ಖಾಯಂ ಓದುಗರು..(ನೀವೂ ಸೇರಬಹುದು)

03 July 2009

ಬ್ಲಾಗಿಗ ಮತ್ತು ಬ್ಲಾಗಿತಿ ಪ್ರೇಮ ಪ್ರಸಂಗ

ಸೂಚನೆ:- " ಪೋಸ್ಟ್ ಅಕ್ಷರಗಳು ಚಿಕ್ಕದಾಗಿ ಕಾಣುತ್ತಿದ್ದರೆ, ದಯವಿಟ್ಟು ನಿಮ್ಮ ಕಂಪ್ಯೂಟರ್ ಕೀಲಿ ಮಣೆಯ Ctrl ಕೀಯನ್ನು ಒತ್ತಿ ಹಿಡಿದು, + ಕೀಯನ್ನು ಒತ್ತುವುದರ ಮೂಲಕ ಅಕ್ಷರಗಳನ್ನು ದೊಡ್ಡದು ಮಾಡಿಕೊಳ್ಳಬಹುದು " ( Ctrl and +)


" ಇಲ್ಲಪ್ಪಾ.. ಇದ್ರಲ್ಲಿ ನಂಗೆ ಒಂಚೂರೂ ಇಂಟರೆಸ್ಟ್ ಇಲ್ಲ. ಈ ಬ್ಲಾಗು ಓದೋದು ಅಂದ್ರೆ ನಂಗೆ ಆಗಲ್ಲ. I HATE BLOG" ಅಂದವನೇ ಪೋನ್ ಕಟ್ ಮಾಡಿದ.

ಇಷ್ಟು ದಿನ ಚನ್ನಾಗಿದ್ದವನು ಇವನಿಗೆ ಏನ್ ಬಂತು? ಬ್ಲಾಗ್ ಅಂತೆ ಬ್ಲಾಗು.. ಯಾವೋನೋ ಮಾಡಕೆ ಕೆಲ್ಸಾ ಇಲ್ಲದೇ ಶುರು ಮಾಡಿದ್ದು BLOGGING, ಏನೂ ಕೆಲಸ ಇಲ್ಲದೇ ಇರೋರು BLOGGERS, ಕೈಕಡಿತಕ್ಕೆ ಬರೆಯೋದು BLOGPOST, ಸುಮ್ನಿರಲಾರದೆ ಬ್ಲಾಗ್ ಓದೋರು BLOG READRES,, ಅಂತಾ ಬೈಕೊಂಡವನೇ, ಮನೆಗೆ ಬೀಗ ಹಾಕಿ ತನ್ನ ಯಮನಂತಹ ಬೈಕ್ ಯಮಹಾದಲ್ಲಿ ಆಫೀಸಿಗೆ ನಡೆದ.

ಈತನ ಹೆಸರು ಶಶಿ ಅಂತಾ. ಓದಿದ್ದು COMPUTER DIPLOMA. ಅದಕ್ಕೆ ತಕ್ಕಂತೆ ಅವನ ತಂದೆ ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಕುಮಾರ ಸ್ವಾಮಿ ಲೇಔಟ್ ನಲ್ಲಿ ಒಂದು ಕಂಪ್ಯೂಟರ್ ಅಂಗಡಿ ಹಾಕಿಕೊಟ್ಟಿದ್ದರು. ಇವನ ಬಿಸಿನೆಸ್ಸಿನ ಚಾಲಾಕಿನದಿಂದಲೇ ಎಲ್ಲಾ ಗಿರಾಕಿಗಳನ್ನು ತನ್ನತ್ತ ಸೆಳೆಯುತ್ತಿದ್ದ. ವಯಸ್ಸು ಇನ್ನೂ 25 ಆಗಿದ್ದರಿಂದ ಇವನ ಹಿಂದೆ ಬೀಳೋ ಹುಡುಗಿಯರೇನು ಕಡಿಮೆ ಇರಲಿಲ್ಲ. ಆದರೆ, ಒಬ್ಬನೇ ಮಗ ಅಂತಾ ಮುದ್ದಿನಿಂದ ಬೆಳೆಸಿದ ತಂದೆ ತಾಯಿಯರ ವಿರುದ್ಧ ನಡೆದುಕೊಳ್ಳಲು ಇಷ್ಟವಿರದೇ ಎಲ್ಲರನ್ನು ಅವಾಯ್ಡ್ ಮಾಡಿದ್ದ.

ಆಫೀಸಿಗೆ ಬಂದವನೇ ಎಲ್ಲರೂ ಬಂದಿದ್ದಾರೆಯೇ ಅಂತಾ ಕಣ್ಣಲ್ಲಿ ಅಂದಾಜು ಮಾಡಿ, ತನ್ನ ಚೇಂಬರ್ ಗೆ ಹೋಗಿ ಕೂತ್ಕೊಂಡ. ಅಲ್ಲಿ ಇವನಿಗೆ ಕಾಯುತ್ತಿದ್ದ ತನ್ನ ತಂದೆಯ ವಯಸ್ಸಿನ ವ್ಯಕ್ತಿಯೊಬ್ಬ ಅವನಿಗೆ ನಮಸ್ಕರಿಸಿ, "ನಿಮ್ಮ ತಂದೆ ನನ್ನನ್ನು ಕಳ್ಸಿದಾರೆ" ಅಂತಾ ಒಂದು ಕವರನ್ನು ಕೊಟ್ಟರು. ಏನಿದು? ಅಂದವನೇ ಕವರನ್ನು ಬಿಡಿಸಿ ನೋಡಿದರೆ, ಹುಡುಗಿಯರ ಫೋಟೋಗಳು..!!!!

ತಕ್ಷಣ ಅವನ ಫೋನ್ ರಿಂಗಾಯಿತು. ಅಪ್ಪನ ಫೋನು. "ನಮ್ಮ ಮನೆತನಕ್ಕೆ ಹೊಂದಿಕೊಳ್ಳೋ 10 ಹುಡುಗಿಯರ ಫೋಟೋ ಕಳ್ಸಿದೀನಿ. ಸೆಲೆಕ್ಟ್ ಮಾಡಿ ಬೇಗ ಫೊನ್ ಮಾಡು, ಬಾರಿಯೂ ಸಹ ಪ್ರತಿ ಸಲ ಮಾಡಿದ ಹಾಗೆ ಯಾರೂ ಇಷ್ಟ ಇಲ್ಲಾ ಅಂತಾ ವಾಪಸ್ಸು ಕಳಿಸಬೇಡ" ಅಂದರು.

ಅಪ್ಪಾಜಿ, ಸಡನ್ನಾಗಿ ಹೀಗೆ ಹೇಳಿದ್ರೆ ಹೇಗೆ? ನಂಗೆ ಟೈಮ್ ಬೇಕು.."

ನೋಡು ಇದೇ ಕೊನೆ ಬಾರಿ ನಿಂಗೆ ಟೈಮ್ ಕೊಡ್ತಿರೋದು. ಎಷ್ಟು ದಿನ ಬೇಕು?

" ಕಡಿಮೆ ಅಂದ್ರೂ ಒಂದು ತಿಂಗಳು."

ಆಯ್ತು., ಒಂದು ತಿಂಗಳು ಕಾಯ್ತೀವಿ.. ಇಲ್ಲಾ ಅಂದ್ರೇ, ಮುಂದೆ ನಾನು ಹೇಳಬೇಕಾಗಿಲ್ಲ" ಅಂದವರೇ ಫೋನ್ ಕಟ್ ಮಾಡಿದರು.

ಇವರ ಸಂಭಾಷಣೆಯನ್ನು ಆಲಿಸಿತ್ತಿದ್ದ ಮದುವೆ ಬ್ರೋಕರ್ ಮುಂದೆ ಏನ್ ಹೇಳಬೇಕೋ ಅಂತಾ ಗೊತ್ತಾಗದೆ ನಿಂತಿದ್ದ. ಈತ ಹುಡುಗಿಯರ ಫೋಟೋಗಳನ್ನು ತನ್ನ ಡ್ರಾದಲ್ಲಿ ಹಾಕಿದವನೇ, ಬ್ರೋಕರನ್ನು ಕಳಿಸಿದ.

ಛೆ.. ನಂಗೆ ಇನ್ನೂ ಎಂತಾ ವಯಸ್ಸು ಆಗಿರೋದು? ಮೊನ್ನೆ ಇನ್ನೂ 24 ತುಂಬಿ 25ಕ್ಕೆ ಬಿದ್ದಿದೆ. ಇವಾಗ ತಾನೆ ಲೈಫ್ ನಲ್ಲಿ ಸೆಟಲ್ ಆಗ್ತಿದೀನಿ. ಇಷ್ಟು ಬೇಗ ಮದುವೆ ಹೇಗೆ ಮಾಡಿಕೊಳ್ಳಲಿ?? ಈ ದೊಡ್ಡೋರಿಗೆ ಇನ್ನೇನು ಕೆಲ್ಸಾ.. ಅಂತಾ ಯೋಚಿಸಬೇಕಾದರೆ, "ಚ್ಯುಯ್ ಚ್ಯುಯ್, ಎಸ್ಸೆಮ್ಮೆಸ್" ಅಂತಾ ಮೊಬೈಲ್ ಕೂಗಿ ಹೇಳಿತು. ಕಂಪನಿಯವರು ಬಿಟ್ರೆ ಯಾರಿದು ಮೆಸೇಜ್ ಕಳಿಸಿದೋರು ಅಂತಾ ನೋಡಿದ..

"ಥತ್.. ಇವನಜ್ಜಿ, ಬೆಳಿಗ್ಗೆ ಇನ್ನೂ ಉಗಿದಿದೀನಿ. ಮತ್ತೆ ಮೆಸೇಜ್ ಬೇರೆ ಕಳಿಸಿದಾನೆ.."ಲೋ Idiot, ನೀನು ಕಾಲೇಜಲ್ಲಿ ಬರೆದಿದ್ದ ಕವನಾನ ನನ್ನ ಬ್ಲಾಗಲ್ಲಿ ಹಾಕಿದೀನಿ, ಎಷ್ಟೊಂದು ಜನ ಮಾಡಿದಾರೆ.. ನಿನ್ನ ಕೇಳ್ತಿದಾರೆ, E-mail ID ಕೊಟ್ಟಿದೀನಿ. ಸ್ವಲ್ಪ ಬ್ಲಾಗ್ ನೋಡೋದನ್ನ ಕಲಿ.. ಬ್ಲಾಗ್ ಅಡ್ರಸ್ಸು:- http://shivagadag.blogspot.com ಅಂತಾ ಮೆಸೇಜ್ ಇತ್ತು."


ಇರಲಿ, ಏನ್ ಹಾಕಿದಾನೆ ನೋಡನಾ ಅಂತಾ ತನ್ನ ಪರ್ಸನಲ್ ಕಂಪ್ಯೂಟರ್ ನಿಂದ ವೆಬ್ ಸೈಟ್ ಓಪನ್ ಮಾಡಿದ. "ಶಿವಶಂಕರ ವಿಷ್ಣು ಯಳವತ್ತಿ (ನಿಮ್ಮ ಕನ್ನಡದವ) .ಹಾಸ್ಯ,ನೆನಪು,ಬೇಜಾರು..ಹಾಳು-ಮೂಳು..ನಿಮಗಾಗಿ.." ಅಂತಾ ಅವನ ಸ್ನೇಹಿತನ ಬ್ಲಾಗು.. ತನ್ನ ಕವನ ಎಲ್ಲಿದೆ ಅಂತಾ ನೋಡ್ತಾನೆ., ಎಷ್ಟೊಂದು ಪೋಸ್ಟ್ ಗಳು ಇದಾವೆ. ಇವ್ನು ಆಫೀಸಲ್ಲಿ ಕೆಲ್ಸಾ-ಗಿಲ್ಸಾ ಮಾಡ್ತಾನೋ ಇಲ್ಲಾ, ಇದನ್ನೇ ಮಾಡ್ತಾ ಕೂತಿರ್ತಾನೋ ಅಂತಾ ಶಾಪ ಹಾಕಿದ.


ಹ್ಞಾಂ.. ಸಿಗ್ತು.. ಅದು ಅವನು ಕಾಲೇಜಿನಲ್ಲಿ ಇದ್ದಾಗ ಬರೆದಿದ್ದ ಕವನ.


ಕವನದ ಹೆಸರು:- ಪ್ರೀತಿ

" ಗೆಳತೀ, ನೀ ಹೋದೆ ಎಲ್ಲಿಗೆ?
ಬಂದೆ ನಾ ನಿನ್ನ ಅರಸುತಲಿ
ಎಲ್ಲೆಲ್ಲಿ ಹುಡುಕಲಿ ಬೀದಿ ಗಲ್ಲಿಯಲಿ
ಹಳ್ಳಿಗಳಲ್ಲಿ-ನಗರಗಳಲ್ಲಿ
ಶಾಲಾ-ಕಾಲೇಜುಗಳಲ್ಲಿ..

ಯಾರು ಯಾರನ್ನು ಕೇಳಲಿ?
ಏನಂತ ಕೇಳಲಿ?
ಗೊತ್ತಿದ್ದರೆ ತಾನೆ ನಿನ್ನ ಹೆಸರು..

ದಿನ ಬರುವೆ ತಪ್ಪದೇ ನನ್ನಯಾ ಕನಸೊಳಗೆ
ಬಂದಾಗ ನೀ, ಪುಟಿಯುವುದು ಎದೆ.
ದಿನ ಬಂದು ಹಚ್ಚುವೆ
ಪ್ರೀತಿಯ ದೀಪ..
ನೀ ಬರದೆ ತುಂಬಿದೆ
ಮನದಲ್ಲಿ ತಾಪ.

ಬರಲಿಲ್ಲವೇಕೆ ನೀನು ಇಂದು
ಅರಸುತ್ತಾ ಬಂದೆನು
ನಿನ್ನ ನಾನು..

ನೀಳ ಕಪ್ಪು ಜಡೆ ಕೆಂಪು ಮೂಗು,
ಮಿಂಚುತಿದೆ ನಿನ್ನ ಬೆಳ್ಳಿ ಡಾಬು
ಬಿಡದೆ ಚಂಚಲಿಸಿದ ನನ್ನೀ
ಚಲುವೆಯೇ..
ನಿನ್ನೀ ಮಾದಕತೆಯಿಂದ
"ಮನಸ್ಸೆಲ್ಲಾ ನೀನೇ......."


Comments:

ಸೋಮಾರಿ ಪ್ರಶಾಂತ:- ಹಾಯ್ ಶಿವು.. ನಿಮ್ಮ ಫ್ರೆಂಡ್ ಕಾಲೇಜಿನಲ್ಲಿ ಬರೆದ ಕವನ ಚನ್ನಾಗಿದೆ.

ಗುರು:- ಚನ್ನಾಗಿದೆ ಗುರೂ.. ಇನ್ನೊಂದಿಷ್ಟು ಹಾಕಿ..

ರೂಪ:- ಏನ್ರೀ ಶಿವು, ನಿಮ್ಮ ಸ್ನೇಹಿತರಿಗೆ ಅವರ ಕನಸಿನ ಕನ್ಯೆ ಇನ್ನೂ ಸಿಕ್ಕಿದಾಳೋ ಇಲ್ಲವೋ? ಅಂತಾ ಹೇಳಲೇ ಇಲ್ಲಾ..
ಅವರೂ ಬ್ಲಾಗಿಂಗ್ ಮಾಡ್ತಾರಾ..?? ಬ್ಲಾಗ್ ಅಡ್ರೆಸ್ ಇದ್ರೆ ಕೊಡಿ..

ಶಿವ:- Thanks for your fast comments... ನಾನು ಕವನ ಹಾಕಿದ ತಕ್ಷಣವೇ ಓದಿ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು. ಕವನ ಮೆಚ್ಚಿದ ಪ್ರಶಾಂತ, ಗುರು ಮತ್ತು ರೂಪ ಅವರಿಗೆ ಮತ್ತೊಮ್ಮೆ Thanks...ರೂಪ ಅವರೇ, ನನ್ನ ಸ್ನೇಹಿತ ತರಹ ಇನ್ನೂ ಹಲವು ಕವನ ಬರೆದಿದಾನೆ. ಬ್ಲಾಗಿಂಗ್ ಮಾಡೋಕೆ ಅವನಿಗೆ ಮುಜುಗರ. ನಿಮ್ಮ ಕಾಮೆಂಟ್ಗಳನ್ನು ಅವನಿಗೆ -ಮೇಲ್ ಮಾಡಬಹುದು.. ವಿಳಾಸ:- shichere@yahoo.co.in" ಥತ್, ಯಾರೋ ಕೇಳಿದ್ರೂ ಅಂತಾ ಇವನು ನನ್ ಈ-ಮೇಲ್ ಐ.ಡಿ.ನ ಕೊಟ್ಟಿದ್ದಾನಲ್ಲಾ.. ಆದ್ರೂ ನನ್ ಕನಸಿನ ಕನ್ಯೆ ಸಿಕ್ಕಿದಾಳೋ ಇಲ್ಲವೋ? ಅಂತಾ ಕಟ್ಕೊಂಡು ಇವರಿಗೆ ಏನ್ ಆಗಬೇಕು ಅನ್ಕೊಳ್ಳುತ್ತಾ, ತನ್ನ ಈ-ಮೇಲ್ ಚೆಕ್ ಮಾಡಿದರೆ, ಒಂದು ಈ-ಮೇಲ್, ಅದೇ ಹುಡುಗಿ ಕಳ್ಸಿರೋ ಈ-ಮೇಲ್.. ಬೇಜಾರಿಂದಲೇ ಈ-ಮೇಲ್ ತೆಗೆದು ನೋಡಿದ.


" ಅಲ್ಲಾ ಶಿವು ಅವರೇ, ನೀವು ಬರೆದ ಕವನ ತುಂಬಾ ಚನ್ನಾಗಿದೆ ಕಣ್ರಿ, ನೀವು ಕಾಲೇಜಿನಲ್ಲಿ ಇದ್ದಾಗ ಕವನ ಬರೀತಿದ್ರಂತೆ? ಬ್ಲಾಗಿಂಗು ನಿಮಗೆ ಯಾಕೆ ಮುಜುಗರ?"

ಇಷ್ಟವಿದ್ದರೆ ಉತ್ತರ ಕಳಿಸಿ..

ನಲ್ಮೆಯ ಜಗಳಗಂಟಿ,
ರೂಪ.


ಈ-ಮೇಲನ್ನು ಓದಿ ಡಿಲೀಟ್ ಮಾಡಿದ. ಮಾರನೇ ದಿನ ಇನ್ನೊಂದು ಈ-ಮೇಲ್..

'ಯಾಕ್ರಿ.. ಉತ್ತರ ಕಳಿಸೋಕೆ ಬೇಜಾರ..?? ಹುಡುಗೀರು ಕಂಡ್ರೆ ನಿಮ್ಗೆ ಆಗಲ್ವಾ.. ಇಲ್ಲಾ, ಭಯಾನಾ...???


ತಕ್ಷಣ ಇವನಿಗೆ ಆರ್ಕುಟ್ ಐ.ಡಿ. ಯಿಂದ ರೂಪಳಿಂದ Chat ಮೆಸೇಜ್ ಬಂತು..

ರೂಪ:- Hi
ಶಶಿ:- Hello..
ರೂಪ:- ನಾನು ರೂಪ ಅಂತಾ, ಎಲ್ಲರೂ ಜಗಳಗಂಟಿ ರೂಪ ಅಂತಾ ಕರೀತಾರೆ.
ಶಶಿ:- am ಶಶಿ
ರೂಪ:- ಹೇಗಿದೀರಿ ಶಶಿ..? ನಿಮ್ಮ ಕವನ ಓದಿದೆ.. ಚನ್ನಾಗಿದೆ ಕಣ್ರಿ..
ಶಶಿ:- ಥ್ಯಾಂಕ್ಸ್..!!
ರೂಪ:- ಶಶಿ ಅವರೇ, ನಾನು ಸ್ವಲ್ಪ ಜಗಳಗಂಟಿ, ನನಗೆ ಯಾರೂ ಫ್ರೆಂಡ್ಸ್ ಇಲ್ಲಾ.. ನನ್ನ ಫ್ರೆಂಡ್ ಮಾಡ್ಕೋತೀರಾ?

ಶಶಿ:- ಆಯ್ತು.. ಆರ್ಕುಟ್ ನಿಂದ ಒಂದು ಫ್ರೆಂಡ್ ರಿಕ್ವೆಸ್ಟ್ ಕಳಿಸಿ..
ರೂಪ:- ನೀವೇ ಯಾಕೆ ಕಳಿಸಬಾರದು?
ಶಶಿ:- ನಿಮಗೆ ಇಷ್ಟ ಇದ್ದರೆ ಕಳಿಸಿ.. ಇಲ್ಲಾ ಅಂದ್ರೆ ಬೇಡಾ..
ರೂಪ:- ಅದಕ್ಯಾಕೆ ಕೋಪ ಮಾಡ್ಕೊತೀರಾ? ನಾನೇ ಕಳಿಸ್ತೀನಿ..
ಶಶಿ:- Ok.. ಇವಾಗ ಆಫೀಸ್ ನಲ್ಲಿ ಇದೀನಿ.. ನಾನು ನಾಳೆ ಸಿಗುವೆ..


ಮಾರನೇ ದಿನ

ರೂಪ:- ನನ್ನ ಆರ್ಕುಟ್ ನಲ್ಲಿ ಫ್ರೆಂಡ್ ಮಾಡ್ಕೊಂಡಿದ್ದಕ್ಕೆ ಥ್ಯಾಂಕ್ಸ್ ..ಯಾಕ್ರಿ, ಮೊನ್ನೆ ನಾನು ಕಳಿಸಿದ -ಮೇಲ್ ಗೆ ರಿಪ್ಲೆ ಮಾಡಿಲ್ಲಾ?
ಶಶಿ:- ಬರಿಯೋಣಾ ಅನ್ಕೊತಾ ಇದ್ದೆ..
ರೂಪ:- ಹೌದಾ..?? Thank u.. ನೀವು ಕವನ ಅಲ್ಲದೇ ಇನ್ನೂ ಏನೇನು ಬರ್ದಿದೀರಾ?
ಶಶಿ:- ಅಂಥಾದ್ದು ಏನು ಇಲ್ಲಾ ರೀ.. ಕಾಲೇಜಲ್ಲಿದ್ದಾಗ ಒಂದಿಷ್ಟು ಕವನ, ಕಥೆ ಬರೆದಿದ್ದೆ ಅಷ್ಟೆ..
ರೂಪ:- ಒಂದೆರಡು ಕವನ ಇದ್ರೆ -ಮೇಲ್ ಮಾಡ್ತೀರಾ..?
ಶಶಿ:- ಇಲ್ಲಾ ರೀ.. ಅವು ಎಲ್ಲೋ ಇದಾವೆ.. ಹೇಗೆ ಹುಡುಕಲಿ? ಅದೂ ಅಲ್ಲದೇ ನನಗೆ ಅಷ್ಟು ಟೈಮ್ ಇಲ್ಲ.
ರೂಪ:- ಪ್ಲೀಸ್ ನಂಗೋಸ್ಕರ ಹುಡುಕಿ ಕೊಡಿ. ನಿಮ್ಮ ಕವನಗಳಲ್ಲಿ ಏನೋ ಸೆಳೆತ ಇರುತ್ತೆ.
ಶಶಿ:- ಸುಮ್ನೆ ಏನೇನೋ ಹೇಳಬೇಡಿ.. ಏನೋ ನಾನು ಅಂತಾ ದೊಡ್ಡ ಕವಿಯೇನಲ್ಲಾ.

ರೂಪ:- ಅಲ್ಲಾರೀ.. ನೀವು ಬರೆದಿರೋ ಕವನ ಕಥೆಗಳನ್ನು ನನಗೋಸ್ಕರ ಬ್ಲಾಗಲ್ಲಿ ಹಾಕಿ.. ಆದರೆ,...

ಶಶಿ:- ಆದರೆ.. ಏನು?

ರೂಪ:- ನಿಮ್ಮ ಸ್ನೇಹಿತರ ಬ್ಲಾಗಲ್ಲಿ ಹಾಕೋದಕ್ಕಿಂತ, ನಿಮ್ಮದೇ ಬ್ಲಾಗನ್ನು ಯಾಕೆ ಓಪನ್ ಮಾಡಿ ಯಾಕೆ ಹಾಕಬಾರದು?
ಶಶಿ:- ಇಲ್ಲಾರೀ, ಈ ಬ್ಲಾಗಿಂಗು ಅಂದ್ರೆ ನಂಗೆ ಆಗಲ್ಲಾ.. ಕಾಲೇಜಲ್ಲಿದ್ದಾಗ ಒಂದಿಷ್ಟು ಬರೆದಿದ್ದು ಅಷ್ಟೆ.. ಆಮೇಲೆ ಬರೆದಿಲ್ಲ. ನಾನೇನು Writer ಅಲ್ಲಾ ಕಣ್ರೀ..

ರೂಪ:- ಅದಕ್ಯಾಕೆ ಹಾಗೆ ಅನ್ಕೊಳ್ತೀರಾ..? ನಾನು ಮೊದಲು ಹಾಗೆ ಅನ್ಕೊಂಡಿದ್ದೆ.. ಆದರೆ, ನಾನು ಬ್ಲಾಗು ಶುರು ಮಾಡಿದ ಮೇಲೇನೇ ನನ್ನ ಬರವಣಿಗೆಯಲ್ಲಿ ಚನ್ನಾಗಿ ಇಂಪ್ರೂವ್ ಆಗಿದ್ದು. ಫ್ರೀ ಇದ್ರೆ, ನನ್ನ ಬ್ಲಾಗ್ ವಿಸಿಟ್ ಮಾಡಿ. http://naanu&nannageleya.blogspot.com
ಇವಾಗ ಆಫೀಸಿನಲ್ಲಿ ಇದೀನಿ.. Night ಮತ್ತೆ ಆನ್ಲೈನ್ನಲ್ಲಿ ಸಿಗ್ತೀನಿ.. Bye.. Bye.. Nice to talk to u..ಇವಳೇನಪ್ಪಾ ಬರೆದಿದ್ದಾಳೆ ಅಂತ ಇವನಿಗೆ ಕುತೂಹಲ ಜಾಸ್ತಿಯಾಗಿ, ಅವಳ ವೆಬ್ ಸೈಟ್ ಓಪನ್ ಮಾಡಿದ..

ಬ್ಲಾಗಿನ ಹೆಡ್ಡಿಂಗ್

" ರೂಪಾವಳಿ (ರೂಪ ನೀಡುವ ಹಾವಳಿ) "


ಬ್ಲಾಗು ಅಡ್ರಸ್ಸು ಇದೇನು ಹೀಗೆ ಹಾಕಿದಾರೆ..? (ಮೋಸ್ಟ್ಲಿ ಎಲ್ಲರಿಗೂ ಹಾವಳಿ ಕೊಡ್ತಿರಬೇಕು..? ಅನ್ಕೊಂಡ)


21 June 2009

" ನಾನು ಮಾಡಿದ ಮೊತ್ತ ಮೊದಲ ಕೆಲಸ ":-


ಅವಾಗ ನಾನು 7ನೇ ಕ್ಲಾಸ್ ಓದ್ತಾ ಇದ್ದೆ. ಒಮ್ಮೆ ಕ್ಲಾಸಲ್ಲಿ ಪಿ.ಟಿ. ಮೇಡಮ್ಮು (ದೈಹಿಕ ಶಿಕ್ಷಣ) ಇವತ್ತು ಆಟ ಆಡೋದು ಬೇಡ. ನಾವು ಸಮಾಜದಲ್ಲಿ ಹೇಗೆ ಇರಬೇಕು ಅಂತಾ ಹೇಳಿಕೊಡೋಕೆ ಶುರು ಮಾಡಿದರು. ನನಗೆ ಕೊಕ್ಕೋ ಇವತ್ತು ಆಡಿಸಲಿಲ್ಲಾ ಅಂತಾ ಬೇಜಾರು ಆಯ್ತು.
'ನೋಡಿ ಮಕ್ಕಳೇ.. ಜೀವನದಲ್ಲಿ ತಂದೆ-ತಾಯಿಗಳು, ಸಮಾಜ ನಮಗೆ ಏನು ಮಾಡಿದೆ ಅಂತಾ ನಾವು ಯೋಚನೆ ಮಾಡೋದಕ್ಕಿಂತಾ ನಾವು ಸಮಾಜಕ್ಕೆ ಏನು ಮಾಡಿದೀವಿ ಅಂತಾ ಯೋಚನೆ ಮಾಡಬೇಕು ಅಂತಾ ದೊಡ್ಡೋರು ಹೇಳಿದಾರೆ... ( ಬಿಟ್ಟಿ ಉಪದೇಶ ಕೇಳಿ ಕೇಳಿ ಸಾಕಾಗೋಯ್ತು.. ಅದೇನು ದೊಡ್ಡೋರೋ.. ಬರೀ ಉಪದೇಶಾನೇ ಮಾಡ್ತಿರ್ತಾರೆ. 'ಹೇಳಿದ್ದೇ ಹೇಳೋ ಕಿಸ್ಬಾಯಿದಾಸನ ಥರಾ ಹೇಳಿದ್ದೇ ಹೇಳ್ತಿರ್ತಾರೆ)

ರೂಪಾ.. ಏನ್ ಯೋಚನೆ ಮಾಡ್ತಿದೀಯಾ? ನಿದ್ದೆ ಮಾಡ್ತಿದಿಯೇನೇ?
ಏನೂ ಇಲ್ಲಾ ಮೇಡಮ್..
ನೀನು ಯಾರ್ಯಾರಿಗೆ ಇಲ್ಲಿವರೆಗೆ ಸಹಾಯ ಮಾಡಿದೀಯಾ? ಏನೇನು ಕೆಲಸ ಮಾಡಿದಿಯಾ ಅಂತಾ ಹೇಳು..

(ಹೇಳೋಕೆ ಏನಿದೆ? ಇವ್ರಜ್ಜಿ ಪಿಂಡ, ಎಷ್ಟೊಂದು ಜನ ಇದಾರೆ, ಅವ್ರನ್ನೆಲ್ಲಾ ಬಿಟ್ಟು, ಇವರ ಪಕ್ಕದ ಮನೇಲಿರೋ ನನ್ನ ಮೇಲೆ ಇವರಿಗೆ ಕಣ್ಣು..)

ಏನೂ ಇಲ್ಲಾ ಟೀಚರ್..

ನನಗೆ ಗೊತ್ತು. ನೀನು ಏನೂ ಕೆಲಸ ಮಾಡಲ್ಲಾ ಅಂತಾ ನಿಮ್ಮ ಅಮ್ಮ ಹೇಳ್ತಾ ಇರ್ತಾರೆ. ಲಕ್ಷಣವಾಗಿ ಬೆಳಿಗ್ಗೆ ಬೇಗ ಎದ್ದು, ರಂಗೋಲಿ ಬಿಟ್ಟು, ಮನೆ ಕೆಲಸಕ್ಕೆ ನಿಮ್ಮ ಅಮ್ಮನಿಗೆ ಸಹಾಯ ಮಾಡಕೆ ಆಗಲ್ವಾ ನಿಂಗೆ? ಬರೀ ಟಿ.ವಿ. ನೋಡ್ತಿರ್ತೀಯಾ.. ನೋಡು ನಾಳೆಯೊಳಗೆ ನೀನು ಯಾವುದಾದರೂ ಒಳ್ಳೆ ಕೆಲಸ ಮಾಡಿ, ಸ್ಕೂಲಿಗೆ ಬಂದು ಹೇಳಬೇಕು.. ಆಯ್ತಾ..??

ಆಯ್ತು ಟೀಚರ್..

ನೀನು ಮಾಡಿದೋ ಇಲ್ಲ್ವೋ ಅಂತಾ ನಿಮ್ಮ ಅಮ್ಮನ್ನ ನಾಳೆ ನಾನೇ ಕೇಳ್ತಿನಿ.. ಕೂತ್ಕೋ ಇವಾಗ.. ಅಂತಾ ಬ್ಲಾಕ್ ಮೇಲ್ ಮಾಡಿದರು. (ಸಮಾಜಕ್ಕೆ ಒಳ್ಳೆದು ಮಾಡಬೇಕು ಅಂತಾ ಹೇಳಿ, ಕೊನೆಗೆ ನನಗೆ ಕೆಲಸ ಮಾಡುವ ತನಕ ಬಂದು ನಿಂತಿತು)
ಛೆ!! ನಾನು ಓದಿನಲ್ಲಿ ಮುಂದಿದ್ದು, ಎಲ್ಲರ ಕೈಲಿ ಹೊಗಳುಸ್ಕೊಂಡ್ರೂ, ಪಿ.ಟಿ. ಮೇಡಮ್ ಕೈಲಿ ಯಾವಾಗಲೂ ಬೈಸ್ಕೊಬೇಕು.. ಇರಲಿ ನಾಳೆವರೆಗೂ ಟೈಮ್ ಇದೆ ಅಲ್ವಾ.. ಏನಾದ್ರೂ ಒಂದು ಚಿಕ್ಕ ಕೆಲಸ ಮಾಡಿ ತೋರಿಸಿದ್ರಾಯ್ತು..


ಟಣ್..ಟಣ್ ಅಂತಾ ಬೆಲ್ ಹೊಡೀತು. ಮಧ್ಯಾನ್ಹ ಊಟದ ಬೆಲ್ಲು. ಸಧ್ಯ ಇವರ ಕೊರೆತ ಮುಗಿತು.. ಆದರೆ, ನಾನು ಏನು ಕೆಲಸ ಮಾಡಲಿ? ಪಾತ್ರೆ ತೊಳೆದರೂ, ಅಮ್ಮನಿಗೆ ಸಮಾಧಾನ ಇಲ್ಲಾ, ನಾನು ತೊಳೆದಿದ್ದನ್ನೇ ಮತ್ತೆ ತೊಳೀತಾರೆ. ಅಪ್ಪನ ಹತ್ರ ಹೋದರೆ, ಅವರದೇ ಪೋಲೀಸು ಕಥೆಗಳಲ್ಲಿ ಮುಳುಗಿರ್ತಾರೆ.. ಇನ್ನು ತಂಗಿಯೋ, ಹೋಂ ವರ್ಕ್ ಮಾಡಿಕೊಡು ಅಂತಾ ಪ್ರಾಣ ತಿಂತಾಳೆ...

ಏನ್ ಮಾಡಲಿ ಅಂತಾ ಯೋಚನೆ ಮಾಡ್ತಾ ಮನೆಗೆ ಬಂದೆ. ಮನೆಗೆ ಚಿಲ್ಕ ಹಾಕಿತ್ತು. ಚಿಲ್ಕ ಹಾಕಿದೆ ಅಂದ್ರೆ, ಅಮ್ಮ ನಾಲ್ಕನೇ ಮನೇಲಿ ಹೊಸದಾಗಿ ಬಂದಿರೋ ಸಕ್ಕೂ ಆಂಟಿ ಮನೇಲಿದಾರೆ ಅಂತಾ ಅರ್ಥ. ಮಧ್ಯಾನ್ಹವಾಗಿದ್ದರಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ಅಡಿಗೆ ಮನೆಗೆ ಬಂದು ನೋಡಿದೆ. ಅಮ್ಮ ಚಪಾತಿ, ಬೀಟ್ ರೋಟ್ ಪಲ್ಯ, ಅನ್ನ ಸಾರು ಮಾಡಿದಾರೆ. ಸಾರನ್ನು ನೋಡಿದೆ. ತಣ್ಣಗಿತ್ತು..

ಹ್ಞಾಂ.. ಐಡಿಯಾ ಬಂತು. ಅಮ್ಮ ಬರೋವಷ್ಟರಲ್ಲಿ ಸಾರನ್ನು ಕಾಯಿಸಿ ಬಿಸಿ ಮಾಡಿದರೆ ಆಯ್ತು. ಇದನ್ನೇ ಟೀಚರ್ ಗೆ ಹೇಳಿದ್ರೆ ಆಯ್ತು.
ಮನೆಗೆ ಹೊಸದಾಗಿ ಗ್ಯಾಸ್ ಬೇರೇ ತಂದಿದ್ವಿ. ಅದನ್ನು ಹಚ್ಚೋದು ಕಷ್ಟಾನೂ ಇಲ್ಲ. ಬೇಗನೆ ಸ್ಟೌವ್ ಹಚ್ಚಿ, ಸಾರನ್ನು ಕಾಯಿಸಿದೆ. ಐದು ನಿಮಿಷದಲ್ಲಿ ಸಾರು ಬಿಸಿ ಆಯಿತು.. ಒಂದು ಕೆಲಸ ಮಾಡೋದ್ರಿಂದ ಇಷ್ಟೊಂದು ಖುಶಿ ಆಗುತ್ತೆ ಅಂತಾ ಗೊತ್ತಿರ್ಲಿಲ್ಲ. ಸ್ಟೌವ್ ಆಫ್ ಮಾಡಿ, ಸಕ್ಕೂ ಆಂಟಿ ಮನೆಗೆ ಓಡಿದೆ..
ರೂಪಾ.. ನಿಂಗಿಷ್ಟ ಇರೋ ಕ್ಯಾರಟ್ ಹಲ್ವಾ ಮಾಡಿದೀನಿ.. ತಿನ್ಬಾರೇ ಅಂತಾ ಸಕ್ಕೂ ಆಂಟಿ ಕೂಗಿದರೂ, ನಾನು ಮಾಡಿದ ಘನಂದಾರಿ ಕೆಲಸಾನ ತೋರಿಸಬೇಕು ಅಂತಾ ಅಮ್ಮನ್ನ ಎಳಕೊಂಡು ಬಂದು ತೋರಿಸಿದೆ. ಇದನ್ನು ನೋಡಿದವರೇ ಅಮ್ಮ ನನ್ನ ಮೇಲೆ ಸಿಟ್ ಮಾಡ್ಕೊಂಡು..
ಸಾರೆಲ್ಲಾ ಹಾಳು ಮಾಡಿದ್ಯಲ್ಲೇ ಅಂತಾ ಒದೆ ಕೊಡಲು ಶುರು ಮಾಡಿದರು.. ನಾನು ಹಾಕಿದ ಬೊಬ್ಬೆಗೆ ಸಕ್ಕೂ ಆಂಟಿ, ಸುಧಕ್ಕಾ ಎಲ್ಲರೂ ಓಡಿ ಬಂದು ನನ್ನನ್ನು ಬಿಡಿಸಿಕೊಂಡರು. ಯಾಕ್ರೀ ಹೊಡೀತಿದೀರಾ ಮಗೂನಾ? ಅಂತಾ ನನ್ನ ಪರವಾಗಿ ಸಕ್ಕೂ ಆಂಟಿ ವಕಾಲತ್ತು ವಹಿಸಿದರು..

ನೋಡ್ರೀ ಸಕ್ಕೂ.. ಇವಳು ಮಾಡಿರೋ ಕೆಲಸಾನ..
ನಾನು:- ಅಂಥಾದ್ದು ನಾನೇನು ಮಾಡಿದೆ..?? ನಿಮ್ಮ ಅಮ್ಮನಿಗೆ ಹೆಲ್ಪ್ ಮಾಡು ಅಂತಾ ಇವತ್ತು ಜಯಮ್ಮ ಮಿಸ್ ಹೇಳಿದ್ರು..ಏನೋ ಹೋಗಲಿ ಸ್ವಲ್ಪ ಹೆಲ್ಪ್ ಆಗಲಿ ಅಂತಾ, ಸಾರನ್ನು ಸ್ಟೌವ್ ಮೇಲೆ ಕಾಯಿಸಿ ಬಿಸಿ ಮಾಡಿದೆ. ಅದುಕ್ಕೆ ಹೊಡಿತಾ ಇದಾರೆ ಆಂಟಿ ಅಂತಾ ಅಳುತ್ತಾ ನನ್ನ ವಾದವನ್ನು ಮಂಡಿಸಿದೆ.

ಏನ್ರೀ ಪಾರ್ವತಿ, ಒಳ್ಳೆ ಕೆಲಸಾನೇ ಮಾಡಿದಾಳೆ. ಅದುಕ್ಕೆ ಯಾಕೆ ಹೊಡೀಬೇಕು?

ನೋಡಿ ಸಕ್ಕೂ.. ಇವಳೇನು ಚಿಕ್ಕ ಹುಡುಗೀನಾ? ಎರಡು ಕತ್ತೆ ವಯಸ್ಸಾಗಿದೆ. ಯಾವ ಸಾರನ್ನು ಕಾಯಿಸಬೇಕು, ಯಾವ ಸಾರನ್ನು ಕಾಯಿಸಬಾರದು ಅಂತಾ ಗೊತ್ತಾಗಲ್ವಾ..? ಬಿಸಿಲು ಜಾಸ್ತಿ ಇದೆ ಅಂತಾ ಇವತ್ತು ಮಜ್ಜಿಗೆ ಸಾರು ಮಾಡಿದ್ರೆ, ಬಿಸಿ ಮಾಡಿ, ಎಲ್ಲಾ ಹಾಳು ಮಾಡಿದಾಳೆ..

ಅಮ್ಮನ ಮಾತಿಗೆ ಎಲ್ಲರೂ ನಗ್ತಾ ಇದ್ರು.. ನಂಗೆ ಕೋಪ ಇನ್ನೂ ಜಾಸ್ತಿ ಆಗ್ತಾ ಇತ್ತು...


ಇಷ್ಟು ವರ್ಷಗಳ ನಂತರ ಘಟನೆಯನ್ನು ನೆನಸ್ಕೊಂಡೆ,. ಇವತ್ತು ನಂಗೆ ನಗು ಬರ್ತಾ ಇದೆ..
ನೀವು ಯಾರಿಗೆ ಏನು ಸಹಾಯ ಮಾಡಿದ್ರಿ ಅಂತಾ ಕಾಮೆಂಟ್ನಲ್ಲಿ ಬರೀಬಹುದು.

ನಿಮ್ಮ ಜಗಳಗಂಟಿ

ರೂಪ.

Posted by ಜಗಳಗಂಟಿ ರೂಪ at 11:31 PM 49 comments
ಅವಳ ಬ್ಲಾಗ್ ಪೋಸ್ಟನ್ನು ಓದಿದವನೇ
" ಆಹಾ.. ಘನಾಂದಾರಿ ಕೆಲಸ.. ಅನ್ಕೊಂಡ

ಹ್ಹೋ.. 49 ಕಾಮೆಂಟುಗಳು.. ಒಬ್ಬಳು ಹುಡುಗಿ ಬರೀತಾಳೆ ಅಂದ್ರೆ, ಎಲ್ಲರೂ ಚನ್ನಾಗಿದೆ ಅಂತಾ ಕಾಮೆಂಟ್ ಬರಿಯೋಕೆ ಶುರು.. ಅದೇ ಯಾರಾದರೂ ಹುಡುಗ ಬರೀಲಿ.. ಕಾಮೆಂಟ್ ಬರೀಯೋದು ಇರಲಿ, ಓದೋರೇ ಇರಲ್ಲಾ.. ಅಂತಾ ಅನ್ಕೊಂಡ..


ಕಥೆ ಮುಂದುವರಿಯುತ್ತದೆ...

(ಸ್ನೇಹಿತರೇ,, ನನಗೆ ಗೊತ್ತು, ಕೆಲವರಿಗೆ ಕೋಪ ಬಂದಿರುತ್ತದೆ ಅಂತಾ,, ದಯವಿಟ್ಟು ಕ್ಷಮಿಸಿ.. ನಿಮ್ಮ ಕೋಪದ ದಳ್ಳುರಿಗೆ ನನ್ನ ತಳ್ಳಬೇಡಿ.
ನಾನು ಬ್ಲಾಗ್ ಕಥೆಗಳನ್ನು ಅರ್ಧಂಬರ್ಧ ಬರೀತೀನಿ ಅಂತಾ ನನ್ನ ಮೇಲೆ ಆರೋಪ ಇರುವುದು ನಿಜ. ಆದರೆ, ಕಥೆಯನ್ನು ಅತಿ ಬೇಗ ಮುಗಿಸುವೆ.. ಮುಂದಿನ ಪೋಸ್ಟ್ " ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-4 " ಅದರ ನಂತರ ಕಥೆಯ ಅಂತಿಮ ಭಾಗ. ಪೋಸ್ಟನ್ನು ತುಂಬಾ ಉದ್ದವಾಗಿದೆ ಅಂತಾ ನಾನು ಎರಡು ಕಂತುಗಳಲ್ಲಿ ಪ್ರಕಟಿಸುತ್ತಿದ್ದೇನೆಯೇ ಹೊರತು, ಯಾವುದೇ ಉದ್ದೇಶದಿಂದಲ್ಲಾ..

ಪೋಸ್ಟ್ ಪ್ರಕಟಣೆಗಾಗಿ ಕಾಯುತ್ತಿರುವ
ಶೋಭಾ, ಮಂಜು ಮೇಡಮ್, ಸೋಮಾರಿ ಪ್ರಶಾಂತ, ಶಿವಪ್ರಶಾಂತ, ಗುರು ಮತ್ತು ಶಿಶ್ಯ (ಇವರಿಬ್ಬರ ಹೆಸರಿನ ಬಗ್ಗೆ ಸೆನ್ಸಾರ್ ಮಂಡಳಿಯ ಆಕ್ಷೇಪವಿದೆ) ಇವರಿಗೆ ಧನ್ಯವಾದಗಳು.. ಏನೋ ಸುಮಾರಾಗಿ ಬರ್ದಿದೀನಿ.. ಕಾಮೆಂಟ್ ನಲ್ಲಿ ನನ್ನನ್ನು ಬೈಯುವ ಅವಕಾಶವನ್ನು ನೀಡಲಾಗಿದೆ..

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

8 comments:

shivaprashanth said...

shiva....kathe bardiro style different aagide...mundina bhagakkagi kaayta ideeni...bega bari...kutoohala tadeyokaagde naanu&nannageleya.blogspot.com website open maadak hode!

Nandu said...

Shivu,
Chennagidhe. Ninna shaili tumba hidisitu. munduvaresu.

Sunaath said...

ಶಿವು,
ರಂಜಕವಾದ ಕತೆ. ಸುಖಾಂತವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಬೇಡ, ದೇವರಲ್ಲಿ ಬೇಡಿದರೆ ಪ್ರಯೋಜನವಿಲ್ಲ; ನಿಮ್ಮಲ್ಲಿಯೇ ಬೇಡಿಕೊಳ್ಳುತ್ತೇನೆ.

Mahesh said...

ಶಿವು,
ಕಥೆ ಚೆನ್ನಾಗಿದೆ... ತಿರುವುಗಳು ಇದೆ ನಿಮ್ಮ ಕಥೆನಲ್ಲಿ. ಮುಂದಿನ ಭಾಗ ಬೇಗ ಬರೆಯಿರಿ

prabhath said...

utthama prayathna shivu

ಸತೀಶ said...

ಏನ್ರೀ ಶಿವೂ Story ನಾಯಕ ನೆವೇ ಇರೋತರ ಹಾಗಿದೆ !!!!!!

shivu.k said...

ಶಿವಶಂಕರ ವಿಷ್ಣು ಯಳವತ್ತಿ ಸರ್.

ನಿಮ್ಮ ಲೇಖನವನ್ನು ಎರಡು ಬಾರಿ ತುಂಬಾ ದೊಡ್ಡದಾಗಿದೆಯಲ್ಲಾ ಅಂತ ಬಿಟ್ಟಿದ್ದೆ. ಆದ್ರೆ ಈ ಬಾರಿ ಓದಿದೆ. ನಮ್ಮ ಬ್ಲಾಗಿಂಗ್ ವಿಚಾರವನ್ನು ತುಂಬಾ ಹಾಸ್ಯಬರಿತವಾಗಿ ಸೊಗಸಾಗಿ ಬರೆದಿದ್ದೀರಿ...ಮಜ್ಜಿಗೆ ಸಾರು ಬಿಸಿ ಕತೆ ಓದಿ ಸಕ್ಕತ್ ನಗು ಬಂತು...ಮುಂದೇನು ಅನ್ನುವ ಕುತೂಹಲವಿದೆ..ಕಾಯುತ್ತಿದ್ದೇನೆ...
ಧನ್ಯವಾದಗಳು.

sayabanna said...

hi,

Tumba chennagi bariteera...
munde enagutte annao kutoohala ulisiddira...
mundenaagutte anta nimma blog mulakha heli...

Cheers,
Saaya