ಖಾಯಂ ಓದುಗರು..(ನೀವೂ ಸೇರಬಹುದು)

06 September 2009

ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-5

ಮತ್ತೆ ಬ್ಲಾಗಿನ ಕೀಲಿ ತೆಗೆದಿದ್ದೇನೆ..

ಕಾರಣಗಳು ಇವೆ. ಅದಕ್ಕೂ ಮೊದಲು ಬ್ಲಾಗಿನ ಚಹರೆಯನ್ನು ಬದಲಾಯಿಸಿದ್ದೇನೆ. ಈಗ ನಿಮಗೆ ಬ್ಲಾಗಿನಲ್ಲಿ ಕೇವಲ ಹಾಸ್ಯವನ್ನಷ್ಟೇ ನೀಡುವೆ..

ಉಳಿದಂತೆ ನೆನಪು, ಬೇಜಾರು, ಅನುಭವಗಳು, ಹಾಳು-ಮೂಳು ಇವುಗಳನ್ನು ಬೇರೆಯದೇ ಬ್ಲಾಗೊಂದಕ್ಕೆ ವರ್ಗಾಯಿಸಿದ್ದೇನೆ.
ನಿಮಗೆ ನನ್ನಿಂದ ನಗುವಷ್ಟೆ ಸಾಕು. ಇದು ನನ್ನ ಆಶಯ. ನನ್ನ ತೀರ್ಮಾನ. ನನ್ನ ಹೊಸದಾದ ಬ್ಲಾಗು ಹೆಸರು
"ನಾನು ಮತ್ತು ಈ ಹಾಳು ಜೀವನ" ಬೇಜಾರಾದಾಗ ಏನಾದರೊಂದು ಬರ್ದು ಹಾಕುವೆ,, ಇದಕ್ಕೆ ಪಬ್ಲಿಸಿಟಿಯಾಗಲೀ, -ಮೇಲ್ ಆಗಲಿ ಇರೋದಿಲ್ಲ..

ಎಂದಿನಂತೆ ನಿಮ್ಮನ್ನು ನಗಿಸಲು ನನ್ನ ಬ್ಲಾಗು ತಯಾರಾಗಿರುತ್ತೆ.

ಅದಕ್ಕಾಗಿ ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಇವುಗಳ ಮುಂದುವರಿಸ ಸರಣಿ ಭಾಗ-

) ಇದನ್ನು ಕಳಿಸಿದವರು:- --- ಮಂಜ (ಚಿಕ್ಕನಾಯಕನಹಳ್ಳಿ/ಬೆಂಗಳೂರು)


ಒಂದು ಸುಂದರವಾದ ಹುಡುಗಿ ಭಾರತಕ್ಕೆ ಬಂದಳು...

.....


.............


.....................................................................................................

..........................................................

...........................................................................................

ಒಂದು ಹುಡುಗಿ ಬರೋದೆ ತಡ.. ನಮ್ ಜನ ಹುಡುಕೋಕೆ ಶುರು...2) ಇದನ್ನು ಕಳಿಸಿದವರು:- ----ಸುಗುಣಸಾಗರ (ಚನ್ನೈ/ ಚಿಕ್ಕನಾಯಕನಹಳ್ಳಿ)

ಹೆಂಡತಿ:- ರೀ ನಮ್ ಮದುವೆ ಮಾಡಿಸಿದ ಪುರೋಹಿತ ಸತ್ತು ಹೋದ್ನಂತೆ ಕಣ್ರಿ..
ಗಂಡ:- ಮಾಡಿದ ಪಾಪ ಸುಮ್ನೆ ಬಿಡುತ್ತಾ??3) ಇದನ್ನು ಕಳಿಸಿದವರು:- ----ರಘು (ಶಿರಾ)

ಲೋ
ಬಿಡ್ಡಾ..
ನಾಗ..
ಸೋಮ...
ಮಂಜ....
ಸೀನ..
ಎಲ್ಲರೂ ಮಚ್ಚು ತಗಂಡು ಬರ್ರಲೇ..

ನಮ್ ಸಿಸ್ಯ ಯಾಕೋ ಮೆಸೇಜೇ ಕಳುಸ್ತಿಲ್ಲಾ;......


4) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)

ಹಿತವಚನ:- ನೀವು ಬಸ್ಸಲ್ಲಿ ಹತ್ತಿದ್ರೂ,
ನಿಮ್ ಮೇಲೆ ಬಸ್ ಹತ್ತಿದ್ರೂ,
ಟಿಕೇಟ್ ತೊಗೊಳೋದು ನೀವೇ.............


5) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)

ಉಗ್ರಗಾಮಿ:- ಯಾರು ನೀನು??

ವಿಷ್ಣುವರ್ಧನ್:- ಸಿಂಹ, ಸಾಹಸ ಸಿಂಹ...

ಉಗ್ರಗಾಮಿ:- ಪ್ರಿಪೇಯ್ಡ್ ಸಿಮ್ಮಾ..?? ಇಲ್ಲಾ ಪೋಸ್ಟ್ ಪೇಯ್ಡ್ ಸಿಮ್ಮಾ..????


6) ಇದನ್ನು ಕಳಿಸಿದವರು:- ----ಯದು ದಾಭಾ (ಚಿಕ್ಕನಾಯಕನಹಳ್ಳಿ)

ಅವತ್ತು ಡೆಡ್ ಬಾಡೀನ ತಂದು ಹಾಕ್ದೋರು ಯಾರು?>>
.

.

..


........................
ನೋಡಿರಿ ನಿಮ್ಮ ನೆಚ್ಚಿಕ್ರೈಮ್ ಡೈರಿಯಲ್ಲಿ ಮಾತ್ರ,.7) ಇದನ್ನು ಕಳಿಸಿದವರು:- ----ಜಗದೀಶ (ಚಿಕ್ಕನಾಯಕನಹಳ್ಳಿ)

ಹಿಂದಿನ ಮಾತು:-

'ಅಕ್ಷರ ಕಲಿತ ನಾರಿ, ಪ್ರಗತಿಗೆ ದಾರಿ'

ಇಂದಿನ ಮಾತು:-

'ಅಕ್ಷರ ಕಲಿತ ನಾರಿ, ಲವ್ ಮಾಡಿ ಪರಾರಿ'


8) ಇದನ್ನು ಕಳಿಸಿದವರು:- ----ಜಗದೀಶ (ಚಿಕ್ಕನಾಯಕನಹಳ್ಳಿ)

ಹೊಸ ಇಂಜಿನೀಯರಿಂಗ್ ಗಾದೆಗಳು

) ಬಿ.. ಮಾಡೋದಕ್ಕಿಂತ ಬೀದಿ ಸುತ್ತೋದೇ ಲೇಸು
ಆ) ವಿದ್ಯಾರ್ಥಿ ದುಡ್ಡು, ವಿ.ಟಿ.ಯು. ಜಾತ್ರೆ
ಇ) ಪೇಪರ್ ಚಿಕ್ಕದಾದ್ರೂ, ಉತ್ತರ ದೊಡ್ಡದು
ಈ) ಬಿ.ಇ. ಮುಗಿಸಿದೋರು ಊರಿಗೆ ದೊಡ್ಡವ್ರು.....
9) ಇದನ್ನು ಕಳಿಸಿದವರು:- ----ಜಗದೀಶ (ಚಿಕ್ಕನಾಯಕನಹಳ್ಳಿ)

ಪ್ರೇಮ ಬೆಂಕಿಯಂತೆ..

ಎಲ್ಲವನ್ನೂ ಪವಿತ್ರವಾಗಿಸುತ್ತೆ.


10) ಇದನ್ನು ಕಳಿಸಿದವರು:- ----ಸುದರ್ಶನ್ (ಶಿರಾ)

ಟೀಚರ್:- ಜೀರ್ಣಕ್ರಿಯೆ ಎಲ್ಲಿಂದ ಶುರು ಆಗಿ ಎಲ್ಲಿವರೆಗೆ ಅಂತ್ಯಗೊಳ್ಳುತ್ತದೆ?
ಗುಂಡ:- ಬಲಗೈನಿಂದ ಶುರು ಆಗಿ ಎಡಗೈನಿಂದ ಅಂತ್ಯಗೊಳ್ಳುತ್ತದೆ.


11) ಇದನ್ನು ಕಳಿಸಿದವರು:- ----ರಘು (ಶಿರಾ)

ಹೊಸ ರುಚಿ:-

"ಸ್ನೇಹ ಪಕ್ಕಾ ಮಾಡುವ ವಿಧಾನ"

ಬೇಕಾದ ಸಾಮಗ್ರಿಗಳು

ನಂಬಿಕೆ- ಒಂದು ಕಪ್
ವಿಶ್ವಾಸ -ಒಂದು ಕಪ್
ಚೇಷ್ಟೆ- ನಾಲ್ಕು ಕಪ್
ರುಚಿಗೆ ತಕ್ಕಷ್ಟು ಕೋಪ


11) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)

ಕೆಂಪು ಗುಲಾಬಿ ಕೊಟ್ಟು
ಅವನು ಹೇಳಿದ
ನಾ ನಿನ್ನ ಪ್ರಿಯತಮ.. /ವಾ..ವಾ../

ಕೆಂಪು ರಾಖಿ ಕಟ್ಟಿ
ಅವಳು ಹೇಳಿದಳು..

"ನೀ ನನ್ನ ಪ್ರಿಯ ತಮ್ಮ"


12) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)


ಅಪ್ಪ ಅಮ್ಮ ಸುಮ್ನೆ ಪ್ರಾಣ ತಿಂತಾರೆ,
ಮನಸ್ಸು ಕೊಟ್ಟು ಓದು ಅಂತಾ...

ಆದರೆ, ಅವರಿಗೇನು ಗೊತ್ತು....

ಮನಸ್ಸು ಕೊಟ್ಟ ಮೇಲೆ ಓದೋಕೆ ಆಗಲ್ಲಾ ಅಂತಾ


13) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)

ಮನೆ ಮುಂದೆ ಬಂದ ಕೋತಿಗಳನ್ನು ನೋಡಿದ ಕೂಡಲೇ..

ಹೆಂಡತಿ: ರೀ ನಿಮ್ಮ ನೆಂಟರು ಬಂದಿದಾರೆ..
ಗಂಡ (ಕೋಪಗೊಳ್ಳದೇ): ಓ ಅತ್ತೆ ಮಾವ.. ಯಾವಾಗ ಬಂದ್ರಿ??????


14) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)

ಸ್ಕೂಲಲ್ಲಿ ಮಲಗಿದ್ದ ಗುಂಡನನ್ನು ಎಬ್ಬಿಸಿ,
ಟೀಚರ್:- ಲೋ ಗುಂಡ, ಏಳೋ ಮೇಲೆ.. ನೀನು ಸ್ಕೂಲಿಗೆ ಬರೋದು ನಿದ್ದೆ ಮಾಡೋದಿಕ್ಕಾ?

ಗುಂಡ:- ಇಲ್ಲಾ ಸಾರ್.. ನಾನು ಸ್ಕೂಲಿಗೆ ಬರೋದು ವಿದ್ಯೆಗಾಗಿ.

ಟೀಚರ್: ಹಾಗಾದ್ರೆ, ಮಲ್ಕೊಂಡು ಯಾಕೆ ನಿದ್ದೆ ಮಾಡ್ತಿದೀಯಾ?

ಗುಂಡ:- ಸಾರ್, ಇವತ್ತು ವಿದ್ಯಾ ಬಂದಿಲ್ಲಾ ಸಾರ್..


15) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)

ನೀವು ಶೌರ್ಯದಲ್ಲಿ ಸಿಂಹ
ಗಾಂಭೀರ್ಯದಲ್ಲಿ ಗಜ
ಸೌಂದರ್ಯದಲ್ಲಿ ನವಿಲು
ಬುದ್ದಿಯಲ್ಲಿ ನರಿ
ವೇಗದಲ್ಲಿ ಚಿರತೆ...


ಒಟ್ಟಿನಲ್ಲಿ ನೀವು ಮನುಷ್ಯನೇ ಅಲ್ಲಾ ಕಣ್ರೀ........


16) ಇದನ್ನು ಕಳಿಸಿದವರು:- ----ಜಗದೀಶ (ಚಿಕ್ಕನಾಯಕನಹಳ್ಳಿ)

ಉತ್ತರವಿಲ್ಲದ ಪ್ರಶ್ನೆಗಳು
ನಿದ್ರೆ ಬಾರದ ರಾತ್ರಿಗಳು
ಮನಸ್ಸು ಕೊಡದ ಹುಡುಗಿ,
ಪ್ರಯತ್ನ ಬಿಡದ ಹುಡುಗ...

ಹೇ ಪ್ರೀತಿ.. ನೀ ಎಲ್ಲಿ ಅವಿತು ಕುಳಿತೆ????


17) ಇದನ್ನು ಕಳಿಸಿದವರು:- ----ಜಗದೀಶ (ಚಿಕ್ಕನಾಯಕನಹಳ್ಳಿ)

ಅವಳು ನಮ್ಮ ಮನೆ ಬಳಿ ಇದ್ದಳು
ದಿನಾ ನನ್ನನ್ನು ನೋಡುತ್ತಿದ್ದಳು
ನನ್ನ ಕಣ್ಣ ಮುಂದೆ ಬರುತ್ತಿದ್ದಳು
ನನ್ನ ನೋಡಿ ನಗುತ್ತಿದ್ದಳು
ಸನ್ನೆ ಮಾಡಿ ಕರೆಯುತ್ತಿದ್ದಳು
ನನ್ನ ನೋಡಿ ನಾಚುತ್ತಿದ್ದಳು

ಆದರೆ, ನಾನೇನು ಮಾಡಲಿ?
ಅವಳು ನಮ್ಮ ಬೀದಿಯ ಹುಚ್ಚಿ!!!!!


18) ಇದನ್ನು ಕಳಿಸಿದವರು:- ----ಶ್ರೀನಾಥ್ (ಶಿವಮೊಗ್ಗ) ನನ್ನ ಎಸ್ಸೆಮ್ಮೆಸ್ಸ್ ಫ್ರೆಂಡ್


" ಅಶ್ವಿನಿ ಹೇರ್ ಆಯಿಲ್ ಉಪಯೋಗಿಸಿದ್ದರಿಂದ ನನ್ನ ತಲೆ ಕೂದಲು ಉದುರುವುದು ಸಂಪೂರ್ಣವಾಗಿ ನಿಂತಿದೆ- ಎಚ್.ಡಿ. ದೇವೇಗೌಡ"19) ಇದನ್ನು ಕಳಿಸಿದವರು:- ----ಮಂಜುನಾಥ (ಚಿಕ್ಕನಾಯಕನಹಳ್ಳಿ)


ಮಗು:- ಅಮ್ಮ, ದೇವರು ಅಂದರೆ ಯಾರು?
ಅಮ್ಮ:- ದೇವರು ಅಂದರೆ, ದೇವರು ಗಂಡಸೂ ಅಲ್ಲಾ, ಹೆಂಗಸೂ ಅಲ್ಲಾ..
ಮಗುವೂ ಅಲ್ಲಾ, ವಯಸ್ಕನೂ ಅಲ್ಲ.
ಕಪ್ಪೂ ಇಲ್ಲ, ಬಿಳುಪು ಇಲ್ಲ....
ಆತ ಮಕ್ಕಳನ್ನು ತುಂಬಾ ಪ್ರೀತಿಸುತ್ತಾನೆ..

ಮಗು:- ಹ್ಹೋ.. ಮೈಕಲ್ ಜಾಕ್ಸನ್ ಅಂತಾ ಮೊದಲೇ ಹೇಳಬಾರದಾ....


20) ಇದನ್ನು ಕಳಿಸಿದವರು:-

ಆಯುಧ ಪೂಜೆ ಆಫರ್

ನನ್ನ ಬ್ಲಾಗ್ನಲ್ಲಿ ಒಂದು ಕಮೆಂಟ್ ಬರೆದು ಗೆಲ್ಲಿರಿ
೧೦ ಲಕ್ಷದ ಮಾರುತಿ ಕಾರ್ ನ ಫೋಟೋ
೨೪ ಇಂಚ್ ಬಿ.ಪಿ.ಎಲ್. ಕಲರ್ ಟಿ.ವಿ. ಬಾಕ್ಸ್
ಬೆಂಗೂರಿನಿಂದ ಅಮೇರಿಕಾಕ್ಕೆ ಪ್ರಯಾಣಿಸಿದ ಹಳೇ ಟಿಕೀಟುಗಳು..
ಇನ್ನೂ ಹೆಚ್ಚು ಬಹುಮಾನಗಳು..

ಈ ಆಫರ್ ಕಾಮೆಂಟ್ ಬರಿಯೋರಿಗೆ ಮಾತ್ರ.....


ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ

::ಸ್ನೇಹಿತರೇ, ಈ ಬ್ಲಾಗಿನ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ, ಪ್ರಸಿದ್ದಿಪಡಿಸಿ::

8 comments:

Sunaath said...

ಶಿವಶಂಕರ,
ನಿಮ್ಮ SMS ನಗೆಹನಿಗಳೇ ನಮಗೆ ಅತಿ ದೊಡ್ಡ ಬಹುಮಾನ, ಪುಷ್ಪಕವಿಮಾನದಂತೆ. ಬೇರೆ ಬಹುಮಾನ ಯಾಕೆ ಬೇಕು? ನೀವು ನಿರಂತರವಾಗಿ ಬರೆಯುತ್ತಿರಿ; ನಾವೆಲ್ಲ ನಿರಂತರವಾಗಿ ಓದುತ್ತ, ನಗುತ್ತ ನಲಿಯುತ್ತೇವೆ.

Amit Hegde said...

taavu blogna keeli tegididdu bahala santosha...! sms collection chennagide....

http://eyeclieckedit.blogspot.com

ಮಲ್ಲಿಕಾರ್ಜುನ.ಡಿ.ಜಿ. said...

ಜೋಕ್ಸ್ ಸಕತ್ತಾಗಿವೆ. ಮುಂದುವರೆಸಿ.

ಸವಿಗನಸು said...

ಶಿವಶಂಕರ್,
ಬಹಳ ದಿನಗಳ ನಂತರ ಮತ್ತೆ ನಗೆ ತರಿಸಿದ್ದೀರಾ...
ನಗೆಹನಿಗಳು ಚೆನ್ನಾಗಿದ್ದವು...
ಮುಂದುವರೆಯಲಿ.....
ಮಹೇಶ್!

Shivaprakash HM said...

Good Collection Shivashankar

shobha said...

Namaskara shiva shankar,

thumba santhosha. neevu blog teredaddakke.

hegidheera? yavagalu heege nammannella nagisutta neevu naguttirabeku. ide namma haaraike.

dhanyavadagalu

Guest said...

ಜೋಕುಗಳು ಸಕ್ಕತ್ ಖುಷಿಕೊಡುತ್ತವೆ...

ಆದ್ರೆ ಕೊನೆಯಲ್ಲಿರುವ ಬಹುಮಾನಗಳು ಯಾವುದು ನನಗೆ ಬೇಡ...ನೀವೇ ಇಟ್ಟುಕೊಳ್ಳಿ..

sitaram said...

ನಿಮ್ಮ ಯೆಸ್ಸೆಮೆಸ್ಸ್ ನಗೆಸುರಿಮಳೆ ಭಾರಿ ಇರುವಾಗ ಬಹುಮಾನ ನಿಮಗೆ ಇರಲಿ ನಮಗೆ ನಿಮ್ಮ ಬ್ಲೊಗ್ ಕೀಲಿ ತೆಗೆದು ಹೀಗೆ ನಗೆಹನಿಗಳು ಸುರಿತಾ ಇದ್ದರೆ ಸಾಕು.