ಖಾಯಂ ಓದುಗರು..(ನೀವೂ ಸೇರಬಹುದು)

15 May 2009

ಪ್ರೀತೀನೇ ಬೇರೆ,, ಪ್ರೇಮಾನೆ ಬೇರೆ....

ಹೌದು,,, ಪ್ರೀತೀನೇ ಬೇರೆ.. ಪ್ರೇಮಾನೇ ಬೇರೆ..

ಯಾಕೆ ಹೇಳಿ?

ಯಾಕೆಂದರೆ, ಪ್ರೀತಿ ಪಕ್ಕದ ಮನೆಯವಳು ಮತ್ತು ಪ್ರೇಮಾ ಹಿಂದಿನ ಮನೆಯವಳು!!!

(ಸ್ನೇಹಿತರೇ, ಎನ್ ಇವ್ನು ತಮಾಷೆ ಮಾಡ್ತಿದಾನೆ ಅನ್ಕೊಂಡ್ರಾ.. ಇದು ನನ್ನ ಸ್ನೇಹಿತ ಸುದರ್ಶನ್(ಶಿರಾ)ಮತ್ತು ರಾಘು (ಇವನೂ ಶಿರಾದವನೇ) ಕಳಿಸಿದ ಎಸ್ಸೆಮ್ಮೆಸ್ಸು..)

ಇದು ಒಂದು ಎಸ್ಸೆಮ್ಮೆಸ್ಸು ಅಂತಾ ಓದಿ ಸುಮ್ನೆ ಇರೋಕೆ ನಂಗೆ ಆಗಲಿಲ್ಲ. ನನ್ನ ಸ್ನೇಹಿತರಿಗೆ ಗೊತ್ತು ಇವ್ನು ಸುಮ್ನೆ ಇರೋನಲ್ಲ ಅಂತಾ. ಈ ಬಗ್ಗೆ ನನಗೆ ಯೋಚನೆ ಶುರು ಆಗೋಯ್ತು. ಪ್ರೀತಿ ಮತ್ತು ಪ್ರೇಮಾ ಇಬ್ಬರೂ ಛೆ!ಛೆ! ಎರಡೂ ಬೇರೆ ಬೇರೆ ಅಂತಾ..

ಅದೇ ಟೈಮಿಗೆ ಲವ್ ಫೇಲ್ಯೂರ್ ಬೇರೆ ಆಗೋಯ್ತು ಕಣ್ರಿ.. ಇನ್ನೇನು ಬೇಕು ಹೇಳಿ ಕವನಗಳು ಹೊರಬರಲು? ಲವ್ ಫೇಲ್ಯೂರ್ ಆದವನಿಗೆ ಆಟೋಮ್ಯಾಟಿಕ್ ಆಗಿ ಕವಿತ್ವ ಬರದೇ ಇದ್ರೆ, ಅವನು ನಿಜವಾದ ಪ್ರೇಮಿ ಅಲ್ಲ. ಇದು ಅವನಿಗೆ ದೇವರು ಕೊಟ್ಟಿರುವ ವರ(ಕೇಳುವವರಿಗೆ ಶಾಪ). ನನ್ನ ತಲೆ ಹೊಕ್ಕಿದ ಹುಳ ಸುಮ್ನೆ ಇರದೆ, ಈ ಕವನಗಳನ್ನೂ ಕರಕೊಂಡು ಬಂತು...

ಇವನು ಏನೇನೋ ಬರೀತಾನೆ. ಯಾಕ್ ಓದ್ಬೇಕೂ ಅನ್ಕೊಳ್ಳಿ. ಈ ಮುಂಡೇದಕ್ಕೆ ಏನೂ ಆಗೋದಿಲ್ಲ. ಈ ಜೀವ ಯಾವುದಕ್ಕೂ ಜಗ್ಗೋದಿಲ್ಲ.


1) ಪ್ರೀತಿ-ಪ್ರೇಮ

ಪ್ರೀತಿಯೇ ಬೇರೆ
ಪ್ರೇಮವೇ ಬೇರೆ
ಎಂದು ನಾ ಅಂದಾಗ,
ಇಲ್ಲ..ಇಲ್ಲ.. ಇದು ತಪ್ಪು
ಎರಡೂ ಒಂದೇ ಎಂದರೆಲ್ಲರೂ
ಒಕ್ಕೊರಲಲ್ಲಿ!!!
ನಾ
ನನ್ನ
ಮಗಳನ್ನು
ಪ್ರೀತಿಸುತ್ತಿದ್ದೇನೆ,
ಪ್ರೇಮಿಸುತ್ತಿಲ್ಲ ಎಂದಾಗ,
ಬೆಪ್ಪಾಗಿ ನಿಂತರು
ಸತ್ಯದ ಅರಿವಾಗಿ...
2) ಅಲ್ಲ (ದೇವರ ಹೆಸರಲ್ಲ)

ಪ್ರೀತಿ
ಪ್ರೇಮವಲ್ಲ
ಆದರೆ,
ಪ್ರೇಮದಲ್ಲಿರುವುದೂ ಪ್ರೀತಿಯೇ..

ದೇವರ ಬಳಿಯಿರುವ
ಭಕ್ತನಂತೆ...!!!
3) ಹೆಣ್ಣು

ಹೆಣ್ಣೇ ಶತ್ರು, ಹೆಣ್ಣೇ ವೈರಿ
ಪುರುಷನಿಗೆ
ಇದ ತಿಳಿದೂ
ಮದುವೆಯಾದವ ಮೂರ್ಖನು....!!!!

ಎಂಬುವವನ ಮಾತು ನಿಜ.
ಅಲ್ಲದಿದ್ದರೆ,
ಇಂತಹ ಮೂರ್ಖನಿಗೆ
ಜನ್ಮವನ್ನು
ಯಾವ ತಂದೆ ಕೊಡುತ್ತಿದ್ದರು?????4) ಅತಿ

ಅತಿಯಾಗಿ ಪ್ರೀತಿಸಬೇಕು
ನೀ ನನ್ನ

ಅತಿಯಾಗಿ ಪ್ರೇಮಿಸಬೇಕು
ನಾ ನಿನ್ನ

ಅತಿಯಾಗಿ ಕಾಮಿಸಬೇಕು
ನೀ ನನ್ನ
ನಾ ನಿನ್ನ..

ಹೇಗೆಂದರೆ,
ಕೊಚ್ಚೆಯಲ್ಲಿ ಬಿದ್ದರೂ..
ಕೊಳಕಾಗದ ಸೂರ್ಯನ
ಕಿರಣದಂತೆ...


ಸ್ನೇಹಿತರೆ, ಈ ಯಳವತ್ತಿ ಕುಯ್ಯುವುದನ್ನು ಇಲ್ಲಿ ಸಹ ಮುಂದುವರಿಸ್ತಾನೆ,.
ಕೆಲವರನ್ನು ನೋಡ್ತೀವಿ, ಅವರು ಯಾವ ತರಹ ಇರ್ತಾರೆ ಅಂದ್ರೆ, ಅವರು ಜೀವನದಲ್ಲಿ ಯಾರನ್ನೂ ಲವ್ ಮಾಡೋದೇ ಇಲ್ಲ. ಅಪ್ಪ ಅಮ್ಮ ತೋರಿಸಿದವರನ್ನು ಮದುವೆಯಾಗಿಬಿಡ್ತಾರೆ. ಪ್ರೀತಿ ಬಗ್ಗೆ ಇವರ ಬಳಿ ಮಾತಾದುವುದುದಕ್ಕೂ ಇವರು ಮಹಾನ್ ಪಾಪ ಅಂದುಕೊಳ್ತಾರೆ. ಆದರೆ, ಅವರ ಮನಸ್ಸಿನಲ್ಲೂ ಒಂದು ಮೂಲೆಯಲ್ಲಿ ಪುಟ್ಟ ಆಸೆ ಇರುತ್ತೆ.. ಯಾರನ್ನು ಪ್ರೀತಿ ಮಾಡದೇ ಇರೋದಕ್ಕೆ ಪ್ರೇಮ ರಾಹಿತ್ಯ ಅಂತಾ ಒಂದು ಚಂದದ ಹೆಸರನ್ನು ಇಟ್ಟುಬಿಟ್ಟಿದ್ದಾರೆ.. ಅದನ್ನು ನಾನು ಮುರಿತಾ ಇದೀನಿ...


5) ಪ್ರೇಮ-ರಾಹಿತ್ಯ

ಪ್ರೇಮ ರಾಹಿತ್ಯ
ಎಂದರೆ,
ಪ್ರೇಮವು ಇಲ್ಲವೆಂದಲ್ಲ/
ಪ್ರೇಮವನ್ನು ಬಿಡುವುದಲ್ಲ,

ಅದು ಕೇವಲ
ಪ್ರೇಮವು ಇಲ್ಲವೆಂಬ
ಸುಳ್ಳಿನ ನಾಟಕ!

ಪ್ರೇಮದ ನಿರೀಕ್ಷೆಯ ಆರಾಧನೆ ಮಾತ್ರ.......


ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ
ದಿನಾಂಕ: 19-06-2005

No comments: