ಖಾಯಂ ಓದುಗರು..(ನೀವೂ ಸೇರಬಹುದು)

10 March 2009
ಈ ಕೊಟೇಶನ್ ಗಳನ್ನು ನಾನು ವಿದ್ಯಾರ್ಥಿಯಾಗಿದ್ದಾಗ
ನಾನು ಸಂಗ್ರಹ ಮಾಡಿದ್ದು... ಕೆಲವರು ಹಾರೈಸಿ ಬರೆದಿದ್ದು..
ನಿಮಗೆ ಇಷ್ಟವಾದರೆ ಓ.ಕೆ...
ನಿಮ್ಮಲ್ಲೂ ಯಾವುದಾದರೂ ಕೊಟೇಶನ್ ಗಳಿದ್ದರೆ ದಯವಿಟ್ಟು ಕಳಿಸಿ,,

1) ನಾ ಇದ್ದೆ ಶಿಲಯಂತೆ,
ನೀ ಬಂದೆ ಅಲೆಯಂತೆ
ನಮ್ಮಿಬ್ಬರ ಸ್ನೇಹ ಮಾತು ಸಂಗಮದಲ್ಲಿ
ನೀ ಹೋದೆ ಎಂದಿನಂತೆ..
ನನಗಾಯಿತು ಎಲ್ಲಿಲ್ಲದ ಚಿಂತೆ..


2) ದುಂಡು ಮಲ್ಲಿಗೆಯ, ಮುದ್ದು ಮುಖದ ರೂಪ..
ನಿನಗ್ಯಾಕೆ ನನ್ನ ಕಂಡಾಗಲೆಲ್ಲಾ ಎಲ್ಲಿಲ್ಲದ ಕೋಪ?
ಅಯ್ಯೋ ಮಂಕೆ!
ನಾ ನಿನ್ನ ಪ್ರೀತಿಸುತ್ತಿರುವುದು ನಿನಗೆ ಗೊತ್ತೆ ಇಲ್ಲ ಪಾಪ..
ಇದನ್ನು ನಾ ಹೇಳಲಾರದೇ ಪಡುತ್ತಿರುವೆ ಪಶ್ಚಾತ್ತಾಪ.

3) ಪ್ರೀತಿಯ ಬಂಧನ
ನಂದನವನ
ಮಾತು ಬಾರದ ನೀನು
ಮಾತನಾಡುವ ನಾನು
ಎಂತಹ ಅಂತರ ನನ್ನ-ನಿನ್ನಲಿ..

4) ಬಾಳೊಂದು ನಂದನ
ಅನುರಾಗ ಬಂಧನ
ವಿದ್ಯಾರ್ಥಿ ಜೀವನ
ಇನ್ನಿಲ್ಲ ಬಹುದಿನ
ಬೇಗ ತಿಳಿಸು ನಿನ್ನ
ಮದುವೆಯ ದಿನ..

5) (ನನ್ನ ಗೆಳತಿ ಬರೆದುಕೊಟ್ಟಿದ್ದು)
ನನ್ನ ಜೀವನದಲ್ಲಿ ಮರೆಯಲಾಗದ ಒಂದು ನೆನಪು..
ಅದು ನನ್ನ ಹೃದಯದಲ್ಲಿ ಎಂದೆಂದಿಗೂ
ಹಚ್ಚ ಹಸಿರಿನಂತೆ ಕಂಗೊಳಿಸುತ್ತಿದೆ....

6) (ನನ್ನ ಲಂಗ ದೋಸ್ತ್ ನೇತ್ರಾ ಬರೆದುಕೊಟ್ಟಿದ್ದು..)

ಅ)
ಏ ಹುಡುಗ
ಬೆಳ್ಳಿ ಕಡಗ
ಮಾತು ಬೆಳ್ಳಿ
ಮೌನ ಬಂಗಾರ
ಆದರೆ
ನಿನ್ನ ವಿಷಯದಲ್ಲಿ
ಮಾತು ಬಂಗಾರ,
ಮೌನ ಬೆಳ್ಳಿ.....

ಆ)
ಓ ನನ್ನ ಪ್ರೀತಿಯ ಗೆಳೆಯ
ಯಳವತ್ತಿ
ಎಂದು ಬಂದೆ ನೀ ನನ್ನ ಬಾಳಿನಲ್ಲಿ
ಅಣ್ಣನಿಗಿಂತ ಅತಿಯಾದ ಪ್ರೀತಿ-ವಾತ್ಸಲ್ಯ
ತೋರಿದೆ ನೀ..
ಸ್ನೇಹಿತರಲ್ಲಿ ಅತಿ ಮೆಚ್ಚಿನ ಸ್ನೇಹಿತನಾದೆ ನೀ,
ಹೇಗೆ ಮರೆಯಲಿ ನಾ? ನಿನ್ನ
ಸ್ನೇಹದ ಸವಿ ಅಮೃತವನ್ನು..
ಗೆಳೆಯ ನೀ ನನ್ನ ಬಾಳಿನಲ್ಲಿ
ಸದಾ ಮಿನುಗುವ ನಕ್ಷತ್ರ..
ಓ ಗೆಳೆಯ..
ನೀ ಮರೆತೇನೆಂದರೂ ನಾ
ಮರೆಯಲಿ ಹ್ಯಾಂಗಾ....?????

1 comment:

ಸಿಮೆಂಟು ಮರಳಿನ ಮಧ್ಯೆ said...

ಶಿವ ಶಂಕರ್..

ಎಲ್ಲ ವಾಕ್ಯಗಳೂ ...

ಪ್ರಾಸಬದ್ಧವಾಗಿ...
ಅರ್ಥ ಪೂರ್ಣವಾಗಿವೆ...

ನಿಮ್ಮ ಸಂಗ್ರಹಕ್ಕೆ ಅಭಿನಂದನೆಗಳು...