ಖಾಯಂ ಓದುಗರು..(ನೀವೂ ಸೇರಬಹುದು)

12 July 2009

ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-4

ಸ್ನೇಹಿತರೇ, ನಿಮ್ಮ ಮುಂದೆ ನಾಲ್ಕನೇ ಭಾಗವನ್ನು ಇಡುತ್ತಿದ್ದೇನೆ..

3ನೇ ಭಾಗವನ್ನು ಓದಿ ಕಾಮೆಂಟ್ ಬರೆದವರಿಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಕಾಮೆಂಟ್ ಗಳೇ ನನಗೆ ಸ್ಪೂರ್ತಿ..

ಭಾಗವನ್ನು ನನ್ನ ಇಂಟರ್ನೆಟ್ ಗೆಳೆಯ "ರವಿ" ಗೆ ಅರ್ಪಿಸುತ್ತಾ ಇದೀನಿ. ಅವನು ಅನ್ಕೊಂಡಿದ್ದನ್ನು ಸಾಧಿಸಲಿ. ತನ್ನ ಕಂಪನಿಯನ್ನು ಬೆಂಗಳೂರಿನಲ್ಲಿ ಉಳಿಸಿಕೊಳ್ಳಲು ಯಶಸ್ವಿಯಾಗಲಿ....

೧) ಇದನ್ನು ಕಳಿಸಿದವರು:- ----

ಗೆಳತೀ,..
ಚಂದ್ರನ ಮೇಲೆ ನಿನ್ನ ಹೆಸರ
ಬರೆಯುವ ಆಸೆ ನನಗೆ..

ಚಂದ್ರನ ಮೇಲೆ ನಿನ್ನ ಹೆಸರ
ಬರೆವ ಆಸೆ ನನಗೆ..

ಆದರೆ ಯೋಚನೆ,
ಅಮಾವಾಸ್ಯೆಯ ದಿನವೇ ಬರುತ್ತದೆ ನನಗೆ..


೨) ಇದನ್ನು ಕಳಿಸಿದವರು:- ಮಹೇಶ್ ಭುವಳ್ಳಿ

ಜೈಲರ್:- ನಾಳೆ ಬೆಳಿಗ್ಗೆ ಗಂಟೆಗೆ ನಿನಗೆ ಗಲ್ಲು ಶಿಕ್ಷೆ.
ಸರ್ದಾರ್:- ಹ್ಹ ಹ್ಹಹ್ಹ.. ಹ್ಹ..ಹ್ಹಹ್ಹ..
ಜೈಲರ್:- ಯಾಕೆ ನಗ್ತಾ ಇದೀಯ?
ಸರ್ದಾರ್:- ನಾನು ದಿನಾ ಬೆಳಿಗ್ಗೆ ಏಳೋದೇ ಗಂಟೆಗೆ...

೩)
ಇದನ್ನು ಕಳಿಸಿದವರು:- ಜಗದೀಶ

ಸಾರ್ವಕಾಲಿಕ ಸತ್ಯ:-

ನೀವು ಒಂದು ಹುಡುಗಿ ಕಷ್ಟದಲ್ಲಿದ್ದಾಗ ಸಹಾಯ ಮಾಡಿದರೆ,
ಅವಳು ಖಂಡಿತಾ ನಿಮ್ಮನ್ನು ನೆನಪಿಸಿಕೊಳ್ಳುವುದು, ಅವಳಿಗೆ ಮತ್ತೆ ಕಷ್ಟ ಬಂದಾಗಲೇ....

೪) ನಾನು ನೀರಿನಲ್ಲಿ ರಮ್ ಬೆರೆಸಿ ಕುಡಿದೆ, ನಶೆ ಏರಿತು
ನಾನು ನೀರಿನಲ್ಲಿ ವಿಸ್ಕಿ ಬೆರೆಸಿ ಕುಡಿದೆ, ನಶೆ ಏರಿತು
ನಾನು ನೀರಿನಲ್ಲಿ ಬ್ರ್ಯಾಂಡಿ ಬೆರೆಸಿ ಕುಡಿದೆ, ಆಗಲೂ ನಶೆ ಏರಿತು..

ಥತ್..! ಹಾಳು ನೀರನ್ನು ಕುಡಿಯಲೇ ಬಾರದು ಅಂತಾ ತೀರ್ಮಾನ ಮಾಡಿದೀನಿ..


5) ಇದನ್ನು ಕಳಿಸಿದವರು:- ಅಶ್ವಿನ್. ಮಧುಗಿರಿ

ನಿನ್ನ ತಲೆ ಮೇಲೆ ಕೊಂಬು ಇದೆಯಾ..??ಇಲ್ಲಜಸ್ಟ್ ಚೆಕ್ ಇಟ್..ಚೆಕ್ ಮಾಡಿದ್ಯಾ??ಯೆಸ್


ಕೊಂಬು ಇಲ್ಲ ತಾನೆ??ಇಲ್ಲಆರ್ ಯು ಸ್ಯೂರ್??
ಯೆಸ್..

ಹೋಗ್ಲಿ ಬಿಡು... ಕೋತಿಗೂ ಇರಲ್ಲಾ...

6) ಇದನ್ನು ಕಳಿಸಿದವರು:- ಭಕ್ತ (ಜ್ಞಾನಿ) ಬೆಂಗಳೂರು

ಟೀಚರ್:- ಮಕ್ಕಳೇ.. ನಿಮ್ಮ ಕ್ಯಾರಕ್ಟರ್ ಚನ್ನಾಗಿ ಇರಬೇಕು ಅಂದ್ರೆ, ಎಲ್ಲಾ ಹೆಂಗಸರನ್ನು ನಿಮ್ಮ ಅಮ್ಮ ಅಂತಾ ತಿಳ್ಕೊಬೇಕು..

ಗುಂಡ:- ಎಲ್ಲರನ್ನೂ ಅಮ್ಮ ಅಂತಾ ತಿಳ್ಕೊಂಡ್ರೆ, ನಮ್ ಅಪ್ಪನ ಕ್ಯಾರಕ್ಟರ್ ಹಾಳಾಗುತ್ತೆ ಮಿಸ್..


೭)ಇದನ್ನು ಕಳಿಸಿದವರು:- ಮಮ್ಮಿ (ಮಂಜುಳಾ) ಹೊಸಕೋಟೆ/ದೊಡ್ಡನಲ್ಲೂರಹಳ್ಳಿ

ಹುಡುಗೀರ ಕೈನ ಮೊದಲ ಸಲ ಮುಟ್ಟಿದಾಗ ಮಾತ್ರ ಕರೆಂಟ್ ಹೊಡೆಯುತ್ತೆ.....

ಆಮೇಲೆ... ಕೇವಲ ಬಿಲ್ ಮಾತ್ರ ಬರ್ತಾ ಇರುತ್ತೆ....

8) ಇದನ್ನು ಕಳಿಸಿದವರು:- ಯದು ಢಾಭಾ. ಚಿಕ್ಕನಾಯಕನಹಳ್ಳಿ

ನೀವು ನಿಮ್ಮದೇ ಆದ ಸ್ಟೈಲ್ ನಲ್ಲಿ ಮಾತನಾಡಿರಿ
ನಿಮ್ಮದೇ ಆದ ರೀತಿಯಲ್ಲಿ ಯೋಚನೆ ಮಾಡಿರಿ..
ನಿಮ್ಮದೇ ಆದ ದಾರಿಯಲ್ಲಿ ನಡೆಯಿರಿ.....

ಆಗ ಜನರು ಹೇಳುವರು..

"ಗೂಬೆ ಮುಂಡೇದು.. ಯಾರ್ ಮಾತೂ ಕೇಳಲ್ಲಾ...."

9) ಇದನ್ನು ಕಳಿಸಿದವರು:- ಯದು ಢಾಭಾ ಚಿಕ್ಕನಾಯಕನಹಳ್ಳಿ

ಯಾರು ಒಂದು ಸಿಗರೇಟ್ ಸೇದಿಲ್ಲವೋ. ಒಂದು ಗುಟ್ಕಾ ಹಾಕಿಲ್ಲವೋ
ಒಂದು ಬಿಯರನ್ನಾದ್ರೂ ಕುಡಿದಿಲ್ಲವೋ..
ಕಾಲೇಜ್ ನಲ್ಲಿ ಮೋಜು ಮಸ್ತಿ ಮಾಡಿಲ್ಲವೋ
ಒಂದು ಹುಡುಗಿಯನ್ನು ಸಹ ಕಣ್ಣೆತ್ತಿ ನೋಡಿಲ್ಲವೋ....

ಅಂತಹವರು ವಿಳಾಸಕ್ಕೆ ಭೇಟಿ ನೀಡಿ..

www.ಭೂಮಿಮೇಲೆಇನ್ನೂಯಾಕ್ ಬದ್ಕಿದೀಯಾ?ಎಲ್ಲಾದ್ರೂ ಹೋಗಿ ಸಾಯಿ.ಕಾಂ10) ಇದನ್ನು ಕಳಿಸಿದವರು:- ಬಸು ಗುಳೇರ

ಅವಲಕ್ಕಿ

ಪುವಲಕ್ಕಿ

ಕಾಂಚಣ

ಮಿಣ-ಮಿಣ

ಡಾಂ

ಡೂಂ

ಡಸ್

ಬಸ್

ಕೊಯ್

ಕೊಟಾರ್

೧೦

ಏನ್ ಕಳಿಸಿದ್ರೂ ಓದ್ತೀರಲ್ರೀ..
ನಿಮ್ ಮನಸ್ಸು ತುಂಬಾ ದೊಡ್ಡದು.. ನೀವು ಥರಾ......

11) ಇದನ್ನು ಕಳಿಸಿದವರು:- ----

What is a Sentance?

A Sentance is a ಸುಂಟಿ ಪುಡಿ.. ಹೊಟ್ಟೆ ನೂವು ಬಂದಾಗ ಕಾಸ್ಕೊಂಡು ಕುಡಿ...


೧೨) ಇದನ್ನು ಕಳಿಸಿದವರು:- ನಿಂಗಾಚಾರಿ. ಚಿಕ್ಕನಾಯಕನಹಳ್ಳಿ

ಸರ್ದಾರ್:- ಏನಮ್ಮಾ, ನಿನ್ನ ಗಂಡ ಚನ್ನಾಗಿದಾನಾ??
ಅವಳು:- ಏನ್ ಸ್ವಾಮಿ, ಏಕವಚನದಲ್ಲಿ ಮಾತಾಡುಸ್ತೀರಲ್ಲಾ...

ಸರ್ದಾರ್:- ಓಹ್.. ಏನಮ್ಮಾ, ನಿನ್ನ ಗಂಡಂದ್ರು ಚನ್ನಾಗಿದಾರಾ??


೧೩) ಇದನ್ನು ಕಳಿಸಿದವರು:- ಯದು ಢಾಭಾ ಚಿಕ್ಕನಾಯಕನಹಳ್ಳಿ

ಅಪ್ಪಿಕೊಂಡರೂ
ಮುತ್ತು ಕೊಡದ ಅವಳಿಗಿಂತ....

ತುಟಿಗೆ ತುಟಿ ಇಟ್ಟು ಚುಂಬಿಸುವ
ಇವಳೇ ಗ್ರೇಟ್...
ಅದುವೇ ಸಿಗರೇಟ್........


೧೪) ಇದನ್ನು ಕಳಿಸಿದವರು:- ಸುಜಿತ್, ತುಮಕೂರು

ಭಿಕ್ಷುಕರಿಗೆ
ದುಡ್ಡು ಕೊಟ್ರೆ ಪುಣ್ಯ /ವಾಹ್..ವಾಹ್/

ಭಿಕ್ಷುಕರಿಗೆ
ದುಡ್ಡು ಕೊಟ್ರೆ ಪುಣ್ಯ....

Mosquito ಗೆ
ಬ್ಲಡ್ ಕೊಟ್ರೆ,
ಚಿಕನ್ ಗುನ್ಯಾ,,,, /ವಾಹ್ ವಾಹ್.../


೧೫) ಇದನ್ನು ಕಳಿಸಿದವರು:- ಈರಣ್ಣ ಯಳವತ್ತಿ

ಪೋಲೀಸ್ ಪೇದೆ:- ನೆನ್ನೆ ಜೈಲಿನಲ್ಲಿ ಕೈದಿಗಳು ರಾಮಾಯಣ ನಾಟಕ ಮಾಡಿದರು.
ಜೈಲರ್:- ಅದಕ್ಕೇನೀಗಾ???
ಪೋಲೀಸ್ ಪೇದೆ:- ನೆನ್ನೆ ಸಂಜೀವಿನಿ ತರಕೆ ಹೋದ ಹನುಮಂತ ಇನ್ನೂ ಬಂದಿಲ್ಲಾ..

೧೬) ಇದನ್ನು ಕಳಿಸಿದವರು:- -----

ನಿನ್ನ ಸುತ್ತಲೂ ಕತ್ತಲು ತುಂಬಿದ್ದರೆ,
ಕತ್ತಲನ್ನು ಹೋಗಲಾಡಿಸು ಎಂದು ದೇವರನ್ನು ಪ್ರಾರ್ಥಿಸು...

ಆಗಲೂ ಕತ್ತಲು ಹೋಗದಿದ್ದಲ್ಲಿ,
ಕರೆಂಟ್ ಬಿಲ್ ಕಟ್ಟಿ ಬಾ,,.

೧೭) ಕಳಿಸಿದವರು:- ನಾನೇ

ಅತಿಯಾಗಿ ದ್ವೇಷಿಸಬೇಕು
ನಾ ನಿನ್ನ...

ಅತಿಯಾಗಿ ದ್ವೇಷಿಸಬೇಕು
ನಾ ನಿನ್ನ
ಯಾಕೆಂದರೆ,

ಅತಿಯಾಗಿ ದ್ವೇಷಿಸುವವರನ್ನು ಮಾತ್ರ
ಅತಿಯಾಗಿ
ಪ್ರೀತಿಸಲು ಸಾಧ್ಯ...!!!


೧೮) ಇದನ್ನು ಕಳಿಸಿದವರು:- ಸುದರ್ಶನ್, ಶಿರಾ

ಹುಡುಗಿ:- ಅಡ್ರಸ್ ಎಲ್ಲಿ ಬರುತ್ತೆ ಅಂತಾ ಹೇಳ್ತೀರಾ...??

ಹುಡುಗ:- ಇಂಗೆ, Stright ಗಿ ಹೋಗಿ,
ಅಲ್ಲಿ 3 ರೋಡ್ ಸಿಗುತ್ತೆ, 3ನೇ ರೋಡಲ್ಲಿ ಹೋಗಿ
ಅಲ್ಲಿ 3 ಬಸ್ ನಿಂತಿರುತ್ತೆ
3ನೇ ಬಸ್ ಹತ್ತಿ, 3ನೇ ಸ್ಟಾಪಲ್ಲಿ ಇಳೀರಿ..

ಎದುರಿಗೆ 3 ಮನೆ ಕಾಣ್ಸುತ್ತೆ
3ನೇ ಮನೆಗೆ ಹೋಗಿ, ಅಲ್ಲಿ 3 ಮಹಡಿ ಇದೆ
3ನೇ ಮಹಡಿಗೆ ಹೋಗಿ,
ಅಲ್ಲಿ 3 ರೂಮ್ ಸಿಗುತ್ತೆ..
3ನೇ ರೂಮ್ ಗೆ ಹೋಗಿ, ಅಲ್ಲಿ
3 ಟೇಬಲ್ ಮೇಲೆ ಬುಕ್ ಇದೆ
3ನೇ ಬುಕ್ 3ನೇ ಪೇಜಲ್ಲಿ
3 ಫೋಟೋ ಇದೆ.
3ನೇ ಫೋಟೋ ನನ್ ತಾಯಿದು..

ಫೋಟೋ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ...

' ಅಡ್ರಸ್ ನಂಗೆ ಗೊತ್ತಿಲ್ಲಾ..'೧೯) ಇದನ್ನು ಕಳಿಸಿದವರು:- ಮಮ್ಮಿ (ಮಂಜುಳಾ) ಹೊಸಕೋಟೆ/ದೊಡ್ಡನಲ್ಲೂರಳ್ಳಿ

ಲವ್ ಕ್ಲಿಕ್ ಆದ್ರೆ,
ಹುಡುಗ ಹುಡುಗಿ ದಿನಾ
PULSAR-DTS-i
ನಲ್ಲಿ ಊರ್ ತುಂಬಾ ರೌಂಡು....

ಹುಡುಗಿ ಕೈ ಕೊಟ್ರೆ...
ಹುಡುಗನ ಮನೆ ಮುಂದೆ
DTS ಎಫೆಕ್ಟ್ ನಲ್ಲಿ ತಮಟೆ ಸೌಂಡು.......


೨೦) ನಿಮಗೆ 99% ಬೇಜಾರ್ ಆದ್ರೆ,
16% ಕೋಪ ಇದ್ರೆ,
19% ಕಷ್ಟ ಇದ್ರೆ
02% ಸಂತೋಷ ಇದ್ರೆ,
27% ಭಯಾ ಇದ್ರೆ.....

ಎಲ್ಲಾ ನಂಬರ್ ಸೇರಿಸಿ ಇಂದು ಕಾಲ್ ಮಾಡಿ...
ಬೆಸ್ಟ್ ಫ್ರೆಂಡ್ ಸಿಗ್ತಾರೆ..

ಬೇಜಾನ್ ಮಾತಾಡಿ.....


ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ

10 comments:

Guest said...

ಶಿವಶಂಕರ್ ಸರ್,

ಎಲ್ಲವನ್ನು ಓದಿ ಸಕ್ಕತ್ ನಗು ಬಂತು...

shivagadag said...

Thank you... mundina ssari nimma hesaru haakodu maribedi...

inti nimma pritiya,
shivagadag

sunaath said...

ಶಿವಶಂಕರ,
ನಿಮ್ಮ ನಗೆ-tonic ಸಕತ್ತಾಗಿದೆ!

Dileep Hegde said...

Shivashankar,
Tumbaa chennagide ella SMS gaLu.. Sakkat ishta aaitu.. bareeta iri... nage guLige neeDta iri...

Dileep Hegde

Nandu said...

ಶಿವು,
ನಕ್ಕು ನಕ್ಕು ಸಾಕಾಯ್ತು ! ತುಂಬಾ ಚೆನ್ನಾಗಿ ಕಂಪೈಲ್ ಮಾಡಿದ್ದೀಯಾ !!
ನಂದು

Guest said...

ಶಿವಶಂಕರ ಭಾಗ-4 ಚನ್ನಾಗಿದೆ. ಓದಿ ಖುಷಿ ಆಯಿತು. ಅಂದ ಹಾಗೆ ಮೊದಲ ಕವಿತೆ ಚಂದ್ರನ... ಕುರಿತು ಚನ್ನಾಗಿದೆ. ಅದನ್ನು ಬರೆದವರು ಸ್ವಲ್ಪ ಪದ ಬಳಕೆಯಲ್ಲಿ ನುರಿತರೆ ಚನ್ನಾಗಿ ಹನಿಗವಿತೆ ಬರೆಯಬಹುದು. ಅವರಿಗೆ ಹೇಳಿ ಏಕೆಂದರೆ ಅವರಿಂದ ಉತ್ತಮವಾದ ಕವಿತೆಗಳು ಸಿಗುವ ಭರವಸೆ ನನಗಿದೆ. ನೀವು ಏನಂತೀರಾ?!

`ನನಗೆ
ಚಂದ್ರನ ಮೇಲೆ ನಿನ್ನ ಹೆಸರು ಬರೆಯುವ ಆಸೆ,
ಆದರೆ
ಹೆಸರು ನೆನಪಾಗೋದು ಆಥವಾ ಈ ವಿಚಾರ ಬರೋದೆ ಅಮವಾಸ್ಯೆಗೆ. ಎಂದು ಬರೆದರೆ ಇದನ್ನು ಒಬ್ಬ ಹುಡುಗ ಮತ್ತು ಹುಡುಗಿ ಇಬ್ಬರೂ ಬರೆದಂತೆ ಇರುತ್ತದೆ ಏನಂತೀರಾ?!. ಅಂದ ಹಾಗೆ ಭಾಗ-4 ಮನಸ್ಸಿಗೆ ಬೇಜಾರಾದಾಗ ಖುಷಿ ಕೊಡುವಂತಿದೆ. ಅದಕ್ಕಾಗಿ ನಿಮಗೆ ಅಭಿನಂದನೆಗಳು.
*ಎಂ.ಮಂಜುನಾಥ ಬಮ್ಮನಕಟ್ಟಿ

Guest said...

ಪ್ರೀತಿಯ ಕನ್ನಡಿಗರೇ...
ನಾನಿಲ್ಲಿ ಪರಿಚಯಿಸುತ್ತಿರುವುದು PTC ಎಂಬ ಅಂತರ್ಜಾಲ ಉದ್ಯೋಗದ ಬಗ್ಗೆ. 'ಜಾಹಿರಾತುಗಳ ಮೇಲೆ ಕ್ಲಿಕ್ ಮಾಡಿ ಹಣ ಗಳಿಸುವುದು' ಎಂಬುದು ಈ ಉದ್ಯೋಗದ ವಿವರಣೆ. ವಿಧ್ಯಾರ್ಥಿಗಳು , ನಿರುಧ್ಯೋಗಿಗಳು , ಗ್ರಹಿಣಿಯರು , ನಿವ್ರತ್ತರು , ಹೀಗೆ ಎಲ್ಲರೂ ಮಾಡಬಹುದಾದಂತ ಸುಲಭ ಕೆಲಸವಿದು. ಮನೆಯಲ್ಲೇ ಕಂಪ್ಯೂಟರ್ ಹಾಗು ಇಂಟರ್ನೆಟ್ ಕನೆಕ್ಷೆನ್ ಇರುವವರಿಗೆ ಇದು ಉತ್ತಮ ಕೆಲಸ.
ಪ್ರವೇಶ : ನೀವು http://www.ptc-ppc-ptr.blogspot.com ಹೋಗಿ ಮೊದಲು ಇಡೀ ಬ್ಲಾಗನ್ನು ಸರಿಯಾಗಿ ನೋಡಿ. ಅಲ್ಲಿ ಸುಮಾರು 60 ವೆಬ್ ಸೈಟ್ ಗಳ ಲಿಂಕ್ಸ್ ಇವೆ. ಎಲ್ಲ Genuine ವೆಬ್ ಸೈಟ್ ಗಳು.

ಆರಂಭ : ನಮ್ಮ ಮನೆಯಲ್ಲಿ ಇಬ್ಬರು ಇದೇ ಕೆಲಸವನ್ನು ಮಾಡುವುದರಿಂದ ನಾನು ಸುಮಾರು ೬೦ ಸೈಟ್ ಗಳಿಗೆ Join ಆಗಿದ್ದೇನೆ. ಆದರೆ ಪ್ರತಿದಿನ 60 ಸೈಟ್ ಗಳಿಗೆ Login ಆಗಿ ಅಲ್ಲಿರುವ Ads ಕ್ಲಿಕ್ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ನೀವು ಸುಮಾರು ೨೦ ರಿಂದ 30 ಸೈಟ್ ಗಳಿಗೆ ಮಾತ್ರ Join ಆಗಿ. Login ಆದ ಮೇಲೆ ಅಲ್ಲಿ ನಿಮಗೆ ನಿಮ್ಮ Account ನ ಸಂಪೂರ್ಣ ವಿವರ ಸಿಗುತ್ತದೆ. ಅಲ್ಲಿಯೇ View Ads, Surf Ads, Paid to click, Click Links ಮುಂತಾದ Options ಗಳಿರುತ್ತವೆ. ಅವನ್ನು ಕ್ಲಿಕ್ ಮಾಡಿ ಅಲ್ಲಿ ಸೂಚಿಸಿರುವಂತೆ Ads,Links,Banner ಗಳನ್ನೂ ಕ್ಲಿಕ್ ಮಾಡಿ, ನಂತರ ೩೦ ರಿಂದ ೬೦ ಸೆಕೆಂಡ್ ಕಾಯಿರಿ. ನೀವು ಕ್ಲಿಕ್ಕಿಸಿದ ಜಾಹಿರಾತು Approve ಆಯಿತು ಎಂಬುದಕ್ಕೆ OK ಅಥವಾ ಗ್ರೀನ್ ಸಿಗ್ನಲ್ { Arrow Mark } ಸಿಕ್ಕ ಮೇಲೆ ಆ ಪರದೆ ಕ್ಲೋಸ್ ಮಾಡಿ ಇನ್ನೊಂದು ಜಾಹಿರಾತು ಕ್ಲಿಕ್ ಮಾಡಿ. ಕೆಲವೊಂದು ಜಾಹಿರಾತು ಲೋಡ್ ಆಗಲು ಸ್ವಲ್ಪ ಸಮಯ ಹಿಡಿಯುತ್ತದೆ, ಆಗ ತಾಳ್ಮೆಯಿಂದ ಕಾಯಬೇಕು. ಒಟ್ಟಿನಲ್ಲಿ ಅಲ್ಲಿ ಇರುವ ಸೂಚನೆ Options ಗಳನ್ನು ಸರಿಯಾಗಿ ಓದಿ ಮುಂದುವರೆದರೆ ಈ ಕೆಲಸ ಸುಲಭ. ಇದಕ್ಕೆಲ್ಲ SSLC ಮಟ್ಟದ ಇಂಗ್ಲೀಷ್ ಸಾಕು.

ಲೆಕ್ಕಾಚಾರ : ನಾನಿಲ್ಲಿ 1 ಜಾಹಿರಾತಿಗೆ 1 Cent ನಿಂದ ಹಿಡಿದು 2 Cent ಕೊಡುವ ವೆಬ್ಸೈಟ್ ಗಳನ್ನು ಮಾತ್ರ ಆಯ್ದುಕೊಂಡಿದ್ದೇನೆ. { ಇದಕ್ಕಿಂತ ಹೆಚ್ಚಿಗೆ ಕೊಡುವ ಸೈಟ್ ಗಳಿವೆಯಾದರೂ ದುಡ್ಡು ಕರೆಕ್ಟಾಗಿ ಬರುವ ಗ್ಯಾರಂಟಿಯಿಲ್ಲ}. ನೀವು 1 ದಿನಕ್ಕೆ 1 ಸೈಟ್ ನಲ್ಲಿ 3 ರಿಂದ ೧೫ ಜಾಹಿರಾತು ಕ್ಲಿಕ್ ಮಾಡಬಹುದು. ಸರಾಸರಿಯಾಗಿ 1 ಸೈಟ್ ನಿಂದ ದಿನಕ್ಕೆ ೧೦ Cent ಗಳಿಸಿದಂತಾಗುತ್ತೆ. ಅಂದರೆ 10 ಸೈಟ್ ಗಳಿಂದ 1 ಡಾಲರ ಆಗುತ್ತದೆ. ೩೦ ಸೈಟ್ ಗೆ Join ಆಗಿದ್ದರೆ ದಿನಕ್ಕೆ 3 Dollar ಗಳಿಸಬಹುದು. { ೧೪೦ - ೧೫೦ ರೂಪಾಯಿ}. ನಾನಿಲ್ಲಿ ವಿವರಿಸುತ್ತಿರುವುದು ಕೇವಲ ನೀವು ಮಾಡುವ ಕೆಲಸದಿಂದ ಬರುವ ಆದಾಯದ ಬಗ್ಗೆ ಮಾತ್ರ. ಇನ್ನು ನೀವು ಪ್ರತಿಯೊಂದು ಸೈಟ್ ನಲ್ಲಿ ಕೊಡಲಾಗುವ ನಿಮ್ಮದೇ ಆದ ಪ್ರತ್ಯೇಕ Referrer Link ಮೂಲಕ ನಿಮ್ಮ ಸ್ನೇಹಿತರನ್ನು, ಇತರರನ್ನು ಸೇರಿಸಿದರೆ, ಅವರು ಮಾಡುವ ಕೆಲಸದಲ್ಲೂ ನಿಮಗೆ 50% - 100% ಕಮಿಷನ್ ಸಿಗುತ್ತದೆ. ನಿಮ್ಮ ಕೆಳಗೆ ನೀವು 20 ಜನರನ್ನು ಸೇರಿಸಿದರೆ, 1 ಜಾಹಿರಾತಿಗೆ ೦.15 Cent ಎಂದು ಹಿಡಿದರೆ ನಿಮ್ಮ ಆದಾಯದ ಚಿತ್ರಣ ಈ ಕೆಳಗಿನಂತಿರುತ್ತದೆ.
ಸಧ್ಯ ನಾನು ತಿಂಗಳಿಗೆ 300 ರಿಂದ 350 ಡಾಲರ ಪಡೆಯುತ್ತಿದ್ದೇನೆ, ಹಾಗೂ ದಿನದಿಂದ ದಿನಕ್ಕೆ ಇದು ಜಾಸ್ತಿಯಾಗುತ್ತಲೇ ಇದೇ. ನೆನಪಿನಲ್ಲಿಡಬೇಕಾದ ಒಂದು ಪ್ರಮುಖ ಅಂಶವೇನೆಂದರೆ, 'ಕೇವಲ 1 Cent' ಎಂದು ನೀವು ಯಾವತ್ತೂ ಯೋಚಿಸಬೇಡಿ. ಇಲ್ಲಿ ಅರ್ದ Cent - 1 Cent ಕೂಡ ತುಂಬಾ Important. ಹನಿ ಹನಿ ಕೂಡಿದರೆ ಹಳ್ಳ ಎನ್ನುತ್ತಾರಲ್ಲ ಹಾಗೆ ಅರ್ದ Cent - 1 Cent ಸೇರಿ ಡಾಲರ್ ಆಗುತ್ತವೆ.

Shastry said...

chennagide...ondishtanna nanu kallathana madi snehitharige sms kalisuvavaniddene!! :)

NilGiri said...

What is a Sentance?

A Sentance is a ಸುಂಟಿ ಪುಡಿ.. ಹೊಟ್ಟೆ ನೂವು ಬಂದಾಗ ಕಾಸ್ಕೊಂಡು ಕುಡಿ...


.....ಇದಕ್ಕೆ ನಾವು ಇನ್ನೂ ಒಂದು ಸಾಲು ಸೇರಿಸಿ ಹೇಳ್ತಾ ಇದ್ವಿ.

" .... ಹೊಟ್ಟೆ ನೋವು ಬಂದ್ರೆ ಕಾಸ್ಕೊಂಡು ಕುಡಿ....ಪರೀಕ್ಷೇಲಿ ಕೇಳಿದ್ರೆ ಗೋತಾ ಹೊಡೀ...":D

ಸವಿತ said...

>>ಗೆಳತೀ,..ಚಂದ್ರನ ಮೇಲೆ ನಿನ್ನ ಹೆಸರ ಬರೆಯುವ ಆಸೆ ನನಗೆ..
ಆದರೆ ಈ ಯೋಚನೆ, ಅಮಾವಾಸ್ಯೆಯ ದಿನವೇ ಬರುತ್ತದೆ ನನಗೆ....

ವಾವ್ ಸಕತ್ ಸಾಲುಗಳು!!
ಸಂಗ್ರಹ ಚೆಂದಿವೆ :)
-ಸವಿತ