ಖಾಯಂ ಓದುಗರು..(ನೀವೂ ಸೇರಬಹುದು)

30 May 2009

ಇವ್ನ ಲವ್ವು ಸ್ಟೋರಿಯೂ.. ಹಣೆ ಬರಹವೂ...

ಪ್ರಜ್ವಲ್!!!

ಅಂತಾ ಟೀಚರ್ ಕೂಗಿದಾಗ, ಅವನು ಎದ್ದು ನಿಂತ್ಕೊಂಡ. ನಿಂಗೆ 30ಕ್ಕೆ 06 ಮಾರ್ಕ್ಸ್ ಬಂದಿದೆ ಅಂದಾಗ, ಸ್ಕೂಲ್ ರೂಮಲ್ಲೆಲ್ಲಾ ಗುಸುಗುಸು.
ಕನ್ನಡ 30ಕ್ಕೆ 30, ಇಂಗ್ಲೀಷ್ 30ಕ್ಕೆ 29, ಸಮಾಜಶಾಸ್ತ್ರ 30ಕ್ಕೆ 30, ವಿಜ್ಞಾನ 30ಕ್ಕೆ 30.. ಆದರೆ, ಹಿಂದೀಲಿ 30ಕ್ಕೆ ಬರೀ 06 ತೆಗೆದಿದ್ದು ಯಾಕೆ ಅಂತಾ ಸಹಪಾಟಿಗಳೆಲ್ಲಾ ಆಶ್ಚರ್ಯಚಕಿತರಾದರು. ಅಷ್ಟರಲ್ಲಿ ಅವನ ಕ್ಲಾಸ್ ಟೀಚರ್ ಗಂಗಾಂಬಿಕ ಮೇಡಮ್ ಗೆ ಅವನ ಸಮಸ್ಯೆ ಅರ್ಥ ಆಗಿತ್ತು.

"ನಿಮ್ ಊರಲ್ಲಿ 8ನೇ ಕ್ಲಾಸಿಂದ ಹಿಂದಿ ಇರಬಹುದು. ಆದರೆ ಇಲ್ಲಿ 5ನೇ ಕ್ಲಾಸಿಂದ ಇದೆ. ಈಗಾಗಲೇ ಒಂದೂವರೆ ವರ್ಷ ಮುಗಿದಿದೆ. ಎರಡು ವರ್ಷಗಳಲ್ಲಿ ಅರ್ಧವಾರ್ಷಿಕ ಬರುತ್ತೆ. ಅವಾಗ ಏನ್ ಮಾಡ್ತೀಯಾ? ಯಾವುದಾದರೂ ಒಳ್ಳೆ ಹಿಂದಿ ಟ್ಯೂಷನ್ ಗೆ ಸೇರಿಕೋ ಅಂದವರೇ ಪುಷ್ಪಲತಾ ಅಂತಾ ಕೂಗಿ, ಇವನಿಗೆ ನೀನು ಹೋಗೋ ಟ್ಯೂಷನ್ ತೋರಿಸು ಅಂದಾಗ, ಆ ಕಡೆಯಿಂದ ಹ್ಞೂಂ ಅಂದಿದ್ದು ಕೇಳಿಸಿತು. ಯಾರು ಅಂತಾ ನೋಡಿದಾಗ!! ಅವಳೇ!!!!!!! ತುಂಬಾ ಭಯ ಮತ್ತು ಆಶ್ಚರ್ಯ ಆಯಿತು. ಅವಳು ಅವನನ್ನು ನೋಡಿ ಸ್ಮೈಲ್ ಕೊಟ್ಟಾಗ, ಇವನು ಈ ಕಡೆ ತಿರುಗಿದ.

ಅವಳು ಪುಷ್ಪಲತಾ ಅಂತಾ ಇವನ ಕ್ಲಾಸಿನವಳೇ.. ತುಂಬಾ ಸುಂದರವಾಗಿ ಇದ್ದಳು. ಗುಂಡು ಮುಖ, ಬಿಳುಪು ಹಲ್ಲುಗಳು, ಅವಳು ಹಾಕ್ಕೊಂಡು ಬರ್ತಿದ್ದ ರೇಷ್ಮೆ ಲಂಗಕ್ಕೂ ಅವಳಿಗೂ.. ಅಬ್ಬಾ ಎಂಥವನೇ ಆದರೂ ಎರೆಡೆರೆಡು ಬಾರಿ ನೋಡಬೇಕಾಗಿತ್ತು. ಅದಕ್ಕಿಂತ ಅವಳ ನಗುವೂ.. ಎಲ್ಲಾ ಫಸ್ಟ್ ಕ್ಲಾಸ್.. ನೆನ್ನೆ ಇವಳ ಜೊತೆ ತಾನೆ ಸ್ಕೂಲ್ ಹಿಂದೆ ಕುಂಟ ಬಿಲ್ಲೆ ಆಡಿದ್ದು ಅಂತಾ ಇವನಿಗೆ ನೆನಪಾಯಿತು. ಅಷ್ಟರಲ್ಲಿ ಸ್ಕೂಲ್ ಬಿಡ್ತು..."ಮೇಡಮ್!! ಇವನು ಪ್ರಜ್ವಲ್ ಅಂತಾ. ಕುಣಿಗಲ್ ನಿಂದ ಬಂದಿದಾನೆ. ನನ್ನ ಕ್ಲಾಸ್ ಮೇಟ್. ಇವನ ಊರಲ್ಲಿ ಹಿಂದಿ 8ನೇ ಕ್ಲಾಸಿಂದ ಅಂತೆ, ಗಂಗಾಂಬಿಕ ಮೇಡಮ್ ನಿಮ್ಮಲ್ಲಿ ಟ್ಯೂಷನ್ ಗೆ ಸೇರಿಸು ಅಂದರು.." ಅವನು ಆ ಹಿಂದಿ ಟ್ಯೂಷನ್ ನ ಮೇಡಮ್ ನ ನೋಡೋದು ಬಿಟ್ಟು ಇವಳನ್ನೇ ನೋಡ್ತಾ ಇದ್ದ. ಎಷ್ಟು ಚನ್ನಾಗಿ, ಪಟ-ಪಟನೆ ಮುತ್ತು ಉದುರಿದ ಹಾಗೆ ಮಾತಾಡ್ತಾಳಲ್ಲಾ ಅನ್ನಿಸಿತು.

ಎಲ್ಲರ ಹಾಗೆಯೇ ಇವರು ಇವನ ಪೂರ್ವಾಪರಗಳನ್ನೆಲ್ಲಾ ವಿಚಾರಿಸಿದರು. ನೀನು ಸುಬೋಧಕ್ಕೆ ಸೇರಿಕೋ ಅಂತಾ ಹೇಳಿ ಒಂದು ಕಡೆ ಜಾಗ ತೋರಿಸಿದರು. ಆದರೆ, ಅವಳು ಹಿಂದಿ ಕ್ಲಾಸಿನ ಬೇರೇ ರೂಮಿಗೆ ಹೋದಳು. ಬರೀ ಹಳ್ಳೀಲೇ ಇದ್ದು ಓದ್ಕೊಂಡು ಬಂದಿದ್ದವನಿಗೂ, ಈ ಸಿಟಿನಲ್ಲಿ ಹೊಸದಾಗಿ ಬಂದಿದ್ದಕ್ಕೂ, ಇವನ ಜೊತೆ ಇರೋ ಮುಖಗಳು ಹೊಸದಾಗಿದ್ದಕ್ಕೂ ಇವನಿಗೆ ಬಿಲದಲ್ಲಿ ಸಿಕ್ಕಿರೋ ಇಲಿ ಮರಿ ಥರಾ ಆಗಿತ್ತು.

ಸ್ವಲ್ಪ ಹೊತ್ತಾದ ಮೇಲೆ, ಅವಳು ಕ್ಲಾಸು ಬಿಟ್ಟಿತು. ಅವಳು ಇವನ ಮುಂದೆ ಹಾದು ಹೋದಳು. ಇವನನ್ನ ನೋಡಲೇ ಇಲ್ಲಾ. ಹಾಗೆಯೇ ಹೊರಟು ಹೋದಳು. ಆಗಲೇ ಇವನಿಗೆ ದಿಗಿಲಾಗಿದ್ದು! ಅದು ಅವನಿಗೆ ಹೊಸ ಊರು. ಬಂದ ದಾರಿಯನ್ನು ಸರಿಯಾಗಿ ನೋಡಿರದೇ ಇದ್ದುದರಿಂದ ಮತ್ತೆ ಮನೆಗೆ ಸೇರುವುದು ಹೇಗೆ? ಹೋಗಲಿ, ಅವನ ಮನೆ ಇರೋ ಬೀದಿಯ ಹೆಸರು ಗೊತ್ತಿರಲಿಲ್ಲ. ಅವಳಿಗೆ ನನ್ನ ಬಿಟ್ಟು ಹೋಗಬೇಡ ಅನ್ನೋವಷ್ಟರಲ್ಲಿ ಅವಳು ತನ್ನ ಗೆಳತಿಯರ ಜೊತೆ ಮಾತಾಡುತ್ತಾ ಹೊರಟು ಹೋಗಿದ್ದು ಕಾಣಿಸಿತು. ಸುಮಾರು ಅರ್ಧ ಗಂಟೆ ಆದ ಮೇಲೆ ಇವನ ಕ್ಲಾಸು ಬಿಟ್ಟಿತು. ಕ್ಲಾಸಿಂದ ಹೊರಗೆ ಓಡಿ ಬಂದ ಕೂಡಲೇ, ಆ ಎರಡು ಕಣ್ಣುಗಳು ಹುಡುಕಿದ್ದು ಅಂಥವೇ ಎರಡು ಕಣ್ಣುಗಳನ್ನು....


(ಸಶೇಷ)

ಮುಂದಿನ ಪೋಸ್ಟ್.. ಕನ್ನಡ ಶಾಯರಿ.. ಜೋಕ್ಸು..ಹಾಳು ಮೂಳು.. ಭಾಗ-2

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

12 comments:

shivaprakash said...

continue maadi....

Anuradha Bhat said...

channagide kathe.

hindi irodakke ivella problem.
"rashtra bhasha" anta SULLU haeli hindi kalisodhanna nillisbeku modhalu.
http://en.wikipedia.org/wiki/Indian_languages#Official_languages

kathe munduvaresi....

Guest said...

ಶಿವಶಂಕರ್...

ಕಥೆ ಚೆನ್ನಾಗಿ ಬರುತ್ತಿದೆ ...
ಕುತೂಹಲ ಉಳಿಸಿಕೊಂಡಿದೆ...
ಮುಂದೇನಾಯಿತು... ಬರೆಯಿರಿ....

Guest said...

ಶಿವಶಂಕರ್...

ಕಥೆ ಚೆನ್ನಾಗಿ ಬರುತ್ತಿದೆ ...
ಕುತೂಹಲ ಉಳಿಸಿಕೊಂಡಿದೆ...
ಮುಂದೇನಾಯಿತು... ಬರೆಯಿರಿ....

www.ittigecement.blogspot.com

Guest said...

ಶಿವಶಂಕರ್ ಸರ್,

ಪ್ರಜ್ವಲನ ಹಿಂದಿ ಕಲಿಯುವ ಕಥೆ ಕುತೂಹಲಕಾರಿಯಾಗಿದೆ..ಮುಂದಿನದನ್ನು ಓದುವುದಕ್ಕೆ ಕಾಯುತ್ತಿದ್ದೆನೆ..ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ...
ಧನ್ಯವಾದಗಳು.

guest said...

ವಿ. ಶೋಭ ಶೆಟ್ಟಿ:
ಹಾಯ್
ಅಲ್ಲ ಕಣ್ರೀ ನಿಮ್ಮ ಸ್ಟೋರಿ ಯನ್ನು ಏಕೆ ಪುಉರ್ತಿ ಕಳುಹಿಸಿಲ್ಲ . ಇದು ಸರಿಯಿಲ್ಲ . ನಾನು ಎಲ್ಲೋ ಪೂರ್ತಿ ಸ್ಟೋರಿ ಇದೆ ಎಂದು ಓದುತ್ತ ಇದ್ದೇನೆ , ಅಲ್ಲಿ ನೋಡುದ್ರೆ ಸಂಷೆಷ ಎಂದು ಕೊಟ್ಟಿದ್ದಿರಾ ? ಎಷ್ಟು ಕೋಪ ಬಂತು ಎಂದರೆ , ಸರ್ ನಿಮ್ಮ ಸ್ಟೋರಿ ಯ ಮುಂದಿನ ಕಂತು ಯಾವಾಗ ಸರ್

shivagadag.blogspot.com said...

Shivaprakash,
Anuradha Bhat madamge,
Prakash Hegde sir..
Shobha..

ellarigu nanna Dhanyavadagalu..

Anuradha madam eliddannu yochne madbekadde..

Shobha avare,, nimge kopa bandide antha gottu.. Guarantee nimmannu kaayisolla..'

ivaga ondu post ada mele next post nalli continue madthini.. kannada shayari-jokes ge bahala demand aagide..

nanna blog na linkisikondorige thumba dhanyavadagalu..
thanks again to all..

with regards,

shivashankara vishnu yalavathi
gadag

SONU said...

Dear friend...
Please www.incomefrominternet.blogspot.com ge hogi nodi,nimagagi ondo olle kelasa kaayuttide

SONU said...

Dear friend...
Please www.incomefrominternet-subhash.blogspot.com ge hogi nodi,nimagagi ondo olle kelasa kaayuttide

Guest said...

chenagide blog

Guest said...

kathe chennagidhe ...mundu varsi swamy bega...bega mugsi adre kuthoohaala irale beku kathe nali....

Guest said...

kathe chennagidhe mundhuvarsi swamy....kathe bega mugsi aadre kuthoohaala mathra irale beku....all the best