ಹೊಸತಾದ ಹಾಸ್ಯಕ್ಕಾಗಿ ಈ ನಾಟಕವು, ಅಂದು ನಮ್ಮ ನಾಟಕಕ್ಕೆ ಮುಖ್ಯ ಅತಿಥಿಗಳಾಗಿದ್ದ ಪ್ರಸಿದ್ಧ ಅಭಿನೇತ್ರಿ ಭಾರ್ಗವಿ ನಾರಾಯಣ್-ರವರ ಮೆಚ್ಚುಗೆಗೆ ಪಾತ್ರವಾಯಿತು. "ನರಸಿಂಹ ಯುದ್ಧಂ -- ಒಂದು ಪ್ರೇಮದ ಕಥೆ " -- ಮೈಂಡ್ರೈ.ಇನ್ ತಂಡದ ಎರಡನೆಯ ಪ್ರಸ್ತುತಿಯಾಗಿತ್ತು. ಈ ನಾಟಕವು ಪ್ರಚಲಿತ ರಾಜಕೀಯ ವಿದ್ಯಮಾನಗಳ ಒಂದು ವಿಡಂಬನೆಯಾಗಿದ್ದು, ಇದರ ಮಧ್ಯೆ ನವಿರಾದ ಪ್ರೇಮಕಥೆಯು ಹಾಸುಹೊಕ್ಕಾಗಿತ್ತು. ೨೦೦೯-ರ ಫೆಬ್ರವರಿಯಲ್ಲಿ ಈ ನಾಟಕವು ಯಶಸ್ವಿ ಪ್ರದರ್ಶನ ಕಂಡಿತು. ಬಂದ ವೀಕ್ಷಕರು ಹೊಗಳಿದರು.

ಈ ವಿಷಯಗಳಿಂದ ಸ್ಫೂರ್ತಿ ಪಡೆದು, ನಮ್ಮ ತಂಡದ ವಾರ್ಷಿಕೋತ್ಸವವನ್ನು ಒಂದು ಹಾಸ್ಯ ಸಂಜೆಯ ರೂಪದಲ್ಲಿ ಮೇ 2-ರಂದು ಮಲ್ಲೇಶ್ವರದ ಸೇವಾ ಸದನ ಸಭಾಂಗಣದಲ್ಲಿ ಆಚರಿಸಿತು. ಇದಕ್ಕೂ ಮುಂಚೆ, ಜನವರಿಯಲ್ಲಿ, All India Radio-ದ FM Rainbow ನಮ್ಮ ತಂಡವನ್ನ ಸಂದರ್ಶನಕ್ಕಾಗಿ ಕರೆದಿದ್ದು ಒಂದು ಹೆಮ್ಮೆಯ ವಿಷಯ.ತಂಡದಲ್ಲಿ ಈಗ ಸುಮಾರು 7-8 ಮೆಂಬರ್ ಇದ್ದಾರೆ. ಅತಿ ಶೀಘ್ರದಲ್ಲೇ, ನಾವು ನಮ್ಮ ಮೊದಲನೇ ಪುಸ್ತಕ ಹಾಗು DVD ಅನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದೇ ರೀತಿಯಲ್ಲಿ, ನಿಮ್ಮಂತ ವೀಕ್ಷಕರ ಸಹಯೋಗದೊಂದಿಗೆ ನಮ್ಮ ತಂಡವು ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಇಚ್ಚಿಸುತ್ತದೆ.

ಇಂತಿ

ನಿಮ್ಮ,

Mindry.in ತಂಡ



ಯೂಟ್ಯೂಬ್ ನಲ್ಲಿ Mynidri ತಂಡಕ್ಕೆ ಸುಮಾರು 286 ಜನ ಫಾಲೋಯರ್ ಗಳಾಗಿದ್ದಾರೆ. ಇಂತಹ ಸದಭಿರುಚಿಯ ಕಲೆಗೆ ಪ್ರೋತ್ಸಾಹ ಕೊಡಬೇಕಾದದ್ದು ನಮ್ಮ ಕರ್ತವ್ಯ.. ಈ ತಂಡವು ತನ್ನ ವೀಡಿಯೋ ಗೊಂಚಲಿಗೆ ಡಿ.ವಿ.ಡಿ. ಯನ್ನು & ಪುಸ್ತಕವನ್ನು ಹೊರತರಲಿದೆ ಹಾಗೂ ರಂಗಪ್ರವೇಶದ ಮೂಲಕ ಕನ್ನಡಿಗರನ್ನು ರಂಜಿಸಲು ಹೊರಟಿದೆ. ಸಧ್ಯ ಈ ತಂಡಕ್ಕೆ ಪ್ರಾಯೋಜಕರ ಕೊರತೆ ಇದೆ.. ಸಹೃದಯ ಕಲಾಪೋಷಕ ಕನ್ನಡಿಗರ್ಯಾರಾದರೂ ಈ ತಂಡಕ್ಕೆ ಸಹಾಯ ಮಾಡುವರೇ ಅಂತಾ ಕಾದು ಕುಳಿತಿದೆ..
ಈ ತಂಡದ ಮಿಂಚಂಚೆ:- mindry.in@gmail.com

ಈ ತಂಡಕ್ಕೆ ಶುಭವಾಗಲೀ ಅಂತಾ ಈ ಬ್ಲಾಗ್ ಹಾರೈಸುತ್ತದೆ...

ಇದೇ ವಿಷಯವನ್ನು ಯಾರಾದರೂ ಹಿರಿಯ ಬ್ಲಾಗಿಗರು ತಮ್ಮ ಬ್ಲಾಗಿನಲ್ಲಿ ಲಿಂಕಿಸಿಕೊಂಡರೆ, ಉತ್ತಮ ಬೆಂಬಲ ದೊರೆಯುವುದು..

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

6 comments:

Arun said...

dhanyavaadagaLu, shivashankar avare.... :-)

Prakash Hegde said...

ಶಿವು ಯಳವತ್ತಿಯವರೆ...

ಇವತ್ತು ಮನೆಯಲ್ಲೇ ಬೋರ್ ಇದ್ದೆ..
ಬಹಳ ಬೋರ್ ಆಗಿತ್ತು..
ನಿಮ್ಮ ಬ್ಲಾಗಿಗೆ ಬಂದು ಸಿಕ್ಕಾಪಟ್ಟೆ ಖುಷಿಯಾಗಿ ..
ಫ್ರೆಷ್ ಆಗಿ ಹೋಗ್ತಾ ಇದ್ದೇನೆ...

ಎಲ್ಲಿಂದ ಹುಡುಕುತ್ತೀರಿ ಮಾರಾಯ್ರೆ ಇದೆಲ್ಲ...?

ನಮ್ಮೆಲ್ಲ ಅಭಿನಂದನೆಗಳು....

ittigecemnt

sunaath said...

ಶಿವಶಂಕರ,
minddry ಪರಿಚಯ ಮಾಡಿಕೊಟ್ಟದ್ದಕ್ಕಾಗಿ ತುಂಬಾ ಧನ್ಯವಾದಗಳು.
ತುಂಬಾ enjoy ಮಾಡಿದೆ.

Anonymous said...

chennagide tamma sa0graha. nakku nakku sustaithu

shobha said...

abba! entha vediogalu. bahala chennagive.

GIRISH TONAPI said...

HI I AM GIRISH FROM GADAG I THINK YOU REMEMBER,YOUR BLOG IS SO INTERESTING AND CHARMING KEEP IT UP,I AM SEEING IT REGULARLY