ಖಾಯಂ ಓದುಗರು..(ನೀವೂ ಸೇರಬಹುದು)

02 May 2009

ಆರ್ಕುಟ್ Scrap ಬುಕ್ಕು.. ಪ್ರಶಂಸಾ ಪತ್ರಗಳು... ಎಸ್ಸೆಮ್ಮೆಸ್ಸು.. ಭಾಗ-1 (ಇನ್ನೊಂದಿಷ್ಟು ಸೇರಿಸಿದೀನಿ ನೋಡಿ)

ಸ್ನೇಹಿತರೆ,,

ಇವಾಗ ಗದಗ ದಲ್ಲಿ 3ನೇ ಹಂತದ ಮತದಾನವು ಶಾಂತಿಯುತವಾಗಿ ಮುಗಿದಿದ್ದರಿಂದ ಸ್ವಲ್ಪ ನಿರಾಳವಾಗಿದೆ..
ಇವಾಗ ಸಮಯೋಚಿತ (ಸಮಯ + ಉಚಿತ) ಮಾಡಿಕೊಂಡು ನಿಮಗಾಗಿ ಈ ಲೇಖನ..

ನಾನು ಸುಮಾರು 08 ತಿಂಗಳ ಹಿಂದೆ ಆರ್ಕುಟ್ ಗೆ ಸೇರಿಕೊಂಡಿದ್ದು.. (ಸೇರಿಸಿದ್ದು ಶಿಕಾರಿಪುರದ ರಾಘವೇಂದ್ರ.. ಇಂಥ ತಂಪು ಹೊತ್ತಿನಲ್ಲಿ ಅವನನ್ನು ನೆನಸಬೇಕು ಕಣ್ರಿ) ಅಲ್ಲಿವರೆಗೂ ನಂಗೆ ಇಂಥಾದ್ದೊಂದು ಇರುತ್ತೆ ಅಂತಾ ಕಲ್ಪನೇನೂ ಇರಲಿಲ್ಲಾ..

ಈ ಎಂಟು ತಿಂಗಳಲ್ಲಿ ನಾನು ಸಾಕಷ್ಟು ಪ್ರೊಫೈಲ್ ಗಳನ್ನು ಭೇಟಿ ನೀಡಿದ್ದೇನೆ,.. ಅದರಲ್ಲಿ ನನಗೆ ಕೆಲವೊಂದು ಪ್ರೊಫೈಲ್ ಗಳಲ್ಲಿ ಬರೆದಿರುವ ಪ್ರಶಂಸಾ ಪತ್ರಗಳು, ಮೆಸೇಜ್ ಗಳು ತುಂಬಾ Funny ಅಂತಾ ಅನ್ನಿಸಿದುವು..

ಕೆಲವೊಂದು ಸ್ಯಾಂಪಲ್ ಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..ಈ ಫೋಟೋದಲ್ಲಿ ಇರೋದು ನನ್ನ ಹೈಸ್ಕೂಲ್ ಮೇಟ್ಸ್,. (ಚಿಕ್ಕನಾಯಕನಹಳ್ಳಿಯಲ್ಲಿನ ದೇಶೀಯ ವಿದ್ಯಾಪೀಠ ಬಾಲಕರ ಪ್ರೌಢಶಾಲೆಯಲ್ಲಿ ಓದಿದ್ದು... ಸ್ಥಾಪನೆ:- 1942) ಇವರ ಹೆಸರು.... ಎಡಗಡೆಯಿಂದ ಜಗದೀಶ, ದಿಲೀಪ, ಚಲುವರಾಜ ಮತ್ತು ನಾಲ್ಕನೇಯವನಾಗಿ ಕಾಣುತ್ತಿರುವವನ ಹೆಸರು ಸುಗುಣ ಸಾಗರ ಅಂತಾ.. ಇವನಿಗೆ ಯಾರೋ ಮುಂಡಾಯಿಸಿದಾರೆ ಅನ್ಕೊಬೇಡಿ.. ಅವನೇ ಗುಂಡ ಮಾಡಿಸ್ಕೊಂಡಿದಾನೆ.. ನೋಡೋಕೆ ದಪ್ಪ ಇದಾನೆ,., ಇವನ ಜೊತೆ ಇದ್ರಂತೂ ತುಂಬಾ ನಗಿಸ್ತಾನೆ ಅಂತಾ ಎಲ್ಲಾ ಫ್ರೆಂಡ್ಸೂ ಹೇಳ್ತಾರೆ.. ಅವನ ಪ್ರೊಫೈಲ್ ಗೆ ಬಂದಿರೋ ಪ್ರಶಂಸಾ ಪತ್ರಗಳನ್ನು ನೋಡಿದ್ರಂತೂ ನಕ್ಕು ನಕ್ಕು ಸಾಕಾಗುತ್ತೆ.. ಅವುಗಳು ಇಲ್ಲಿವೆ..

1) ಇದನ್ನು ನಾನು ಅವನಿಗೆ ಬರೆದಿದ್ದು.. ರವಿ ಬೆಳಗೆರೆ ಸ್ಟೈಲ್ ನಲ್ಲಿ ಓದ್ಕೊಳಿ..(ಕೆಲವೊಂದನ್ನು ಸಂಕ್ಷಿಪ್ತವಾಗಿಸಿದ್ದೇನೆ)


ಇವನು ಸುಗ್ಗಿ ಅಲಿಯಾಸ್ ಸುಗುಣಸಾಗರ.. 8 ರಿಂದ 10 ರವರೆಗೂ ನಮ್ಮ ಜೊತೆ (ಬೇರೇ ಸೆಕ್ಷನ್ನಲ್ಲಿ) ಓದಿದ್ರೂ..
ನಮ್ ಹತ್ರ ಬಂದಿರಲಿಲ್ಲಾ,. ಪಿ.ಯು.ಸಿ ನಲ್ಲಿ ನಮ್ಮ ಸೆಕ್ಷನ್ ಗೆ ಬಂದಿದ್ದ..
ಅವನು ಯಾಕ್ ಬಂದಿದ್ದ..?? ಹೇಗ್ ಬಂದಿದ್ದ...?? ಅಂತೂ ಅವನು ಬಂದಿದ್ದ..
ಹಾಗೇ ಓದಿನಲ್ಲಿ ಸ್ವಲ್ಪ ಮುಂದಿದ್ದ.. ಯಾವಾಗಲೂ ಕೂಲ್ ಆಗಿರ್ತಿದ್ದ..
ಹೇಗೆ ಕೂಲಾಗಿದ್ದ..??
ಅದರ ಹಿಂದಿನ ರಹಸ್ಯ ಏನು...????

ನೋಡಲು ನಮ್ಮ ಧಾರವಾಡದ ಎಮ್ಮೆ ತರಹ ಇದಾನೆ..
ಏನ್ ಮಗಾ.. ಸ್ವಲ್ಪ ಸಣ್ಣಗಾಗು ಅಂತಾ ರೇಗಿಸಿದ್ರೆ,
ಇಲ್ಲಾ.. ನಾನು ಹೀಗೇ ಇರ್ತೀನಿ ಅಂತಿದ್ದಾ..

ನೋಡಿದ್ರಾ ಇವ್ನ ಪ್ರಾಣಿ ಪ್ರೀತೀನಾ..
ಬನ್ನಿ ವೀಕ್ಷಕರೇ ಇವನ ಬಗ್ಗೆ ಇನ್ನು ಸ್ವಲ್ಪ ತಿಳಿದುಕೊಳ್ಳೋಣ
ಬ್ರೇಕ್ ನ ನಂತರ...
ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ


2) Raghu in chennai:

ಇವನ ಪರಿಚಯವಾಗಿ ನಾಲ್ಕು ತಿಂಗಳು ಆಗಿಲ್ಲಾ.. ಅಷ್ಟರಲ್ಲಿ ಇವನು ನನ್ನ ಕ್ಲೋಸ್ ಪ್ರೆಂಡ್ ಆಗಿದಾನೆ. ನೋಡೋಕೆ ಕಳ್ಳನ ಥರಾ ಇದಾನೆ. ಆದ್ರೆ ಇವನು ಚಿಕ್ಕನಾಯಕನಹಳ್ಳಿಯ ವಿಶ್ವೇಶ್ವರಯ್ಯ.

ಮಾಂಸ ಪರ್ವತ.. ಅದ್ಯಾವುದೋ ಸುಗುಣ ಚಿಕನ್ಸ್ ಅಂತಾ ಬಂತಲ್ಲಾ, ಇವನ್ನ ನೋಡಿದ್ರೆ ಸುಗುಣ ಮಟನ್ಸ್ ಅಂತಾ ಇಡ್ತಿದ್ರೇನೋ.. ಹಾಗಿದಾನೆ.. ಒಟ್ಟಿನಲ್ಲಿ ನಮ್ಮ ಪ್ರೀತಿಯ ಸುಗುಣ ಕಣ್ರಿ.. ಸುಗ್ಗಿಗೆ ಜೈ..


3) ಸುಮನ್:- ಡುಮ್ಮ ಅಂದ್ರೆ ಡುಮ್ಮ.. 2 ವರ್ಷದಿಂದ ಊರಿಗೆ ಹೋಗಿಲ್ಲಾ.. ಇವನ ಊರಲ್ಲಿ 20 ವರ್ಷದಿಂದ ಗಣಪತಿ ಅಂತಾ ಇವನನ್ನೇ ಮುಳುಗಿಸ್ತಿದ್ರಂತೆ..


4)ದಯಾ:- ದೇಹ ಮಾತ್ರ ದೊಡ್ಡದು ಅಷ್ಟೇ.....


5) "CRIME DAIRY STYLE"----------

ರಘುನಂದನ್

ಇವನ್ ಹೆಸರು ಸುಗುಣ ಸಾಗರ ಅಂತಾ!... ಬರೀ ನೋಡೋಕೆ ಕಳ್ಳನ ಥರಾ ಇದಾನೆ ಅಂತಾ ಅನ್ಕೊಬೇಡಿ, ನಿಜವಾಗಲೂ ನನ್ ಮಗ ಕಳ್ಳಾನೇ.. ಇವನು ಮಾಡಿರೋ ಕೆಲ್ಸ ಒಂದೊಂದ್ ಅಲ್ಲಾ!!!"
ಮೊದುಲ್ನೆದಾಗಿ:- ಇವನು ನಮ್ ಜೊತೆ ಓದಿದ್ದು 8ನೇ ಕ್ಲಾಸಿನಿಂದ, ಆದರೂ ನಮ್ ಗ್ರೂಪ್ ಗೆ ಬಂದಿರಲಿಲ್ಲಾ ಬಂದಿದ್ದು 11 ರಿಂದ.. ಅಲ್ಲಿವರೆಗೂ ಅದ್ ಹೆಂಗ್ ಇದ್ನೋ ಆ ದೇವರಿಗೆ ಗೊತ್ತು..
ಯಾರಾದ್ರೂ ಯತಿ ನನ್ ಮಕ್ಳು ಸಿಕ್ರೆ ಸಾಕು, ಅಯ್ಯೋ ಅನ್ನಿಸ್ ಬಿಡ್ತಾನೆ!!!
"u sholud be very clever to be with a man like Suggi!!"

ಮಾತಾಡಕೆ ಶುರು ಮಾಡಿದ್ರೆ ತಲೆ ಮೇಲೆ ತಲೆ ಬಿದ್ರೂ ನಿಲ್ಸಲ್ಲಾ!! ನಕ್ಕಿ ನಕ್ಕಿ ಸಾಕಾಗುತ್ತೆ..

ಸ್ವಲ್ಪ ಸ್ವಲ್ಪ ಕೆಟ್ ಕೆಲ್ಸ ಮಾಡ್ತಾನೆ ಅನ್ನೋದು ಬಿಟ್ರೆ, ಇನ್ನಲಾ ಓ.ಕೆ. very helping in nature and speakd a lot like me...
finally
" DON DARE TO ENTER WHEN OUR GROUP IS TOGETHER"!!!!ನಮ್ಮ ಪ್ರೀತಿಯ ಸುಗುಣ ಸಾಗರ್ ನ ಪ್ರೋಫೈಲ್ ನೋಡಿ.. ಇನ್ನೂ ಒಂದಿಷ್ಟು ಮಜಾ ಬರುತ್ತೆ...

ಅವನ ಪ್ರೋಫೈಲ್ನಲ್ಲಿ ಈ ರೀತಿ ಕಾಣಬಹುದು..........

ಪುಸ್ತಕಗಳು: ಬಿಕ್ಕಿ ಬಿಕ್ಕಿ ಅತ್ತ techie !!,Orkut Office ಕೆಡುಸ್ತು!!, Little Oxford Dictionary Thesaurus & Word power Guide (Indian edition), avalakki buvalakki, how to loose weight in 30 days (reading since last 2 years ) .........

ಟಿವಿ ಶೋಗಳು: ಆಫೀಸ್ ಒಂದು, ನಾಕು ಬಾಗಿಲು !!!!!!! ಸಾಫ್ಟ್ ವೇರ್ ನನ್ ಮಕ್ಲು !!!, ಮಾಂಗಲ್ಯ (Mostly ಡೈರೆಕ್ಟರ್ ಹೆಂಡ್ತಿ ಮಾಂಗಲ್ಯ ಬೀಳೊವರೆಗೂ ಇದು ಮುಗಿಯೋಲ್ಲ ಅನ್ಸುತ್ತೆ), ಹೀಗೂ ಉಂಟೆ (ಇಲ್ಲ ಬಿಡಿ!!!),Animal planet,Croc hunter Steve Irvin Shows, Discovery Wild

ಅಡುಗೆ ಪದ್ಧತಿಗಳು: ಯಾಕೆ ಕೇಳ್ತೀಯಾ ಗುರು ...... 3 ವರ್ಷದಿಂದ ಸಿಕ್ ಸಿಕ್ಕಿದ್ ಕಡೆ ಆಯ್ಕೊಂಡ್ ತಿನ್ತಿದೀನಿ.....

ಕೆಲಸದ ವಿವರ: ದಿನಗೂಲಿ ನೌಕರ , ಪರದೇಶಿಗಳಿಗೆ web application develop ಮಾಡೋದು ......

ಆದರ್ಶ ಜೋಡಿ: punyathgithhi yellidalo????????

ನನ್ನಲ್ಲಿ ನೀವು ಮೊದಲು ಗಮನಿಸುವ ಸಂಗತಿ: either Fat /Fatter/Fattest

(ನೋಡಿದ್ರಾ.. ತನ್ನ ಮೇಲೆ ಜೋಕು ಮಾಡಿಕೊಳ್ಳುವ ಈತ ನಿಜಕ್ಕೂ ಗ್ರೇಟ್)


ಸಾಕ್ಷಿ ಬೇಕಾದರೆ, ಇಲ್ಲಿ ಕ್ಲಿಕ್
ಮಾಡಿ....ಇವತ್ತಿಗೆ ಇಷ್ಟು ಸಾಕು.. ಮತ್ತೆ ಬರೆಯೋದು ಬಹಳ ಇದೆ.. ಇದನ್ನು ಬರೆಯಲು ಒಪ್ಪಿಗೆ ಸೂಚಿಸಿದ ನನ್ನ ಸ್ನೇಹಿತ ಸುಗುಣ ಸಾಗರ್ ಗೆ ಧನ್ಯವಾದಗಳು..

(ಲೋ ಬೈಕೋಬೇಡ್ವೋ...)

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

No comments: