ಖಾಯಂ ಓದುಗರು..(ನೀವೂ ಸೇರಬಹುದು)

19 May 2009

ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-1


ನನಗೆ ಪುಸ್ತಕ ಓದೋದರ ಜೊತೆಗೆ, ನನ್ನ ಕೈಗೆ ಮೊಬೈಲ್ ಬಂದ ಮೇಲೆ ಎಸ್ಸೆಮ್ಮೆಸ್ಸು ಸಂಗ್ರಹ ಮಾಡೋದು ಬೇರೇ ಕೆಟ್ಟ ಅಭ್ಯಾಸ ಬೇರೇ ಶುರು ಆಗೋಯ್ತು... ಅದರಲ್ಲಿ ಬಂದಿರೋ ಕನ್ನಡ ಶಾಯರಿಗಳನ್ನು ನಿಮ್ಮ ಮುಂದೆ ಇಡ್ತಾ ಇದೀನಿ...

ಇದನ್ನು ಕಳಿಸಿದ್ದು:-

1) ಅವನು S.S.L.C. ಯಲ್ಲಿ
Rank ತಗೊಂಡ
ಕಾರಣ, ಅವನು
ಪ್ರತಿಭಾವಂತ //ವ್ಹಾ ವ್ಹಾ//

ಅವನು S.S.L.C. ಯಲ್ಲಿ
Rank ತಗೊಂಡ
ಕಾರಣ, ಅವನು
ಪ್ರತಿಭಾವಂತ //ವ್ಹಾ ವ್ಹಾ//
ಅವನು P.U.C. ನಲ್ಲಿ
ಫೇಲ್ ಆದ
ಕಾರಣ,
ಅವಳು ಯಾರೋ
ಪ್ರತಿಭಾ ಅಂತಾ!!!ಇದನ್ನು ಕಳಿಸಿದ್ದು:-

2) ಅವನು ಹೇಳಿದ್ದು ಇಷ್ಟೇ
I LOVE U ಗಾಯಿತ್ರಿ //ವ್ಹಾ ವ್ಹಾ//

ಅವನು ಹೇಳಿದ್ದು
ಇಷ್ಟೇ,
I LOVE YOU ಗಾಯಿತ್ರಿ..

ಆಗಿದ್ದು ಇಷ್ಟೇ..
ಮುಖದ ಮೇಲೆ ಗಾಯ THREE!!


ಇದನ್ನು ಕಳಿಸಿದ್ದು:- ನನ್ನ ಪ್ರೀತಿಯ ಗೆಳತಿ ಮಮ್ಮಿ (ಮಂಜುಳಾ)

3) ಪ್ರೀತಿಸುವ ಮೊದಲು
ಪ್ರೀತಿಯ ಆಳ ನೋಡು.. //ವ್ಹಾ ವ್ಹಾ//

ಪ್ರೀತಿಸುವ ಮೊದಲು ಪ್ರೀತಿಯ
ಆಳ ನೋಡು..

ನಂಬಿಕೆ ಬರದಿದ್ರೆ,
ಮುಂಗಾರು ಮಳೆ FILM ನೋಡು.
.


ಇದನ್ನು ಕಳಿಸಿದ್ದು ನನ್ನ ಗೆಳತಿ ಅನಿತಾ (ಅರಸೀಕೆರೆ)

4) ನೀನು ನನ್ನ ಮನಸು ಕದ್ದೆ, ನಾನು ಸುಮ್ಮನಿದ್ದೆ
ನನ್ನ ಕನಸು ಕದ್ದೆ, ನಾನು ಸುಮ್ಮನಿದ್ದೆ
ನನ್ನ ನಿದ್ದೆ ಕದ್ದೆ, ಆಗಲೂ ನಾನು ಸುಮ್ಮನಿದ್ದೆ

ನೀನು ನನ್ನ ನಾಯಿಯ ಪ್ಲೇಟ್ ಕದ್ದೆ,
ನಾನು ಸುಮ್ಮನಿದ್ದರೂ ನಾಯಿ ಸುಮ್ಮನೆ ಬಿಡುವುದಿಲ್ಲ..

ಮರ್ಯಾದೆಯಿಂದ ತಂಕೊಡು...!!!ಇದನ್ನು ಕಳಿಸಿದ್ದು:- ಹೇಮಂತ್ (ತುಮಕೂರು ಕ್ಯಾತ್ಸಂದ್ರ)

5) ನುಡಿದರೆ,
ಮುತ್ತಿನ
ಹಾರದಂತಿರಬೇಕು //ವ್ಹಾ ವ್ಹಾ//

ನುಡಿದರೆ,
ಮುತ್ತಿನ
ಹಾರದಂತಿರಬೇಕು.

ಕುಡಿದರೆ,
ಮನೆಯವರಿಗೆ
ಅನುಮಾನ ಬಾರದಂತಿರಬೇಕು...


ಇದನ್ನು ಕಳಿಸಿದ್ದು:- ರಘು (ಶಿರಾ)

6) ಹೃದಯದ ಗಾಯಕ್ಕೆ
ಇಲ್ಲಾ
ಮುಲಾಮ್ //ವ್ಹಾ ವ್ಹಾ//

ಹೃದಯದ ಗಾಯಕ್ಕೆ
ಇಲ್ಲಾ ಮುಲಾಮ್....

ಅದಕ್ಕೆ
ಮದುವೆ ಆಗಲಿಲ್ಲಾ
'ಅಬ್ದುಲ್ ಕಲಾಮ್'


ಇದನ್ನು ಕಳಿಸಿದ್ದು:- ನನ್ನ ಗೆಳತಿ ರೇಣು ಅಲಿಯಾಸ್ ನೇತ್ರಾವತಿ, ಚಿ.ನಾ. ಹಳ್ಳಿ, ಸಧ್ಯ ಧಾರವಾಡ

7) ಮುಂಗಾರು ಮಳೆ ಹಾಡು.. (ಹುಬ್ಬಳ್ಳಿ ಸ್ಟೈಲ್ ನಲ್ಲಿ)

ಅನ್ಸಕತ್ಯೆತಿ ಯಾಕ ಇವತ್ತ,
ನೀನಾ ನನ್ನಾಕಿ ಅಂತಾ
ಮಾಯದ ಲೋಕದಿಂದ
ನನ್ನ ಸಂಬಂಧ ಬಂದಾಕಿ ಅಂತಾ..
ಯವ್ವಾ ಯವ್ವಾ ಎಂತಾ ಛಲೋ ತ್ರಾಸ,,,ನನ್ನ ಹತ್ರ ಈ ಥರಾ ಇನ್ನೂ ಸಾಕಷ್ಟು ಎಸ್ಸೆಮ್ಮೆಸ್ಸು.. ಜೋಕ್ಸು.. ಸಾಂಗ್ಸು... ಶಾಯರಿ ಇವೆ..
ನಿಮಗೆ ಇಷ್ಟ ಆಯ್ತು ಅಂದರೆ, ಮತ್ತೆ ಭಾಗ-2 ನ್ನು ಬರೀತೀನಿ
ಕಾಮೆಂಟ್ ಬರೀರಿ ಅಂತಾ ನಾನು ಕೇಳೋಲ್ಲ,.

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ.

10 comments:

Nandu said...

Sooperagidhe sir, mundhuvaresi :)

shivaprakash said...

nice sms's.
go ahead for next part

Guest said...

kelavu chitragalU NANNANNU SElEDAVU

Guest said...

ಸರ್,

ಮೊಬೈಲಿನ sms ಜೋಕುಗಳು ಓದಿ ಸಕ್ಕತ್ ನಗು ಬಂತು. ಇಂಥವು ಇನ್ನಷ್ಟು ಹಾಕಿ...

guest said...

"ಕಸ್ತೂರಿ ಕನ್ನಡ":
ಗುರುವೇ...
ನಾನು balipashu.blogspot.com ನವನು
ನಿಮ್ಮ ಬ್ಲಾಗ್ ನೋಡಿದೆ ಅಲ್ಲಿ ಕಾಮೆಂಟ್ ಪೋಸ್ಟ್ ಮಾಡಕ್ಕೆ ಆಗ್ತಿಲ್ಲ
ನಿಮ್ಮ ಹನಿಗವನಗಳು ಸೂಪರ್

guest said...

ವಿ. ಶೋಭ ಶೆಟ್ಟಿ:
ಅವನು ಹೇಳಿದ್ದು ಇಷ್ಟೇ
I LOVE U ಗಾಯಿತ್ರಿ //ವ್ಹಾ ವ್ಹಾ//

ಅವನು ಹೇಳಿದ್ದು
ಇಷ್ಟೇ,
I LOVE YOU ಗಾಯಿತ್ರಿ..

ಆಗಿದ್ದು ಇಷ್ಟೇ..
ಮುಖದ ಮೇಲೆ ಗಾಯ THREE!!

**********************
ಚೆನ್ನಾಗಿದೆ ನಿಮ್ಮ ಸ್ನೇಹಿತರ ಎಸ್ಎಂಎಸ್

shivagadag.blogspot.com said...

Nandu sir,
Prakash Hegde sir,
Shivu.. and shobha

ellarigu nanna dhanyavadagalu..

nimmannu nagisoke nanna bali saakastu SMS ive.. begane post madthini...

nimma preethi heege iirali,,

comment baredu prothsahisi..

inthi nimma pritiya,

shivagadag.blogspot.com
gadag

ಮನಮುಕ್ತಾ said...

wah..wah..!

ಮನಮುಕ್ತಾ said...
This comment has been removed by the author.
Sandeep.K.B said...

super