ಖಾಯಂ ಓದುಗರು..(ನೀವೂ ಸೇರಬಹುದು)

31 October 2009

ಅವಳಿಗೆ ಹೇಳಬೇಕಾಗಿದ್ದ ಆ ನಾಲ್ಕು ಪದಗಳು..
ಯಾವಾಗಲೂ ನಿನ್ನ ಜೊತೆಗೆ ಇದ್ರೂ ನಿನಗೆ ಹೇಳಬೇಕಾದ ಆ ನಾಲ್ಕು ಪದಗಳನ್ನು ನಿನಗೆ ಹೇಳೋಕ್ಕಾಗದೇ ತುಂಬಾ ಒದ್ದಾಡ್ತಿದ್ದೀನಿ.. ಇಂತಹ ಸಮಯದಲ್ಲಿ ನಿನ್ನಲ್ಲಿ ನನ್ನ ಭಾವನೆಗಳನ್ನು ವ್ಯಕ್ತಪಡಿಸೋಕೆ ಸಿಕ್ಕಿದ್ದು ಈ ಬಿಳಿ ಖಾಲಿ ಹಾಳೆ..(ಇವಾಗ ಖಾಲಿ ಇಲ್ಲ ಬಿಡು) ನಾನು ಇಷ್ಟು ದಿನ ನಿನ್ನ ಜೊತೆಗಿದ್ದು, ನಿನಗೆ ಈ ಮಾತು ಹೇಳಲಿಲ್ಲವಲ್ಲಾ ಅಂತಾ ನನಗೆ ಬೇಜಾರಾಗ್ತಿದೆ.. ನಿನ್ನನ್ನು ನಾನು ಹೇಗೆ ಕರೆಯಲಿ?


ನನ್ನ ಪಾಡಿಗೆ ಎಲ್ಲೋ ಒಂದು ಕಡೆ ಸುಮ್ಮನಿದ್ದೆ ನಾನು, ಆದರೆ, ಅವತ್ತೊಂದು ದಿನ ಶಿವಮೊಗ್ಗದಿಂದ ಹೊಸದಾಗಿ ಬಂದ ರಘು ಎಂಬ ನನ್ನ ಕೊಲಿಗ್ ನಿನ್ನ ಪರಿಚಯ ಮಾಡಿಕೊಟ್ಟಾಗಲೇ ನನ್ನ ಮನಸ್ಸು ಚಂಚಲವಾಗಿದ್ದು. ನಿನ್ನ ಮೊದಲ ನೋಟದಲ್ಲೇ ನೀನು ನನ್ನ ಸೆಳೆದಿದ್ದೆ.. ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲಾ ಅದೆಲ್ಲಾ ಸುಮ್ನೆ ಅನ್ಕೊಂಡಿದ್ದೆ.. ನಿನ್ನನ್ನು ನೋಡಿದಾಗಲೇ ನಂಗೆ ಅದು ನಿಜ ಅಂತಾ ಗೊತ್ತಾಗಿದ್ದು..ಎಂತಹ ಸುಂದರಿ ನೀನು.. ಸುಂದರಿ ಅನ್ನುವುದಕ್ಕಿಂತ ತುಂಬಾ ಬುದ್ದಿವಂತೆ ನೀನು.. ನೀನು ನನಗೆ ಪರಿಚಯವಾಗಿದ್ದು ಇಂಟರ್ನೆಟ್ ಮೂಲಕ.. ನಿನ್ನಲ್ಲಿರುವ ವಿಶಾಲತೆಯಿಂದ ನೀನು ನನ್ನ ಮನಸೂರೆಗೊಂಡಿದ್ದೆ.. ನನ್ನ ಹಳೆಯ ನೆನಪುಗಳನ್ನು ಹೆಕ್ಕಿ ತೆಗೆದಿದ್ದೆ.. ನನ್ನ ಬಾಲ್ಯದ ಸ್ನೇಹಿತರನ್ನು ಹುಡುಕಿಕೊಟ್ಟಿದ್ದೆ.. ಸಾಮಾನ್ಯವಾಗಿ ಈ ತರ ಹುಡುಗರು ಹುಡುಗಿಯರನ್ನು ಇಂಪ್ರೆಸ್ ಮಾಡಲು ಮಾಡ್ತಾರೆ.. ಆದರೆ, ನೀನು ಯಾವುದೇ ಭಾವನೆಯನ್ನು ಇಟ್ಟುಕೊಳ್ಳದೇ ನನಗೆ ಈ ತರಹ ಸಹಾಯ ಮಾಡಿದೆ..

ಇಷ್ಟು ದಿನ ಸುಮ್ಮನಿದ್ದು, ಇವಾಗ ನಿನ್ನ ಮೆಚ್ಚಿಸೋಕೆ ನಾನು ಈ ಮಾತುಗಳನ್ನು ಹೇಳ್ತಾ ಇಲ್ಲ.. ಬಹಳ ದಿನದಿಂದ ನಿನಗೆ ಹೇಳಬೇಕೆಂದಿದ್ದ ನನ್ನ ಮನದಾಳದ ಮಾತುಗಳನ್ನು ನಿನ್ನ ಮುಂದೆ ನಾನು ತೆರೆದಿಡ್ತೀನಿ.. ನಾನು ಜಾಸ್ತಿ ಹೇಳಿ ನಿನ್ನ ತಲೆ ತಿನ್ನುವುದಿಲ್ಲ ಹುಡುಗೀ,, ನಾನು ನಿನಗೆ ಹೇಳಬೇಕಾಗಿರುವುದು ಕೇವಲ "ನಾಲ್ಕು" ಪದಗಳು ಕಣೇ.. ಕೋಪ ಮಾತ್ರ ಮಾಡ್ಕೊಬೇಡ.. ನಿಂಗೆ ಬೇಜಾರಾದ್ರೆ ನನ್ನ ಬೈದುಬಿಡು,, ಆದರೆ ನನ್ನನ್ನು ದೂರ ಮಾತ್ರ ಮಾಡಬೇಡ..
" ಐ ಲವ್ ಯೂ ಆರ್ಕುಟ್"

17 comments:

shivaprakash hm said...

ha ha ha.... yarappa ankodidde.... :D
channagidale nim girl friend.... :)

www.ittigecement.blogspot.com said...

ಶಿವಶಂಕರ್....

ಏನ್ರೀ ಇದು ನಮ್ಮನ್ನು ಸುಸ್ತ್ ಹೊಡೆಸಿ ಬಿಟ್ರಿ...!
ಏನಪಾ ಇದು ಅಂತ ಓದಿದ್ರೆ ಕೊನೆಗೆ ತುಂಬಾ ತಮಾಷೆಯಾಗಿತ್ತು ಕಣ್ರೀ...!

ಹೀಗೆ ನಮ್ಮಗೆ ಆಶ್ಚರ್ಯಗಳನ್ನು ಕೊಡುತ್ತಿರಿ...

ರಾಜ್ಯೋತ್ಸವದ ಶುಭಾಶಯಗಳು..

ಚಂದದ ಲೇಖನಕ್ಕೆ ಅಭಿನಂದನೆಗಳು..

malathi S said...

ಹಾ ಹಾ ಹಾ..............

sunaath said...

ಇವು ನಾಲ್ಕು ಅಮೂಲ್ಯವಾದ ಪದಗಳಾಗಿವೆ!

ವಿ.ರಾ.ಹೆ said...

ಹ್ಹ ಹ್ಹ ಹ್ಹ.. ಸೂಪರ್...

ಸವಿಗನಸು said...

ಹಹಹ್ಹ್ಹಾಹಹ್ಹಾ....ಚೆನ್ನಾಗಿದೆ...
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು.

ಸವಿಗನಸು said...

ಹಹಹ್ಹ್ಹಾಹಹ್ಹಾ....ಚೆನ್ನಾಗಿದೆ...
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು.

ಎ.ಕಾ.ಗುರುಪ್ರಸಾದಗೌಡ. said...

ಶಿವೂ ಅವರೇ..

ನಿಮ್ಮ ಗೆಳತಿ ನನಗೂ ಅಚ್ಚುಮೆಚ್ಚಿನವಳು..-ಎ.ಕಾ.ಗುರುಪ್ರಸಾದಗೌಡ.;www.balipashu.blogspot.com.

ಶಿವಶಂಕರ ವಿಷ್ಣು ಯಳವತ್ತಿ said...

ಮೆಚ್ಚಿ ಕಾಮೆಂಟ್ ಬರೆದವರೆಲ್ಲರಿಗೂ ನನ್ನ ಧನ್ಯವಾದಗಳು..

ಹೀಗೆ ಬ್ಲಾಗಿಗೆ ಬರುತ್ತಾ ಇರಿ... ಕಾಮೆಂಟ್ ಮಾಡುತ್ತಿರಿ..

www.shivagadag.blogspot.com

Anonymous said...

ಲೇಖನ ಅದ್ಭುತವಾಗಿದೆ.
ಒ೦ದೇ ಉಸಿರಿನಲ್ಲಿ ಓದಿ ಮುಗಿಸಿದೆ.
ಕೊನೆಗೆ ಇ೦ಥಾ ಏನೋ ಹೊಡೆತ ಇದೆ ಅನ್ಕೊ೦ಡಿದ್ದೆ.

shobha said...

ನಮಸ್ಕಾರ ಶಿವಶಂಕರ್,

ಅದ್ಭುತ

ಏನ್ರೀ ಈ ರೀತಿ ಶಾಕ್ ಕೊಟ್ರಿ? ಆದರು ಶಾಕ್ ಸಕ್ಕತ್ತಾಗಿತ್ತು.
ನಿಮ್ಮ ಎಲ್ಲ ಲೇಖನಗಳು ತುಂಬಾ ಚೆನ್ನಾಗಿರುತ್ತೆ. ಆದರೆ ಈ ಲೇಖನ ಸುಸ್ತು ಹೊಡಿಸಿಬಿಡ್ತು.
ಧನ್ಯವಾದಗಳು.

ಶಿವಶಂಕರ ವಿಷ್ಣು ಯಳವತ್ತಿ said...

Guest ಯಾರು ಅಂತಾ ಗೊತ್ತಾಗಲಿಲ್ಲ..

ಶೋಭಾ... ನನ್ನ ಪ್ರತಿ ಲೇಖನವನ್ನು ಓದೋದಿಕ್ಕೆ ತುಂಬಾ ಥ್ಯಾಂಕ್ಸ್.,..
ನನಗೆ ಗೊತ್ತು.. ನೀವು ಓದೇ ಓದ್ತೀರಾ ಅಂತಾ...

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ
http://shivagadag.blogspot.com

Azad said...

ಶಿವಶಂಕರ್...ಬಹಳ build-up ಕೊಟ್ರಿ...ಅಲ್ಲಾ ಆ ನಿಮ್ಮ ಗೆಳತಿಗೆ ಪ್ರಕಾಶ್, ಈಶ್ , ಜಯಕ್ಕ ಎಲ್ಲ ಗೊತ್ತಿದ್ದು ನನ್ನ ಹ್ಯಾಗೆ ಮಿಸ್ ಮಾಡ್ಕೊಂಡ್ಲು..ಛೇ..ನನಗೂ ಹುಡುಗೀರ್ಗೂ ಆಗಿಬರೋದಲ್ಲಾ ಅಂತ ನನ್ನ ಕ್ಲಾಸ್ ಮೇಟುಗಳು ನನ್ನ ಛೇಡಿಸ್ತಾ ಇದ್ದದ್ದು ನಿಜ ಆಯ್ತಲ್ಲ..!!! ಅಂದ್ಕೊಂಡು ..ಸರಿ ನಿಮ್ಮ ಆ ಹುಡುಗಿ ಬಗ್ಗೆ ಹೇಳ್ತೀರಿ ಅವಳ ಬ್ಲಾಗಿಗೆ ಹೋಗಿ ಒಂದೆರಡು ಕಾಮೆಂಟ್ಸ್ ಗೀಚಿ..ನೋಡೇ ಬಿಡೋಣ ಅಂದ್ಕೊಂಡು..ನಿಮ್ಮ ಬ್ಲಾಗ್ ಕಡೆಯ ಸಾಲುಗಳಿಗೆ ಬಂದ್ರೆ.....ಛೆ..ಛೆ..ಛೆ..ಟುಸ್.......ಹಹಹಹ.....ಹಾಂ ...ಹೌದಲ್ಲ ಇವಳೇ ಅಲ್ಲವೇ ನನ್ನನ್ನೂ ನಿಮಗೆ ಪರಿಚಯಿಸಿದ್ದು..ಪ್ರಕಾಶ್ನೂ, ಈಶ್ನೂ..ಜಯಕ್ಕನ್ನೂ, ರಂಜನಾನೂ, ಚಿತ್ರಾನೂ, ಗುರುನೂ, ರಂಜಿತಾನೂ, ಸ್ಮಾರ್ಟ್ ಸುಧೀನೂ, ಶ್ರೀಧರನೂ, ತೇಜಸ್ವಿನೂ ನೂ, ....ಹನುಮಂತನ ಬಾಲದ ತರಹ ಬೆಳೀತಾನೇ..ಇದೆ.....ಓಹ್ ಇವಳಿಗೆ ಎಷ್ಟುಜನ ಪ್ರಿಯರು.......ಭೇಷ್ ಶಿವಶಂಕರ್...ಒಳ್ಲೆ ಪೋಸ್ಟ್

Shashi said...

ಬಹಳ ಚೆನ್ನಾಗಿದೆ build up.... ನಾನು twitter ಅಥವಾ facebook ಅಂತ ಗೆಸ್ಸ್ ಮಾಡಿದ್ದೆ!!!

Jayalaxmi patil said...

:) :) ನಿಜಕ್ಕೂ ನಮ್ಮನ್ನೆಲ್ಲ ಬೇಸ್ತು ಬೀಳಿಸಿದಿರಿ ಶಿವಶಂಕರ್! :) ನಾನಂತೂ ಯಾರಪ್ಪಾ ಆ ಚಲುವೆ ಅಂತ ಕುತೂಹಲಗೊಂಡೇ ನಿಮ್ಮ ಲೇಖನ ಓದಲು ಶುರುವಿಟ್ಟುಕೊಂಡೆ. ನೋಡಿದ್ರೆ... :)

Anonymous said...

Enri, konevaregu full suspense nim hudugi bagge, but avlu nim obbarige lover enalla antha thilidu bejaragthide

Anonymous said...

Nice post and this enter helped me alot in my college assignement. Thanks you for your information.