ಖಾಯಂ ಓದುಗರು..(ನೀವೂ ಸೇರಬಹುದು)

25 June 2009

ಕೆಲ ದಿನಗಳವರೆಗೆ ಯಳವತ್ತಿ ಅಲಭ್ಯ....

ಇವತ್ತು.. ದಿ: 25-06-2009 ರಾತ್ರಿ 8.30 ಕ್ಕೆ ನಾನು ನನ್ನ ಸ್ನೇಹಿತ ನನ್ನ ಬೈಕಿನಲ್ಲಿ ಬರಬೇಕಾದ್ರೆ, ಎದುರುಗಡೆಯಿಂದ ಬಂದ ವಾಹನದ ಬೆಳಕು ನನ್ನ ಕಣ್ಣು ಕುಕ್ಕಿತು.. ರಸ್ತೆ ಬದಿಗೆ ಗಾಡಿಯನ್ನು ತೆಗೆದುಕೊಳ್ಳುವಾಗ ಬದಿಯಲ್ಲಿದ್ದ ಗುಂಡಿಗೆ (ಮಳೆಯಿಂದ ನೀರು ತುಂಬಿಕೊಂಡಿತ್ತು) ಬಿದ್ದೆವು.. ನನಗೆ ಕೈಕಾಲು ತರಚಿಕೊಂಡಿದೆ.. ಮೊಣಕೈ ತುಂಬಾ ಊದಿಕೊಂಡಿದೆ.. ಟೈಪಿಸಲು ಆಗುತ್ತಿಲ್ಲ.. ಪೇಯ್ನ್ ಕಿಲ್ಲರ್ ಮಾತ್ರೆ, ಆಯಿಂಟ್ ಮೆಂಟು ಮತ್ತೆ ಗಾಯದ ಪೌಡರನ್ನು ತೆಗೆದುಕೊಂಡು ಬಂದಿದ್ದೇನೆ..

ನನ್ನ ಸ್ನೇಹಿತೆ ಕೊಡಿಸಿದ ಶರಟು ಹರಿದು ಹೋಗಿ ಕೆಸರು ಆಗಿದೆ.. ಸಧ್ಯ ನಾನು ತುಂಬಾ ನಿಧಾನವಾಡಿ ಓಡಿಸ್ತಿದ್ದೆ.. ಜಾಸ್ತಿ ಏಟು ಆಗಲಿಲ್ಲಾ.. ಮೂರು ದಿನ ರೆಸ್ಟ್ ತಗೊಂಡರೆ ಸರಿಯಾಗಬಹುದು... ಮನೆಗೆ ಬರುತ್ತಿದ್ದ ಹಾಗೆ ಅಮ್ಮ ನೋಡಿ ಅಳುವ ಹಾಗೆ ಆಡಿದರು.. ಇವಾಗಲೂ ಅಳು ಮುಖಾನೆ ಇದೆ.. ನನ್ನ ಪ್ರೀತಿಯ ಬೈಕಿಗೆ ಸ್ವಲ್ಪ ಏಟಾಗಿದೆ.. ನನಗೆ ತುಂಬಾ ಬೇಜಾರು ಆಯಿತು.. ನಾನು ಬೈಕಿನಲ್ಲಿ ಬೀಳುತ್ತಿರುವುದು ಇದು ಎರಡನೇ ಸಾರಿ.. ಅದೂ 15 ದಿನಗಳ ಒಳಗೆ ಅನ್ನೋದು ವಿಶೇಷ.. ಎಂಟು ವರ್ಷದಿಂದ ಗಾಡಿ ಓಡಿಸ್ತಾ ಇದೀನಿ.. ಈ ತರ ಸಣ್ಣ ತಪ್ಪು ಆಗಿರಲಿಲ್ಲಾ.. ಇವತ್ತು ಎಡಮಗ್ಗುಲಲ್ಲಿ ಎದ್ದಿದ್ದೆ ಅನ್ಸುತ್ತೆ..

ಮೊನ್ನೆ ಅಮಾವಾಸ್ಯೆಗೆ ಬೈಕು ಪೂಜೆ ಮಾಡಲಿಲ್ಲಾ.. ಶಿಂಗಟಾಲೂರಿಗೆ ಹೋಗ್ ಬೇಕಾದ್ರೆ ಬೈಕು ತಗೊಂಡು ಹೋಗಿ ಪೂಜೆ ಮಾಡಿಸಲಿಲ್ಲಾ.. ನಿಂಗೆ ಸರಿಯಾಗಿ ಬೈಕು ನೋಡ್ಕೋಳ್ಳೋಕೆ ಬರಲ್ಲಾ.. ಅವರು ನಿಂಗೆ ಮಾಡ್ಸಿದಾರೆ.. ಅದಕ್ಕೆ ನೀನು ಬಿದ್ದೀರೋದು ಅಂತಾ ಅಮ್ಮನ ವಾದ..

ಅದು ಏನೇ ಇರಲಿ.. ಎದುರುಗಡೆ ಬರುವವನು ಅಂತಾ ಕತ್ತಲಲ್ಲಿ ಡಿಮ್ &ಡಿಪ್ ಮಾಡ್ ಬೇಕಿತ್ತು.. ಎಷ್ಟೊಂದು ಜನರು ಬೇಕೆಂತಲೇ ಮಾಡಲ್ಲಾ.. ಹೀಗೆ ಮಾಡಿ ಎದುರಿನವರನ್ನು ಬೆದರಿಸಿ ಮೋಜು ಪಡೀಬೇಕು ಅನ್ನೋದು ಸಹ ಕೆಲವರಿಗೆ ಖಯಾಲಿ..

ಆದರೆ, ಅನುಭವಿಸೋರು ನಾವು.. ಅದು ಏನೇ ಇರಲಿ.. ನಾನು ಕೆಲದಿನಗಳವರೆಗೆ ಕನ್ನಡ ಸೇವೆಗೆ ಅಲಭ್ಯ ಅನ್ನೋದು ನಂಗೆ ಬೇಜಾರು..
ಗಾಯಗಳಂತೂ ಚುಮು ಚುಮು ಉರೀತಾ ಇವೆ.. (ಫೇಸ್ ಸ್ವಲ್ಪ ತರಚಿದ್ದಕ್ಕೆ ನಂಗೆ ತುಂಬಾ ಬೇಜಾರಾಗ್ತಿದೆ)

ನನ್ನ ಪ್ರೀತಿಯ ಮೊಬೈಲ್ಗೆ, ಕಾಸು ಕೊಡುವ ಎ.ಟಿ.ಎಂ. ಕಾರ್ಡಿಗೆ.. ಏನೂ ಆಗಿಲ್ಲದಿರುವುದು ಸಮಾಧಾನದ ಸಂಗತಿ.. ನನ್ನ ಸ್ನೇಹಿತನಿಗೆ ಏನೂ ಆಗಲಿಲ್ಲಾ..

ಇವಾಗ ನನ್ನ ತಂಗಿ ಮತ್ತು ಗಂಡ ಬಂದಿದಾರೆ.. ನಿಂಗೆ ನೆಟ್ಟಗೆ ಬೈಕಿನ ಮೇಲೆ ಗ್ಯಾನ ಇಲ್ಲಾ ಅಂತಾ ಬೈತಾ ಇದಾಳೇ.. ಅಮ್ಮ ಕೊಳೆಯಾದ ಬಟ್ಟೆ ಒಗೀತಾ ಇದಾಳೆ.. ನಿಂಗೆ ಇಷ್ಟು ಗಾಯ ಆಗಿದೆ.. ರಕ್ತ ಹನೀತಾ ಇದೆ.. ಕಂಪ್ಯೂಟರ್ ಮುಂದೆ ಕೂತಿದೀಯ.. ಬಿಟ್ಟು ಬಾ ಅಂತಾ ಬಯ್ಯೋಕೆ ಶುರು ಮಾಡ್ತಿದಾರೆ.. ಹರಿದು ಹೋದ ಶರಟನ್ನು ಎಸೆದು ಬಂದ್ರು.. ಬಿಸಿ ನೀರಿನಲ್ಲಿ ಸ್ನಾನ ಮಾಡಿ ಮಾತ್ರೆ ತಗೊಂಡು ಆಯಿಂಟ್ ಮೆಂಟು ಹಾಕ್ಕೋಬೇಕು..

ದೇವರ ಮೇಲೆ ನಿಂಗೆ ಭಕ್ತಿ ಇಲ್ಲಾ ಅಂತಾ ಎಲ್ಲಾರೂ ನಂಗೆ ಪೂಜೆ ಮಾಡ್ತಿದಾರೆ..

ಸ್ನೇಹಿತರೆ.. ಮತ್ತೆ ಸಿಗುವೆ..

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

10 comments:

ಸಿಮೆಂಟು ಮರಳಿನ ಮಧ್ಯೆ said...

ಶಿವಶಂಕರ್....

ಸಧ್ಯ ಬಚಾವ್ ಆದಿರಲ್ಲ...!
ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಿ...

ಆರಾಮ್ ಆದನಂತರ ಬ್ಲಾಗ್ ಲೋಕಕ್ಕೆ ಬನ್ನಿ...

ಶುಭ ಹಾರೈಕೆಗಳು...

ಇಟ್ಟಿಗೆ ಸಿಮೆಂಟು.

Guest said...

ಸರ್,

ಸದ್ಯ ಸ್ವಲ್ಪದರಲ್ಲೇ ಮುಗಿಯಿತಲ್ಲಾ...ಮೊದಲು ಅಮ್ಮ ಹೇಳಿದ ಹಾಗೆ ಮಾಡಿಬಿಡಿ...ಅವರು ಸುಮ್ಮನಾಗುತ್ತಾರೆ...ಮತ್ತೆ ಚೆನ್ನಾಗಿ ರೆಷ್ಟ್ ತಗೊಳ್ಳೀ....ಒಳ್ಳೆಯದಾಗಲಿ...

ಶಿವು.

shivaprakash said...

swalpa husharagi bike odisappa...

Sunaath said...

ನೀವು ಬೇಗನೇ ಸುಧಾರಿಸಿಕೊಂಡರೆ ಸಾಕು. ಉಳಿದ ಚಿಂತೆಯನ್ನು ಈಗ ಬಿಡಿ.

Guru Prasad said...

ಹೌದು ಕಣ್ರೀ..
ರಾತ್ರಿ ಹೊತ್ತು ಎದುರುಗಡೆಯಿಂದ ಬರುವ ವಾಹನದ ಬೆಳಕಿಂದಲೇ ತುಂಬಾ ಅಪಘಾತಗಳು ಆಗುತ್ತಿವೆ..,
ಸರ್ಕಾರದ ನಿಯಮದ ಪ್ರಕಾರ ಮುಂದಿನ ಹೆಡ್ ಲೈಟ್ಗೆ ಅರ್ದ ಕಪ್ಪು ಬಣ್ಣ ಬಳಿದು ಬೈಕ್ ಓಡಿಸಬೇಕು..
ಆದ್ರೆ ಈಗ ನೋಡಿ ಸಾಮಾನ್ಯರೇನು ಸರ್ಕಾರದ ಕೆಲವು ವಾಹನಗಳೇ ಬಣ್ಣ ಬಳಿಸದೆ ಸಾಗುತ್ತಿವೆ....
ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಮುಂದೆ ಆಗುವ ಕೆಲವು ಅಪಘಾತಗಳನ್ನು ತಡೆಯಬಹುದು..
ನೀವು ರೆಸ್ಟ್ ತಗೋಳಿ..ನಾವು ಮತ್ತೆ ಬೇಗ ಸಿಗೋಣ..

ಧನ್ಯವಾದಗಳು:
ಗುರುಪ್ರಸಾದ್ ಗೌಡ
http://balipashu.blogspot.com

Nandu said...

Shivu, swalpa husharagirappa. Was in India a few days ago. Yako traffic sikkapatte agide annistu. Bengaloorinalli ee modalu indecent traffic nodirlilla. eega tumbaane rogue traffic ide. right turn, left turn, headlights, honking, yavdrallu decencyne illa. Neenu swalpa hushaaraagi odisu. Take care and get well soon.

paraanjape said...

ಹುಷಾರು ಗುರು , ಇನ್ನೊ೦ದ್ಸಲ ಬೀಳಬೇಡಿ, ಅಲಕ್ಷ ಮಾಡಬೇಡಿ, ರೆಸ್ಟ್ ತಗೊಳ್ಳಿ. Paraanjape.

Shobha said...

Namaskara shivashankar,
thumba bejaru aithu nimma accident keli. astu novinallu ee ondu calm baredidheeralla enu helbeku nimge. modalu husharagi. nimma mathu nimma bikena gayagalannu vasimadikondu aamele nimma anubhavagalannu namage thilisi.sarina?
take care speedy recovery.

Manju said...

Hai Shivashankar,
How r u Now?
I hope i will be fine,
I am very Happy to Visit U R Blog,

MANJU

shivagadag said...

ಇಟ್ಟಿಗೆ ಸಿಮೆಂಟ್ ಪ್ರಕಾಶಣ್ಣ, ಶಿವು, ಶಿವಪ್ರಕಾಶ್, ಸುನಾಥ್ ಸರ್, ಗುರು, ನಂದು ಸರ್, ಪರಾಂಜಪೆ ಸರ್, ಶೋಭಾ, ಮಂಜು.. ಅವರಿಗೆ ನನ್ನ ಧನ್ಯವಾದಗಳು.. ನನ್ನ ಮೇಲೆ ನಿಮಗೆ ಇರುವ ಕಾಳಜಿ ನೋಡಿ ಏನ್ ಹೇಳೋಕೂ ಆಗ್ತಾ ಇಲ್ಲ.

ಫೋನ್ ಮಾಡಿದ ಗುರು ಪ್ರಸಾದ್, ಜ್ಞಾನಮೂರ್ತಿ.. ಅವರಿಗೆ ನನ್ನ ವಿಶೇಷ ವಂದನೆಗಳು.

ನಾಳೆ ಭಾನುವಾರ, ರಜಾದಿನ, ಬೈಕನ್ನು ರಿಪೇರಿ ಮಾಡಿಸಬೇಕು. ಅಮ್ಮನ ಮಾತನ್ನು ಅವರ ಸಮಾಧಾನಕ್ಕಾಗಿಯಾದರೂ ಕೇಳುವೆ..

ಬೈಕನ್ನು ಹುಶಾರಾಗಿ ಓಡಿಸುವೆ. ನಿಮ್ಮೆಲ್ಲರ ಆಶೀರ್ವಾದ ಹೀಗೇ ಇರಲಿ..
ನಿಮಗಾಗಿ ಒಂದು ಕಥೆಯನ್ನು ತಂದಿದ್ದೇನೆ..

ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ.