ಖಾಯಂ ಓದುಗರು..(ನೀವೂ ಸೇರಬಹುದು)

06 June 2009

ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-2

ನಾನು ಪೋಸ್ಟ್ ಮಾಡಿದ ಕನ್ನಡ ಎಸ್ಸೆಮ್ಮೆಸ್ಸು/ಶಾಯರಿ/ಜೋಕ್ಸು ಭಾಗ-1 ಕ್ಕೆ ಬಂದ ಪ್ರತಿಕ್ರಿಯೆಗಳನ್ನು ನೋಡಿ ತುಂಬಾ ಸಂತೋಷವಾಯಿತು.. ಕಾರಣ, ನಿಮಗಾಗಿ ಭಾಗ -2ನ್ನು ನಿಮ್ಮ ಮುಂದೆ ಇಡ್ತಾ ಇದೀನಿ... (ಇಷ್ಟಕ್ಕೆ ಮುಗಿದಿಲ್ಲ.. ಇನ್ನೂ ಸುಮಾರು 5000 ಎಸ್ಸೆಮ್ಮೆಸ್ಸುಗಳು ಇವೆ)

ಇದನ್ನು ಕಳಿಸಿದ್ದು:-
8) ಶಿಲ್ಪಿ ಕಲ್ಲನ್ನು
ಕೆತ್ತಿದರೆ ಕಲೆ /ವಾ..ವಾ../

ಶಿಲ್ಪಿ ಕಲ್ಲನ್ನು
ಕೆತ್ತಿದರೆ ಕಲೆ.....

ಅದೇ ಕಲ್ಲಿನಿಂದ
ಶಿಲ್ಪಿಯನ್ನು ಕೆತ್ತಿದರೆ,
ಕೊಲೆ...../ವಾ..ವಾ.//ಇದನ್ನು ಕಳಿಸಿದವರು:- ಲಿಂಗರಾಜ್ (ಬೆಂಗಳೂರು)

9) ನನ್ನ ಮೊಟ್ಟ ಮೊದಲ ಹುಡುಗಿ ನಿಶಾ
ಹತ್ತಿಸಿದಳು ತಲೆಗೆ ಅವಳದೇ ನಶಾ..

ಕೈಕೊಟ್ಟಾನ ನನ್ನ ಪಾಲಿಗೆ ಉಳಿದದ್ದು ವಿಷ!!
ಆದರೆ, ಈಗ ನಾನು ಬದುಕಿರಲು ಕಾರಣ,
ಅವಳ ತಂಗಿ ಉಷಾ!!!ಇದನ್ನು ಕಳಿಸಿದವರು:- ಮಮ್ಮಿ(ಮಂಜುಳಾ ಹೊಸಕೋಟೆ/ದೊಡ್ಡನಲ್ಲೂರಹಳ್ಳಿ)

10)ಮಗುವಿನ ನಗು
ಸತ್ತವರನ್ನು ಬದುಕಿಸುತ್ತೆ /ವಾ.ವಾ/
ಮಗುವಿನ ನಗು ಸತ್ತವರನ್ನು ಬದುಕಿಸುತ್ತೆ,
ಕಾಲೇಜ್ ಕನ್ಯೆಯ ನಗು
ಬದುಕಿರುವವರನ್ನೂ ಸಾಯಿಸುತ್ತೆ,, /ವಾ..ವಾ//

Moral:- ಕೂಸ್ ನ ನಂಬಿದ್ರೂ.. ಪೀಸ್ ನ ನಂಬಬಾರದು.
ಇದನ್ನು ಕಳಿಸಿದವರು:- ಆಶಾ (ಹೊಸಕೋಟೆ)

11) ಕೈ ಕೆಸರಾದರೆ.....


ಕೈ ತೊಳ್ಕೊ..

ಅಷ್ಟು ಗೊತ್ತಾಗಲ್ವ..?? ಅದನ್ನು
ನನ್ ಮೆಸೇಜ್ ನೋಡೇ ತಿಳ್ಕೊಬೇಕಾ?
ನಿಂಗೆ ಯಾವಾಗ ಬುದ್ಧಿ ಬರುತ್ತೋ.. ಆ ಪರಮಾತ್ಮನಿಗೇ ಗೊತ್ತು..
ಇದನ್ನು ಕಳಿಸಿದವರು:- ಈರಣ್ಣ ಯಳವತ್ತಿ (Brother)


12) ಟೀಚರ್:- ಆನೆ ದೊಡ್ಡದಾ? ಇರುವೆ ದೊಡ್ಡದಾ???
ಸರ್ದಾರ್ ನ ಮಗ:- ಹಾಗೆಲ್ಲಾ ಸುಮ್ ಸುಮ್ನೆ ಹೇಳಕ್ಕಾಗಲ್ಲಾ.. DATE OF BIRTH ಬೇಕು,,,

ಇದನ್ನು ಕಳಿಸಿದವರು:- ಯದು ಢಾಭಾ (ಚಿಕ್ಕನಾಯಕನಹಳ್ಳಿ)
13)ಪಿನ್ ಚುಚ್ಚಿದರೆ ರಕ್ತ ಯಾಕೆ ಬರುತ್ತೆ????

ಯಾರು ಚುಚ್ಚಿದರು ಅಂತಾ ನೋಡೋಕೆ ಬರುತ್ತೆ....


ಇದನ್ನು ಕಳಿಸಿದವರು:- ಮೀನಾ(ರೋಣ)

14) ಮುಂಗಾರು ಮಳೆ ಬಂದಿದೆ..
ನಿಂಗೆ ತುಂಬಾ ಖುಶಿ ಅಲ್ವಾ..?
ಮಳೆ ಬರುವಾಗ ಹೊರಗೆ ಹೋಗಬೇಕು, ನೀರಲ್ಲಿ ಆಡಬೇಕು, ಕುಣೀಬೇಕು
ಅಂತೆಲ್ಲಾ ಅನ್ಸುತ್ತೆ ಅಲ್ವಾ....???
ಎಲ್ಲಾ ಕಪ್ಪೆಗೂ ಹೀಗೇ ಆಗುತ್ತೆ...
ಇದನ್ನು ಕಳಿಸಿದವರು:- ಮಮ್ಮಿ(ಮಂಜುಳಾ ಹೊಸಕೋಟೆ/ದೊಡ್ಡನಲ್ಲೂರಹಳ್ಳಿ)

15)ಕಾಡು ಬೆಳೆಸಿ, ನಾಡು ಉಳಿಸಿ
ನೀರು ಉಳಿಸಿ, ಬೆಳೆ ಬೆಳೆಸಿ
ಮೆಸೇಜ್ ಕಳಿಸಿ, Friendship ಬೆಳೆಸಿ,. ಇಲ್ಲಾ ಅಂದ್ರೆ,
ತಲೆ ಬೋಳಿಸಿ, ಕೊಬ್ರಿ ಎಣ್ಣೆ ಉಳಿಸಿ.


ಇದನ್ನು ಕಳಿಸಿದವರು:- ಜಗದೀಶ(ಬೆಂಗಳೂರು)
16) ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಳು
ನೀನೇ ನನ್ನ ಟಾಟಾ ಬಿರ್ಲಾ.. /ವಾ..ವಾ../
ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಲು
ನೀನೇ ನನ್ನ ಟಾಟಾ ಬಿರ್ಲಾ,
ಪರ್ಸು ಖಾಲಿಯಾದ್ರೆ, ಅವಳು ಹೇಳುವಳು
ಟಾಟಾ ಬರ್ಲಾ.... /ವಾ..ವಾ/ಇದನ್ನು ಕಳಿಸಿದವರು:- ನಿರಂಜನ (ತುಮಕೂರು)
17ಕಳಬೇಡ ಕೊಲಬೇಡ
CALL ಮಾಡಲು ಮರೀಬೇಡ,
MISS CALL ಕೊಡಬೇಡ
SMS ಕಳಿಸಲು ಮರಿಬೇಡ..
ಇದೇ ನನ್ನ ಸುದ್ದಿ
ಬರಲಿ ನಿಂಗೆ ಒಳ್ಳೆ ಬುದ್ಧಿ
ಮೊಬೈಲ್ ಸಂಗಮದೇವಾ....
ಇದನ್ನು ಕಳಿಸಿದವರು:- ಜಗದೀಶ(ಬೆಂಗಳೂರು)

18)ಅವಳ ಒಂದು ಕಣ್ಣು
ಎಷ್ಟು ಸುಂದರವಾಗಿತ್ತೆಂದರೆ...
ಅವಳ ಒಂದು ಕಣ್ಣು
ಎಷ್ಟು ಸುಂದರವಾಗಿತ್ತೆಂದರೆ..
ಅವಳ ಇನ್ನೊಂದು ಕಣ್ಣು
ಆ ಕಣ್ಣನ್ನೇ ನೋಡುತ್ತಿದ್ದು....
ಇದನ್ನು ಕಳಿಸಿದವರು:- ರಾಘವೇಂದ್ರ ಯಳವತ್ತಿ (ಗದಗ)

19) ಮನಸ್ಸಿನ ಆಳದಲ್ಲಿ...
ನೆನಪಿನ ಅಲೆಯಲ್ಲಿ
ಒಲುಮೆಯ ಜೀವಕ್ಕೆ
ಪ್ರೀತಿಯ ಹೃದಯಕ್ಕೆ
ತಂಪು ನೀಡುವುದೇ....
"ಗಣೇಶ ಬೀಡಿ".... ಸೇದಿ ಆನಂದಿಸಿ...
ಇದನ್ನು ಕಳಿಸಿದವರು:- ನಾನೇ ಕಣ್ರಿ,,

18) ನೀವು ಎಲ್ಲೇ ಇರಿ.. ಹೇಗೇ ಇರಿ,,
ನೂರಾರು ಬ್ಲಾಗ್ ನೋಡಿ, ಸಾವಿರಾರು ಕಾಮೆಂಟ್ಸ್ ಬರೀರಿ..
ಆದ್ರೆ, ಒಂದೇ ಒಂದು ಮಾತು ತಿಳ್ಕೊಳ್ರಿ,
ನಿಮಗೆ ನನ್ನಂಗೆ ನಗಿಸೋ-ಅಳಿಸೋ ಬ್ಲಾಗರ್ ಎಲ್ಲೂ ಸಿಗಲ್ಲಾ ಕಣ್ರಿ..
ನನ್ನ ಬ್ಲಾಗ್ ನ ಫಾಲೋ ಮಾಡಿ ಅಂತಾ ನಾನು ಕೇಳಲ್ಲಾ ರೀ..
ನಿಮ್ಮ ಬ್ಲಾಗಲ್ಲಿ ನನ್ನ ಬ್ಲಾಗ್ ನ ಹಾಕ್ಕೊಳ್ಳಿ ಅಂತಾನೂ ಬೇಡಲ್ಲಾ ಕಣ್ರೀ,...

ಅವಾಗವಾಗ ನನ್ನ ಬ್ಲಾಗ್ ನ ವಿಸಿಟ್ ಮಾಡಿ, ಒಂದು ಕಾಮೆಂಟ್ ಬರೆದು ನನ್ನ ವಿರೋಧಿಗಳ ಮಧ್ಯೆ ನನ್ನ ಮರ್ಯಾದೆ ಉಳಿಸಿ,,,

ಅಷ್ಟು ಸಾಕ್ರಿ, ಈ ಜೀವನಾ ಪೂರ್ತಿ ಬ್ಲಾಗಿಂಗ್ ಮಾಡ್ತಾ ಕಳೆದು ಬಿಡ್ತೀನಿ ಕಣ್ರಿ.......


ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ


ಮುಂದಿನ ಪೋಸ್ಟ್ "ಇವ್ನ ಲವ್ವು ಸ್ಟೋರಿಯೂ, ಹಣೆ ಬರಹವೂ ಭಾಗ-2"

13 comments:

ಸಿಮೆಂಟು ಮರಳಿನ ಮಧ್ಯೆ said...

ಸಿಕ್ಕಾಪಟ್ಟೆ ನಕ್ಕು ಬಿಟ್ಟೆ ಕಣ್ರೀ ಶಿವು....!!

ಸಕತ್ ಆಗಿದೆ...
ಒಂದಕ್ಕಿಂತ ಒಂದು ಚೆನ್ನಾಗಿವೆ....

ನಿಮ್ಮ ಎಸ್ಸೆಮ್ಮೆಸ್ಸ್ ಸಂಗ್ರಹಕ್ಕೊಂದು ನನ್ನ ಸಲಾಮ್....!!

ಮುಂದುವರೆಸಿರಿ....

prakash hegde

ಸಿಮೆಂಟು ಮರಳಿನ ಮಧ್ಯೆ said...

ಸಿಕ್ಕಾಪಟ್ಟೆ ನಕ್ಕು ಬಿಟ್ಟೆ ಕಣ್ರೀ ಶಿವು....!!

ಸಕತ್ ಆಗಿದೆ...
ಒಂದಕ್ಕಿಂತ ಒಂದು ಚೆನ್ನಾಗಿವೆ....

ನಿಮ್ಮ ಎಸ್ಸೆಮ್ಮೆಸ್ಸ್ ಸಂಗ್ರಹಕ್ಕೊಂದು ನನ್ನ ಸಲಾಮ್....!!

ಮುಂದುವರೆಸಿರಿ....

prakash hegde

shivaprashanth said...

SMS jokes sakat comedyyagive...innu hechchu bareeri

shivu said...

super sir...

Manju said...

Chennagide ..heege baritha iri...

Guest said...

Aravind:
ಪ್ರಿತೀಯ ಯಳವತ್ತಿಯವರೇ
ನಿಮ್ಮ ಹೊಸ ಬ್ಲಾಗ್ನ ನೋಡಿ ಓದಿ ತುಂಬಾ ಸಂತೋಷ ಆಯಿತು.
ದಯವಿಟ್ಟು ಇಂತಹ ಇನ್ನೂ ಅನೇಕ ಪೋಸ್ಟ್ಗಳೊಂದಿಗೆ ರಂಜಿಸಿರಿ.

shivaprakash said...

olle collection shivu...
continue maadi

Guest said...

ತುಂಬಾ ತಮಾಷೆಯಾಗಿದೆ. ಇನ್ನೂ ನಿಮ್ಮ ಸಂಗ್ರಹದಿಂದ ಓದುವಾಸೆ..

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ತುಂಬಾ ತಮಾಷೆಯಾಗಿದೆ. ಇನ್ನೂ ನಿಮ್ಮ ಸಂಗ್ರಹದಿಂದ ಓದುವಾಸೆ..

jagadeesha said...

maga super agi ide..continue madu... ;)

shivagadag.blogspot.com said...

ಪ್ರಕಾಶ್ ಸರ್,
ಶಿವು,
ಮಂಜು ಮೇಡಮ್,
ಅರವಿಂದ್ ಐರಣಿ ಸರ್,
ಶಿವಪ್ರಕಾಶ್,
ಮಲ್ಲಿಕಾರ್ಜುನ್ ಸರ್,
ವಿಶೇಷವಾಗಿ ನನ್ನ ಸ್ನೇಹಿತ ಜಗದೀಶನಿಗೆ,,,

ಹಾಗೂ ಬ್ಲಾಗನ್ನು ಓದಿದ ಎಲ್ಲರಿಗೂ ನನ್ನ ಧನ್ಯವಾದಗಳು..

ಬೇಗನೆ ಇಂತಹ ಇನ್ನಷ್ಟು ಶಾಯರಿ/ಎಸ್ಸೆಮ್ಮೆಸ್ಸುಗಳನ್ನು ನಿಮ್ಮ ಮುಂದೆ ತರಲಿದ್ದೇನೆ...

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ
ಬ್ಲಾಗನ್ನು ಅವಾಗವಾಗ ನೋಡ್ತಾ ಇರಿ...

Bangi rama said...

bariappa bejarilla..dinakke mooru message , 4 sarthi phone maadi nanna blog nodu antha himse kodbedvo....

Benaka. said...

Bahala chennagide keep it up