ಖಾಯಂ ಓದುಗರು..(ನೀವೂ ಸೇರಬಹುದು)

09 March 2009

ಆಂಟಿಗೊಂದು ಪತ್ರ...


ಅವಾಗ ನಾನು ಸಣ್ಣವನಿದ್ದೆ..ಸುಮಾರು 7-8 ವರ್ಷ ವಯಸ್ಸು ಇರಬಹುದು..
ಶಾಲೆಯಲ್ಲಿ ಇರುವವರಿಗಿಂತ ಚೆನ್ನಾಗಿ ಓದ್ತಾ ಇದ್ದೆ.. ಸೆಕೆಟ್ರಿ ಮಗ ಅನ್ನೋ ಪಟ್ಟ ಇದ್ದಿದ್ದರಿಂದ
ಚೆನ್ನಾಗೇ ಓದಬೇಕಾಗಿತ್ತು..
ಅದು ಸಣ್ಣ ಹಳ್ಳಿ, ನಾನು ತುಂಬಾ ಚೂಟಿಯಾಗಿದ್ದೆ..

ನಾವು ಊರ ಹೊರಗಿನ ಮನೆಯನ್ನು ಖಾಲಿ ಮಾಡಿ, ಊರಿನ ಮಧ್ಯದಲ್ಲಿರುವ
ಮನೆಗೆ ಬಾಡಿಗೆಗೆ ಬಂದ್ವಿ.. ಅಲ್ಲಿ ವಾತಾವರಣ ಚನ್ನಾಗಿ ಇತ್ತು, ಆಡೋಕೆ ಹೊಸ ಫ್ರೆಂಡ್ಸ್, ಕ್ಲಾಸ್ ಮೇಟ್ಸ್ ಸಿಕ್ರು..

ಸ್ವಲ್ಪ ದಿನಗಳ ನಂತರ, ನನಗೆ ಭೇಟಿಯಾಗಿದ್ದು, ನಮ್ಮ ಮನೆ ಹತ್ರ ಇದ್ದ ಹೆಸರು ಮರೆತುಹೋದ ಮುಖದ ನೆನಪಿಲ್ಲದ ಆ ಆಂಟಿ..

ಅವರು ನೋಡಲು ತುಂಬಾ ಚೆನ್ನಾಗಿ ಇದ್ರು (ಮದುವೆಯಾಗಿ ಸುಮಾರು ಎರಡು ವರ್ಷ ಆಗಿತ್ತು ಅನ್ಸುತ್ತೆ)..
ಅವರ ಮನೆಯಲ್ಲಿ ಯಾರೂ ಇರುತ್ತಿರಲಿಲ್ಲ.. ಆಂಕಲ್ ಬೆಳಿಗ್ಗೆ ಹೋದರೆ ರಾತ್ರೀನೆ ಮನೆಗೆ ಬರ್ತಿದ್ರು.. ನಾನು ಆ ಆಂಕಲನ್ನು ಯಾವಾಗೋ ಒಮ್ಮೆ ಮಾತ್ರ ನೋಡೋಕೆ ಸಿಗ್ತಾ ಇರ್ತಿದ್ರು.. ತುಂಬಾ ಸಿಡುಕಿ.. ನನ್ನನ್ನು ಮಾತಾಡಿಸ್ತಾ ಇರ್ಲಿಲ್ಲ.. (ಆಂಕಲ್ ಮತ್ತು ಆಂಟಿ ಇಬ್ಬರೂ ಮಾತಾಡಿದ್ದನ್ನು ನಾನು ನೋಡಿಯೇ ಇರಲಿಲ್ಲ..

ಆಂಕಲ್ ಇಲ್ಲದಾಗ ಆಂಟಿಯು ನನ್ನನ್ನು ಕರೆದು, ಅವಾಗವಾಗ ಅಂಗಡಿಯಿಂದ ಮನೆಗೆ ಬೇಕಾದ ಚಿಕ್ಕ ಪುಟ್ಟ ದಿನಸಿಗಳನ್ನು ತರಿಸುತ್ತಿದ್ದರು.

ತಂದ ಮೇಲೆ, ನನಗೆ ತಿನ್ನಲು ಏನಾದರೂ ಕುರುಕಲು ತಿಂಡಿ ಕೊಡುತ್ತಿದ್ದರು.
ಅವರು ನನಗೆ ತುಂಬಾ ಒಳ್ಳೆ ಆಂಟಿ ಆಗಿದ್ರು.

ಒಮ್ಮೊಮ್ಮೆ ಆಂಟಿ ಕರೆದು ನನ್ನಿಂದ ಅಂಗಡಿ ಚೀಟಿ ಬರೆಸುತ್ತಿದ್ದರು.
ನಾನು ಗುಂಡಾಗಿ ಅಕ್ಷರಗಳನ್ನು ಬರೆಯುತ್ತಿದಿದ್ದನ್ನು ನೋಡಿ ತುಂಬಾ ಸಂತೋಷ ಪಡ್ತಿದ್ರು.

ಸ್ವಲ್ಪ ದಿನ ಆದ ಮೇಲೆ, ನಾನು ಆಂಟಿಗೆ ಸ್ಸ್ನೇಹಿತನ ತರ ಆಗೋದೆ.. ಬೇಜಾರಾದಾಗ (ಹೊಟ್ಟೆ ಹಸಿದಾಗ) ಅವರ ಮನೆಗೆ ಹೋಗ್ತಾ ಇರ್ತಿದ್ದೆ.. ಹೋದಾಗೆಲ್ಲಾ ತಿನ್ನೋಕೆ ಸಿಗೋದು 100% ಗ್ಯಾರಂಟಿ ಆಗಿತ್ತು..

ಆಂಟಿಯು ಅಂಗಡಿಯಿಂದ ಒಂದೆರಡು ಇನ್ಲ್ಯಾಂಡ್ ಲೆಟರ್ ತರಿಸಿ. ಯಾರಿಗೋ ಪತ್ರ ಬರೆಸುತ್ತಿದ್ದರು..
(ಅವರಿಗೆ ಓದೋಕೆ ಮತ್ತು ಬರೆಯೋಕೆ ಬರ್ತಿದ್ರು ಸಹ)


ನನಗೆ ತಿನ್ನಲು ಏನಾದರೂ ಸಿಗುತ್ತೆ ಅಂತಾ ನಾನೂ ಖುಶೀಲೆ ಬರೀತಿದ್ದೆ..

ಆಂಟಿ ನನಗೆ ಹೇಳ್ತಾ ಇದ್ರು.. ನಾನು ಬರೀತಾ ಇದ್ದೆ..

ಆಂಟಿ ಹೇಳ್ತಾ ಹೇಳ್ತಾ ಒಮ್ಮೊಮ್ಮೆ ಸುಮ್ಮನಾಗಿಬಿಡ್ತಿದ್ರು.. ಅಳ್ತಾ ಇರ್ತಿದ್ರು..ಕೆಲವೊಮ್ಮೆ ಪತ್ರವನ್ನು ತೆಗೆದುಕೊಂಡು ಹರಿದು ಹಾಕಿ ಬಿಡ್ತಿದ್ರು..

ಅವರು ತುಂಬಾ ಭಾವುಕರಾಗಿ ಮಾತಾಡ್ತಾ ಇರ್ತಿದ್ರು..

ಅವರು ಮೌನವಾದಾಗ, ಅಳ್ತಾ ಇದ್ದಾಗ ನಾನು ಅಷ್ಟಕ್ಕೇ ಎದ್ದು ಮನೆಗೆ ಹೋಗಿ ಬಿಡುತ್ತಿದ್ದೆ..

ಅಕ್ಕಪಕ್ಕದವರ್ಯಾರೂ ಆಂಟಿಯ ಮನೆಗೆ ಬರುತ್ತಿರಲಿಲ್ಲ.. ನಾನೊಬ್ಬನು ಮಾತ್ರ ಅವರ ಮನೆಗೆ ಹೋಗ್ತಾ ಇರ್ತಿದ್ದೆ..

ಸ್ವಲ್ಪ ದಿನಗಳಾದ ಮೇಲೆ ಆಂಟಿಗೂ ಆಂಕಲ್ ಗೂ ತುಂಬಾ ಜಗಳ ಆಯ್ತು..

ಜಗಳ ಆಗಬೇಕಾದಾಗ ನಾನೊಬ್ಬನೇ ನಿಂತಿದ್ದೆ.. ಅವರು ಯಾವುದಕ್ಕೆ ಜಗಳ ಆಡ್ತಾ ಇದ್ರು ಅನ್ನೋದು ನನ್ನ ಕಲ್ಪನೆಗೆ ಸಿಗ್ತಿಲ್ಲಾ..

ಅಂಕಲ್ ಹೋದ ಮೇಲೆ, ಆಂಟಿ ತುಂಬಾ ಅಳ್ತಿದ್ರು...

ಅದೊಂದು ದಿನ ಆಂಟಿ ಅಂಕಲನ್ನು ಬಿಟ್ಟು ತವರುಮನೆಗೆ ಹೊರಟು ಹೋದರು.

ಅಪ್ಪಾಜಿಯು ಮನೆಯನ್ನು ಬೇರೆ ಬೀದಿಗೆ ಬದಲಾಯಿಸಿದರು..
ಹಳೇ ಮನೆ ಕಡೆ ಹೋಗಿ ಆಂಟಿ ಮನೆ ನೋಡಿದಾಗ, ಸದಾ ಬೀಗ ಹಾಕಿರ್ತಿತ್ತು...

ಒಂದೆರಡು ತಿಂಗಳು ಕಳೆದ ಮೇಲೆ ನಾನು ಹಳೇ ಮನೆ ಕಡೆ ಹೋಗಲೇ ಇಲ್ಲಾ.

ಅಪ್ಪಾಜಿಗೆ ಗೊತ್ತಿಲ್ಲದ ಊರಿಗೆ ವರ್ಗಾವಣೆ ಆಗಿದ್ದಕ್ಕೆ ನಾವೂ ಅವರನ್ನು ಹಿಂಬಾಲಿಸಬೇಕಾಯ್ತು..

ಅವತ್ತಿನಿಂದ ಅವತ್ತಿನವರೆಗೂ ನಾನು ಆಂಟಿಯನ್ನು ನೋಡಲೇ ಇಲ್ಲಾ..ಈಗಲೂ ನನ್ನ ಮನಸ್ಸಿನಲ್ಲಿ ಕಾಡುವ ಪ್ರಶ್ನೆಗಳೆಂದರೆ..

ಆಂಟಿ ಇವಾಗ ಎಲ್ಲಿದಾರೆ?
ಅವರು ನನ್ನಿಂದ ಯಾರಿಗೆ ಮತ್ತು ಯಾಕೆ ಪತ್ರ ಬರೆಸುತ್ತಿದ್ದರು? (ಅವರಿಗೆ ಓದೋಕೆ ಮತ್ತು ಬರೆಯೋಕೆ ಬರ್ತಿದ್ರು ಸಹ)

ಆ ಪತ್ರದಲ್ಲಿ ಏನಿರುತ್ತಿತ್ತು..?

(ಅವರ ಮನಸ್ಸಿನಲ್ಲಿ ಯಾರಿಗೋ ಮೀಸಲಾದ ಗುಪ್ತ ಪ್ರೇಮ ಅಡಗಿತ್ತಾ? ಅವರಿಗೆ ಮೋಸ ಮಾಡಿ ಬೇರೆ ಮದುವೆ ಮಾಡಿಕೊಂಡ ಅವರ ಗೆಳೆಯನ ಮೇಲೇನಾದರೂ ದ್ವೇಷ ಇತ್ತಾ? ಇಲ್ಲಾ, ಅಂಕಲ್ ಜೊತೆ ಹೇಳಲಾಗದ, ತಮ್ಮ ದುಃಖವನ್ನು ತನ್ನ ಗೆಳತಿಗೆ ಹೇಳಿಕೊಂಡ ದುಃಖದ ಪತ್ರವಾಗಿತ್ತಾ? ಇಲ್ಲಾ ಅಂಕಲ್ ಗೆ ವರದಕ್ಷಿಣೆ ತಂದುಕೊಡಿರೆಂದು, ತನ್ನನ್ನು ತವರಿಗೆ ಕರೆದುಕೊಂಡು ಹೋಗಿರೆಂದು ತವರು ಮನಗೆ ನಿವೇದಿಸಿದ ಪತ್ರವಾಗಿತ್ತಾ??? ಇಲ್ಲವೇ ಮಕ್ಕಳಿಲ್ಲವೆಂಬ ಕೊರಗು ಇತ್ತಾ??)

ಅಂಕಲ್ ಮತ್ತು ಆಂಟಿ ಜಗಳ ಆಡಲು ನಾನು ಕಾರಣನಾದೆನೇ?
ಹೀಗೀಗೆ.. ಏನೇನೋ ಪ್ರಶ್ನೆಗಳು ಕಾಡುತ್ತಿರುತ್ತವೆ..


ಇಲ್ಲಾ.. ಆಂಟಿ ತುಂಬಾ ಒಳ್ಳೆಯವರು..
ಅವರು ಯಾರಿಗೂ ಕೆಡಕುಂಟು ಮಾಡುವರಲ್ಲಾ..
ಯಾರ ಮನೆಗೂ ಪತ್ರ ಬರೆದು ಅವರ ಸಂಸಾರವನ್ನು ಹಾಳು ಮಾಡುವರಲ್ಲಾ...

ಅವರು ನನ್ನ ಆಂಟಿ.. ನನ್ನನ್ನು ಮಗನ ತರ ಟ್ರೀಟ್ ಮಾಡ್ತಾ ಇದ್ರು..
ಅವರು ಎಂದಿಗೂ ಕೆಟ್ಟ ಕೆಲಸವನ್ನು ಮಾಡುವರಲ್ಲಾ..

ನನ್ನ ಆಂಟಿಗೊಂದು ಪ್ರಾರ್ಥನೆ..

" ಆಂಟಿ.. ನಾನು ನಿಮ್ಮನ್ನು ತುಂಬಾ ನೆನಸ್ತೇನೆ.. ನೀವು ನನ್ನ ಮನಸ್ಸಿನಲ್ಲಿ ಬಂದಾಗ, ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳದೇ ಹೊರಟುಹೋಗಿ, ಪ್ರಶ್ನೆಗಳನ್ನು ಪ್ರಶ್ನೆಯಾಗಿಯೇ ಉಳಿಸಿ ಹೋಗಿಬಿಡ್ತೀರಿ.. ನಾನು ನಿಮ್ಮ ಬಗ್ಗೆ ಏನಾದರೂ ತಪ್ಪಾಗಿ ಮಾತಾಡಿದ್ರೆ ನನ್ನನ್ನು ಕ್ಷಮಿಸಿ.. ನೀವು ನನಗೆ ಜೀವನದಲ್ಲಿ ಒಮ್ಮೆಯಾದರೂ ನನಗೆ ಸಿಗುತ್ತೀರಾ.. ನನ್ನನ್ನು ಗುರುತು ಹಿಡಿಯುತ್ತೀರಾ.. ಅಂತಾ ಕಾಯ್ತಾ ಇದ್ದೀನಿ..

(ಆವಾಗ ನಿಮ್ಮನ್ನು ಪ್ರಶ್ನೆಗಳನ್ನು ಕೇಳಿ ನಿಮ್ಮ ಮನಸ್ಸನ್ನು ನೋಯಿಸೋಲ್ಲಾ.. ನನಗೆ ಗೊತ್ತು.. ಅವು ನಿಮ್ಮ ಕಹಿ ನೆನಪುಗಳು.. ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತವೆ ಅಂತಾ..)


ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ

4 comments:

Anonymous said...

Its hear touching story, you will meet aunty definetly.

Shankar

Anonymous said...

its very fine

sanjaykattimani said...

I had similar experience (nothing related to crying or other stuff) just good feeling about a neighbor. And met her again after about 20 years recently. Its indeed a warm experience.

Sitaram said...

interesting & heart touching